-->
ಡ್ರಾಯಿಂಗ್ ಗ್ರೇಡ್ ಪರೀಕ್ಷೆ : ಜ್ಯಾಮಿತಿ ರಚನೆಗಳು - ಸಂಚಿಕೆ - 5

ಡ್ರಾಯಿಂಗ್ ಗ್ರೇಡ್ ಪರೀಕ್ಷೆ : ಜ್ಯಾಮಿತಿ ರಚನೆಗಳು - ಸಂಚಿಕೆ - 5

ಜ್ಯಾಮಿತಿ (GEOMETRY) ಸಂಚಿಕೆ - 5

         ಡ್ರಾಯಿಂಗ್ ಗ್ರೇಡ್ ಪರೀಕ್ಷೆ
      ಜ್ಯಾಮಿತಿ ರಚನೆಗಳು - ಸಂಚಿಕೆ - 5
    ------------------------------------------


ನಮಸ್ಕಾರ ವಿದ್ಯಾರ್ಥಿಗಳೇ, 
      ಚಿತ್ರಕಲಾ ಗ್ರೇಡ್ ಪರೀಕ್ಷೆಯ ದಿನಾಂಕ ಬಂದೇ ಬಿಟ್ಟಿತು. ಈ ತನಕದ ಎಲ್ಲಾ ಜ್ಯಾಮಿತಿ ರಚನೆಗಳ ವಿಧಾನಗಳನ್ನು ಸರಿಯಾಗಿ ಮನನ ಮಾಡಿದ್ದೀರಿ ಅಂದುಕೊಂಡಿದ್ದೇನೆ. ಹೈಯರ್ ಗ್ರೇಡ್ ಪರೀಕ್ಷೆ ಬರೆಯುವ ಮಕ್ಕಳ ಗಮನಕ್ಕೆ ……. ನಿಮಗೆ ಪ್ರಮಾಣ ಚಿತ್ರಣ (Scale Drawing) ಎಂಬ ಲೆಕ್ಕವೊಂದಿದೆ. ಇದರ ಪ್ರಶ್ನೆ ಹೀಗಿರುತ್ತದೆ…….

      5 ಸೆಂ.ಮೀ.ಗಳಿಗೆ 1 ಮೀಟರ್ ಎಂದು ಪರಿಗಣಿಸಿ, ಸೆಂ. ಮೀ. ಮತ್ತು ಮೀಟರ್ ಗಳನ್ನು ತೋರಿಸುವ 4ಮೀಟರ್ ನ ಅಳತೆಪಟ್ಟಿಯನ್ನು ರಚಿಸಿ
          ವಿಧಾನ: ಇಲ್ಲಿ ಕೊಟ್ಟಿರುವ ಪ್ರಮಾಣವನ್ನು ಸರಿಯಾಗಿ ಗಮನಿಸಿಕೊಳ್ಳಿ. 5ಸೆಂ.ಮೀ.ಗಳಿಗೆ 1 ಮೀಟರ್ ಎಂದು ಪರಿಗಣಿಸಿ, 4 ಮೀಟರ್ ನ ಅಳತೆಪಟ್ಟಿಯ ರಚನೆ. ಆದ್ದರಿಂದ 20ಸೆಂ. ಮೀ. (4x5=20) ಉದ್ದವುಳ್ಳ ರೇಖೆಯನ್ನು ಎಳೆದು, ನಾಲ್ಕು ಸಮಭಾಗಗಳನ್ನು (5-5-5-5) ಗುರುತಿಸಿಕೊಳ್ಳಿರಿ. ಈಗ ಮೊದಲ ಭಾಗವನ್ನು ಸರಿಯಾಗಿ ಹತ್ತು ಸಮಭಾಗಗಳನ್ನಾಗಿ ಮಾಡಿರಿ. ಇಲ್ಲಿಗೆ ಅಳತೆಪಟ್ಟಿಯ ಕೆಲಸ ಮುಗಿಯಿತು.

