-->
ಮಕ್ಕಳ ಕವನಗಳು : ಧೃತಿ

ಮಕ್ಕಳ ಕವನಗಳು : ಧೃತಿ


          ಹಸಿರು ಉಸಿರು
         ----------------
ಗಿಡವನು ಬೆಳೆಸಿ ಮರವನು ಉಳಿಸಿ
ಊರಲ್ಲಿ ಹಸಿರನು ಹಂಚೋಣ
ಹಸಿರನು ಉಳಿಸಿ ದೇವರ ಭಜಿಸಿ 
ಭೂಮಿಗೆ ಮಳೆಯನು ಇಳಿಸೋಣ 
      ಹಿರಿಯರ ಬಳಿಯಲಿ ನಾಡಿನ ಬಗೆಗೆ 
      ಕೇಳುತಾ ಮಾಡುತ ಕಲಿಯೋಣ 
      ಕಿರಿಯರ ಬಳಿಯಲಿ ಹಸಿರಿನ ಬಗೆಗೆ
      ಚಿಂತನೆಯನ್ನು ಮಾಡೋಣ 
ಹಸಿರೇ ನಮ್ಮನ್ನು ಉಳಿಸುವ ದೇವತೆ 
ಎಂಬುದು ನಮಗೆ ತಿಳಿದಿರಲಿ
ಹಸಿರನು ಉಳಿಸುವ ಧ್ಯೇಯವು ಎಂದೂ 
ನಮ್ಮಯ ಬದುಕಲಿ ತುಂಬಿರಲಿ 
      ಎಲ್ಲರೂ ಒಟ್ಟಿಗೆ ಸೇರೋಣ 
      ಗಿಡವನ್ನು ನೆಟ್ಟು
      ನೀರನ್ನು ಕೊಟ್ಟು
      ಸಂತಸವನ್ನು ಹಂಚೋಣ
...................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


                ಅಳಿಲು 
        --------------------
ತೋಟದ ಸುತ್ತಲು ಅತ್ತಿಂದಿತ್ತ
ಓಡುವ ಅಳಿಲೇ
ನಿನ್ನಯ ಸ್ನೇಹವ ಬಯಸುತ 
ಜೊತೆ ಜೊತೆಗೆ ನಾ ಬರಲೇ
    ತಿನ್ನಲು ಚಕ್ಕುಲಿ ಉಂಡೆಗಳಿದ್ದರೂ
    ಹಸಿವು ಮಾತ್ರ ನನಗಿಲ್ಲ
    ನಾನು ನೀನು ಸ್ನೇಹಿತರಾದರೆ
    ಕೊಡುವೆ ನಾನು ನಿನಗೆಲ್ಲಾ 
ನನ್ನನ್ನು ಕಂಡರೆ ಓಡುವೆ ಏಕೆ
ಸ್ನೇಹಿತರಾದರೆ ಭಯ ನಿನಗೇತಕೆ 
ಅಳಿಲೇ ಅಳಿಲೇ ಓ ಅಳಿಲೇ
ನನ್ನಯ ಬಳಿಗೆ ಬಾ ಅಳಿಲೇ 
      ತೋಟ ಸುತ್ತಿ ಮರಗಳ ಹತ್ತಿ
      ಸಿಹಿಸಿಹಿ ಹಣ್ಣನ್ನು ತಿನ್ನೋಣ
      ಕೈ ಕೈ ಹಿಡಿದು ಹಾಡುತ ನಾವು
      ಸಂತೋಷದಿಂದ ನಲಿಯೋಣ 
...................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


                ಕಂದನ ಬೇಡಿಕೆ
            --------------------
ಎಬಿಸಿಡಿ ಬೇಡ ಅಮ್ಮ
ಮೊದಲು ಕಲಿಯುವೆ ಕನ್ನಡವ
ಅಆಇಈ ನಮ್ಮಯ ಆಸ್ತಿ
ಸೀಮಿತವಾಗಿರಲಿ ಇಂಗ್ಲಿಷಿನ ದೋಸ್ತಿ
      ಅಪ್ಪ-ಅಮ್ಮ ಕಲಿತ ಶಾಲೆ
      ಆಗುವುದೆನಗೆ ದೇಗುಲ
      ದ್ವೇಷವ ಮಾಡೇನಮ್ಮಾ
      ಒಳ್ಳೆಯ ಬುದ್ಧಿಯ ಕಲಿವೇನಮ್ಮ
ಹೊತ್ತುಕೊಂಡು ಹೋಗುವೆನಮ್ಮ
ಚೀಲದಲ್ಲಿ ಪುಸ್ತಕ
ಓದಿ ಬರೆದು ಕಲಿವೆನೆಲ್ಲಾ
ತುಂಬಿಕೊಳ್ಳುವೆ ಮಸ್ತಕ
      ಜ್ಞಾನ ಜ್ಯೋತಿ ಬೆಳಗಿ ಕೊಂಡು
      ಜಗದಿ ಹೆಸರಗಳಿಸುವೆ
      ಹತ್ತು-ಹಲವು ಗಿಡವ ನೆಟ್ಟು
      ಹಸಿರು ತೋಟ ಮಾಡುವೆ
ಶುದ್ಧ ಗಾಳಿ ಶುದ್ಧ ನೀರು
ಹಂಚಿಕೊಂಡು ಬೆಳೆಯುವೆ
ಸೈನಿಕನಾಗಿ ಜನರ ರಕ್ಷಿಸಿ
ದೇಶ ಸೇವೆ ಮಾಡುವೆ
...................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


