-->
ಅಕ್ಕನ ಪತ್ರ - 13 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 13 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 13 ಕ್ಕೆ
ಮಕ್ಕಳ ಉತ್ತರ 
ಸಂಚಿಕೆ -1


ಮಕ್ಕಳ ಜಗಲಿಯಲ್ಲಿ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರು ಜಗಲಿಯ ಮಕ್ಕಳಿಗಾಗಿ ಬರೆದ ಅಕ್ಕನ ಪತ್ರ - 13 ಕ್ಕೆ ಜಗಲಿಯ ಮಕ್ಕಳು ಬರೆದ ಉತ್ತರ ಇಲ್ಲಿ ಪ್ರಕಟವಾಗಿದೆ.......


ನಮಸ್ತೆ ಅಕ್ಕ. ನಾನು ಗೀತಾಲಕ್ಷ್ಮಿ ನೀವು ಬರೆದ ಕಥೆ ತುಂಬಾ ಇಷ್ಟವಾಯ್ತು. ಈ ಕಥೆಯಲ್ಲಿ ನನಗೇನು ತಿಳಿಯಿತೆಂದರೆ ಉಪಾಯ ಇದ್ದರೆ ಯಾವ ಅಪಾಯವನ್ನು ಕೂಡ ಎದುರಿಸಬಹುದು. ನಾವು ಮಾಡುವ ಕೆಲಸದಿಂದ ನಾಲ್ಕು ಜನಕ್ಕೆ ಸಹಾಯ ಆಗಬೇಕು. ಆ ಭಿಕ್ಷುಕ ತನ್ನ ಸಾಮರ್ಥ್ಯದಿಂದ ಬರುವ ಅಪಾಯವನ್ನು ತಪ್ಪಿಸಿಕೊಂಡ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದ ಗಳು 
..................................................ಗೀತಾಲಕ್ಷ್ಮಿ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



             ಪ್ರೀತಿಯ ಅಕ್ಕನಿಗೆ ದಿಶಾ ಮಾಡುವ ನಮಸ್ಕಾರಗಳು...... ನಿಮ್ಮ ಪತ್ರವನ್ನು ಓದಿ ನನಗೆ ತುಂಬಾ ಸಂತೋಷವಾಯಿತು..
ಈ ಕಥೆಯಿಂದ ತಿಳಿದು ಬರುವ ಸಾರಾಂಶ ಏನೆಂದರೆ. ನಾವು ಜೀವನದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ನಿರ್ಧಾರ ತೆಗೆದು ಕೊಳ್ಳುವಾಗ ಅದರಿಂದಾಗಿ ಭವಿಷ್ಯದಲ್ಲಿ ಎದುರಾಗುವ ಕಷ್ಟಗಳ ಬಗ್ಗೆಯೂ ನಾವು ಅರಿತಿರಬೇಕು. ಇಲ್ಲಿ ಭಿಕ್ಷುಕನು ಮಾಡಿದ್ದೂ ಅದನ್ನೇ....... ಅವನು ಕೇವಲ ವರ್ತಮಾನದ ಬಗ್ಗೆ ಚಿಂತಿಸಿದನಲ್ಲದೆ ಭವಿಷ್ಯದ ಬಗ್ಗೆಯೂ ಆಲೋಚಿಸಿದ್ದಾನೆ......
.................................................. ದಿಶಾ 
ನಾಲ್ಕನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುಳಾಲು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