.............................................................

             ಈಗ ಮುಂದಿನ ಪ್ರಶ್ನೆ ನೋಡೋಣ. ಇದೇ ಅಳತೆ ಪಟ್ಟಿಯನ್ನು ಉಪಯೋಗಿಸಿ 4ಮೀಟರ್ X 2ಮೀಟರ್ ಅಳತೆಯ ಆಯತವನ್ನು ರಚಿಸಬೇಕು. ಅಂದರೆ 20 X10 ಸೆಂ.ಮೀ ಇರುವ ಆಯತಾಕಾರವನ್ನು ರಚಿಸಬೇಕು. ಹಾಗೂ ಅದರ ಒಳಗಡೆ ಕೊಟ್ಟಿರುವ  “KNOELEDGE IS POWER”  ಅಕ್ಷರಗಳನ್ನು ಅಂದವಾಗಿ ಬರೆಯಬೇಕು. 

.............................................................

      ಹೈಯರ್ ಗ್ರೇಡ್ - ಪ್ರಶ್ನೆ : 1) : 8 ಸೆಂ. ಮೀ. ಬಾಹುವಿನ ಅಳತೆಯುಳ್ಳ ಚೌಕವನ್ನು ರಚಿಸಿ, ಅದರಲ್ಲಿ ನಾಲ್ಕು ಸಮ ವೃತ್ತಗಳನ್ನು ಎಳೆಯಿರಿ. ಪ್ರತಿಯೊಂದು ವೃತ್ತವೂ ಚೌಕದ ಒಂದು ಬಾಹುವನ್ನು ಹಾಗೂ ಉಳಿದೆರಡು ವೃತ್ತಗಳನ್ನು ಸ್ಪರ್ಶಿಸುವಂತಿರಬೇಕು.
       ವಿಧಾನ: ಮೊದಲು 8 ಸೆಂ. ಮೀ. ಬಾಹುವಿನ ಅಳತೆಯುಳ್ಳ ಚೌಕವನ್ನು ರಚಿಸಿರಿ. ಅವುಗಳ ಕರ್ಣಗಳನ್ನು ಸೇರಿಸಿರಿ. ಈಗ ನಿಮಗೆ ಇಲ್ಲಿ ನಾಲ್ಕು ತ್ರಿಭುಜಗಳು ದೊರೆಯತ್ತವೆ. (AOB, BOC, COD ಮತ್ತು AOD) ಯಾವುದಾದರೂ ಒಂದು ತ್ರಿಭುಜಕ್ಕೆ ಅಂತರ್ ವೃತ್ತವನ್ನು ರಚಿಸಿರಿ. ಆ ವೃತ್ತದ ಕೇಂದ್ರಬಿಂದುವಿನ ಸಹಾಯದಿಂದ ಉಳಿದ ವೃತ್ತಗಳನ್ನೂ ರಚಿಸಿರಿ.

.............................................................
 
