-->
ಅಕ್ಕನ ಪತ್ರ - 23ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 23ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 23ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


  ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.......  
 

       ನಮಸ್ತೆ ಅಕ್ಕ, ನಾವು ಆರೋಗ್ಯವಾಗಿದ್ದೇವೆ. ಧನ್ಯವಾದ ಅಕ್ಕ ನಿಮ್ಮ ಕಾಳಜಿಯ ಮಾತಿಗೆ. ನೀವು ಈ ಬಾರಿ ನಮ್ಮ ಜೊತೆ ಪ್ರಸ್ತಾಪಿಸಿರುವ ವಿಚಾರ ಕೇಳಿದಾಗ ನಾವು ಸಹ ಎಷ್ಟೋ ಬಾರಿ ಈ ರೀತಿ ತಪ್ಪು ಮಾಡಿದ್ದೇವೆ ಎಂದೆನಿಸಿತು. ಖಾಲಿ ಪೆನ್ನನ್ನು ರಿಫಿಲ್ ಬದಲಾಯಿಸಿ ಪುನರ್ ಬಳಕೆ ಮಾಡುವ ವಿಚಾರ ನಾವು ಮರೆತೇ ಬಿಟ್ಟಿದ್ದೇವೆ. ನೀವು ಹೇಳಿದಂತೆ ಅದೇ ಪೆನ್ನನ್ನು ಪುನರ್ ಬಳಕೆ ಮಾಡುವ ತಾಳ್ಮೆಯೂ ನಮ್ಮಲ್ಲಿ ಇಂದು ಉಳಿದಿಲ್ಲ. ಹೀಗಾಗಿ ಸಾವಿರಾರು ಪ್ಲಾಸ್ಟಿಕ್ ಪೆನ್ನುಗಳು ಪರಿಸರ ಸೇರುತ್ತಿವೆ. ಇದು ಕೇವಲ ಪೆನ್ನಿನ ವಿಚಾರ ಮಾತ್ರವಲ್ಲ ನಮ್ಮದೇ ನಿರ್ಲಕ್ಷ್ಯದಿಂದ ಹೀಗೆ ಎಷ್ಟೋ ಪ್ಲಾಸ್ಟಿಕ್ ಕವರ್ ಗಳು ,ಬಾಟಲಿಗಳು ಪ್ರಕೃತಿ ಸೇರುತ್ತಿವೆ. ಈ ಪತ್ರವನ್ನು ಸ್ಪೂರ್ತಿಯೂಗಿರಿಸಿಕೊಂಡು, ಇನ್ನು ಮುಂದಾದರು ನಾವೇ ನಮ್ಮಿಂದಾಗುವಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ, ಪ್ಲಾಸ್ಟಿಕ್ ನಂಥಹಃ ಭೂಮಿಯಲ್ಲಿ ಕರಗದ ವಸ್ತುಗಳನ್ನು ಪ್ರಕೃತಿ ಮಡಿಲಿಗೆ ತಲುಪದಂತೆ ಕಾಳಜಿವಹಿಸೋಣ. ಧನ್ಯವಾದ ಅಕ್ಕ ನಿಮ್ಮ ಪ್ರಕೃತಿಯ ಬಗೆಗಿನ ಕಾಳಜಿಯ ಕಿವಿ ಮಾತಿಗೆ. ನಿಮ್ಮ ಹಿತ ನುಡಿ ಸದಾ ನಮ್ಮ ಜೊತೆಗಿರಲಿ. ..
........................................................ ಶ್ರಾವ್ಯ 
ಪ್ರಥಮ ಪಿ ಯು ಸಿ 
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************  