        ನಮಸ್ತೆ ಅಕ್ಕ. ನಾನು ನಿಮ್ಮ ಪ್ರೀತಿಯ ತಂಗಿ ಧೃತಿ. ಹೌದು ನೀವು ಹೇಳಿದ ಕಥೆಯನ್ನು ನಾನು ಒಮ್ಮೆ ಕೇಳಿದ್ದೆ. ನಮ್ಮ ಟೀಚರ್ ಹೇಳಿದ್ರು. ರಾಜರಿಗೆ ಕಷ್ಟದಲ್ಲಿ ಜೀವನ ನಡೆಸಿ ಗೊತ್ತಿಲ್ಲ. ರಾಜ್ಯದಲ್ಲಿ ಕಷ್ಟದಿಂದ ಕೂಡಿದ ಪ್ರಜೆಗಳು ಇದ್ದರೆ ಅವರ ಕಷ್ಟನಷ್ಟಗಳಿಗೆ ಸ್ಪಂದಿಸುವ ವ್ಯವಧಾನ ಇರುವುದಿಲ್ಲ. ನಾವು ಯಾಕೆ ಸುಮ್ಮನೆ ಕಾಡುಪ್ರಾಣಿಗಳ ಮಧ್ಯೆ ಸಿಲುಕಿ ಇರಬೇಕು ನಾವು ಸಾಯುವವರೆಗೆ ರಾಜ್ಯದಲ್ಲಿ ಪ್ರಜೆಯಾಗಿ ಇರುತ್ತೇವೆ ಎಂಬ ರಾಜನ ಆಸೆಯಾಗಿರುತ್ತದೆ. ಆದರೆ ಭಿಕ್ಷುಕರಿಗೆ ತಾನು ಹುಟ್ಟಿನಿಂದಲೇ ಕಷ್ಟಪಟ್ಟು ಭಿಕ್ಷೆಯೆತ್ತಿ ಅದನ್ನು ದಾನ ಮಾಡುವ ಸ್ವಭಾವ ಇರುತ್ತದೆ. ತಾನು ತಿಂದು ಉಳಿದ ಭಾಗವನ್ನು ಮತ್ತೊಬ್ಬರಿಗೆ ಕೊಡುವ ಬುದ್ದಿ ಇರುತ್ತದೆ. ತನ್ನಂತೆಯೇ ರಾಜ್ಯದ ಜನರು ಕಷ್ಟಪಡಬಾರದು. ನಾನು ನನ್ನದು ಎನ್ನದೇ ನಾವು ನಮ್ಮದು ಎಂಬ ವೇದ ವಾಕ್ಯವನ್ನು ಪಾಲಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಮಂತ್ರವನ್ನು ಬಿತ್ತಿದನು. ವಿದ್ಯಾರ್ಥಿಗಳಾದ ನಾವು ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ಒಳ್ಳೆಯ ವಿದ್ಯಾರ್ಥಿಗಳಾಗಿ ಶಾಲೆಗೆ , ಮನೆಗೆ , ಗ್ರಾಮಕ್ಕೆ ರಾಜ್ಯಕ್ಕೆ ದೇಶಕ್ಕೆ ಹೆಸರುವಾಸಿಯಾಗಬೇಕು.
ಧನ್ಯವಾದಗಳು ಅಕ್ಕ.
.................................................. ಧೃತಿ 
9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*********************************************


         ಪ್ರೀತಿಯ ಅಕ್ಕನಿಗೆ ತೃಪ್ತಿ ಮಾಡುವ ನಮಸ್ಕಾರಗಳು. ಕಥೆ ತುಂಬಾ ಚೆನ್ನಾಗಿತ್ತು. ಭಿಕ್ಷುಕ ರಾಜನು ತನ್ನ ಮುಂದಿನ ದಿನಗಳ ಬಗ್ಗೆ ಆಲೋಚಿಸಿ ಕಾಡನ್ನು ನಗರವನ್ನಾಗಿ ಪರಿವರ್ತಿಸಿದ್ದು, ಅವನ ಉನ್ನತ ಆಲೋಚನೆಗಳಿಗೆ ಸಾಕ್ಷಿ. ಎಷ್ಟೊಂದು ಬುದ್ದಿವಂತ ಬಿಕ್ಷುಕ ಅಲ್ಲವೇ!!! ಅವನ ಆಳ್ವಿಕೆಯ ಎರಡು ವರ್ಷಗಳ ಅವಧಿಯಲ್ಲಿ ಜನರಿಗೆ ಉತ್ತಮ ಆಡಳಿತವನ್ನು ನೀಡಿ ಜನರ ಪ್ರೀತಿ ಗಳಿಸಿದ್ದು ಅವನು ಪೂರ್ತಿ ರಾಜ್ಯಕ್ಕೆ ಒಡೆಯನಾಗಲು ಅನುಕೂಲವಾಯಿತು ಅಲ್ಲವೇ...., ನನಗೆ ಈ ಕತೆ ತುಂಬಾ ಇಷ್ಟವಾಯಿತು. ನಿಮ್ಮ ಪತ್ರವನ್ನು ನಾನು ತಪ್ಪದೇ ಓದುತ್ತೇನೆ. ನನಗೂ ಇಂತಹ ಅವಕಾಶ ಸಿಕ್ಕಿದರೆ ಹೇಗೆ ಬಳಸಿಕೊಳ್ಳಬಹುದು ಎಂದು ಈ ಕಥೆಯ ಮೂಲಕ ಸ್ಪೂರ್ತಿ ಸಿಕ್ಕಿತು.        
 ಧನ್ಯವಾದಗಳು ಅಕ್ಕ ರಾಮ್ ರಾಮ್ ......ಇಂತಿ ನಿಮ್ಮ ಪ್ರೀತಿಯ ತೃಪ್ತಿ ವಗ್ಗ.
 ................................................. ತೃಪ್ತಿ 
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ. ಹನುಮಾನ್ ನಗರ ಕಲ್ಲಡ್ಕ 
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************