      ಹೈಯರ್ ಗ್ರೇಡ್ - ಪ್ರಶ್ನೆ : 2) 8 ಸೆಂ. ಮೀ. ಬಾಹುವಿನ ಅಳತೆಯುಳ್ಳ ಚೌಕವನ್ನು ರಚಿಸಿ, ಅದರಲ್ಲಿನಾಲ್ಕು ಸಮವೃತ್ತಗಳನ್ನು ಎಳೆಯಿರಿ. ಪ್ರತಿಯೊಂದು ವೃತ್ತವೂ ಚೌಕದ ಎರಡು ಬಾಹುಗಳನ್ನು ಹಾಗೂ ಉಳಿದೆರಡು ವೃತ್ತಗಳನ್ನು ಸ್ಪರ್ಶಿಸುವಂತಿರಬೇಕು.
        ವಿಧಾನ: ಇಲ್ಲಿ ಪ್ರಶ್ನೆಗಳನ್ನು ಸರಿಯಾಗಿ ಗಮನಿಸಿಕೊಳ್ಳಬೇಕು. ಮೊದಲು 8 ಸೆಂ. ಮೀ. ಬಾಹುವಿನ ಅಳತೆಯುಳ್ಳ ಚೌಕವನ್ನು ರಚಿಸಿರಿ. ಅವುಗಳ ಬಾಹುಗಳನ್ನು ಅರ್ಧಿಸಿರಿ. ಈಗ ನಿಮಗೆ ಇಲ್ಲಿ ನಾಲ್ಕು ಚೌಕಗಳು ದೊರೆಯತ್ತವೆ. (APOR, BPOS, CSOQ ಮತ್ತು DQOR) ಕರ್ಣಗಳನ್ನು ಸೇರಿಸಿರಿ. ಯಾವುದಾದರೂ ಒಂದು ಚೌಕಕ್ಕೆ ಅಂತರ್ ವೃತ್ತವನ್ನು ರಚಿಸಿರಿ. ಆ ವೃತ್ತದ ಕೇಂದ್ರಬಿಂದುವಿನ ಸಹಾಯದಿಂದ ಉಳಿದ ವೃತ್ತಗಳನ್ನೂ ರಚಿಸಿರಿ.

...............................................................


          ಹೈಯರ್ ಗ್ರೇಡ್ - ಪ್ರಶ್ನೆ : 3) 5 ಸೆಂ. ಮೀ. ವೃತ್ತವನ್ನು ರಚಿಸಿ, ವೃತ್ತದಲ್ಲಿ 5ಸೆಂ. ಮೀ. ಬಾಹುವಿನ ಷಡ್ಭುಜವನ್ನು ರಚಿಸಿ, ಷಡ್ಭುಜದಲ್ಲಿ ಆರು ಸಮ ವೃತ್ತಗಳನ್ನು ಎಳೆಯಿರಿ. ಪ್ರತಿಯೊಂದು ವೃತ್ತವೂ ಷಡ್ಭುಜದ ಒಂದು ಬಾಹುವನ್ನು ಹಾಗೂ ಉಳಿದೆರಡು ವೃತ್ತಗಳನ್ನು ಸ್ಪರ್ಶಿಸುವಂತಿರಲಿ.
        ವಿಧಾನ : 5 ಸೆಂ. ಮೀ. ವೃತ್ತವನ್ನು ರಚಿಸಿ, ವೃತ್ತದಲ್ಲಿ 5ಸೆಂ. ಮೀ. ಬಾಹುವಿನ ಷಡ್ಭುಜವನ್ನು ರಚಿಸಿರಿ. ಅಭಿಮುಖ ಬಿಂದುಗಳನ್ನು (AD, BE, CF) ಸೇರಿಸಿದಾಗ ನಿಮಗೆ ಆರು ಸಮಾನ ತ್ರಿಜ್ಯಗಳು ದೊರೆಯುತ್ತವೆ. (AOB, BOC, COD, DOE, EOF ಮತ್ತು AOF). ಯಾವುದಾದರೂ ಒಂದು ತ್ರಿಭುಜಕ್ಕೆ ಅಂತರ್ ವೃತ್ತವನ್ನು ರಚಿಸಿರಿ. ಆ ವೃತ್ತದ ಕೇಂದ್ರಬಿಂದುವಿನ ಸಹಾಯದಿಂದ ಉಳಿದ ವೃತ್ತಗಳನ್ನೂ ರಚಿಸಿರಿ.

.............................................................



