-->
ಅಕ್ಕನ ಪತ್ರ - 12ಕ್ಕೆ ಮಕ್ಕಳ ಉತ್ತರ : ಸಂಚಿಕೆ -1

ಅಕ್ಕನ ಪತ್ರ - 12ಕ್ಕೆ ಮಕ್ಕಳ ಉತ್ತರ : ಸಂಚಿಕೆ -1

ಅಕ್ಕನ ಪತ್ರ - 12ಕ್ಕೆ 
ಮಕ್ಕಳ ಉತ್ತರ : ಸಂಚಿಕೆ -1

      ಅಕ್ಕ (ತೇಜಸ್ವಿ ಅಂಬೆಕಲ್ಲು) ಮಕ್ಕಳ ಜಗಲಿಯಲ್ಲಿ ಬರೆದಿದ್ದ 12ನೇ ಅಕ್ಕನ ಪತ್ರಕ್ಕೆ ಜಗಲಿಯ ಮಕ್ಕಳು ಬಹಳ ಪ್ರೀತಿಯಿಂದ ಉತ್ತರ ಬರೆದು ಕಳುಹಿಸಿದ್ದಾರೆ
ಅವುಗಳೆಲ್ಲವೂ ಇಲ್ಲಿವೆ......
        

 
    ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು.
         ನಿಮ್ಮ ಪತ್ರವನ್ನು ಓದಿ ನನಗೇನು ತಿಳಿಯಿತೆಂದರೆ, ನಾವು ಪ್ರತಿನಿತ್ಯವೂ ಹಿರಿಯರ ಮಾತು ಕೇಳಬೇಕು, ಗೌರವಿಸಬೇಕು. ಅವರು ಹಾಕಿಕೊಟ್ಟ ಪಥದಲ್ಲಿ ನಾವು ನಡೆಯಬೇಕು. ನಾವು ಯಾವತ್ತು ಅವರ ಮಾತನ್ನು ನಿರಾಕರಿಸಬಾರದು. ಇಲ್ಲದಿದ್ದರೆ ನಮಗೆ ಆ ಪುಟ್ಟ ಹಕ್ಕಿಯಂತೆ ನೋವನ್ನು ಅನುಭವಿಸ ಬೇಕಾಗುತ್ತದೆ. ಆ ಪುಟ್ಟ ಹಕ್ಕಿಯು ಏನೋ ಒಂದು ಕನಸನ್ನು ಇಟ್ಟುಕೊಂಡು ಕೊನೆಗೆ ಪಾಪ ಆ ಬೆಕ್ಕಿನ ಬಾಯಿಗೆ ತುತ್ತಾಯಿತು. ಇದನ್ನು ನೋಡಿದಾಗ ಒಂದು ಕಡೆ ಆ ಪುಟ್ಟ ಹಕ್ಕಿಯ ಬಗ್ಗೆಯೂ ಮರುಕ ಉಂಟಾಗುತ್ತದೆ. ಆ ಪುಟ್ಟ ಹಕ್ಕಿಯ ಪರಿಸ್ಥಿತಿ ಯಾವ ಜೀವಿಗೂ ಬರದಿರಲಿ. ಒಂದು ಕಡೆ ನಿಂತು ನೋಡಿದಾಗ ಆ ಮೂರು ಜೀವಿಗಳ ತಪ್ಪು ಎದ್ದುಕಾಣುತ್ತದೆ. ಇನ್ನೊಂದು ಕಡೆ ನಿಂತು ನೋಡಿದಾಗ ಆ ಮೂರು ಜೀವಿಗಳು ತಮ್ಮ ತಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡವು ಎಂದರೆ ತಪ್ಪಾಗಲಾರದು. ಈ ಜಗತ್ತಿನಲ್ಲಿ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ನಾವೆಲ್ಲರೂ ಒಳ್ಳೆಯ ಯೋಜನೆಯೊಂದಿಗೆ, ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋಣ. ನನ್ನ ಸ್ನೇಹಿತೆ, ಗುರು ಮತ್ತು ಸಹೋದರಿಯ ರೂಪದಲ್ಲಿರುವ ತಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುವೆ. ಭಗವಂತನ ಕೃಪೆಯು ಸದಾ ತಮ್ಮ ಮೇಲಿರಲಿ ಎಂದು ಹಾರೈಸುವೆ.
               ಧನ್ಯವಾದಗಳೊಂದಿಗೆ
.......................................... ವೈಷ್ಣವಿ ಕಾಮತ್ 
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*********************************************


