ಅಕ್ಕನ ಪತ್ರ - 20ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1
Saturday, April 2, 2022
Edit
ಅಕ್ಕನ ಪತ್ರ - 20ಕ್ಕೆ
................................................ಲಹರಿ ಜಿ.ಕೆ.
ಮಕ್ಕಳ ಉತ್ತರ : ಸಂಚಿಕೆ - 1
ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
ನಮಸ್ತೇ...... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
ನಾನು ಬಜಿರೆ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿ. ನಿಮ್ಮ ಪತ್ರವನ್ನು ಓದಿದೆನು. ನಿಮ್ಮ ಪತ್ರದಿಂದ ಒಳ್ಳೆಯ ವಿಷಯಗಳನ್ನು ತಿಳಿಯಲು ನಮಗೆ ತುಂಬಾ-ತುಂಬಾ ಉಪಯೋಗವಾಗುತ್ತದೆ.
ನಾವೆಲ್ಲರೂ ಒಂದೇ , ಭಾರತ ಮಾತೆಯಮಕ್ಕಳು. ನಾವು ಒಳ್ಳೆಯ ಕೆಲಸವನ್ನು ಮಾಡಿ ಭಾರತಮಾತೆಯ ಪ್ರೀತಿಯ ಮಕ್ಕಳಾಗೋಣ. ನಾವು ಕಲಿತು ಅಂಕ ತೆಗೆಯುವುದು ಮುಖ್ಯವಲ್ಲ, ಒಳ್ಳೆಯ ಪಾಠವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪಂಡಿತರು ಸೋಲನ್ನು ಒಪ್ಪಿಕೊಂಡಂತೆ ಮನುಜರು ತಮ್ಮ ತಪ್ಪನ್ನು ಒಪ್ಪಿಕೊಂಡು ಒಳ್ಳೆಯ ವಿಚಾರವನ್ನು ಅನುಸರಿಸಿಕೊಂಡು ಬಾಳಿದರೆ ಸಮಾಜವನ್ನು ಒಂದು ಒಳ್ಳೆಯ ಸಮಾಜನ್ನಾಗಿ ಪರಿವರ್ತಿಸಬಹುದು. ಎಲ್ಲರನ್ನೂ ಸಮಾನತೆಯ ದೃಷ್ಠಿಯಿಂದ ನೋಡಿ ಒಳ್ಳೆಯ ಕೆಲಸಗಳನ್ನು ಮಾಡೋಣ. ಸಾಧಿಸುವ ಛಲವನ್ನೂ , ಕಲಿತವಿದ್ಯೆಯ ಮೌಲ್ಯವನ್ನು ಅರಿತು ಬಾಳೋಣ. ಧನ್ಯವಾದಗಳು ಅಕ್ಕಾ ...........
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ನಮಸ್ತೇ ......... ನಾನು ಧನ್ವಿ ರೈ ಕೋಟೆ
