
ಡ್ರಾಯಿಂಗ್ ಗ್ರೇಡ್ ಪರೀಕ್ಷೆ : ಜ್ಯಾಮಿತಿ ರಚನೆಗಳು ಸಂಚಿಕೆ-2
Monday, January 31, 2022
Edit
ಡ್ರಾಯಿಂಗ್ ಗ್ರೇಡ್ ಪರೀಕ್ಷೆ
ಜ್ಯಾಮಿತಿ ರಚನೆಗಳು - ಸಂಚಿಕೆ 2
-----------------------------------------
ಒಂದನೇ ಸಂಚಿಕೆಯ ಜ್ಯಾಮಿತಿ ರಚನೆಗಳನ್ನು ಸರಿಯಾಗಿ ಮಾಡಿದ್ದೀರಿ ತಾನೆ? ಸರಿ ಹಾಗಾದರೆ. ಇವತ್ತು ಮತ್ತೆ ಒಂದಷ್ಟು ಜ್ಯಾಮಿತಿ ರಚನೆಗಳನ್ನು ಕಲಿಯೋಣ.(ಕಳೆದ ಸಂಚಿಕೆಯಿಂದ ಮುಂದುವರಿದ ಲೆಕ್ಕಗಳು)
ವಿಧಾನ: ನೀವು ಈಗಾಗಲೇ ಮೊದಲ ಸಂಚಿಕೆಯಲ್ಲಿ ದತ್ತ ಸರಳರೇಖೆಯನ್ನು ಎರಡು ಭಾಗಗಳನ್ನಾಗಿ ಮಾಡಲು ಕಲಿತ್ತಿದ್ದೀರಿ ತಾನೆ? ಇಲ್ಲಿಯೂ ಸಹ ಮೊದಲ ಹಂತವನ್ನು ಅದೇ ರೀತಿಯನ್ನಾಗಿ ಮಾಡಬೇಕು. 9ಸೆಂ. ಮೀ. ಅಳತೆಯ ಒಂದು A B ರೇಖೆಯನ್ನು ಎಳೆಯಿರಿ. ಕೈವಾರದ ಸಹಾಯದಿಂದ A B ರೇಖೆಯ ಮೇಲೆ ಅದರ ಅರ್ಧಕ್ಕಿಂತ ಹೆಚ್ಚಿನ ತ್ರಿಜ್ಯ ಪಡೆದು ಎರಡೂ ಬಿಂದುಗಳ ಮೇಲೆ ಹಾಗೂ ಕೆಳಗೆ ಒಂದೊಂದು ಕಂಸಗಳನ್ನು ಎಳೆಯಿರಿ. ಆ ಕಂಸಗಳು C D ಬಿಂದುಗಳಲ್ಲಿ ಸಂಧಿಸುತ್ತವೆ. ಈಗ C D ಬಿಂದುಗಳನ್ನು ರೇಖೆಯ ಮೂಲಕ ಸೇರಿಸಿರಿ. ಇದೇ ತರಹದಲ್ಲಿ AO ಮತ್ತು OB ರೇಖೆಗಳನ್ನುE F ಮತ್ತು G H ರೇಖೆಗಳ ಮೂಲಕ ದ್ವಿಭಾಗಿಸಿರಿ. ಈಗ A B ರೇಖೆಯು ನಾಲ್ಕು ಸಮಭಾಗಗಳಾಗಿವೆ.