      ಪ್ರೀತಿಯ ಅಕ್ಕನಿಗೆ ಶಿಶಿರ್ ಎಸ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಓದಿದೆ‌. ಗುರುಗಳ ಪ್ರೋತ್ಸಾಹ ಹಾಗೂ ಮಕ್ಕಳ ಕೆಲಸ ನನಗೆ ತುಂಬಾ ಇಷ್ಟವಾಯಿತು. ಇದೇ ರೀತಿ ನಮ್ಮ ಮನೆಯಲ್ಲಿ ನಮ್ಮ ತಂದೆ ಹೊಸ ಪೆನ್ ತರುವಾಗ ಅದರ ಜೊತೆಗೆ ಮೂರು-ನಾಲ್ಕು ರಿಫಿಲ್ ತರುತ್ತಾರೆ. ಪೆನ್ ಖಾಲಿಯಾದಾಗ ಅದೇ ಪೆನ್ ಗೆ ಇನ್ನೊಂದು ರಿಫಿಲ್ ಹಾಕಿ ಅದೇ ಪೆನ್ ನನ್ನು ಮತ್ತೆ ಮತ್ತೆ ಬಳಸಲು ಹೇಳಿ ಕೊಟ್ಟಿದ್ದಾರೆ. ಖಾಲಿಯಾದ ರಿಫಿಲ್ ಮತ್ತು ಮುರಿದು ಹೋದ ಪೆನ್ ಗಳನ್ನು ಸಂಗ್ರಹಿಸಿ ಗುಜುರಿ ಅವರಿಗೆ ಕೊಡುತ್ತೇವೆ. ಅಂಗಡಿಯಿಂದ ವಸ್ತುಗಳನ್ನು ತರಲು ಮನೆಯಿಂದಲೇ ಪ್ಲಾಸ್ಟಿಕ್ ಅಥವಾ ಬಟ್ಟೆ ಚೀಲವನ್ನು ತೆಗೆದುಕೊಂಡು ಹೋಗುತ್ತೇವೆ . ಅಂಗಡಿಯಿಂದ ದಿನಸಿ ತಂದ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ನನ್ನ ತಂದೆ ಅಂಗಡಿಯವರಿಗೆಯೇ ನೀಡುತ್ತಾರೆ. ಈ ರೀತಿ ಪುನಃ ಬಳಸಬಹುದಾದ ವಸ್ತುಗಳನ್ನು ಮರು ಬಳಸಿ ಪರಿಸರದ ರಕ್ಷಣೆ ನಮ್ಮ ಕೈಲಾದ ರೀತಿಯಲ್ಲಿ ಮಾಡುತ್ತೇವೆ. ನನ್ನನ್ನು ಎರಡಕ್ಷರ ಬರೆಯಲು ಪ್ರೇರೇಪಿಸಿದ ಅಕ್ಕ ನಿಮಗೆ ಧನ್ಯವಾದಗಳು......
................................................. ಶಿಶಿರ್ ಎಸ್  
9ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************  


ಮಕ್ಕಳ ಜಗಲಿ ಅಕ್ಕನ ಪತ್ರ---23
        ಪ್ರೀತಿಯ ಅಕ್ಕ ನಾನು ನಿಮ್ಮ ಲಹರಿ ಬರೆಯುವ ಪತ್ರ.... ರಜಾ ಮುಗಿಯುತ್ತಾ ಬಂತು... ಇನ್ನು ನಾವೆಲ್ಲರೂ ಶಾಲೆಗೆ ಹೋಗಲು ತಯಾರಿ ನಡೆಸಬೇಕಿದೆ.... ರಜೆಯ ಮಜಾ ಮುಗಿಯಿತು ಎನ್ನುವ ಬೇಸರವಿದ್ದರೂ ಶಾಲೆ ಪ್ರಾರಂಭವಾಗುವ ಜೊತೆಗೆ ಸ್ನೇಹಿತರ ಒಡನಾಟವು ಪ್ರಾರಂಭವಾಯಿತು ಎನ್ನುವ ಸಂತೋಷವೂ ಇದೆ.... ಹೌದು ಅಕ್ಕ ನೀವಂದಂತೆ ಪರಿಸರದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.... ಶಾಲೆಯಲ್ಲಿ ದಿನಾಲು ಅಧ್ಯಾಪಕರು ಇದರ ಬಗ್ಗೆ ತಿಳಿಸುತ್ತಾ ಇರುತ್ತಾರೆ.... ಪ್ಲಾಸ್ಟಿಕ್ ಗಳ ಮರುಬಳಕೆಗೆ ತುಂಬಾ ವ್ಯವಸ್ಥೆಗಳು ಈಗ ಇವೆ.... ಪ್ಲಾಸ್ಟಿಕ್ ಗಳನ್ನು ಹೊರಗೆಸೆಯದೆ ಮರು ಬಳಕೆ ಆಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.... ನಾವು ಸುಮಾರು ಬಳಕೆಯಾಗದ ಪೆನ್ನುಗಳನ್ನು ಸಂಗ್ರಹಿಸಿಟ್ಟಿದ್ದೇವೆ.... ಅದನ್ನು ಏನು ಮಾಡಬಹುದು ಎಂದು ಹೊಳೆಯುತ್ತಿಲ್ಲ.... ಅಕ್ಕ ಏನಾದರೂ ಉಪಾಯವನ್ನು ತಿಳಿಸಿ.... ನಿಮ್ಮ ಪತ್ರಕ್ಕಾಗಿ ಕಾಯುತ್ತಿರುವೆನು... ಇಂತಿ ನಿಮ್ಮ ಪ್ರೀತಿಯ ಲಹರಿ.
............................................... ಲಹರಿ ಜಿ.ಕೆ. 
7ನೇ ತರಗತಿ, 
ತುಂಬೆ ಸೆಂಟ್ರಲ್ ಸ್ಕೂಲ್. ತುಂಬೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