ನಮಗೆ ವಾರ್ಷಿಕ ಶಾಲಾ ರಜಾ ವಾದುದರಿಂದ ಬಹಳ ಖುಷಿ ಯಾಗಿದ್ದೇವೆ. ಅಂತೆಯೇ ಅಕ್ಕನ ಪತ್ರವನ್ನು ಓದಿದೆ. ಬಹಳ ಸುಂದರವಾಗಿ ಮೂಡಿ ಬಂದಿದೆ. ಧನ್ಯವಾದಗಳು ಅಕ್ಕ. ಈ ಪತ್ರವು ಇತ್ತೀಚಿನ ವಾಸ್ತವದ ಅರಿವನ್ನು ಸೂಚಿಸುತ್ತದೆ ಅಂತ ನನ್ನ ಅನಿಸಿಕೆ. ಜೀವನವು ನಾವೆನಿಸಿದಂತೆ ಎನೂ ನಡೆಯುವುದಿಲ್ಲ. ಒಂದು ಹುಲ್ಲು ಕಡ್ಡಿಯಿಂದ ಹಿಡಿದು ಪ್ರಾಣಿ, ಪಕ್ಷಿ, ಮನುಜರವರೆಗೂ ಪ್ರಕ್ರತಿದತ್ತವಾದ ಒಂದು ಕೊಡುಗೆ ಅಂತ ಹೇಳಬಹುದು. ಅಂತಿರುವಾಗ ಎಲ್ಲವನ್ನೂ ನಾವು ಸಮಾನತೆ, ಪರಸ್ಪರತೆ, ಪ್ರೀತಿ ವಿಶ್ವಾಸ ದಿಂದ ಇದ್ದು ಕೂಡಿ ಬಾಳಬೇಕು. ಆದರೆ ನಮಗೆ ಇದೆಲ್ಲದಕ್ಕೂ ಮೂಲಮಂತ್ರ ಅಂದರೆ ವಿದ್ಯೆ. ಮಕ್ಕಳಾದ ನಾವು ವಿದ್ಯಾಭ್ಯಾಸದ ಕಡೆಗೆ ಗಮನಕೊಟ್ಟು, ಒಳ್ಳೆಯ ರೀತಿಯಲ್ಲಿ ವಿದ್ಯಾರ್ಜನೆ ಗೈದು , ನಾಡಿನಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು. ಒಂದು ಮಾದರಿ ಸಮಾಜವನ್ನು ನಮ್ಮಲ್ಲಿ ನಾವೇ ಕಂಡುಕೊಳ್ಳಬೇಕಾದರೆ ಎಲ್ಲಾರೂ ವಿದ್ಯಾವಂತರಾಗಬೇಕೆಂದು ನನ್ನ ಅನಿಸಿಕೆ.
"ವಿದ್ಯಾ ಹೀನಂ ಪಶು ಸಮಾನ" ಎಂಬಾಂತಾಗದೆ ಯಾವುದೇ ತಾರತಮ್ಯ ವಿಲ್ಲದೆ, "ವಿದ್ಯೆಯೆಡೆಗೆ ನಮ್ಮ ಗಮನ" ಎಂಬಂತಾಗಬೇಕು , ಎಂಬ ಆಶಯದೊಂದಿಗೆ," ಸ್ವಸ್ಥ ಸಮಾಜ - ನಮ್ಮ ನಿಮ್ಮೆಲ್ಲರ ಕಾಯಕ"
ಎಲ್ಲರ ಬಾಳಿನಲ್ಲೂ ಶುಭಕ್ರತ ಸಂವತ್ಸರವು ಶುಭ ವನ್ನು ತರಲಿ. ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುವ ನಿಮ್ಮ ಪ್ರೀತಿಯ
6ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ನಮಸ್ತೆ ಅಕ್ಕ..... ನಾನು ಸ್ರಾನ್ವಿ ಶೆಟ್ಟಿ....