ನಮಸ್ತೆ ಅಕ್ಕ...... ನೀವು ಹೇಳಿದ ಪುಟ್ಟ ಹಕ್ಕಿಯ ಕಥೆ ಚೆನ್ನಾಗಿತ್ತು. ಈ ಕಥೆಯಲ್ಲಿ ನನಗೆ ಹಠ ಮಾಡಿದ ಪುಟ್ಟ ಹಕ್ಕಿಯ ತಪ್ಪೇ? ಎಂದು ಕೇಳಿದರೆ. ನಾನು ಹೇಳುವ ಉತ್ತರ ತಪ್ಪು. ಪುಟ್ಟ ಹಕ್ಕಿ ಹಿರಿಯ ಹಕ್ಕಿಗಳ ಒಟ್ಟಿಗೆ ಹೋಗದೆ ಇರುವುದರಿಂದ ಹೀಗಾಯಿತು. ಆ ಪುಟ್ಟ ಹಕ್ಕಿ ಹಿರಿಯ ಹಕ್ಕಿಗಳೊಂದಿಗೆ ಹೋಗಬೇಕಾಗಿತ್ತು. ನಾವು ಕೂಡ ಪುಟ್ಟ ಹಕ್ಕಿಯಂತೆ ಮಾಡಬಾರದು. ನಾವು ಹಿರಿಯರ ಮಾರ್ಗದರ್ಶನದಿಂದ ಮುಂದೆ ಸಾಗಬೇಕು. ಇಲ್ಲವಾದರೆ ಪುಟ್ಟ ಹಕ್ಕಿಯ ಕಥೆ ನಮ್ಮದಾಗುತ್ತದೆ. ಮುಂದಿನ ಕಥೆಗಾಗಿ ಕಾಯುತ್ತಿರುವ ನಿಮ್ಮ ಪುಟ್ಟ ಆದ್ಯಾ.
.................................... ಆದ್ಯಾ ಸತೀಶ ಶೆಟ್ಟಿ 
4 ನೇ ತರಗತಿ
ಆನಂದ ಆಶ್ರಮ ಕಾನ್ವೆಂಟ್ ಹಿರಿಯ 
ಪ್ರಾಥಮಿಕ ಶಾಲೆ , ಭಟ್ಕಳ , 
ಉತ್ತರ ಕನ್ನಡ ಜಿಲ್ಲೆ
*********************************************ನಮಸ್ತೆ, ನನ್ನ ಪ್ರೀತಿಯ ಅಕ್ಕನಿಗೆ , ಸಾತ್ವಿಕ್ ಗಣೇಶನು ಮಾಡುವ ನಮಸ್ಕಾರಗಳು.  ನಿಮ್ಮ ಪತ್ರದ ಮೂಲಕ ಒಳ್ಳೆಯ ಸಂದೇಶವು ನಮಗೆ ದೊರೆಯಿತು. ಪುಟ್ಟ ಹಕ್ಕಿಯು ದೊಡ್ಡವರ ಹೇಳಿದ ಮಾತು ಕೇಳಿದ್ದರೆ ಅದಕ್ಕೆ ತೊಂದರೆ ಆಗುತ್ತಿರಲಿಲ್ಲ. ಹಿರಿಯರು ಯಾವಾಗಲೂ ನಮ್ಮ ಒಳಿತನ್ನು ಬಯಸುತ್ತಾರೆ. ಅವರು ಹೇಳಿದ ಹಾಗೇ ನಾವು ಕೇಳಿದರೆ ನಮ್ಮ ಗುರಿಯನ್ನು ನಾವು ತಲುಪಬಹುದು. ಧನ್ಯವಾದಗಳು ಅಕ್ಕ ,
 ....................................... ಸಾತ್ವಿಕ್ ಗಣೇಶ್ 
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ ಬೆಳ್ತಂಗಡಿ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
*********************************************


