-->
ಅಕ್ಕನ ಪತ್ರ  - 8ಕ್ಕೆ ಮಕ್ಕಳ ಉತ್ತರ ( ಸಂಚಿಕೆ - 1)

ಅಕ್ಕನ ಪತ್ರ - 8ಕ್ಕೆ ಮಕ್ಕಳ ಉತ್ತರ ( ಸಂಚಿಕೆ - 1)

ಜಗಲಿಯ ಮಕ್ಕಳಿಗೆ ಅಕ್ಕ ಬರೆದ ಪತ್ರ - 8 ರಲ್ಲಿ 
Thsnks - ಕೃತಜ್ಞತೆಯ ಪದ ಬಳಕೆಯ 
ಕುರಿತಾಗಿ ತಿಳಿಸಲಾಗಿತ್ತು. 
ಬಹಳಷ್ಟು ವಿದ್ಯಾರ್ಥಿಗಳು ಈ ಪತ್ರಕ್ಕೆ 
ತಮ್ಮ ಉತ್ತರ ದ ಪತ್ರವನ್ನು 
ಬರೆದು ಕಳಿಸಿದ್ದಾರೆ...... 


ಮಕ್ಕಳ ಜಗಲಿ..... ಅಕ್ಕನ ಪತ್ರ - 8
      ಪ್ರೀತಿಯ ಅಕ್ಕ ನಿಮ್ಮ ಕಾಳಜಿ ತುಂಬಿದ ಪ್ರೀತಿಯ ಪತ್ರ ಓದಿ ಬಹಳ ಖುಷಿ ಆಯ್ತು... ಖಂಡಿತವಾಗಿಯೂ ನನಗೆ ಉಪಕಾರ ಮಾಡಿದವರಿಗೆ Thanks ಹೇಳುವ ಪರಿಪಾಠವನ್ನು ಅಮ್ಮ ನನಗೆ ಕಲಿಸಿಕೊಟ್ಟಿದ್ದಾರೆ... ಅಮ್ಮ- ಅಪ್ಪನಿಗೂ ತಂಗಿಗೂ Thanks ಹೇಳುತ್ತೇನೆ... ಹಾಗಾಗಿ ನಿಮ್ಮ ಪತ್ರ ಓದಿದಾಗ ನನಗೆ ಖುಷಿ ಮತ್ತು ಹೆಮ್ಮೆ ಅನಿಸಿತು... ನನಗೆ ಇಷ್ಟೊಂದು ಬರೆಯಲು ವೇದಿಕೆ ಒದಗಿಸಿ ಪ್ರೋತ್ಸಾಹಿಸಿದ ಸರ್ ತಾರಾನಾಥ್ ಕೈರಂಗಳ ಅವರಿಗೆ ಅನಂತ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ.... ನಮಗೆ ಪ್ರೀತಿಯ ಪತ್ರದ ಮೂಲಕ ಒಳ್ಳೆಯ, ಕುತೂಹಲಕಾರಿ ವಿಷಯಗಳನ್ನು ಹೇಳಿ ನಮ್ಮಲ್ಲಿ ಸಕಾರಾತ್ಮಕ ಭಾವನೆ ಬೆಳೆಯುವಂತೆ ಮಾಡಿದ ಅಕ್ಕ ನಿಮಗೂ ಹ್ರತ್ಪೂರ್ವಕ ಧನ್ಯವಾದಗಳು.... ನನ್ನ ಪ್ರೀತಿಯ ಅಧ್ಯಾಪಕರಿಗೆ.... ಗೆಳೆಯರಿಗೆ.... ಮಕ್ಕಳ ಜಗಲಿ ಅಂಕಣಕ್ಕೆ ಸಂಬಂಧಿಸಿದ ಎಲ್ಲಾ ಹಿರಿಯರಿಗೆ , ಕಿರಿಯರಿಗೆ ಧನ್ಯವಾದಗಳು.... ಅಕ್ಕ ನಿಮ್ಮ ಆಶೀರ್ವಾದ ಹೀಗೆ ಇರಲಿ... ಮುಂದಿನ ವಾರದ ಪತ್ರಕ್ಕೆ ಕಾಯುತ್ತಿರುವೆನು.
...............................................ಲಹರಿ ಜಿ.ಕೆ
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************


