-->
ಉಪಕಾರಕ್ಕೆ ತಕ್ಕ ಪ್ರತ್ಯುಪಕಾರ - ಕಥೆ

ಉಪಕಾರಕ್ಕೆ ತಕ್ಕ ಪ್ರತ್ಯುಪಕಾರ - ಕಥೆ

ಧನುಶ್ರೀ 
7 ನೇ ತರಗತಿ
ಸ.ಉ.ಪ್ರಾ ಶಾಲೆ , ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
   
           ಉಪಕಾರಕ್ಕೆ ತಕ್ಕ ಪ್ರತ್ಯುಪಕಾರ - ಕಥೆ
      ಒಂದು ಕಾಡಿನಲ್ಲಿ ಒಂದು ದೊಡ್ಡ ಆಲದ ಮರವಿತ್ತು. ಆ ಮರದಲ್ಲಿ ತುಂಬಾ ಪಕ್ಷಿಗಳು ವಾಸಿಸುತ್ತಿದ್ದವು. ಅದರಲ್ಲಿ ಶಿವ ಮತ್ತು ರಾಮ ಎಂಬ ಎರಡು ಗಿಳಿಗಳು ಇದ್ದವು. ಒಂದು ದಿನ ಆ ಕಾಡಿಗೆ ಒಬ್ಬ ಬೇಟೆಗಾರ ಬಂದ. ಅವನು ಒಂದು ಜಿಂಕೆಗೆಂದು ಬಿಟ್ಟ ಬಾಣ ಗುರಿ ತಪ್ಪಿ ಮರಕ್ಕೆ ಬಂದು ಬಿತ್ತು. ಅದು ವಿಷದ ಬಾಣ ಆಗಿರುವುದರಿಂದ ಮರ ದಿನೇ ದಿನೇ ಒಣಗುತ್ತಾ ಬಂತು. ಕೊನೆಗೆ ಅದು ಸಾಯುವ ಸ್ಥಿತಿಗೆ ಬಂದಾಗ ಅದರಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ಆ ಮರವನ್ನು ಬಿಟ್ಟು ಹೋದವು. ಆದರೆ ಎರಡು ಗಿಳಿಗಳು ಮಾತ್ರ ಹೋಗಲಿಲ್ಲ. ಆಗ ಒಂದು ಹಕ್ಕಿ ಬಂದು ಕೇಳಿತು, ನೀವು ಬರುವುದಿಲ್ಲವೇ.....? ಆಗ ಆ ಗಿಳಿಗಳು ನಾವು ನಮಗೆ ಆಸರೆ ಕೊಟ್ಟ ಮರವನ್ನು ಎಂದಿಗೂ ಬಿಟ್ಟು 
ಬರುವುದಿಲ್ಲ , ನಾವು ಸತ್ತರೂ ಇಲ್ಲಿಯೇ ಸಾಯುತ್ತೇವೆ ಎಂದವು.  
          ಆ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ಸ್ವಾಮಿಗಳು ಗಿಳಿಗಳ ಮಾತನ್ನು ಕೇಳಿ ತುಂಬಾ ಖುಷಿಯಿಂದ ಅವರ ಶಕ್ತಿಯಿಂದ ಅವರ ವೇಷವನ್ನು ಬದಲಿಸಿ ಗಿಳಿಗಳ ಬಳಿಗೆ ಬಂದು, ಈ ಮರ ಸಾಯುವ ಸ್ಥಿತಿಯಲ್ಲಿದೆ ನೀವು ಈ ಮರ ಬಿಟ್ಟು ಹೋಗುವುದಿಲ್ಲವೇ....? ಎಂದು ಕೇಳಿದಾಗ, ಆ ಗಿಳಿಗಳು ನಾವು ಈ ಮರವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದವು. ಅದನ್ನು ಕೇಳಿ ಸ್ವಾಮಿಗಳು ತನ್ನ ನಿಜರೂಪಕ್ಕೆ ಬಂದು ನೀವು ಈ ಮರದ ಮೇಲೆ ಇಟ್ಟಿರುವ ಪ್ರೀತಿಯನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ನಿಮಗೆ ಏನು ವರ ಬೇಕು ಕೇಳಿ ಎಂದರು. ಆಗ ಗಿಳಿಗಳು ಸ್ವಾಮಿಗಳಿಗೆ ನಮಸ್ಕರಿಸಿ ನಮಗೆ ಬೇರೆ ಯಾವ ವರವು ಕೂಡ ಬೇಡ ಈ ಮರ ಮೊದಲಿನಂತೆ ಹಚ್ಚ ಹಸಿರಾಗಿರಬೇಕು ಇದರಲ್ಲಿ ಎಲ್ಲಾ ಪಕ್ಷಿಗಳು ಬಂದು ವಾಸಿಸಬೇಕು ಎಂದು ಕೇಳಿದವು. ಆಗ ಸ್ವಾಮಿಗಳು ಆ ವರವನ್ನು ಕೊಟ್ಟರು. ಅವರ ವರದಿಂದ ಆ ಮರ ಮತ್ತೆ ಹಚ್ಚಹಸಿರಾಯಿತು. ಆ ಮರವನ್ನು ಬಿಟ್ಟುಹೋದ ಪಕ್ಷಿಗಳು ಮತ್ತೆ ಅದರಲ್ಲೇ ಬಂದು ವಾಸಿಸತೊಡಗಿದವು.
           (ಈ ಕಥೆಯಲ್ಲಿ ಬರುವ ಎರಡು ಗಿಳಿಗಳು ನಾವು ನಮಗೆ ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು, ಹಾಗೂ ಅವರು ಕಷ್ಟದಲ್ಲಿರುವಾಗ ನಾವು ಅವರನ್ನು ಬಿಟ್ಟು ಹೋಗಬಾರದು ಎಂದು ತಿಳಿಸಿ ಕೊಡುತ್ತವೆ.)
........................................................ ಧನುಶ್ರೀ 
7 ನೇ ತರಗತಿ
ಸ.ಉ.ಪ್ರಾ ಶಾಲೆ , ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************
Ads on article

Advertise in articles 1

advertising articles 2

Advertise under the article