ನಮಸ್ತೆ, ನಾನು ಧೀರಜ್ ಕೆ ಆರ್
       ಈ ಸಲ ಅಕ್ಕನ ಪತ್ರದಲ್ಲಿ ಹೊಸತಾಗಿ ಮೂಡಿಬಂದ ಕಥೆ ಅರ್ಥಪೂರ್ಣವಾಗಿತ್ತು. ಈ ಕಥೆಯಲ್ಲಿ ಪುಟ್ಟ ಹಕ್ಕಿಯ ತಪ್ಪು ಇದೆ. ಯಾಕಂದ್ರೆ ಆ ಪುಟ್ಟ ಹಕ್ಕಿ ಮೊಂಡುತನ ತೋರಿಸದೆ ತನ್ನ ಹಿರಿಯರ ಜೊತೆ ಹಠ ಮಾಡದೆ ಹೋಗಿದ್ದರೆ ಪಾಪ ಸಂತೋಷದಿಂದ ಬದುಕುತ್ತಿತ್ತು. ಈ ಕಥೆಯು ನಾವು ಹಿರಿಯರ ಮಾತನ್ನು ಯಾವಾಗಲು ಪಾಲಿಸಬೇಕು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ. ಅಕ್ಕ...... ಇಂತಹ ಸ್ವಾರಸ್ಯಪೂರ್ಣ ಕಥೆಗಳನ್ನು ನಿಮ್ಮ ಮುಂದಿನ ಪತ್ರಗಳಲ್ಲಿ ಹೇಳಿ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.   ಧನ್ಯವಾದಗಳು
....................................... ಧೀರಜ್ ಕೆ ಆರ್ 
9ನೇ ತರಗತಿ 
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ , ರಾಮಕುಂಜ  
ಕಡಬ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************     ಪ್ರೀತಿಯ ಅಕ್ಕನಿಗೆ ನಿನಾದ್ ಮಾಡುವ ನಮಸ್ಕಾರಗಳು..... ನಿಮ್ಮ ಪತ್ರ ಓದಿದೆ ,  
ನೀವು ಬರೆದ ಹಕ್ಕಿಯ ಕಥೆ ತುಂಬಾ ಚೆನ್ನಾಗಿತ್ತು. ಪುಟಾಣಿ ಹಕ್ಕಿಯ ತಂದೆ-ತಾಯಿ ಮರಿಯನ್ನು ಬಿಟ್ಟು ಹೋಗಬಾರದಿತ್ತು. ತಂದೆ ಹಕ್ಕಿ ಮತ್ತು ತಾಯಿ ಹಕ್ಕಿ ಬುದ್ಧಿ ಹೇಳಬೇಕಿತ್ತು. ಮರಿಹಕ್ಕಿ ಬಾರದಿದ್ದರೂ ಉಪಾಯದಲ್ಲಿ ಕರೆದುಕೊಂಡು ಹೋಗಬೇಕಿತ್ತು. ಅದನ್ನು ಬೆಕ್ಕು ತಿಂದದ್ದು ನನಗೆ ತುಂಬಾ ಬೇಸರವಾಗಿದೆ. ಒಂದೊಂದು ಸಲ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳುವಾಗ ನನ್ನ ಅಪ್ಪ ಒತ್ತಾಯದಿಂದ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಾರ್ಯಕ್ರಮ ನೋಡಿದ ಮೇಲೆ ಅಬ್ಬಾ ಆ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತಿತ್ತು. ಧನ್ಯವಾದಗಳು , ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತೇನೆ.
...................................... ನಿನಾದ್ ಕೈರಂಗಳ
4ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************        ನಮಸ್ತೆ ಅಕ್ಕ. ನಾನು ಗೀತಾಲಕ್ಷ್ಮಿ. ನೀವು ಬರೆದ ಪತ್ರ ಓದಿದೆ. ನೀವು ಬರೆದ ಕಥೆ ತುಂಬಾ ಚೆನ್ನಾಗಿದೆ. ನೀವು ಬರೆದ ಕಥೆಯಲ್ಲಿ ಆ ಪುಟ್ಟ ಹಕ್ಕಿ ಹಿರಿಯ ಹಕ್ಕಿಗಳ ಮಾತು ಕೇಳುತ್ತಿದ್ದರೆ ಆ ಮರಿ ಹಕ್ಕಿಯ ಜೀವ ಉಳಿಯುತ್ತಿತ್ತು. ಅದರ ಹಠದಿಂದಾಗಿ ಜೀವ ಬಿಟ್ಟಿತು. ಹಾಗೆಯೇ ಯಾವತ್ತೂ ನಾವು ಹಠ ಮಾಡಬಾರದು. ಹಿರಿಯರು ಹೇಳಿದ ಮಾತನ್ನು ಕೇಳಬೇಕು. ಎಂಬ ನೀತಿ ಯನ್ನು ನಾನು ಈ ಪತ್ರದಿಂದ ಕಲಿತೆ. ನಿಮ್ಮ ಮುಂದಿನ ಪತ್ರ ಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳು 
.............................................. ಗೀತಾಲಕ್ಷ್ಮಿ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


