-->
ಪ್ರೀತಿಯ ಪುಸ್ತಕ : ಸಂಚಿಕೆ - 4

ಪ್ರೀತಿಯ ಪುಸ್ತಕ : ಸಂಚಿಕೆ - 4

ಪ್ರೀತಿಯ ಪುಸ್ತಕ
ಸಂಚಿಕೆ - 4

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 


                        ನಿಮ್ಮ ದೇಹ ನಿಮ್ಮದೇ
       ಪ್ರೀತಿಯ ಮಕ್ಕಳೇ, ಇದೊಂದು ವಿಶೇಷವಾದ ಪುಸ್ತಕ. ‘ನಮ್ಮ ದೇಹ ನಮ್ಮದೇ’ ತಾನೇ, ಇದರಲ್ಲಿ ವಿಶೇಷ ಏನು ಅಂತ ನಿಮಗೆ ಅನಿಸಬಹುದು, ಇರಲಿ, ವಿಶೇಷ ಇದೆ... ಹದಿನಾರು ಪುಟದ ಈ ಪುಸ್ತಕದಲ್ಲಿ ಸ್ವಲ್ಪ ಬರಹ ಮತ್ತು ತುಂಬಾ ಚಿತ್ರಗಳಿವೆ. ಬಣ್ಣ ಬಣ್ಣದ ಚಿತ್ರಗಳು, ಚಿತ್ರಗಳೂ ಕಥೆ ಹೇಳುತ್ತವೆ.  ಈಗ ಕೇಳಿ, ನಿಮ್ಮಲ್ಲಿ ಒಬ್ಬರು ಎತ್ತರ ಇರಬಹುದು, ಒಬ್ಬರು ಕುಳ್ಳಕ್ಕೆ ಇರಬಹುದು, ಒಬ್ಬರು ದಪ್ಪ ಇರಬಹುದು. ಏನೇ ಇರಲಿ ಅದು ವಿಶೇಷವಾದದ್ದು ಮತ್ತು ಅದು ನಿಮ್ಮದು ಮಾತ್ರ. ನಿಮ್ಮ ದೇಹವನ್ನು ನೀವು ಆರೋಗ್ಯವಾಗಿ ಇಟ್ಟುಕೊಳ್ಳಬೇಕಲ್ಲವೇ, ಚೆನ್ನಾಗಿ ನೋಡಿಕೊಳ್ಳಬೇಕಲ್ಲವೇ, ಚೆನ್ನಾಗಿ ನೋಡಿಕೊಳ್ಳಬೇಕಾದರೆ ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕಲ್ಲವೇ, ತಿಳಿದುಕೊಳ್ಳಬೇಕಾದರೆ ನೀವು ಈ ಪುಸ್ತಕವನ್ನು ಅಥವಾ ಇಂತಹ ಪುಸ್ತಕಗಳನ್ನು ಓದಬೇಕು, ಇದರಲ್ಲಿ ಹೇಳಿರುವ ವಿಷಯದ ಬಗ್ಗೆ ಮಾತಾಡಲು ಕಲಿಯಬೇಕು. ನಿಮ್ಮ ದೇಹಕ್ಕೆ ಯಾವುದೇ ಅಪಾಯ ಆಗದಂತೆ ಎಚ್ಚರಿಕೆ ವಹಿಸಬೇಕು. ಇದು ಚಿಕ್ಕ ಪುಸ್ತಕ, ಇದರ ಬಗ್ಗೆ ನಾನೇ ಎಲ್ಲಾ ಹೇಳಿಬಿಡಬಾರದಲ್ಲಾ, ನೀವೇ ಓದಿ ನೋಡಿ.. 
ಲೇಖಕರು: ಯಾಮಿನಿ ವಿಜಯನ್
ಚಿತ್ರಗಳು: ಐಂದ್ರಿ ಸಿ
ಅನುವಾದ: ಹೇಮಾ ಖುರ್ಸಾಪುರ
ಪ್ರಕಾಶಕರು: ಪ್ರಥಮ್ ಬುಕ್ಸ್ 
ಬೆಲೆ: ರೂ.50/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
....................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article