---------------------------------------------------
ವಿಧಾನ: 8ಸೆಂ. ಮೀ. ಅಳತೆಯ ಒಂದು A B ರೇಖೆಯನ್ನು ಎಳೆಯಿರಿ. B ರೇಖೆಯ ಮೇಲೆ ’A’ ಬಿಂದುವನ್ನು ಕೇಂದ್ರವಾಗಿಟ್ಟು ಯಾವುದಾದರು ಅಳತೆಯ ಒಂದು ಲಘುಕೋನ C A B ರಚಿಸಿರಿ. ಕೈವಾರದಲ್ಲಿ ಯಾವದಾದರೂ ಸಣ್ಣಅಳತೆಯ ತ್ರಿಜ್ಯದಿಂದ ’A’ ಬಿಂದುವನ್ನು ಕೇಂದ್ರವಾಗಿಟ್ಟು A B ರೇಖೆಯ ಮೇಲೆ ಒಂದು ಕಂಸವನ್ನು ಎಳೆಯಿರಿ. ಆ ತ್ರಿಜ್ಯ ಬಿಂದು m ನಿಂದ n, n ನಿಂದ o, o ದಿಂದ p, p ಯಿಂದ q ಕಂಸಗಳನ್ನು ರಚಿಸಬೇಕು. q B ಬಿಂದುಗಳನ್ನು ಸೇರಿಸಿರಿ. ಈಗ q B ರೇಖೆಗೆ p, o, n, m ಬಿಂದುಗಳಿಗೆ ಸೆಟ್ ಸ್ಕ್ವೇರ್ ನ ಸಹಾಯದಿಂದ ಸಮಾಂತರ ರೇಖೆಗಳನ್ನು ಎಳೆಯುವ ಮೂಲಕ ಐದು ಸಮ ಭಾಗಗಳನ್ನಾಗಿ ಮಾಡಬಹುದು. ಅಥವಾ ಕೋನ CABಗೆ ABD ಪರ್ಯಾಯ ಕೋನ ರಚಿಸಿರಿ. ಪರ್ಯಾಯ ಕೋನದ ರಚನೆ ಹೇಗೆಂದರೆ, ಕೈವಾರದಲ್ಲಿAq ತ್ರಿಜ್ಯ ತೆಗೆದುಕೊಂಡು B ಬಿಂದುವಿನಿಂದ ಕೆಳಗೆ ಒಂದು ಕಂಸ ಎಳೆಯಿರಿ. Bq ತ್ರಿಜ್ಯ ತೆಗೆದು A ಬಿಂದುವಿನಿಂದ ಮೊದಲ ತ್ರಿಜ್ಯವನ್ನು ಅರ್ಧಿಸಿರಿ. Bz ಬಿಂದುಗಳನ್ನು ಸೇರಿಸಿರಿ. ಈಗ ಮೊದಲು ಮಾಡಿದ ರೀತಿಯಲ್ಲಿಯೇ B ಯಿಂದ v, v ಯಿಂದ w, w ದಿಂದ x, x ನಿಂದ y ಕಂಸಗಳನ್ನು ರಚಿಸಬೇಕು. A z, m y, n x, o w, p v, q B ಬಿಂದುಗಳನ್ನು ಸೇರಿಸಬೇಕು.
--------------------------------------------------
ವಿಧಾನ: BC ಸರಳ ರೇಖೆಯನ್ನು ಎಳೆಯಿರಿ. BC ತ್ರಿಜ್ಯದಿಂದ B ಕೇಂದ್ರವಾಗಿರಿಸಿ ಮೇಲೊಂದು ಕಂಸ ಎಳೆಯಿರಿ. C ಕೇಂದ್ರವಾಗಿರಿಸಿ ಆ ಕಂಸವನ್ನು ಅರ್ಧಿಸಿರಿ. A ಎಂದು ಹೆಸರಿಸಿ. A B ಸೇರಿಸಿ. ಕೋನ A B C ಸಿದ್ಧವಾಗಿದೆ. B ಕೇಂದ್ರವಾಗಿರಿಸಿ ಕೋನ A B C ಯ ಮೇಲೊಂದು XY ಎಂದು ಹೆಸರಿಸಿ. X ಕೇಂದ್ರವಾಗಿರಿಸಿ XY ಕಂಸದ ಅರ್ಧಕ್ಕಿಂತ ಹೆಚ್ಚು ತ್ರಿಜ್ಯ ಪಡೆದು ಕಂಸ ಎಳೆಯಿರಿ. Y ಕೇಂದ್ರವಾಗಿರಿಸಿ ಮೊದಲ ಕಂಸವನ್ನು ಅರ್ಧಿಸಿರಿ. Q ಎಂದು ಹೆಸರಿಸಿ. ಈಗ ಇದೇ ಮಾದರಿಯಲ್ಲಿ ಕೋನ ABQ ಮತ್ತು ಕೋನ QBC ಗಳಿಗೆ ಕೋನಾರ್ಧ ರೇಖೆಗಳಾದ BP ಮತ್ತು BR ರೇಖೆಗಳನ್ನು ಎಳೆಯಿರಿ.
