-->
ಬೆಳಕಿನ ಹಬ್ಬ - ಕವನ

ಬೆಳಕಿನ ಹಬ್ಬ - ಕವನ

ಋತ್ವಿಕ್ ಮೊಳೆಯಾರ್, 
ನಾಲ್ಕನೆಯ ತರಗತಿ, 
ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ,ನರಿಮೊಗರು,ಪುತ್ತೂರು.ದ.ಕ.  


               ಬೆಳಕಿನ ಹಬ್ಬ - ಕವನ
            ---------------------------------
ದೀಪದ ಜ್ಯೋತಿಯು ಎಲ್ಲೆಡೆ ಹರಡಲು
ಬೆಳಕಿನ ದಾರಿಯು ಎಲ್ಲೆಡೆ ಕಾಣಲು!
ಜ್ಞಾನವ ಅರಗಿಸಿ ಮತಿಯನ್ನು ಬೆಳೆಸಿ
ಮೆರೆದಿದೆ ನೋಡು ನೀ ದೀಪಾವಳಿ!!
         ಶ್ರೀಹರಿಗೆ ಅತಿಪ್ರಿಯ ಈ ಹಬ್ಬವು
         ಸಿರಿದೇವಿ ಬರುವಳು ದಿನನಿತ್ಯವೂ!
         ಗೋಮಾತೆಗೆ ಪೂಜೆಯನು ಮಾಡಿ ನಮಿಸಿ
         ಪ್ರೀತಿಯಲಿ ಬಾಂಧವ್ಯ ಎಲ್ಲರಲಿ ಬೆಳೆಸಿ!!
ಸಿಹಿ ತಿನಿಸುಗಳಲಿ ಬಾಯಿಯ ಚಪ್ಪರಿಸಿ
ರಂಗೋಲಿ ಹೂಗಳಲಿ ಮನೆಯನು ಅಲಂಕರಿಸಿ!
ತುಳಸಿಯ ಎದುರುಗಡೆ ದೀಪವನು ಇರಿಸಿ
ಶುಭವಾಗಲಿ ನಿತ್ಯ ಬೆಳಕಾಗಲಿ ಎನಿಸಿ!!.
..................... ರಚನೆ; ಋತ್ವಿಕ್ ಮೊಳೆಯಾರ್, ನಾಲ್ಕನೆಯ ತರಗತಿ, 
ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ, ನರಿಮೊಗರು, ಪುತ್ತೂರು.ದ.ಕ.
*******************************************

Ads on article

Advertise in articles 1

advertising articles 2

Advertise under the article