 ನಮಸ್ತೆ ಅಕ್ಕ ನಾನು ಹಿತಾಶ್ರೀ.... ನಾನು ನೀವು ಬರೆದ ಕಥೆಯನ್ನು ಓದಿದ್ದೇನೆ. ಕಥೆಯು ತುಂಬಾ ಚೆನ್ನಾಗಿತ್ತು. ಅದರಲ್ಲಿ ನಾನು ಕಲಿತ ನೀತಿ ಏನೆಂದರೆ ದೊಡ್ಡವರ ಮಾತನ್ನು ಕೇಳಬೇಕೆಂದು ನಾನು ತಿಳಿದಿದ್ದೇನೆ. ಹಿರಿಯವರ ಮಾತನ್ನು ಕೇಳದಿದ್ದರೆ ಮರಿ ಹಕ್ಕಿಗಾದ ತೊಂದರೆಗೊಳಗಾಗುತ್ತೇವೆ. ನಿಮ್ಮ ಪತ್ರ ನನಗೆ ಸ್ಪೂರ್ತಿದಾಯಕವಾಗಿತ್ತು ಮುಂದಿನ ಪತ್ರಕ್ಕೆ ಕಾಯುತ್ತಿರುವೆ. ಇಂತಿ ನಿಮ್ಮ 
................................................. ಹಿತಾಶ್ರೀ.          4ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ವೇಣೂರು , ಮುದ್ದಾಡಿ , ಬಜಿರೆ  
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
**********************************************ಅಕ್ಕನ ಪತ್ರ -12 . ಪ್ರೀತಿಯ ಅಕ್ಕನಿಗೆ ದೀಪ್ತಿ ಮಾಡುವ ನಮಸ್ಕಾರಗಳು. ನೀವು ಬರೆದ
ಹಕ್ಕಿಯ ಕಥೆಯಲ್ಲಿ... ಹಿರಿಯ ಹಕ್ಕಿಗಳದ್ದು ತಪ್ಪು.. ಮರಿ ಹಕ್ಕಿಗಳಿಗೆ... ಪ್ರಪಂಚದ ಅರಿವು ಇರುವುದಿಲ್ಲ... ಆದುದರಿಂದ... ಮರಿ ಹಕ್ಕಿಗೆ... ಅರ್ಥಯಿಸಿ.. ಜೊತೆಗೆ ಕರೆದುಕೊಂಡು ಹೋಗಬೇಕಿತ್ತು..
............................................. ದೀಪ್ತಿ. ಎಂ. 
2ನೇ ತರಗತಿ  
ಕೇಂದ್ರೀಯ ವಿದ್ಯಾಲಯ ಮಾದಾಪುರ.. 
ಚಾಮರಾಜ ನಗರ ಜಿಲ್ಲೆ... ತಾಲ್ಲೂಕು
*********************************************