---------------------------------------------------
ವಿಧಾನ: BC ಸರಳ ರೇಖೆಯನ್ನು AB ಲಂಬವನ್ನು ರಚಿಸುವ ವಿಧಾನವನ್ನು ಈ ಮೊದಲೇ ತಿಳಿಸಲಾಗಿದೆ. B ಬಿಂದುವನ್ನು ಕೇಂದ್ರವಾಗಿರಿಸಿ BC ಯ ಮೇಲೊಂದು ಕಂಸವನ್ನು ಎಳೆಯಿರಿ.. ಅದಕ್ಕೆ SP ಎಂದು ಹೆಸರಿಸಿ. S ಬಿಂದುವನ್ನು ಕೇಂದ್ರವಾಗಿರಿಸಿ SP ಕಂಸದ ಮೇಲೊಂದು ಕಂಸ ಎಳೆಯಿರಿ. ಹಾಗೆಯೇ P ಬಿಂದುವನ್ನು ಕೇಂದ್ರವಾಗಿರಿಸಿ SP ಕಂಸದ ಇನ್ನೊಂದು ಕಂಸ ಎಳೆಯಿರಿ. Q ಮತ್ತುR ಎಂದು ಹೆಸರಿಸಿ. BQ ಮತ್ತು BR ನ್ನು ಸೇರಿಸಿ. ಅವುಗಳಿಗೆ ಕ್ರಮವಾಗಿ E ಮತ್ತು F ಎಂದು ಹೆಸರಿಸಿ.
---------------------------------------------------
ವಿಧಾನ: 8 ಸೆಂ. ಮೀ. ಅಳತೆಯ ಒಂದು BC ರೇಖೆಯನ್ನು ಎಳೆಯಿರಿ. ಕೈವಾರದ ಸಹಾಯದಿಂದ BC ತ್ರಿಜ್ಯ ಪಡೆದು B ಬಿಂದುವಿನಿಂದ ಮೇಲೊಂದು ಕಂಸ ಎಳೆಯಿರಿ. ಅದೇ ತ್ರಿಜ್ಯದಿಂದ C ಬಿಂದುವಿನಿಂದ ಮೊದಲ ಕಂಸವನ್ನು ಅರ್ಧಿಸಿರಿ. ಅದಕ್ಕೆ A ಎಂದು ಹೆಸರಿಸಿ. ಈಗ ABC ಬಿಂದುಗಳನ್ನು ಕ್ರಮವಾಗಿ ಸೇರಿಸಿ.
----------------------------------------------------
ಸಂಚಿಕೆ 1 ಮತ್ತು ಸಂಚಿಕೆ - 2 ರ ಎಲ್ಲಾ ಜ್ಯಾಮಿತಿ ರಚನೆಗಳನ್ನು ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ...... ಮಕ್ಕಳೆ..... ಅರ್ಥವಾಗದಿದ್ದರೆ ಅಧ್ಯಾಪಕರ ಸಹಾಯ ಪಡೆದುಕೊಳ್ಳಿ. ನಮಸ್ಕಾರ…..
ಮುಂದುವರೆಯುತ್ತದೆ……
........................................ಭಾಸ್ಕರ್ ನೆಲ್ಯಾಡಿ
ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರು
ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ , ಕಲ್ಲಬೆಟ್ಟು ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
+91 99011 14843
********************************************