ಪ್ರೀತಿಯ ಅಕ್ಕನಿಗೆ ನಮಸ್ಕಾರಗಳು
      ಅಕ್ಕ ನಿಮ್ಮ ಪತ್ರ ಓದಿದೆ. ರಾಜನ ಕತೆ ಇಷ್ಟವಾಯಿತು, ಆ ಭಿಕ್ಷುಕನಿಗೆ ಬಂದ ಯೋಚನೆ ಬೇರಾರಿಗೂ ಬರಲಿಲ್ಲ. ಹೀಗೆ ನಾವು ದೊಡ್ಡ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಪರಿಹಾರವನ್ನು ಹುಡುಕುತ್ತಿರುತ್ತೇವೆ. ಆದರೆ ಆ ಸಮಸ್ಯೆ ಗಳಿಗೆ ಪರಿಹಾರ ಸಣ್ಣದಾಗಿರುತ್ತದೆ, ಇದರಿಂದ ನನಗೆ ಅರ್ಥವಾದದ್ದೇನಂದರೆ ನಾವು ಮುಂದಾಲೋಚನೆ ಯಿಂದ ಕೆಲಸ ಮಾಡಿದರೆ ಗೆಲುವು ಸಿಗುತ್ತದೆ. ನಾವು ಕೂಡ ನಮ್ಮ ನಾಳೆಯ ಕನಸುಗಳಿಗಾಗಿಯೂ ಯೋಚಿಸಿ ಹೆಜ್ಜೆ ಇಡಬೇಕು. 
                ಧನ್ಯವಾದಗಳು ಅಕ್ಕ
...............................................ಸ್ರಾನ್ವಿ ಶೆಟ್ಟಿ 
8ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ , ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


ನಮಸ್ತೇ ಅಕ್ಕ,
ನಾನು ನಿಮ್ಮ ಪತ್ರ ಅಕ್ಷರಗಳನ್ನು ಜೋಡಿಸಿ ಓದಲು ಪ್ರಯತ್ನವನ್ನು ಮಾಡುತ್ತಿರುವೆನು. ನನಗೆ ಅಮ್ಮ ನೀತಿ ಕಥೆಗಳನ್ನು ಹೇಳುತ್ತಾರೆ. ಶಾಲೆಯಲ್ಲಿ ಕಥೆಗಳ ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ. ನಿಮ್ಮ ಕಥೆಯನ್ನು ಓದಿದಾಗ "ಅಮ್ಮ ಮೊದಲ ಸಲ ಶಾಲೆಗೆ ಬಿಟ್ಟ ಅನುಭವವಾಯಿತು." ಈಗ ಎಲ್ಲವೂ ಇಷ್ಟ.
ವಂದನೆಗಳು,
............................................ಪ್ರಣವ್ ದೇವ್
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು 
ದಕ್ಷಿಣ - ಕನ್ನಡ ಜಿಲ್ಲೆ
*********************************************



ನಮಸ್ತೆ ಅಕ್ಕ ನನ್ನ ಹೆಸರು ಹಿತಾಶ್ರೀ ..... ಶಾಲೆಯಲ್ಲಿ ನಾನು ನಿವು ಬರೆದ ಕಥೆಯನ್ನು ಓದಿದೆ. ರಾಜನ ಕಥೆಯು ಚೆನ್ನಾಗಿತ್ತು. ಬಿಕ್ಷುಕನು ತನ್ನ ಬುದ್ದಿವಂತಿಕೆಯನ್ನು ಉಪಯೋಗಿಸದೇ ಇದ್ದಿದ್ದರೆ , ಅವನು ಸಹ ಕಾಡಿಗೆ ಹೋಗಬೇಕಾಗಿತ್ತು. ಅವನು ನಿಜವಾಗಿ ಎರಡು ವರುಷ ಮಾತ್ರ ರಾಜನಾಗಬಹುದಿತ್ತು. ಅವನು ಬುದ್ದಿವಂತಿಯನ್ನು ಉಪಯೊಗಿಸಿ ಅವನು ಸಾಯುವ ತನಕ ರಾಜನಾದ........ ದನ್ಯವಾದ...... ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆ. 
..............................................ಹಿತಾಶ್ರಿ 
4ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


