-->
ಉತ್ತುಂಗ - 22 : ಪರೀಕ್ಷಾ ಹಬ್ಬ

ಉತ್ತುಂಗ - 22 : ಪರೀಕ್ಷಾ ಹಬ್ಬ



                ಉತ್ತುಂಗ - 22 ಪರೀಕ್ಷಾ ಹಬ್ಬ
         ಪುತ್ತೂರಿನಲ್ಲೊಂದು ವಿಶೇಷ ಪ್ರಯತ್ನ
      ವಿದ್ಯಾರ್ಥಿ ಜೀವನದಲ್ಲಿ ಹತ್ತನೇ ತರಗತಿ ಜೀವನ ರೂಪಿಸುವ ಒಂದು ತಿರುವು. ಈ ವರ್ಷ ಕಲಿತ ಎಲ್ಲಾ ವಿಷಯಗಳನ್ನು ಆರು ದಿನಗಳ ಪರೀಕ್ಷೆಯೆಂಬ ಉತ್ತರ ಪತ್ರಿಕೆಗಳಲ್ಲಿ ಬರೆಯುವ ಮೂಲಕ ಅಂಕ ಗಳಿಸಿ ಭವಿಷ್ಯ ರೂಪಿಸಲು ಉತ್ತಮ ಅವಕಾಶ.
       ಈ ನಿಟ್ಟಿನಲ್ಲಿ ಶಿಕ್ಷಕರು ಶೈಕ್ಷಣಿಕ ವರ್ಷದಲ್ಲಿ ವಿವಿಧ ತಾಲೀಮುಗಳ ಮೂಲಕ ತಮ್ಮದೇ ಆದ ಹಲವು ಕಲಿಕಾ ಆಯಾಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಾರೆ.
        ಇತ್ತೀಚಿನ ವರ್ಷಗಳಲ್ಲಿ ಕಲಿಕೆಗೆ ನೈಸರ್ಗಿಕವಾಗಿ ಸಂಕಷ್ಟ ಅಡ್ಡಿ-ಆತಂಕಗಳು ಅನಿರೀಕ್ಷಿತವಾಗಿ ಬಂದೊದಗಿದ್ದು, ವಿಪರ್ಯಾಸವೇ ಸರಿ. ಇವಕ್ಕೆಲ್ಲಾ ಪೂರಕವಾಗಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿ ಇಲಾಖೆ ಮುಖ್ಯಸ್ಥರು ಇತರರಿಗೆ ಮಾದರಿಯಾಗಿ ಕಲಿಕೆಗೆ ಪೂರಕವಾದ ವಿವಿಧ ತಂತ್ರಗಳನ್ನು ಅಳವಡಿಸಿಕೊಂಡು ಮುನ್ನಡೆಸುತ್ತಿರುವುದು ಸರ್ವೇಸಾಮಾನ್ಯ..... 
           ಇದೇ ಮಾದರಿಯಲ್ಲಿ ಪುತ್ತೂರು ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿನೂತನ ಕಾರ್ಯಯೋಜನೆಯನ್ನು ರಚಿಸಲಾಯಿತು. 
               ಅವುಗಳಲ್ಲಿ ಉತ್ತೇಜನ ಎಂಬ ಯಕ್ಷಗಾನ ಆಧಾರಿತ ವಿಡಿಯೋ ಸುಮಾರು 2500ಕ್ಕೂ ಮೀರಿ ವೀಕ್ಷಕರಿಂದ ಪ್ರಶಂಸೆ ಪಡೆದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಲು ಸಹಕಾರಿಯಾಯಿತು ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ತಾಲೂಕಿನ 5000 ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಪತ್ರ ಎಂಬ ಶೀರ್ಷಿಕೆಯಲ್ಲಿ ಕರಪತ್ರದ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಮುಖ್ಯಶಿಕ್ಷಕರ ಮೂಲಕ ತಲುಪುವಂತಾಯಿತು. ಇದಕ್ಕಾಗಿ ನಿಕಟಪೂರ್ವ ಗೌರವಾನ್ವಿತ ಶಿಕ್ಷಣ ಸಚಿವರಿಂದ ಫೋನ್ ಮೂಲಕ ಪ್ರಶಂಸೆ ಪಡೆಯಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವಿಶೇಷ ವಿಡಿಯೋ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು. 