       ನಮಸ್ತೆ ಅಕ್ಕ. ನಾನು ನಿಮ್ಮ ಮಮತೆಯ ತಂಗಿ ಧೃತಿ. ಹೌದು ನೀವು ಹೇಳಿದ ಹಾಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಗಳನ್ನು ಕಾಣುವ ಈ ಪರಿಸರದಲ್ಲಿ ನಾವು ಇದನ್ನು ಬಳಸಿಕೊಂಡು ಹೊಸತೇನಾದರೂ ಮಾಡಬಹುದು ಎಂದು ಪ್ರಶ್ನೆ ಹಾಕಿದರೆ..... ಹೌದು ನಾವು ಮಾಡಬಹುದು . ನಾನು ಸಹ ಚಾಕ್ಲೆಟ್ ಪ್ಲಾಸ್ಟಿಕ್ ನಿಂದ , ಬಳಕೆಯಾಗದ ಬಾಟಲಿಗಳಿಂದ, ವೇಸ್ಟ್ ಪೇಪರ್ ನಿಂದ, ಶಾಯಿ ಖಾಲಿಯಾದ ಪೆನ್ನಿನಿಂದೆಲ್ಲಾ ಕ್ರಾಫ್ಟ್ ಗಳನ್ನು ಮಾಡಿದ್ದೇನೆ. ಒಮ್ಮೆ ಹೊಲಿದು ಬಿಸಾಡಿದ ಬಟ್ಟೆ ಚೂರನ್ನು ಅಂಟಿಸಿ ಶೋಕೇಸ್ ನಲ್ಲಿ ಇಡುವಂತೆ ಮಾಡಿದ್ದೇನೆ. ನಾವು ಅಂಗಡಿಯಿಂದ ತಂದ ಸಾಮಾನಿನ ಜೊತೆ ಪ್ಲಾಸ್ಟಿಕ್ ಗಳು ಬರುತ್ತವೆ. ಪ್ಲಾಸ್ಟಿಕ್ ಗಳನ್ನು ಬಿಸಾಡುವ ಬದಲು , ಅಥವಾ ಉರಿಸುವ ಬದಲು ಅದನ್ನು ಮರುಬಳಕೆ ಮಾಡಬಹುದು. ಹಾಗೆಯೇ ಹೊಡೆದಿರುವ ಬಳೆಯಿಂದ , ಹೊಡೆದಿರುವ ಪ್ಲಾಸ್ಟಿಕ್ ದೀಪಗಳನ್ನೆಲ್ಲ ನಾವು ಬಿಸಾಡುವ ಬದಲು ಅದನ್ನು ಪುನರ್ ಬಳಕೆ ಮಾಡುವಂತೆ ಬಳಕೆ ಮಾಡಬಹುದು ಹಾಗೂ ನಾನು ಮಾಡಿದ್ದೇನೆ .
...........................................................ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.....
*******************************************