     ಲೋವರ್ ಗ್ರೇಡ್ - ಪ್ರಶ್ನೆ : 1) 5 ಸೆಂ. ಮೀ. ವೃತ್ತವನ್ನು ರಚಿಸಿ, ವೃತ್ತದಲ್ಲಿ 5ಸೆಂ. ಮೀ. ಬಾಹುವಿನ ಷಡ್ಭುಜವನ್ನು ರಚಿಸಿರಿ
      ವಿಧಾನ: 5 ಸೆಂ. ಮೀ. ವೃತ್ತವನ್ನು ರಚಿಸಿಕೊಂಡು ತ್ರಿಜ್ಯವನ್ನು ಎಳೆಯಿರಿ. ಅದೇ ತ್ರಿಜ್ಯದ ಅಳತೆಯಿಂದ ವೃತ್ತ ಪರಿಧಿಯನ್ನು ಅರ್ಧಿಸುತ್ತಾ ಆರು ಭಾಗಗಳನ್ನಾಗಿ ಮಾಡಿ. ಈಗ ಎಲ್ಲಾ ಭಾಗಗಳನ್ನು ಸೇರಿಸುತ್ತಾ ಬನ್ನಿ. ಷಡ್ಭುಜ ಸಿದ್ಧವಾಗುತ್ತದೆ.

................................................................

           ಲೋವರ್ ಗ್ರೇಡ್ - ಪ್ರಶ್ನೆ : 2) ಒಂದೇ ಸರಳ ರೇಖೆಯಲ್ಲಿಲ್ಲದ ಕೊಟ್ಟಿರುವ ABC ಬಿಂದುಗಳಲ್ಲಿ ಹಾದುಹೋಗುವಂತೆ ಒಂದು ವೃತ್ತ ರಚಿಸಿರಿ.
      ವಿಧಾನ: ಮೂರು ಬಿಂದುಗಳನ್ನು (A B C) ಬೇರೆ ಬೇರೆ ಕಡೆಗಳಲ್ಲಿ ಗುರುತಿಸಿಕೊಳ್ಳಿರಿ. ಆ ಬಿಂದುಗಳನ್ನು ಪರಸ್ಪರ ಸೇರಿಸಿದಾಗ ನಿಮಗೊಂದು ತ್ರಿಭುಜ ದೊರೆಯುತ್ತದೆ. ಈಗ ತ್ರಿಭುಜ ABCಗೆ ಪರಿವೃತ್ತವನ್ನು ಎಳೆಯಿರಿ.

.................................................................

          ಲೋವರ್ ಗ್ರೇಡ್ - ಪ್ರಶ್ನೆ : 3) ಎರಡು ಸಮ ವೃತ್ತಗಳಿಗೆ ಸ್ಪರ್ಶಿಸುವಂತೆ ಒಂದು ಬಾಹ್ಯ ಸ್ಪರ್ಶ ರೇಖೆಯನ್ನು.ಎಳೆಯಿರಿ
     ವಿಧಾನ: ಯಾವುದಾದರು ಒಂದೇ ಅಳತೆಯ ಎರಡು ವೃತ್ತಗಳನ್ನು ರಚಿಸಿ ಅವುಗಳ ಕೇಂದ್ರ ಬಿಂದುಗಳನ್ನು (A B) ಸೇರಿಸಿರಿ. A ಮತ್ತು B ಬಿಂದುಗಳಿಗೆ ಲಂಬ ಎಳೆಯಿರಿ (C D) . ಅವುಗಳನ್ನು ಸೇರಿಸಿ.

.................................................................

ಚೆನ್ನಾಗಿ ಅಭ್ಯಾಸ ಮಾಡಿ ಮಕ್ಕಳೇ...... ಇನ್ನಷ್ಟು ಹೊಸ ಜ್ಯಾಮಿತಿ ರಚನೆಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇವೆ.......
..........……….ಮುಂದುವರೆಯುತ್ತದೆ
........................................ಭಾಸ್ಕರ್ ನೆಲ್ಯಾಡಿ 
ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು 
ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ , ಕಲ್ಲಬೆಟ್ಟು ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
+91 99011 14843
********************************************


Ads on article

Advertise in articles 1

advertising articles 2

Advertise under the article