ನಾವು ಚೆನ್ನಾಗಿದ್ದೀವಿ ನೀವು ಹೇಗಿದ್ದೀರಾ,
ನಿಮ್ಮ ಪತ್ರ ಓದಿದೆ ಅಕ್ಕ....... ನಮ್ಮ ಸುತ್ತಮುತ್ತಲಿನ ಈಗಿನ ಪರಿಸ್ಥಿತಿಯು ನಿಮ್ಮ ಕಥೆಯಲ್ಲಿದ್ದ ರೀತಿಯೇ ಇದೆ, ಆ ಪಂಡಿತ ನಾಯಿ , ಬೆಕ್ಕು , ಕುರಿ , ಮನುಷ್ಯ ಇವನ್ನು ಸುಲಭವಾಗಿ ಗುರುತಿಸಿದ, ಆದರೆ ಮನುಷ್ಯನ ಜಾತಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದರೆ ಈಗೀಗ ಜನರು ಕೂಡ ಜಾತಿಯೆಂಬ ಭೂತದ ಬೆನ್ನತ್ತಿದ್ದಾರೆ, ಒಬ್ಬರಿಗೊಬ್ಬರು ಹೊಡೆದಾಡಿ ಸಾಯುತ್ತಿದ್ದಾರೆ, ಈ ಜಾತಿಯೆಂಬ ಬೀಜವನ್ನು ಬಿತ್ತಿದ್ದು ದೇವರಲ್ಲ ಮನುಷ್ಯರು, ಸ್ಕೂಲಲ್ಲಿ ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ, ಹೌದು ಜಾತಿ ಮುಖ್ಯ ಆಲ್ಲ ನೀವು ಹೇಳಿದ ಹಾಗೆ ಮಾನವೀಯತೆ ಮುಖ್ಯ,
ಅಕ್ಕನೀವು ಹೇಳಿದ ಹಾಗೆ ಈಗ ನಮ್ಮ ಸುತ್ತ ನಡೆಯುವ ಗೊಂದಲಗಳಿಗೆ ನಾವು ಕಿವಿಕೊಡದೆ ಮಾನವೀಯತೆಯನ್ನು ಬೆಳೆಸಿಕೊಳ್ಳುತ್ತೇವೆ
ಧನ್ಯವಾದಗಳು ಅಕ್ಕ.........
8ನೇ ತರಗತಿ
ಓಂ ಜನ ಹಿತಾಯ ಇಂಗ್ಲೀಷ್
ಮೀಡಿಯಂ ಶಾಲೆ,ಗುಡ್ಡೆಯಂಗಡಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ನಮಸ್ತೆ ಅಕ್ಕ..... ನಾನು ಬಿಂದು ಶ್ರೀ ... ಈ ಪರೀಕ್ಷೆಯ ನಡುವಿನಲ್ಲಿ ನನಗೆ ನಿಮ್ಮ ಪತ್ರಕ್ಕೆ ಉತ್ತರ ಬರೆಯಲು ಏನೂ ಕಷ್ಟ ಅನಿಸುವುದಿಲ್ಲ. ಏನೋ ಖುಷಿ ಎನಿಸುತ್ತದೆ. ನೀವು ಹೇಳಿದ ಕಥೆ ನನಗೆ ಅರ್ಥ ಆಯಿತು ಅಕ್ಕ. ನೀವು ಬರೆಯುವ ಒಂದೊಂದು ಕಥೆಯಲ್ಲೂ ಒಂದು ಮುಖ್ಯವಾದ ವಿಷಯ, ಹಾಗೂ ಅದರಲ್ಲಿ ನಮ್ಮ ಜೀವನದ ಬಗ್ಗೆ ತಿಳಿದುಕೊಳ್ಳುವುದು ಒಂದು ಸಾಲು ಇದ್ದೇ ಇರುತ್ತದೆ. ಅದಕ್ಕಾಗಿ ನನಗೆ ನಿಮ್ಮ ಪತ್ರವನ್ನು ಓದಲು ತುಂಬಾ ಸಂತೋಷ ಉಂಟು ಮಾಡುವುದು ಸತ್ಯ. ನೀವು ಇಷ್ಟರವರಿಗೆ ಬರೆದ ಪತ್ರವನ್ನು ನಾನು ಓದಿದ್ದೇನೆ , ಇನ್ನೂ ಓದುತ್ತೇನೆ. ನೀವು ಹೇಳಿದ ಹಾಗೆ ನಮ್ಮ ಜೀವನದಲ್ಲಿ ಛಲ ಎಂಬುದು ಇರಬೇಕು. ಅದು ಸಾಧ್ಯವಿಲ್ಲ ಎಂದು ಸುಮ್ಮನೆ ಕೂತರೆ ಅದು ಆಗದು. ನಿಮ್ಮ ಈ ಪತ್ರ ಓದಿ ತುಂಬಾ ಖುಷಿ ಆಯಿತು ಅಕ್ಕ.