       ಅಕ್ಕ ಹೇಗಿದ್ದೀರ....... ನಾನು ಸ್ರಾನ್ವಿ ಶೆಟ್ಟಿ 
ನಾವು ಚೆನ್ನಾಗಿದ್ದೇವೆ. ನಿಮ್ಮ ಪತ್ರ ತಲುಪಿತು ಓದಿ ನಿಜ ಎನಿಸಿತು, ನಾವು ಬರೆದು ಮುಗಿದ ಪೆನ್ನನ್ನು ಎಸೆಯುತ್ತೇವೆ, ನಾವು ಪರಿಸರ ಸ್ವಚ್ಛವಾಗಿಡಬೇಕೆಂದು ಬಯಸುತ್ತೇವೆ, ಆದರೆ ಬರೆದು ಬಿಸಾಡುವ ಪೆನ್ನಿನ ಬಗ್ಗೆ ಯೋಚನೆಯೇ ಮಾಡದೆ ಬಿಸಾಡುತ್ತೇವೆ, ಅದಕ್ಕೆ ಬೇರೆ ರಿಫಿಲ್ ಹಾಕುವ ಬಗ್ಗೆ ಯೋಚನೆಯೇ ಮಾಡುವುದಿಲ್ಲ, ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಅಕ್ಕ, ಬೇರೆ ರಿಫಿಲ್ ಹಾಕುತ್ತೇವೆ ಅಥವಾ ಕಸದಿಂದ ರಸ ಅನ್ನುವ ಹಾಗೆ ಗೂಡುದೀಪಾನು ಪೆನ್ ನಿಂದ ಮಾಡಬಹುದು, ನನ್ನ ಶಾಲೆಯಲ್ಲೂ ಎಲ್ಲರಿಗೂ ತಿಳಿಸುತ್ತೇನೆ, ಒಳ್ಳೆಯ ವಿಷಯ ತಿಳಿಸಿದಕ್ಕೆ ಧನ್ಯವಾದಗಳು ಅಕ್ಕ..........
.............................................. ಸ್ರಾನ್ವಿ ಶೆಟ್ಟಿ 
8ನೇ ತರಗತಿ  
ಓಂ ಜನ ಹಿತಾಯ ಇಂಗ್ಲೀಷ್ ಮೀಡಿಯಂ ಶಾಲೆ, 
ಗುಡ್ಡೆಯಂಗಡಿ , ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
*******************************************                



       ನಾನು ಸ್ವರ ಎಂವಿ ಜ್ಯೋತಿ ಗುಡ್ಡೆ. ಅಕ್ಕ ಹೇಗಿದ್ದೀರಿ, ನಾವು ಕೂಡ ಚೆನ್ನಾಗಿದ್ದೇವೆ. ನಾವು ಸಹ ಈ ಬೇಸಿಗೆ ರಜೆಯಲ್ಲಿ ಕಸ್ತೂರ್ಬಾ ಗಾಂಧಿ ಆಶ್ರಮ ಅರಸೀಕೆರೆಗೆ ಹೋಗಿದ್ದೆವು. ಅಲ್ಲಿ ತರಿಕಿಟ ಕಲಾ ಕಮ್ಮಟ ಜ್ಯೋತಿಗುಡ್ಡೆ ವತಿಯಿಂದ ಬೇಸಿಗೆ ಶಿಬಿರ ಮಾಡಿದೆವು. ಅಲ್ಲಿ ತುಂಬಾ ಮಕ್ಕಳಿದ್ದರು ನಾನು ಸಹ ಮೂರು ದಿನ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದೆ. ಎಲ್ಲಾ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಅಲ್ಲಿ ತುಂಬಾ ಜನ ನನ್ನ ಗೆಳೆಯರಾದರು. ನೀವು ಬರೆದ ಅನಾಥಾಶ್ರಮದ ಅಜ್ಜಿಯಂದಿರ ವಿಷಯ ಕೇಳುವಾಗ ಬೇಸರವಾಯಿತು. ನಾನು ಅಮ್ಮ ಅಪ್ಪನನ್ನು ಅನಾಥಾಶ್ರಮಕ್ಕೆ ಕಳಿಸಲ್ಲ. ನಾವು ಅದೇ ಶಿಬಿರದಲ್ಲಿ ಪ್ಲಾಸ್ಟಿಕ್ ರಾಕ್ಷಸ ನಾಟಕ ಮಾಡಿದ್ದೆವು. ಅದರಲ್ಲಿ ನನ್ನ ಅಮ್ಮ ಪ್ಲಾಸ್ಟಿಕ್ ಪಿಶಾಚಿ ಆಕ್ಟ್ ಮಾಡಿದ್ದರು. ಇದರಿಂದ ನಮಗೆ ಪ್ಲಾಸ್ಟಿಕ್ ಅಲ್ಲಲ್ಲಿ ಬಿಸಾಡಬಾರದು, ಬಿಸಾಡುವುದರಿಂದ ಪರಿಸರ ಹಾಳಾಗಿ ಕ್ಯಾನ್ಸರ್ ನಂತಹ ದೊಡ್ಡ ರೋಗಗಳು ಬರುತ್ತವೆ. ಬಟ್ಟೆ ಚೀಲವನ್ನು ಉಪಯೋಗಿಸಬೇಕು ಎಂದು ಗೊತ್ತಾಯಿತು. ಈ ಶಿಬಿರದಲ್ಲಿ ನಾನು ನನ್ನ ತಂಗಿ ಪೂರ್ವ, ದಕ್ಷ ಬಾದಲ್, ವ್ರಕ್ಷ ಬಾದಲ್ ಕೂಡ ಇದ್ದೆವು.
ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇವೆ ಥ್ಯಾಂಕ್ ಯು ಅಕ್ಕ......
..............................................ಸ್ವರ ಎಂ.ವಿ. 
4ನೇ ತರಗತಿ 
ಇನ್ಫ್ಯಾಂಟ್ ಜೀಸಸ್ ಹೈಯರ್ ಪ್ರೈಮರಿ 
ಸ್ಕೂಲ್ ಮೊಡಂಕಾಪು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