 

ಪ್ರೀತಿಯ ಅಕ್ಕನಿಗೆ ವಂದನೆಗಳು , ನಾನು ದಿಶಾ....
       ಈ ಪುಟ್ಟ ಕಥೆಯನ್ನು ಓದಿದ ನನಗೆ ತಪ್ಪು ಹಿರಿಯ ಹಕ್ಕಿಯದು ಅಲ್ಲ, ಪುಟ್ಟ ಹಕ್ಕಿಯನ್ನು ತಿಂದ ಬೆಕ್ಕಿನದ್ದೂ ಅಲ್ಲ. ಇದರಲ್ಲಿ ತಪ್ಪು ಆ ಪುಟ್ಟ ಹಕ್ಕಿಯದ್ದು. ಏಕೆಂದರೆ ಆ ಪುಟ್ಟ ಹಕ್ಕಿ ಹಿರಿಯ ಹಕ್ಕಿಯ ಮಾತಿಗೆ ಒಂದು ಚೂರು ಬೆಲೆ ಕೊಡದೆ ತನ್ನ ಹಠವನ್ನು ಸಾಧಿಸಿತು. ಇದರಿಂದಾಗಿ ಅದು ತನ್ನ ಪ್ರಾಣ ಕಳೆದುಕೊಳ್ಳುವಂತಾಯಿತು.
        ಈ ಕಥೆಯನ್ನು ಓದಿದ ನನಗೆ ತಿಳಿದ ಸಂದೇಶವೇನೆಂದರೆ ಹಿರಿಯರು ತಿಳಿದು ಹೇಳುವ ಬುದ್ಧಿ ಮಾತನ್ನು ನಾವು ಕೇಳಬೇಕು. ಅದೇ ರೀತಿ ಅವರ ಮಾತಿಗೆ ಬೆಲೆ ಕೊಟ್ಟು ಅವರು ತೋರಿದ ದಾರಿಯಲ್ಲಿ ನಡೆಯಬೇಕು. ಇದನ್ನೆಲ್ಲ ಬಿಟ್ಟು ನಮ್ಮ ಹಠವನ್ನೇ ಸಾಧಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ನೀತಿ: ಹಿರಿಯರ ಮಾತನ್ನು ಮೀರಿ ನಡೆಯಬಾರದು. ಹಠದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. 
.................................................... ದಿಶಾ
4ನೇ ತರಗತಿ
ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ
ಕುಳಾಲು. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************     ಪ್ರೀತಿಯ ಅಕ್ಕನಿಗೆ ದೀಕ್ಷಾ.ಎಂ. ಮಾಡುವ ನಮಸ್ಕಾರಗಳು. ಹಕ್ಕಿ ಕಥೆಯಲ್ಲಿ... ಹಠ ಮಾಡಿದ ಪುಟ್ಟ ಹಕ್ಕಿಯದು ತಪ್ಪು... ಏಕೆಂದರೆ... ಪುಟ್ಟ.. ಹಕ್ಕಿ ದೊಡ್ಡವರ... ಅನುಭವದ ಮಾತನ್ನ ಕೇಳಬೇಕಿತ್ತು... ಇದರಿಂದ ತೊಂದರೆಗೆ ಸಿಲುಕಿತ್ತು..  
............................................. ದೀಕ್ಷಾ . ಎಂ. 
2ನೇ ತರಗತಿ.. 
ಮಾದಾಪುರ. ಕೇಂದ್ರೀಯ ವಿದ್ಯಾಲಯ.. 
ಚಾಮರಾಜ ನಗರ ಜಿಲ್ಲೆ... ತಾಲ್ಲೂಕು
*********************************************ನಮಸ್ತೆ ಅಕ್ಕ, ನಾನು ಹರಿಕೃಷ್ಣ 
     ನಿಮ್ಮ ಪತ್ರ ಓದಿದೆ. ಕಥೆ ಓದಿ ಸ್ವಲ್ಪ ಬೇಸರವಾಯಿತು. ಯಾಕೆಂದರೆ ಮರಿಹಕ್ಕಿ ತನ್ನ ಹಠದಿಂದ ತನ್ನ ಪ್ರಾಣವನ್ನೇ ಕಳಕೊಂಡಿತು. ಮಕ್ಕಳಾದ ನಾವು ಕೂಡ ಹಟ ಮಾಡದೆ ಹಿರಿಯರ ಮಾತಿನಂತೆ ನಡೆಯಬೇಕು. ಮರಿಹಕ್ಕಿ ಹಟ ಮಾಡದೆ ಹಿರಿಯರ ಜೊತೆ ಹೋಗುತ್ತಿದ್ದರೆ ಮರಿಹಕ್ಕಿ ಯ ಪ್ರಾಣ ಉಳಿಯುತ್ತಿತ್ತು. ಹಿರಿಯ ಹಕ್ಕಿ ಪುಟ್ಟ ಹಕ್ಕಿಯನ್ನು ಬಿಟ್ಟು ಹಾರಿ ಹೋದದ್ದು ತಪ್ಪಲ್ಲ. ಯಾಕೆಂದರೆ ಹಿರಿಯ ಹಕ್ಕಿಯ ರಕ್ಷಣೆಗೆ ಮರಿ ಹಕ್ಕಿಯನ್ನು ಬಿಟ್ಟುಹೋಯಿತು. ಬೆಳಗ್ಗಿನ ಹೊತ್ತಲ್ಲಿ ಹಸಿವೆಯಾದುದರಿಂದ ಬೆಕ್ಕು ಹಕ್ಕಿ ಮರಿಯನ್ನು ತಿಂದಿತು. ಧನ್ಯವಾದಗಳು
.................................. ಹರಿಕೃಷ್ಣ ಆಚಾರ್ಯ  
4ನೇ ತರಗತಿ  
ಶ್ರೀ ಭಾರತಿ ವಿದ್ಯಾ ಪೀಠ ಬದಿಯಡ್ಕ
ಕಾಸರಗೋಡು ಜಿಲ್ಲೆ , ಕೇರಳ ರಾಜ್ಯ
*********************************************