               ಮೋಡಣ್ಣ
               ----------------
ಗಡಗಡ ಗುಡುಗುವ ಮೋಡಣ್ಣ
ಹನಿಹನಿ ಮಳೆಯನು ಸುರಿಸಣ್ಣ 
ಕೆರೆ ಹೊಳೆ ತುಂಬಿ ಜಲ 
ತಣ್ಣನೆ ನೆನೆಯಲಿ ತಂಪು ನೆಲ
      ಝಣಝಣ ತುಂಬಲಿ ಊರ ಹೊಳೆ
      ಫಳಫಳ ಹೊಳೆದು ಮುಖದ ಕಳೆ
      ಮೆಲ್ಲಗೆ ಅರಳುವ ಹೂವುಗಳು
      ಸುತ್ತಲೂ ತುಂಬಿದ ದುಂಬಿಗಳು
ಚಳಿಯಲಿ ನಡುಗಿದೆ ಬೆಕ್ಕುಗಳು
ಬೆಚ್ಚನೆ ಮಲಗಿದೆ ಇಲಿಗಳು
ಮೋಡದ ಮರೆಯಲಿ ಬೀರುವ
ಸೂರ್ಯನ ಕಿರಣಗಳು 
       ಗಾಳಿಗೆ ಹಾರಾಡಲಿ ಮನಸ್ಸು 
       ಮೆಲ್ಲನೆ ಜಾರಿದ ನಿದ್ದೆಯಲ್ಲಿ ಕನಸು 
       ಹೀಗೆ ಬರಲಿ ನಾಳೆಗಳು 
       ಕೂಡಲಿ ಕವಿತೆಯ ಸಾಲುಗಳು 
...................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************

 

          ಪ್ರೀತಿ
         -----------
ನಮ್ಮ ಮನೆಯ ಪ್ರೀತಿ
ಇಲ್ಲ ಇವಳಿಗೆ ಭೀತಿ
ಶಾಲೆಗೆ ತಂದಳು ಕೀರ್ತಿ
ನಮ್ಮಂತವರಿಗೆ ಇವಳೇ ಸ್ಪೂರ್ತಿ 

          ಆಕಾಶ
          -----------
ನೀಲಿ ಬಣ್ಣದ ಬಾನಿನಲಿ 
ಹಕ್ಕಿಗಳು ಹಾರುವುದು ಹರುಷದಲಿ 
ರಾತ್ರಿ ತಿಂಗಳ ಬೆಳಕಿನಲಿ 
ಕಾಣುವುದು ನಕ್ಷತ್ರ ಮಿನುಗುತಲಿ  

              ಚಂದಿರ
              -----------
ರಾತ್ರಿಯ ವೇಳೆ ಬೆಳಗುವ ಚಂದಿರ
ನೋಡಲು ನೀನು ಎಷ್ಟು ಸುಂದರ
ಹುಣ್ಣಿಮೆ ದಿನ ಪೂರ್ಣ ಬೆಳಗುವೆ
ಅಮಾವಾಸ್ಯೆ ದಿನ ಮಾಯವಾಗುವೆ
 
               ಚಿಟ್ಟೆ
             -----------
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಮೈಮೇಲೆ ಬಣ್ಣಬಣ್ಣದ ಬಟ್ಟೆ
ಮಕರಂದವ ಹೀರಲು ಹೂವನು ಕೊಟ್ಟೆ
ನನ್ನಯ ಬಳಿಗೆ ಬಾಬಾ ಚಿಟ್ಟೆ 

               ಆಟ
            -----------
ಆಟ ಆಟ ಲಗೋರಿ ಆಟ
ಮನೆಗೆ ತುಂಬಾ ಮೋಜಿನಾಟ
ಆಟ ಆಟ ಕಣ್ಣಾ ಮುಚ್ಚಾಲೆ ಆಟ
ಅಡಗಿದರಲ್ಲಿ ತುಂಬಾ ಸೊಳ್ಳೆಕಾಟ 


            ಗಾಡಿ
           ----------
ಜೋಡೆತ್ತಿನ ಗಾಡಿ
ಈಗೆಲ್ಲಿದೆ ನೋಡಿ
ಬರೀ ವಾಹನಗಳ ಓಡಾಟ
ಕಪ್ಪು ಹೊಗೆಯ ಕಾರಟ
ಪರಿಸರ ಪ್ರೇಮಿಗಳ ಕೂಗಾಟ
ಒಳ್ಳೆಯ ಗಾಳಿಗೆ ಪರದಾಟ

              ನಾಡು
              ----------
ನಾಡು ನಾಡು ಕನ್ನಡ ನಾಡು 
ಸುಂದರವಾಗಿಹ ಶಿಲ್ಪಕಲೆ - ಹಳೆಬೀಡು 
ದೂರದಿ ಕಾಣುವ ಗಂಧದ ಕಾಡು
ನೀನೊಮ್ಮೆ ಬಂದು ನೋಡು 

            ಮಳೆ
           ----------
ಮಳೆ ಬಂತು ಮಳೆ
ಮೊಳಕೆಯೊಡೆಯಿತು ಬೆಳೆ
ತೆಗೆದರೆಲ್ಲಾ ಕಳೆ
ಸಂತಸಗೊಂಡಿತು ಇಳೆ

                
               ಭಕ್ತಿ
             ----------
ಆಸಕ್ತಿಯೇ ಗುರಿ ತಲುಪಿಸುವ ಶಕ್ತಿ
ದೇವರಲ್ಲಿ ಇದೆ ತುಂಬಾ ಭಕ್ತಿ
ಭಕ್ತಿಯೇ ಭಕ್ತನಿಗೆ ಕೊಡಿಸಲಿದೆ ಮುಕ್ತಿ 
ಸಿದ್ಧಿಸಲಿದೆ ಎಲ್ಲೆಂದರಲ್ಲಿ ಯುಕ್ತಿ
...................................................... ಧೃತಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************Ads on article

Advertise in articles 1

advertising articles 2

Advertise under the article