     ಅಲ್ಲದೆ ಸ್ಥಳೀಯ ಪಾಂಚಜನ್ಯ ಆಕಾಶವಾಣಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ನುರಿತ ವಿಷಯ ಶಿಕ್ಷಕರಿಂದ ಹಾಗೂ ಸ್ಥಳೀಯ ಸುದ್ದಿ ನ್ಯೂಸ್ ದಿನಪತ್ರಿಕೆ ಸಂಸ್ಥೆಯಿಂದ ಯುಟ್ಯೂಬ್ ಚಾನಲ್ ಮೂಲಕ ನೇರ ಪ್ರಸಾರದಲ್ಲಿ ನುರಿತ ಆರು ವಿಷಯ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕರು ತಮ್ಮಲ್ಲಿ ಇದ್ದ ಪರೀಕ್ಷೆ ಗೊಂದಲ ಅಥವಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಕಾರಿಯಾಯಿತು. ಈ ಸಂದರ್ಭದಲ್ಲಿ ಕೇಳಲ್ಪಟ್ಟ ಎಲ್ಲಾ ಪ್ರಶ್ನೆಗಳಿಗೆ ನೀಡಿದ ಉತ್ತರವನ್ನು ಮೂರು ತಾಲ್ಲೂಕುಗಳಲ್ಲಿ ಅತ್ಯಂತ ಜನಪ್ರಿಯವಾದ ಸುದ್ದಿ ಪತ್ರಿಕೆಯಲ್ಲಿ ಮುದ್ರಿಸಿ ಮುದ್ರಿತ ಪ್ರತಿ ಸರ್ವರಿಗೂ ಸಿಗುವಂತಾಯಿತು.
      ಅಲ್ಲದೆ ಮಂಗಳೂರಿನ ಪ್ರತಿಷ್ಠಿತ ದೈಜಿವರ್ಲ್ಡ್ ಮತ್ತು ನಮ್ಮ ಟಿವಿ ಚಾನೆಲ್ಗಳ ಮೂಲಕ ನೇರ ಪ್ರಸಾರ ಕಾರ್ಯಕ್ರಮವು ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು, ಶಿಕ್ಷಕರು ತಮ್ಮ ಪರೀಕ್ಷೆ ಹಾಗೂ ಕಲಿಕಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಯಿತು. 
        ಇದೇ ಮಾದರಿಯಲ್ಲಿ 2022 ನೇ ಸಾಲಿನಲ್ಲಿ ಹಿಂದಿನ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ವಿಶೇಷ ಹಾಗೂ ವಿಭಿನ್ನತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಬಾರಿ Inland letter - ಪತ್ರ - ಕಾಗದವನ್ನು ಪ್ರತಿ ವಿದ್ಯಾರ್ಥಿಗಳ ಮನೆ ಅಂಚೆ ವಿಳಾಸಕ್ಕೆ ಪತ್ರ ಬರೆಯುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗಿದೆ. 
         ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಕಾರಾತ್ಮಕ ಮಾರ್ಗದರ್ಶನ ತಿಳುವಳಿಕೆ ನೀಡಿ ಆತ್ಮವಿಶ್ವಾಸ ಹೆಚ್ಚಿಸಲು ಪೂರಕವಾಗಲು ಈ ಪ್ರಯತ್ನ ನಡೆದಿದೆ. ಎಲ್ಲಾ ವಿಷಯಗಳು ಸ್ಥಳೀಯ ಹಾಗೂ ಜಿಲ್ಲಾ, ರಾಜ್ಯಮಟ್ಟದ ಕನ್ನಡ ಮತ್ತು ಆಂಗ್ಲ ಭಾಷಾ ಪ್ರತಿಷ್ಠಿತ ಪತ್ರಿಕೆಗಳ ಮೂಲಕ ಪತ್ರ ಸಾರಾಂಶ ಮತ್ತು ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ. ಉತ್ತುಂಗ - 2022 ಪುತ್ತೂರು ತಾಲೂಕಿನ 4800 ಎಸ್. ಎಸ್.ಎಲ್.ಸಿ. ವಿದ್ಯಾರ್ಥಿಗಳ ಮನೆ ಮನ ಮುಟ್ಟಿದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಯಾರಿಗೂ ಆರ್ಥಿಕ ಹೊರೆ ಬೀಳದಂತೆ ದಾನಿಗಳ ಪ್ರಾಯೋಜಕತ್ವದಲ್ಲಿ ಇದನ್ನು ನಿರ್ವಹಿಸಲಾಗಿದೆ. ಅಂಚೆ ಅಣ್ಣನ ಮೂಲಕ ಎಲ್ಲಾ ಸ್ಥಳೀಯ ಹಾಗೂ ಹೊರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಲುಪಿದೆ. ಇದರಿಂದ ಇತರರಿಗೆ ಮಾದರಿಯಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರೆ ಶ್ರಮ ಸಾರ್ಥಕ ಎನ್ನಬಹುದು.
             ಶುಭಹಾರೈಕೆಗಳೊಂದಿಗೆ .......
ಮಕ್ಕಳ ಜಗಲಿ , ದಕ್ಷಿಣ ಕನ್ನಡ ಜಿಲ್ಲೆ
*******************************************




Ads on article

Advertise in articles 1

advertising articles 2

Advertise under the article