        ನಮಸ್ತೆ ಅಕ್ಕ, ನಾನು ನಿಮ್ಮ ಪತ್ರ ಓದಿದೆ ತುಂಬಾ ಒಳ್ಳೆಯ ವಿಷಯವನ್ನೇ ಹೇಳಿದ್ದೀರಿ. ನೀವು ಹೇಳಿದಂತೆ ಮೊದಲಿನ ಕಾಲಕ್ಕೂ, ಈಗಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಈಗಿನ ಕಾಲದಲ್ಲಿ ಒಬ್ಬ ವಿದ್ಯಾರ್ಥಿಗೆ ವಾರಕ್ಕೆ ಮೂರರಿಂದ ನಾಲ್ಕು ಪೆನ್ನುಗಳು ಬೇಕಾಗಬಹುದು, ಏಕೆಂದರೆ ಒಂದು ಪೆನ್ನು ಸರಿಯಾಗಿ ಪುಸ್ತಕಗಳಿಗೆ ಹಿಡಿಯದಿದ್ದರೆ ಅದನ್ನು ಸರಿಪಡಿಸುವುದು ಬಿಟ್ಟು ಬದಲಿಗೆ ಅದನ್ನು ಕಸದ ತೊಟ್ಟಿಗೆ ಬಿಸಾಡುವನು. ಅದರಲ್ಲಿ ನಾನು ಒಬ್ಬಳು ಆದರೆ ಇವತ್ತಿನಿಂದ ನಾನು ಯಾವುದೇ ವಸ್ತುವಾಗಲಿ ಅದನ್ನು ಚೆನ್ನಾಗಿ ಉಪಯೋಗಿಸುವೆ ಅಕ್ಕ....... 
..................................................... ಉಮಾವತಿ
10ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಮಂಚಿ , ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************                
               

      ನಮಸ್ತೇ, ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಾವೆಲ್ಲರೂ ಆರೋಗ್ಯದಿಂದ ಇದ್ದೇವೆ.... ನಿಮ್ಮ ಪತ್ರವನ್ನು ಓದಿದೆನು. ಕಡ್ಡಿ ಪೆನ್ ನ ಬದಲು ಶಾಯಿ ಪೆನ್ ಗಳನ್ನು ಉಪಯೋಗ ಮಾಡಬಹುದು. ಕಡ್ಡಿ ಪೆನ್ ಗಳ ಶಾಯಿ ಖಾಲಿಯಾದ ಮೇಲೆ ಅಲ್ಲಿ ಇಲ್ಲಿ ಹಾಕದೆ ಒಂದು ಪೆಟ್ಟಿಗೆಯಲ್ಲಿ ಹಾಕಿ ಇಡಬೇಕು. ಅದರಿಂದ ಕ್ರಾಫ್ಟ್ ಮಾಡಬಹುದು. ಹೊರಗಡೆ ಹೋಗುವಾಗ ಸೀಯಾಳ, ಜ್ಯೂಸ್, ಕಬ್ಬಿನಹಾಲು ಮೊದಲಾ ದವನ್ನು ಕುಡಿದು ಸ್ಟ್ರೋವನ್ನು ಅಲ್ಲಿ ಇಲ್ಲಿ ಹಾಕಿದ್ದು ಕಾಣಿಸುತ್ತದೆ. ಎಲ್ಲದಕ್ಕೂ ಸ್ಟ್ರೋ ಉಪಯೋಗಿಸುವ ಬದಲು ಉಪಯೋಗಿಸದೆ ಇದ್ದರೆ ಒಳ್ಳೆಯದಿತ್ತು. ಧನ್ಯವಾದಗಳು,
............................................ ಸಾತ್ವಿಕ್ ಗಣೇಶ್ 
7ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