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************
ನಮಸ್ಕಾರಗಳು ಅಕ್ಕಾ.. ನಾನು ನಿಮ್ಮೆಲ್ಲರ ಪ್ರೀತಿಯ ಜಗಲಿಯ ಬರಹಗಾರ್ತಿ ಶೌರ್ಯ.ಎಸ್.ವಿ.
ನೀವು ಎಲ್ಲಾ ಸಂಚಿಕೆಯಲ್ಲಿ ಬಹಳ ಒಳ್ಳೆಯ ವಿಚಾರ ತಿಳಿಸಿದ್ದೀರಿ. ಅದರಂತೆಯೇ 20ನೇ ಸಂಚಿಕೆಯಲ್ಲಿ ಬಹಳ ಒಳ್ಳೆಯ ನಮಿಗೆ ಮುಂದಿನ ಭವಿಷ್ಯಕ್ಕೆ ಬೇಕಾಗುವ ವಿಷಯ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು. ಹೌದು ಅಕ್ಕಾ ನೀವು ಹೇಳುವಂತೆ ನಾವು ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳಬೇಕು ಮತ್ತು ತಿದ್ದಿಕೊಳ್ಳಬೇಕು. ತಪ್ಪು ಮಾಡಿದ ಮೇಲೆ ನಿಜ ನಾನೇ ತಪ್ಪು ಮಾಡಿದ್ದು ಅಂಥ ಒಪ್ಪಿಕೊಂಡು ಕ್ಷಮೆ ಕೇಳಿದರೆ ಯಾರೂ ಚಿಕ್ಕವರಾಗಲ್ಲ. ಹೌದು ನೀವು ಹೇಳುವಂತೆ ಅಂಕಗಳು ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಜ್ಞಾನವೂ ಅಲ್ಲ.. ನಮ್ಮ ವಿವೇಕ ಜಾಗೃತಗೊಳ್ಳಬೇಕು. ಹೌದು ನಾವು ಕನಸು ಕಂಡದ್ದನ್ನು ಸಾಧಿಸಿ ತೋರಿಸಬೇಕು. ಒಂದು ಗುರಿ ಇಟ್ಟ ಕಡೆಗೆ ನಾವು ಹೋಗಬೇಕು. ನಾವು ಇಟ್ಟ ಗುರಿ ತಪ್ಪಿಸಬಾರದು. ನಮ್ಮಲ್ಲಿ ಆಗುವಷ್ಟು ಪ್ರಯತ್ನ ಮಾಡಬೇಕು. ಬದುಕಿನಲ್ಲಿ ಒಮ್ಮೆ ಸೋತವನು ಮತ್ತೆ ಯಾವತ್ತೂ ಗೆಲ್ಲಲ್ಲ ಅಂತ ಅಲ್ಲ. ಸೋಲು ಮುಂದಿನ ಗೆಲುವು ಎನ್ನುತ್ತಾ ನನ್ನ ಪುಟ್ಟ ಅನಿಸಿಕೆಗೆ ಪೂರ್ಣವಿರಾಮ ಇಡುತ್ತಿದ್ದೇನೆ. ಧನ್ಯವಾದಗಳು ಅಕ್ಕಾ ನಿಮಗೆ.
7 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕನ್ಯಾಡಿ - 2 , ಧರ್ಮಸ್ಥಳ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಮಕ್ಕಳ ಜಗಲಿ.... ಅಕ್ಕನ ಪತ್ರ ಸಂಚಿಕೆ....೨೦.
ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು.... ನೀವು ಹೇಳಿದ ಪಂಡಿತನ ಕಥೆಯು ತುಂಬಾ ಇಷ್ಟವಾಯಿತು.... ರಾಜನು ತನ್ನ ಬುದ್ಧಿವಂತಿಕೆಯಿಂದ ಪಂಡಿತನ ಕಣ್ಣು ತೆರೆಸಿದನು..... ಜಾತಿ ಮತ ಭೇದ ದಿಂದಾಗಿ ಸಮಾಜದಲ್ಲಿ ಅಶಾಂತಿಯು ತಲೆದೋರುವುದು.... ಸಮಾಜದಲ್ಲಿ ಸಾಮರಸ್ಯವನ್ನು ತರುವುದು ನಮ್ಮೆಲ್ಲರ ಧ್ಯೇಯವಾಗಬೇಕು ಎಂಬುದನ್ನು ನೀವು ಕಥೆಯ ಮೂಲಕ ನಮಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ.... ಧನ್ಯವಾದಗಳು ಅಕ್ಕ... ನಿಮ್ಮ ಮುಂದಿನ ಕಥೆಗೆ ಕಾಯುತ್ತಿರುತ್ತೇನೆ... ಇಂತಿ ನಿಮ್ಮ ಪ್ರೀತಿಯ ಲಹರಿ.
೭ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಪ್ರೀತಿಯ ಅಕ್ಕನಿಗೆ ಹಿತಶ್ರೀ ಮಾಡುವ ನಮನಗಳು. ಅಕ್ಕ ನಿಮ್ಮ ಕಥೆಯನ್ನು ಓದಿದೆ. ನಿಮ್ಮ ಕಥೆಯಿಂದ ತಿಳಿದು ಬರುವುದೇನೆಂದರೆ ಮಾನವ ಯಾವಾಗಲೂ ಜಾತಿಗೆ ಪ್ರಾಶಸ್ತ್ಯ ಕೊಡಬಾರದು , ನ್ಯಾಯಕ್ಕೆ ತಕ್ಕಂತೆ ಹೋರಾಟ ನಡೆಸಬೇಕು. ಯಾವುದೇ ಟೊಳ್ಳು ಮಾತಿಗೆ ಕಿವಿ ಕೊಡದೆ ನ್ಯಾಯಯುತವಾಗಿ ಹೋರಾಟ ನಡೆಸಬೇಕು. ಪಂಡಿತರ ಜಾತಿ ಮತ ಭೇಧದ ಬಗ್ಗೆ ಉತ್ತಮ ರೀತಿಯಲ್ಲಿ ನಿರೂಪಿಸಿದ್ದಾರೆ.
ಆರನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ
ಪಕಳಕುಂಜ , ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಒಲವಿನ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮನಗಳು. ನೀವು ಚೆನ್ನಾಗಿದ್ದೀರಲ್ವಾ.....? ನಾನೂ ಚೆನ್ನಾಗಿದ್ದೇನೆ..... ನಿಮ್ಮ ಪತ್ರಗಳಲ್ಲಿ ಬರುವ ಪ್ರತಿಯೊಂದು ವಿಷಯಗಳು ಬಹಳ ಚೆನ್ನಾಗಿವೆ. ಬದುಕಿಗೊಂದು ದಾರಿದೀಪವಾಗಿವೆ. ಪಂಡಿತನಿಗೆ ರಾಜನು ನೀಡಿದ ಪರೀಕ್ಷೆ ಉತ್ತಮ ಸಮಾಜಕ್ಕೊಂದು ದೀವಿಗೆಯಾಗಿದೆ. ಈಗಿನ ಈ ಯುಗದಲ್ಲಿ ಜಾತಿ-ಮತ, ಧರ್ಮಗಳ ಭೇದಭಾವವಿಲ್ಲದೆ ಸಮಾನತೆಯು ಇರಬೇಕು. ಎಲ್ಲರೂ ಸಮಾನತೆಯಿಂದ, ಮಾನವೀಯ ಮೌಲ್ಯಗಳಿಂದ ಜೀವನವನ್ನು ನಡೆಸಿದಾಗ ಅದಕ್ಕೊಂದು ಅರ್ಥವಿರುತ್ತದೆ. ಎಲ್ಲರ ಯೋಚನೆಯೂ ಒಂದೇ ರೀತಿ ಆದಾಗ ಮಾನವೀಯತೆಗೊಂದು ಉತ್ತಮ ನೆಲೆ ಸಿಗುವಂತಾಗುತ್ತದೆ. ಧನ್ಯವಾದಗಳೊಂದಿಗೆ
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ , ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
**********************************************
ನಮಸ್ತೆ, ನಾನು ಧೀರಜ್.ಕೆ.ಆರ್.
