
ಮಕ್ಕಳ ಕವನಗಳು - ರಚನೆ : ದೃತಿ
Sunday, April 24, 2022
Edit
ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಧೃತಿ ಬರೆದ ಕವನಗಳು ಮತ್ತು ಚುಟುಕುಗಳು
ಬಿಸಿಲು
----------------
ಧಗೆ ಧಗೆ ಎನ್ನುತಿದೆ ಉರಿಬಿಸಿಲು
ಬತ್ತಿ ಹೋಗುತ್ತಿದೆ ಭೂತಾಯಿಯ ಒಡಲು
ಶುರುವಾಗಿದೆ ನೀರಿಗಾಗಿ ಹಾಹಾಕಾರ
ಬಿಟ್ಟು ಹೋಗಲಿ ಮನುಷ್ಯನ ಅಹಂಕಾರ
ಪ್ರಕೃತಿಯ ಬಿಸಿ ಏರುತಲಿರಲು
ಮಾನವನ ಬೆವರಿಳಿಯುತಿರಲು
ನದಿ ಹೊಳೆಗಳು ಬತ್ತಿ ಹೋಗುತಿದೆ
ಜೀವಸಂಕುಲಗಳು ಅಳಿವಿನಂಚಿನಲ್ಲಿದೆ
ರವಿಯು ನೆತ್ತಿಯ ಮೇಲೆ ಸುಡುತಿರಲು
ಛತ್ರಿಯ ಹಿಡಿದು ಜನ ಓಡಾಡುತ್ತಿರಲು
ಬಾಯಾರಿಕೆ ಗಂಟಲು ಬತ್ತಿ ಹೋಗುತ್ತಿದೆ
ಪರಿಸರದಲ್ಲಿ ಆಕ್ಸಿಜನ್ ಕಡಿಮೆಯಾಗುತ್ತಿದೆ
ಉಳಿಸಿರಿ ನೀರನು ಬೆಳೆಸಿರಿ ಕಾಡನು
ಉಳಿಯಲು ಬಿಡಿ ನಾಳೆಗೆ ನಾಡನು
.......................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರಕೃತಿ
---------------
ಸುತ್ತಲೂ ಕಾಣುವ ಹಸಿರು
ಅದುವೇ ನಮ್ಮ ಉಸಿರು
ಬೆಟ್ಟ ಪರ್ವತಗಳ ಸಾಲು
ನೋಡಲು ಅಂದ ಚೆಲುವು
ಗಿಡ ಮರ ಬೆಳೆಸುವ
ಪ್ರಕೃತಿಯನ್ನು ಉಳಿಸುವ
ಸುರಿಯದಿರಿ ಭೂಮಿಗೆ ಕಸವ
ಸ್ವಚ್ಛತೆಯ ಕಡೆಗೆ ಸಾಗುವ
ನಮ್ಮ ಸುಂದರ ನಾಡುನು ಉಳಿಸಿ
ಎಲ್ಲರೂ ಪ್ರಕೃತಿಯನ್ನು ಪ್ರೀತಿಸಿ
.......................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಚಂದಿರ
----------------
ಕಪ್ಪಾದ ಬಾನಲಿ
ಬೀಸುವ ತಂಗಾಳಿಯಲಿ
ಬೆಳ್ಳಿ ಮಿನುಗುವ ನಕ್ಷತ್ರಗಳು
ಚಿಲಿಪಿಲಿಗುಟ್ಟುವ ಹಕ್ಕಿಗಳು
ನೀರನು ತುಂಬಿದ ಮೋಡಗಳು
ಓಡಾಡುವ ಮಿಂಚು ಹುಳಗಳು
ತಿಂಗಳ ಹುಣ್ಣಿಮೆ ದಿನವಿಂದು
ಕಾತರ ಕಾಣುವ ಬಾನವನು
ಕಂಡರೆ ಮನಸ್ಸು ಸಡಗರ
ನೋಡಿದಿರಾ ಗುಂಡಾದ ಚಂದಿರ
.......................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಅನ್ನದಾತ
-----------------