 

       ನಮಸ್ತೆ ಅಕ್ಕ... ನಾನು ಶುಭಿಕ್ಷಾ..... ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಾ? ಪರಿಸರ ಕಾಳಜಿ ತೋರಿದ ಮಕ್ಕಳ ಬಗ್ಗೆ ತಿಳಿದು ಸಂತೋಷವಾಯಿತು. ನಾನು ಕೂಡ ಹೀಗೆ ಕೆಲವು ಪಾನೀಯಗಳ ಬಾಟಲಿಗಳಲ್ಲಿ ಹೂ ಬೆಳೆಸುವುದು , ಅಲಂಕಾರದಂತಹ ವಸ್ತುಗಳನ್ನು ತಯಾರಿಸುತ್ತಿದ್ದೆ. ಆದರೆ ಇದು ಬಹಳ ವಿಭಿನ್ನ ಪ್ರಯತ್ನ. ನನಗೆ ತುಂಬಾ ಖುಷಿಯಾಯಿತು. ನನಗೆ ಕ್ರಿಯೇಟಿವ್ ವಿಷಯಗಳ ಬಗ್ಗೆ ತಿಳಿಯುವುದೆಂದರೆ ತುಂಬಾ ಇಷ್ಟ. ನೀವು ಪ್ರತಿ ಪತ್ರದಲ್ಲೂ ಹೊಸತನದ, ಜಾಗೃತಿ ಮೂಡಿಸುವ ಸಂದೇಶವನ್ನು ನೀಡುತ್ತಿರುವುದಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕ...
..................................................... ಶುಭಿಕ್ಷಾ 
9ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ಕೊಡ್ಮಾಣ್ 
ಬಂಟ್ವಾಳ ತಾಲೂಕು , ದಕ್ಷಿಣಕನ್ನಡ ಜಿಲ್ಲೆ.
*******************************************