ಪ್ರೀತಿಯ ಅಕ್ಕನಿಗೆ ಪ್ರಿಶಾಲ್ ಕುಮಾರ್ ಮಾಡುವ ಶುಭ ನಮನಗಳು.....
       ನಾವೆಲ್ಲರೂ ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಿದೆ ಎಂಬುದನ್ನು ಆ ಪುಟ್ಟ ಹಕ್ಕಿಯ ಕಥೆಯಲ್ಲಿ ಮೂಲಕ ಮೂಡಿಬಂದಿದೆ. ಯಾವಾಗಲೂ ಹೊಂದಾಣಿಕೆಯ ಬದುಕು ನಮ್ಮದಾಗಬೇಕು..... ಇಂತಹ ಅರ್ಥಪೂರ್ಣ ಕಥೆಗಳನ್ನು ಮುಂದಿನ ಪತ್ರಗಳಲ್ಲಿ ಹೇಳಿ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ..... ವಂದನೆಗಳು
..................................ಪ್ರಿಶಾಲ್ ಕುಮಾರ್ ಬಿ,
4ನೇ ತರಗತಿ,
B.R.M.P.C.P. ಸ್ಕೂಲ್, ವಿದ್ಯಾಗಿರಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************Ads on article

Advertise in articles 1

advertising articles 2

Advertise under the article