ದೇಶಕೆ ಅನ್ನವ ನೀಡುವ ನಮ್ಮ ರೈತ
ನಿಜವಾಗಿಯೂ ಈತ ಆ ದೇವನ ಸುತ
ನೀಗಿಸುವ ನಮ್ಮೆಲ್ಲರ ಹಸಿವನೀತ
ಶ್ರಮದ ಜೀವನವು ಎಂದಿಗೂ ಉದಾತ್ತ
ಹೊತ್ತಿರುವನು ನೇಗಿಲ ಅನ್ನದಾತ
ಅರಿಯುವನು ಹೃದಯದ ಸವಿಮಾತ
ದುಡಿಯುವ ಮಣ್ಣಿಗೆ ತಲೆಬಾಗುತಾ
ನಾಳೆಯ ಫಸಲಿಗೆ ದೇವನ ಬೇಡುತ
ಸುಂದರ ಪದಗಳಲಿ ಹೇಳಿದ ಗಾಂಧಿ ತಾತ
ದೇಶವ ಕಟ್ಟುವ ಬೆನ್ನೆಲುಬು ರೈತ
.....................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಕರುನಾಡು
------------------
ಕರ್ನಾಟಕದಲ್ಲಿ ಕನ್ನಡವೇ ಮಾನ್ಯ
ಎಲ್ಲಾ ಭಾಷೆಯ ಜನರು
ಇರುವುದು ಸರ್ವೇ ಸಾಮಾನ್ಯ
ಕನ್ನಡ ತಾಯಿ ತೋರುವಳು ಕಾರುಣ್ಯ
ಯಾರನ್ನು ಕಂಡು ಭಾವಿಸಿಲ್ಲ ಅನ್ಯ
ಇಂತಹ ಸುಂದರ ನಾಡೇ ಅನನ್ಯ
ಸಂಪದ್ಭರಿತ ಪ್ರಾಣಿ-ಪಕ್ಷಿ ಪರ್ವತ ಅರಣ್ಯ
ಮನಸ್ಸಿಗೆ ನೆಮ್ಮದಿಯ ಲಾವಣ್ಯ
ಕಲೆ-ಸಂಸ್ಕೃತಿಗಳಲ್ಲಿ ಅಗ್ರಗಣ್ಯ
ಈ ಮಣ್ಣಿನಲ್ಲಿ ಹುಟ್ಟಿದ ನಮ್ಮ ಪುಣ್ಯ
ಕನ್ನಡಿಗರಾದ ನಾವೇ ಧನ್ಯ
........................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಪುಸ್ತಕ
----------------
ಓದಿರಿ ಒಳ್ಳೆಯ ಪುಸ್ತಕ
ಬೆಳೆಸಿರಿ ನಿಮ್ಮಯ ಮಸ್ತಕ
ಸಿಗುವುದು ಜ್ಞಾನದ ಭಂಡಾರ
ದೊರೆಯುವುದು ನಮಗೆ ಸುವಿಚಾರ
ಪುಸ್ತಕ ಓದುವ ಅಭ್ಯಾಸ
ಆಗುವುದು ಒಳ್ಳೆಯ ಹವ್ಯಾಸ
ಪುಸ್ತಕವು ನಮಗೆಲ್ಲರಿಗೂ ಸ್ಪೂರ್ತಿ
ದೊರೆಯುವುದು ಅದರಿಂದ ಕೀರ್ತಿ
ತುಂಬಿರಿ ನಿಮ್ಮಯ ಜ್ಞಾನದ ಬುತ್ತಿ
ಅದೊಂದು ಒಳ್ಳೆಯ ಶಕ್ತಿ
.......................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಡಾ.ಬಿ.ಆರ್ .ಅಂಬೇಡ್ಕರ್
-------------------------------------
ಸಂವಿಧಾನವ ರಚಿಸಿದ ಮಹಾನಾಯಕ
ದೇಶ ಕಂಡ ಹೆಮ್ಮೆಯ ಸಾಧಕ
ಜಗಕೆ ಒಳ್ಳೆಯ ನೀತಿ ದಾಯಕ
ಸ್ಮರಿಸಬೇಕು ನಿತ್ಯ ಇವರ ಕಾಯಕ
ಇವರು ದೀನದಲಿತರ ಕಣ್ಮಣಿ
ನಾವೆಲ್ಲರೂ ಎಂದೆಂದಿಗೂ ಚಿರರುಣಿ
ಜಗಕ್ಕೆಲ್ಲಾ ಶಾಂತಿಯ ಸಾರಿದ ಶಾಂತಿದೂತ