ಮಕ್ಕಳ ಜಗಲಿ... ಅಕ್ಕನ ಪತ್ರ....13.
   ಪ್ರೀತಿಯ ಅಕ್ಕ ಇಂದಿನ ನಿಮ್ಮ ಪತ್ರ ಓದಿ ಬಹಳ ಸಂತೋಷವಾಯಿತು. ಏಕೆ ಗೊತ್ತೇ.... ತುಂಬಾ ಚೆಂದದ ಕತೆ ಹೇಳಿದ್ದೀರಿ... ನನಗೆ ತುಂಬಾ ಇಷ್ಟವಾದ ಕತೆ.... ಒಳ್ಳೆಯ ನೀತಿಯೂ ಇದೆ.... ಧನ್ಯವಾದಗಳು ಅಕ್ಕ.... ಕತೆಯಲ್ಲಿ ಒಂದು ಪ್ರಶ್ನೆ ಕೇಳಿದ್ದೀರಿ.... ಉಳಿದವರಲ್ಲಿ ಕಾಡನ್ನೂ ನಾಡಾಗಿ ಪರಿವರ್ತಿಸಬಹುದು ಎನ್ನುವ ದೂರಾಲೋಚನೆ ಹೊಳೆಯಲಿಲ್ಲ.... ಬುದ್ಧಿವಂತಿಕೆಯಿಂದ ಸಂಕಷ್ಟವನ್ನು ಗೆಲ್ಲಬಹುದು ಎನ್ನುವ ಪಾಠವನ್ನೂ ಆ ರಾಜನು ಕಲಿಸಿಕೊಟ್ಟನು.
    ಇನ್ನೂ ಹೆಚ್ಚು ಹೆಚ್ಚು ಇಂತಹ ಕತೆಗಳನ್ನು ಹೇಳಿ ಅಕ್ಕ... ನಾನು ನಿಮ್ಮ ಲಹರಿ ಕಾಯುತ್ತಿರುತ್ತೇನೆ..... ಧನ್ಯವಾದಗಳು ಅಕ್ಕ.
..............................................ಲಹರಿ ಜಿ.ಕೆ.
೭ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್
ಬಂಟ್ವಾಳ ತಾಲೂಕು  , ದಕ್ಷಿಣ ಕನ್ನಡ ಜಿಲ್ಲೆ
*********************************************



ನಮಸ್ತೇ ,.... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
         ನಿಮ್ಮ ಪತ್ರವನ್ನು ಓದಿದೆನು. ಅಲ್ಲಿಗೆ ಬಂದ ರಾಜರೆಲ್ಲ ಮುಂದಿನ ದಿನಗಳ ಬಗ್ಗೆ ಯೋಚನೆ ಮಾಡದೇ ಆರಾಮವಾಗಿ ಕಾಲ ಕಳೆದರು. ಹಾಗಾಗಿ ಅವರಿಗೆ ಕಷ್ಟಬಂತು. ಅಲ್ಲಿಗೆ ಒಬ್ಬ ಬಿಕ್ಷುಕನು ರಾಜಾನಾಗಲು ಬಂದನು. ಅವನು ರಾಜನಾದ ಮೇಲೆ ನಾಡಿನ ಪ್ರಜೆಗಳನ್ನು ಪ್ರೀತಿಯಿಂದ ನೋಡಿಕೊಂಡು ಆಡಳಿತವನ್ನು ಮಾಡಿದನು. ಮುಂದೆಯೂ ಇದೇ ರೀತಿ ಇರಬೇಕೆಂದು ಕಾಡು ಇರುವ ಜಾಗದಲ್ಲಿ ಪಟ್ಟಣವನ್ನು ನಿರ್ಮಿಸಿದನು. ಮುಂದೆ ಪ್ರಜೆಗಳೊಂದಿಗೆ ಸುಖವಾಗಿ ಬಾಳಿದನು. ಇದರಿಂದ ನಾವು ತಿಳಿಯುವುದೇನೆಂದರೆ ಈಗ ನಾವು ಚೆನ್ನಾಗಿ ಓದದೇ ಬರೆಯದೇ ಕುಳಿತು ಜೀವನದಲ್ಲಿ ಕಷ್ಟ ಪಡುವುದಕ್ಕಿಂತ , ಈಗ ಕಷ್ಟಪಟ್ಟು ಓದಿ , ಒಳ್ಳೆಯ ವಿಷಯಗಳನ್ನು ಕಲಿತು ಮುಂದೆ ಸುಖವಾಗಿ ಬಾಳೋಣ. ಧನ್ಯವಾದಗಳು ಅಕ್ಕಾ,
 ..................................... ಸಾತ್ವಿಕ್ ಗಣೇಶ್
 7ನೇ ತರಗತಿ
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ *********************************************


