
ಗ್ರೇಡ್ ಪರೀಕ್ಷಾ ಸಿದ್ಧತೆ : ಪ್ರಕೃತಿ ಮತ್ತು ವರ್ಣ ಚಿತ್ರಣ
Saturday, February 19, 2022
Edit
ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಸಿದ್ಧತೆ
ಪ್ರಕೃತಿ ಮತ್ತು ವರ್ಣ ಚಿತ್ರಣ
NATURE AND COLOUR DRAWING
ಪ್ರೀತಿಯ ಜಗಲಿಯ ಮಕ್ಕಳೇ....... ಗ್ರೇಡ್ ಪರೀಕ್ಷೆ ಬರೆಯಲು ಸಿದ್ಧರಾಗಿದ್ದೀರಿ..... ಗ್ರೇಡ್ ಪರೀಕ್ಷೆಯ ಆರು ವಿಷಯಗಳಲ್ಲಿ ಪ್ರಕೃತಿ ಮತ್ತು ವರ್ಣ ಚಿತ್ರಣ ಒಂದು. ಬನ್ನಿ ಈ ವಿಷಯ ಬಗ್ಗೆ ಸ್ವಲ್ಪ ತಿಳ್ಕೊಂಡು ಬರೋಣ........
ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್
ಚಿತ್ರಕಲಾ ಪರೀಕ್ಷೆಯಲ್ಲಿ
ಪ್ರಕೃತಿ ಮತ್ತು ವರ್ಣ ಚಿತ್ರಣ
--------------------------------------------
ಪ್ರಾಕೃತಿಕವಾಗಿ ಸಿಗುವ ಯಾವುದೇ ಹೂವನ್ನು ನಮ್ಮೆದುರಿಗಿರಿಸಿ ಹೂವು , ಟೊಂಗೆ , ಎಲೆಗಳ ರಚನೆ , ಅವುಗಳ ಆಕಾರ , ಗಾತ್ರವನ್ನು ನೀಡಿದ ಕಾಗದದ ಪ್ರಮಾಣಕ್ಕೆ ಅನುಸಾರವಾಗಿ ಯಥಾವತ್ತಾಗಿ ಪೆನ್ಸಿಲ್ (ಸೀಸದ ಕಡ್ಡಿ) ನಿಂದ ರಚಿಸಿ ಅವುಗಳ ಬಣ್ಣವನ್ನು ನೆರಳು ಬೆಳಕಿನ ಸಂಯೋಜನೆಯೊಂದಿಗೆ ಜಲ ವರ್ಣದಿಂದ ಚಿತ್ರಿಸುವುದು.
ಲೋವರ್ ಗ್ರೇಡ್ : ಮಾದರಿ ಪ್ರಶ್ನೆಪತ್ರಿಕೆಲೋವರ್ ಗ್ರೇಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು : ನಿಮಗೆ ಕೊಟ್ಟಿರುವ ಎಲೆಯ ಟೊಂಗೆಯನ್ನು ಪೆನ್ಸಿಲಿನಿಂದ ರಚಿಸಿ ಟೊಂಗೆಯಲ್ಲಿ ಕನಿಷ್ಠ ಐದು ಎಲೆಗಳು ಇರಬೇಕು. ಹಾಗೂ ಅದಕ್ಕೆ ವಾಸ್ತವಿಕ ಜಲವರ್ಣ (water colour) ವನ್ನು ತುಂಬುವುದು.
........................................................
ಹೈಯರ್ ಗ್ರೇಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು : ನಿಮಗೆ ಕೊಟ್ಟಿರುವ ಹೂವಿನ ಗಿಡದ ಟೊಂಗೆಯನ್ನು ಅದರ ದೇಟು , ಎಲೆ , ಮೊಗ್ಗು ಹಾಗೂ ಹೂವಿನ ಆಕಾರ ರಚಿಸಿ ವಾಸ್ತವಿಕ ರೀತಿಯಲ್ಲಿ ಜಲವರ್ಣ(water colour) ವನ್ನು ತುಂಬುವುದು.
ಎಲೆ , ಟೊಂಗೆಗಳ ಜೋಡಣೆ , ಹೂವಿನ ರಚನೆ ಹಾಗೂ ಅಲಂಕಾರದ ರೂಪಗಳನ್ನು ಪ್ರತ್ಯೇಕವಾಗಿ ಚಿತ್ರಿಸುವುದು.
ಎಲೆ , ಟೊಂಗೆಗಳ ಜೋಡಣೆ , ಹೂವಿನ ರಚನೆ
ಹಾಗೂ ಅಲಂಕಾರದ ರೂಪಗಳನ್ನು
ವಿದ್ಯಾರ್ಥಿಗಳೇ ಚೆನ್ನಾಗಿ ಅಭ್ಯಾಸ ಮಾಡಿ......
ಚಿತ್ರಕಲಾ ಶಿಕ್ಷಕರು
ಸಂತ ತೆರೇಸಾ ಶಾಲೆ ಬೆಂದೂರು, ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ.
mob : +919448545348
********************************************