ತನ್ನ ತತ್ವಗಳನ್ನು ದೇಶಕ್ಕೆ ಸಾರಿದನೀತ
ಸಂವಿಧಾನದ ಶಿಲ್ಪಿ ಎಂದೇ ಪ್ರಸಿದ್ಧರಾದರು
ಹಸಿವಿನಿಂದ ನೊಂದವರಿಗೆ ಆಶ್ರಯರಾದರು
ಜಾತಿಯೆಂಬ ಹೆಸರಿನಲ್ಲಿ ದೀನದಲಿತರು
ಸಾವಿರಾರು ವರುಷ ಜೀತವಾಗೇ ದುಡಿದರು
ಬಹಳ ಹಿಂದೆ ಇತ್ತು ಮೇಲು-ಕೀಳು
ಸಂವಿಧಾನದ ಬಳಿಕ ಇಲ್ಲಾ ಗೋಳು
ಮುಂಚೆ ಇತ್ತು ಧನಿಕರ ಕಾರುಬಾರು
ಸಂವಿಧಾನದ ನಂತರ ಎಲ್ಲರೂ ಸಮಾನರು
....................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಕಲಿಯೋಣ
---------------------
ಗಿಣಿಯ ದನಿಯಲಿ
ಮಿತವಾದ ಮಾತುಂಟು
ಕಾಗೆಯ ಕೂಗಿನಲಿ
ಬಳಗದ ನಂಟುಂಟು
ಇರುವೆಯ ಸಾಲಿನಲಿ
ಶಿಸ್ತಿನ ಕಲೆಯುಂಟು
ಹಸು ಎಮ್ಮೆ ಮೇಕೆಯಲಿ
ಅಮೃತ ಧಾರೆಯುಂಟು
ಕತ್ತೆ ಕುದುರೆಗಳಲಿ
ಶ್ರಮದ ಅರಿವುಂಟು
ಹಾರಾಡುವ ಚಿಟ್ಟೆಯಲಿ
ಮಕರಂದದ ಸಿಹಿ ಯುಂಟು
ನಮ್ಮ ನಿಮ್ಮಲ್ಲಿ ಏನುಂಟು
ಇನ್ನಾದರೂ ಕಲಿಯೋಣ.....
........................................................ಧೃತಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಕನ್ನಡ ನಾಡು
-------------------
ಕನ್ನಡ ನಾಡು ನಮ್ಮಯ ನಾಡು
ಜೀವರಾಶಿಯು ತುಂಬಿದ ನಾಡು
ಹಚ್ಚಹಸಿರಿನಿಂದ ಕಂಗೊಳಿಸಿದ ಕಾಡು
ಗಿರಿ-ಶಿಖರ ಶ್ರೀಗಂಧವ ನೋಡು
ರನ್ನ ಪಂಪ ಕವಿಶ್ರೇಷ್ಠರ ಬೀಡು
ಕನ್ನಡ ಮಾತೆಯ ಪೂಜಿಸುವ ನಾಡು
ಸುಂದರವಾಗಿರುವ ನಮ್ಮಯ ನಾಡು
ಮಳೆ
---------------
ಧರಧರ ಸುರಿಯಿತು ಮಳೆ
ತುಂಬಿತೆಲ್ಲಾ ಹೊಳೆ
ಬಡಿಯಿತು ಗುಡುಗು-ಮಿಂಚು
ಬಿತ್ತು ಮನೆಗಳ ಹೆಂಚು
ಜೋರಾಗಿ ಬೀಸಿತು ಗಾಳಿ
ಕೊಚ್ಚಿ ಸಾಗಿತೆಲ್ಲವೂ ನೀರಲಿ ತೇಲಿ
ಚಿಟ್ಟೆ
---------------
ತರತರವಾದ ಬಣ್ಣದ ಚಿಟ್ಟೆ
ಸಣ್ಣಗಿರುವ ನಿನ್ನಯ ಹೊಟ್ಟೆ
ಬಣ್ಣಬಣ್ಣದ ಬಟ್ಟೆಯ ತೊಟ್ಟೆ
ವಿಮಾನದಂತೆ ಹಾರುವ ಚಿಟ್ಟೆ
ನನ್ನಯ ಬಳಿಗೆ ಬಾ ಬಾ ಚಿಟ್ಟೆ
ನನ್ನಯ ಪ್ರೀತಿಯ ಬಣ್ಣದ ಚಿಟ್ಟೆ
ಪ್ರೀತಿ
-----------
ನಮ್ಮ ಮನೆಯ ಪ್ರೀತಿ
ಶಾಲೆಗೆ ತಂದಳು ಕೀರ್ತಿ