ನಮಸ್ತೆ ಅಕ್ಕಾ....
ನಿಮ್ಮ ಈ ಪತ್ರವು ಅದ್ಭುತವಾಗಿತ್ತು. ನೀವು ಹೇಳಿದ ಕಥೆ ಬಹಳ ಚೆನ್ನಾಗಿತ್ತು.
ಹಿಂದಿನ ರಾಜರು ಹೀಗೆ ಮಾಡಲಿಲ್ಲ ಏಕೆಂದರೆ ಅವರಿಗೆ ಪ್ರಜೆಗಳ ಬಗ್ಗೆ ಯೋಚನೆ ಇರಲಿಲ್ಲ ಅವರಿಗೆ ಬರಿ ಆ ರಾಜ ಸಿಂಹಾಸನದ ಮೇಲೆ ಆಸೆ ಇತ್ತು ಅಷ್ಟೆ. ಹಾಗಾಗಿ ಅವರಿಗೆ ಆ ಕಾಡನ್ನು ಸುಂದರ ಪಟ್ಟಣವಾಗಿ ಬದಲಾವಣೆ ಮಾಡುವ ಯೋಚನೆ ಬರಲೇ ಇಲ್ಲ. ಆದರೆ ಈ ಭಿಕ್ಷುಕ ರಾಜ ಪ್ರಜೆಗಳ ಬಗ್ಗೆ ಯೋಚಿಸಿದ್ದ ಆದ್ದರಿಂದ ಅವನು ಎಲ್ಲರ ಮನಸ್ಸನ್ನು ಗೆದ್ದು ಉತ್ತಮ ರಾಜ ಎನಿಸಿಕೊಂಡ. ಹೀಗೆ ಎಲ್ಲರೂ ತಮ್ಮ ಬಗ್ಗೆ ಅಷ್ಟೇ ಅಲ್ಲದೆ ಬೇರೆಯವರ ಸುಖದ ಬಗ್ಗೆಯೂ ಯೋಚಿಸಿದರೆ ಎಲ್ಲರೂ ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಧನ್ಯವಾದಗಳು
................................................. ನಿಭಾ 
8ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


       ನನ್ನ ಹೆಸರು ರಕ್ಷಾ. ನಿಮ್ಮ ಪ್ರೀತಿಯ ತಂಗಿ. ನೀವು ಹೇಳಿದ ಕಥೆ ಬಹಳ ಚೆನ್ನಾಗಿತ್ತು. ಆ ರಾಜನ ಬುದ್ದಿವಂತಿಕೆ ಬಹು ಚೆನ್ನಾಗಿದೆ. ಬೇರೆ ರಾಜರು ಆ ರೀತಿ ಯೋಚಿಸದೆ ಕಾಡಿನ ಪ್ರಾಣಿಗಳಿಗೆ ಆಹಾರವಾದರು. ಬಿಕ್ಷುಕ ರಾಜನಾಗಲು ಬಂದಿದ್ದೆ ಆ ಕಾಡನ್ನು ಪಟ್ಟಣವನ್ನಾಗಿ ಬದಲಾಯಿಸಿ ಅವನು ಹೊಸ ರಾಜ್ಯದ ಮತ್ತು ಮೊದಲನೇ ರಾಜ್ಯದ ರಾಜನಾದನು. ಅವನ ಹಾಗೆ ಯೋಚಿಸಲು ನಾವು ಪ್ರಯತ್ನ ಮಾಡುತ್ತೇನೆ. ಇನ್ನು ನಿಮ್ಮ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಬೇಗ ಇನ್ನೊಂದು ಪತ್ರ ಕಳುಹಿಸಿ. ಇಂತಿ ನಿಮ್ಮ ತಂಗಿ 
............................................... ರಕ್ಷಾ
8ನೇ ತರಗತಿ ಇಂಗ್ಲಿಷ್ ಮಾಧ್ಯಮ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ  
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


ರಕ್ಷಾ


Ads on article

Advertise in articles 1

advertising articles 2

Advertise under the article