ಮೊದಲನೆಯದಾಗಿ ಪ್ರೀತಿಯ ಅಕ್ಕನಿಗೆ ಯುಗಾದಿ ಹಬ್ಬದ ಶುಭಾಶಯಗಳು. ನೀವು ಪತ್ರದಲ್ಲಿ ಹೇಳಿದ ಕಥೆ ತುಂಬಾ ಮೌಲ್ಯಯುತವಾಗಿದೆ. ನ್ಯಾಯ ನಿರ್ಣಯವು ಮಾನವೀಯತೆಯ ಆಧಾರವಾಗಿರಬೇಕೇ ಹೊರತು ಆಧಾರಿತವಲ್ಲ. ಜಾತಿ ಭೇದಗಳು ಕೇವಲ ಮಾನವ ನಿರ್ಮಿತದಿಂದಾಗಿವೆ. ನಾವು ಸಮಾಜದಲ್ಲಿ ಸಮಾನತೆಯಿಂದ ಬಾಳುವುದರಿಂದ ಸಮಾಜ ಸ್ವಸ್ಥವಾಗುತ್ತದೆ ಎಂದಿರುವುದು ನನಗೆ ಇಷ್ಟವಾಯಿತು. ಅಕ್ಕಾ, ನೀವು ಹೇಳಿದ್ದು ನಿಜ. ಅಂಕಗಳು ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ವಿವೇಕವನ್ನು ಜಾಗೃತಗೊಳಿಸುತ್ತದೆ. ನೀವು ಹೇಳಿದ ಹಾಗೆ ಕನಸುಗಳು ಮಾತ್ರ ಉತ್ಕೃಷ್ಟವಾಗಿರಬೇಕು. ಅದನ್ನು ಸಾಧಿಸುವ ಛಲವಿದ್ದರೆ ನಮ್ಮ ಗುರಿ ತಲುಪಲು ಸಾಧ್ಯ. ಇಂದಿನ ಪತ್ರ ನಮಗೆ ತುಂಬಾ ನೀತಿಯನ್ನು ತಿಳಿಸಿದೆ. ಅಕ್ಕಾ ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.......
ಧನ್ಯವಾದಗಳು.
9ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ
ಪ್ರೌಢ ಶಾಲೆ , ರಾಮಕುಂಜ
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಪ್ರೀತಿಯ ಅಕ್ಕ, ನಾನು ನಿಮ್ಮ ಪತ್ರವನ್ನು ಓದಿದೆ. ಅದರಲ್ಲಿದ್ದ ಕಥೆ ನನಗೆ ತುಂಬಾ ಇಷ್ಟವಾಯಿತು. ಏಕೆಂದರೆ , ಈ ಕಥೆಯಲ್ಲಿ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ತೋರಿಸಲಾಗಿದೆ. ನಾವು ಜಾತಿ-ಮತ ಮರೆತು ಎಲ್ಲರೊಂದಿಗೆ ಸಮಾನವಾಗಿ ಮತ್ತು ಮಾನವೀಯತೆಯಿಂದ ಬಾಳಬೇಕು ಎಂದು ಕಥೆಯ ರೂಪದಲ್ಲಿ ತಿಳಿಸಿದ್ದೀರಿ. ನಾನು ನನ್ನ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವೆ. ನಿಮಗೆ ವಂದನೆಗಳು...... ಇಂತಿ ನಿಮ್ಮ ,
ಆರನೇ ತರಗತಿ
ಸ .ಮಾ. ಹಿ. ಪ್ರಾ .ಶಾಲೆ, ಚೆನ್ನೈತೋಡಿ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************