ಇವಳಿಗಿಲ್ಲ ಯಾವುದೇ ಭೀತಿ
ಎಲ್ಲರಿಗೂ ಇವಳೇ ಸ್ಪೂರ್ತಿ
ಚೌತಿ ಹಬ್ಬ
-----------------
ಬಂದಿತು ನೋಡಿ ಚೌತಿ ಹಬ್ಬ
ಪ್ರೀತಿಯ ಗಣೇಶನ ಹಬ್ಬ
ತಿಂಡಿ - ತಿನಿಸು ತುಂಬಿದೆ ಡಬ್ಬ
ನೀಡುವೆ ಗಣಪಗೆ ಸಿಹಿ ಸಿಹಿ ಕಬ್ಬ
ಬಸ್ಸು
----------------
ಕೆಂಪು-ಬಿಳಿ ಬಸ್ಸು
ಬಸ್ಸಿನಲ್ಲಿ ತುಂಬಾ ರಶ್ಶು
ತೆಗೆದು ಕೊಡಲು ಕಾಸು
ಇರಲಿಲ್ಲ ನನ್ನ ಪರ್ಸು
ಯೋಗ
-----------------
ಮಾಡಿದರೆ ಯಾಗ
ಹೋಗದು ರೋಗ
ಮಾಡಿರಿ ಯೋಗ
ಓಡುವುದು ರೋಗ
ಆಟ
----------
ಆಟ ಆಟ ಲಗೋರಿ ಆಟ
ಮನಕೆ ತುಂಬಾ ಮೋಜಿನಾಟ
ಆಟ ಆಟ ಕಣ್ಣಾಮುಚ್ಚಾಲೆ ಆಟ
ಅಡಗಿ ಕೂತರಲ್ಲಿ ಸೊಳ್ಳೆಯ ಕಾಟ
ಪುಸ್ತಕ
----------
ಓದಿರಿ ಪುಸ್ತಕ
ಬೆಳೆಸಿರಿ ಮಸ್ತಕ
ಸಿಗುವುದು ಒಳ್ಳೆಯ ವಿಚಾರ
ತಿಳಿದುಕೊಳ್ಳಿ ಒಳ್ಳೆಯ ಸದ್ವಿಚಾರ
ಬೆಳಗಿಸೋಣ
--------------------
ಬೆಳಗಿಸೋಣ ಕನ್ನಡದ ಪ್ರಣತಿ
ತೋರದಿರೋಣ ಮೇಲು-ಕೀಳೆಂಬ ಭ್ರಾಂತಿ
ಮಾಡೋಣ ಒಳ್ಳೆಯ ಹೊಸ ಕ್ರಾಂತಿ
ಪಸರಿಸೋಣ ಜಗದಲ್ಲಿ ಶಾಂತಿ
ಕನ್ನಡ ನಾಡು
--------------------
ನಾಡು ನಾಡು ಕನ್ನಡ ನಾಡು
ಭಾರತಾಂಬೆಯ ಮಡಿಲಿನ ನಾಡು
ಶ್ರೀಗಂಧದ ಕಂಗೊಳಿಸಿದ ಕಾಡು
ಶಿಲ್ಪಕಲೆ ಬೇಲೂರು ಹಳೇಬೀಡು
ಬಂಧ
-----------
ಭಾರತದ ಪ್ರತಿಯೊಬ್ಬ ಕಂದ
ಆಗಬೇಕು ವಿವೇಕಾನಂದ
ಸೋದರ ಸೋದರಿಯರ ಅನುಬಂಧ
ಇರಲಿ ಸಾರ್ವಕಾಲಿಕ ಸಂಬಂಧ
ಗಿಳಿಯ ಮರಿ
-------------------
ಹಾರಿಬಂತು ಗಿಳಿಯ ಮರಿಯು
ಹಸಿರು ಕೆಂಪು ಬಣ್ಣ
ತಿನ್ನಲು ಬಂತು ಮರದ ಮೇಲೆ
ಕೆಂಪು ಸೇಬಿನ ಹಣ್ಣ
ಅಮ್ಮ
---------------
ಅಮ್ಮ ಅಮ್ಮ ನೋಡಲ್ಲಿ
ಗುಬ್ಬಿಯ ಇಣುಕಿತು ಗೂಡಲ್ಲಿ
ಕೋಗಿಲೆ ಹಾರಿತು ಬಾನಲ್ಲಿ
ತಂಗಿಯು ನಕ್ಕಳು ಮನದಲ್ಲಿ
ಇರುವೆ
---------------
ಇರುವೆ ಇರುವೆ ಕೆಂಪಿರುವೆ
ಬಹಳ ಸಣ್ಣದಾಗಿರುವೆ
ನನ್ನನ್ನೇಕೆ ಕಚ್ಚಿರುವೆ
ಎಲ್ಲಿಗೆ ಮೆರವಣಿಗೆ ಹೊರಟಿರುವೆ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************