ನೀರಿನ ಸಂರಕ್ಷಣೆ (ಚಿತ್ರ-ಬರಹ ) : ಪ್ರತೀಕ್ಷಾ ಮರಕಿಣಿ
Tuesday, December 28, 2021
Edit
ಪ್ರತೀಕ್ಷಾ ಮರಕಿಣಿ
ದ್ವಿತೀಯ ಪಿಯುಸಿ
ಶೇಷಾದ್ರಿಪುರಂ ಕಾಂಪೋಸಿಟ್ ಪಿ.ಯು ಕಾಲೇಜ್ ಶೇಷಾದ್ರಿಪುರಂ ಬೆಂಗಳೂರು
ನೀರಿನ ಸಂರಕ್ಷಣೆ
ಸಕಲ ಜೀವರಾಶಿಗಳಿಗೂ ಮೂಲ ಆಧಾರ ನೀರು. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳೂ ನೀರನ್ನೇ ಅವಲಂಬಿಸಿದೆ. ಭೂಮಿಯ ಶೇ. 71 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದ್ದರೂ, ಅದರಲ್ಲಿ ಶೇ. 1 ರಷ್ಟು ಭಾಗ ಮಾತ್ರ ಉಪಯೋಗಕ್ಕೆ ಬರುತ್ತದೆ. ಇನ್ನು ಉಳಿದದ್ದೆಲ್ಲಾ ಸಮುದ್ರದ ಉಪ್ಪುನೀರು ಹಾಗೂ ಪರ್ವತ ಶಿಖರಗಳಲ್ಲಿ ಹೆಪ್ಪುಗಟ್ಟಿರುವ ಹಿಮರಾಶಿ.
ನಮಗೆ ಸಿಗುವ ನೀರಿನ ಪ್ರತಿ ಹನಿಯೂ ತುಂಬಾ ಮುಖ್ಯ. ಇದು ಗೊತ್ತಿದ್ದರೂ ಕೆಲವು ಕಡೆ ಶುದ್ಧ ನೀರು ಪೋಲಾಗುತ್ತಿರುವುದಂತೂ ಎಲ್ಲರಿಗೂ ತಿಳಿದಿರುವ ಸಂಗತಿ.
ರಾಜ್ಯದ ವಿವಿಧೆಡೆಗಳಲ್ಲಿ ನೀರಿಗಾಗಿ ಅನುಭವಿಸುತ್ತಿರುವ ಕಷ್ಟಗಳು ಒಂದೆರಡಲ್ಲ. ದೂರದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತರುವುದು, ನೀರಿನ ಟ್ಯಾಂಕರ್ ಮುಂದೆ ನಿಂತಿರುವ ಸಾಲು ಜನಗಳ ಕ್ಯೂ, ತಳ್ಳುಗಾಡಿಗಳಲ್ಲಿ ನೀರು ಒಯ್ಯುವುದು ಇತ್ಯಾದಿ ದೃಶ್ಯಗಳನ್ನು ಕಂಡರಂತೂ ಅಯ್ಯೋ ಎನಿಸದಿರದು....!!
ನೀರಿನ ಸೂಕ್ತ ಸಂಗ್ರಹ, ಸಂಗ್ರಹಕ್ಕೆ ಮೂಲ ವ್ಯವಸ್ಥೆ ಹಾಗೂ ಬಳಕೆಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ನೀರಿನ ಕೊರತೆಗೆ ಪ್ರಮುಖ ಕಾರಣ.
ನಾವು ವಿದ್ಯಾರ್ಥಿಗಳು ಈಗಿನಿಂದಲೇ ನೀರಿನ ಪ್ರಾಮುಖ್ಯತೆ, ನೀರಿನ ಸಂರಕ್ಷಣೆ ಬಗ್ಗೆ ಅರಿತು ಮುಂದೆ ಹೆಜ್ಜೆ ಹಾಕೋಣ.
.......................................ಪ್ರತೀಕ್ಷಾ ಮರಕಿಣಿ
ದ್ವಿತೀಯ ಪಿಯುಸಿ
ಶೇಷಾದ್ರಿಪುರಂ ಕಾಂಪೋಸಿಟ್ ಪಿ.ಯು ಕಾಲೇಜ್ ಶೇಷಾದ್ರಿಪುರಂ ಬೆಂಗಳೂರು
*********************************************