     ಹಾಯ್ ಅಕ್ಕಾ.. ನಾನು ನಿಮ್ಮೆಲ್ಲರ ಪ್ರೀತಿಯ ಜಗಲಿಯ ಬರಹಗಾರ್ತಿ ಶೌರ್ಯ.ಎಸ್.ವಿ. ನಾನು ಚೆನ್ನಾಗಿದ್ದೀನಿ. ನೀವು ಹೇಗಿದ್ದೀರಾ ಅಕ್ಕಾ.. ನೀವ್ ಹೇಳಿದ ಹಾಗೆಯೇ ನಂಗೊಂದು ತಲೆಯಲ್ಲಿ ಆಲೋಚನೆ ಉಂಟು. ಅದನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ. ಪ್ಲಾಸ್ಟಿಕ್ ವಸ್ತುಗಳನ್ನು ಪರಿಸರದಲ್ಲಿ ಎಸೆದು ಪರಿಸರ ಹಾಳುಮಾಡಬಾರದು. ಅದನ್ನು ಎಸೆಯುವ ಬದಲು ಕ್ರಾಫ್ಟ್ ಮಾಡಬಹುದು. ಐಸ್ ಕ್ರೀಮ್ ಸ್ಟಿಕ್ ಗಳನ್ನ ಬಿಸಾಕೊ ಬದ್ಲು ಪುಟ್ಟ ಪುಟ್ಟ ಕ್ರಾಫ್ಟ್ ಐಟಮ್ ಮಾಡಬಹುದು. ಜೋಕಾಲಿ, ಮನೆ ಇನ್ನಿತರ ಕ್ರಾಫ್ಟ್ ಮಾಡಬಹುದು. ಐಸ್ ಕ್ರೀಂ ಕಪ್ ಅಲ್ಲಿ ಗಿಡ ಬೆಳೆಸಿ ಪರಿಸರ ಉಳಿಸಬಹುದು. ಮನೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕೊ ಬದ್ಲು ಕಸದ ತೊಟ್ಟಿ ಇಟ್ಟು ಅದಕ್ಕೆ ಹಾಕಿ, ಪರಿಸರ ರಕ್ಷಣೆ ಮಾಡಿ. ಪೆನ್ ಶಾಯಿ ಖಾಲಿಯದ ನಂತರ ಎಲ್ಲಾ ಒಟ್ಟು ಸೇರಿಸಿ ಬೇಕಾದ ಕ್ರಾಫ್ಟ್ ಮಾಡಬಹುದು. ನಾನು ಹೇಳುವುದು ಇಷ್ಟೇ ಪರಿಸರ ಹಾಳುಮಾಡಬೇಡಿ, ಪರಿಸರ ಉಳಿಸಿ ಎನ್ನುತ್ತಾ ನನ್ನ ಪುಟ್ಟ ಅಕ್ಕನ ಪತ್ರದ ಉತ್ತರಕ್ಕೆ ಪೂರ್ಣವಿರಾಮ ಇಡುತ್ತಿದ್ದೇನೆ. ಇನ್ನೂ ಮುಂದಿನ ಸಂಚಿಕೆಯಲ್ಲೂ ಒಳ್ಳೆಯ ವಿಷಯ ತಿಳಿಸಿ ಅಕ್ಕಾ.. ಧನ್ಯವಾದಗಳು ಅಕ್ಕಾ..
.............................................ಶೌರ್ಯ.ಎಸ್.ವಿ 
8ನೇ ತರಗತಿ 
ಸ.ಉ.ಹಿ.ಪ್ರಾ ಶಾಲೆ ಕನ್ಯಾಡಿ 2 , 
ಧರ್ಮಸ್ಥಳ ಗ್ರಾಮ.
ಬೆಳ್ತಂಗಡಿ ತಾಲೂಕು , ದಕ್ಷಿಣಕನ್ನಡ ಜಿಲ್ಲೆ. 
*******************************************
   

        ಪ್ರೀತಿಯ ಅಕ್ಕನಿಗೆ ಹಿತಶ್ರೀ ಮಾಡುವ ನಮನಗಳು. ನಿಮ್ಮ ಪತ್ರವನ್ನು ನಾನು ಓದಿದ್ದೇನೆ. ಅಕ್ಕಾ, ನಾನು ಕೂಡ ಮರುಬಳಕೆ ಮಾಡಿದ್ದೇನೆ. ಚಾಕಲೇಟು ಸಿಪ್ಪೆಯಿಂದ ಮರು ಬಳಕೆಯನ್ನು ಮಾಡಿದ್ದೇನೆ. ಪೆಪ್ಸಿಗಳ ಮುಚ್ಚಳದಿಂದ ಆಕೃತಿಗಳನ್ನು ರಚಿಸಲಾಗುತ್ತದೆ. ಮುಗಿದ ಕೋಪಿ ಪುಸ್ತಕದಿಂದ ಕ್ರಾಫ್ಟ್ ಮಾಡಿದ್ದೇನೆ. ಹಾಗೂ ಹಾಳದ ಚಪ್ಪಲಿಯನ್ನು ಹೊಲಿದು ಮರುಬಳಕೆ ಮಾಡಲು ಸಾಧ್ಯವಾಗುತ್ತದೆ.
..............................................ಹಿತಶ್ರೀ.ಪಿ.
7 ನೇ ತರಗತಿ  
ಶ್ರೀ ವೇಣುಗೋಪಾಲ ಅ. ಹಿ.ಪ್ರಾ.ಶಾಲೆ 
ಪಕಳಕುಂಜ , ಮಾಣಿಲ 
ಬಂಟ್ಟಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************

Ads on article

Advertise in articles 1

advertising articles 2

Advertise under the article