ಪ್ರೀತಿಯ ಅಕ್ಕನಿಗೆ , ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು........
          ನನಗೆ ನಿಮ್ಮ ಪತ್ರವನ್ನು ಓದಿ, ಯಾರಿಗೆಲ್ಲ ಧನ್ಯವಾದಗಳನ್ನು ಅರ್ಪಿಸಬಹುದು ಎಂಬುದನ್ನು ತಿಳಿದುಕೊಂಡೆನು. ನಮ್ಮ ಜೀವನದಲ್ಲಿ ಪ್ರತಿದಿನ ಅಪ್ಪ-ಅಮ್ಮ ಸಹೋದರ ಸಹೋದರಿ ಹೀಗೆ ಒಬ್ಬರಲ್ಲ ಒಬ್ಬರು ನಮಗೆ ಏನಾದರೊಂದು ಸಹಾಯವನ್ನು ಮಾಡಿರುತ್ತಾರೆ. ಅವರಿಗೆಲ್ಲಾ ನಾವು ಕೃತಜ್ಞತಾಪೂರ್ವಕವಾಗಿ ಧನ್ಯವಾದ ಅರ್ಪಿಸಬೇಕು. ಕೆಲವೊಂದು ಸಲ ಧನ್ಯವಾದ ನೀಡುವುದು ಮರೆತು ಹೋದಂತಾಗುತ್ತದೆ. ಆದರೂ ನಾವು ನಮ್ಮ ಜೀವನದಲ್ಲಿ ಸಹಾಯ ಮಾಡಿದ ಅಥವಾ ತಿಳುವಳಿಕೆಯನ್ನು ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಿರಬೇಕು. ಆವಾಗಲೆ ನಮ್ಮ ಜೀವನಕ್ಕೊಂದು ಅರ್ಥವಿರುತ್ತದೆ. ನಾವು ಸಮಾಜದಲ್ಲೂ ಕೂಡ ಶಿಕ್ಷಕರು, ಸ್ನೇಹಿತರು ಅಥವಾ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಅರ್ಪಿಸಬೇಕು. ಇದು ಯಾವಾಗಲೂ ನೆನಪಿನಲ್ಲಿ ಉಳಿಯುವಂತಿರಬೇಕು. ಆಗಲೆ ಧನ್ಯತಾ ಭಾವನೆಗೊಂದು ನೆಲೆ ಸಿಕ್ಕಿದಂತಾಗುತ್ತದೆ. ಧನ್ಯತಾ ಭಾವನೆ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು. ನಾನು ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.
                   ಧನ್ಯವಾದ
...................................... ವೈಷ್ಣವಿ ಕಾಮತ್
5 ನೇ ತರಗತಿ  
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ , ಕಲ್ಲಡ್ಕ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
********************************************************************************************



ಅಕ್ಕನ ಪತ್ರ - 8
ನಮಸ್ತೆ ಅಕ್ಕ............
  ಅಕ್ಕ ನಾನು friend ಅಜ್ಜಿ ಮತ್ತು ದೇವರಿಗೆ "Thank you " ಹೇಳಬೇಕು. 
 ಅವರು ಮೊನ್ನೆ 😭star 😭ಆದರು.....ನನಗೆ ಒಂದು ದಿನ ಜ್ವರ ಬಂದಿತ್ತು.
ನನಗೆ ಮೊದಲ ಸಲ ನೂರು ರೂಪಾಯಿ ಹುಟ್ಟುಹಬ್ಬಕ್ಕೆ ಕೊಟ್ಟು ದೊಡ್ಡ ಮನುಷ್ಯ ಆಗು ಎಂದಿದ್ದರು, ದಾರಿಯಲ್ಲಿ ಹೋಗುವಾಗ ಟಾಟ ಮಾಡುತ್ತಿದ್ದರು. ಅದಕ್ಕೆ "Thank you " ಅಜ್ಜಿ...
ದೇವರಿಗೆ Thank you ಯಾಕೆ ಗೊತ್ತಾ?
ಅಜ್ಜಿಯ ಕಷ್ಟ ಕಡಿಮೆಯಾಗಿದೆ.........!
ವಂದನೆಗಳು,
 ........................................... ಪ್ರಣವ್ ದೇವ್
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು - ದಕ್ಷಿಣ ಕನ್ನಡ ಜಿಲ್ಲೆ
********************************************************************************************


ನಮಸ್ತೆ ಅಕ್ಕಾ......... ನಾನು ನಿಭಾ
ಹೌದು ಅಕ್ಕ , ನೀವು ಹೇಳಿದ್ದು ನಿಜ.....
ನಾವು ಎಷ್ಟೋ ಜನರಿಗೆ ಥ್ಯಾಂಕ್ಸ್ ಹೇಳಬೇಕು. ಕೆಲವರಿಗೆ ಹೇಳಲು ಮರೆತಿರುತ್ತೇವೆ. ಇನ್ನು ನಮ್ಮ ಮನೆಯವರಿಗಂತೂ ಥ್ಯಾಂಕ್ಸ್ ಹೇಳಿಯೇ ಇರುವುದಿಲ್ಲ. ಆದರೆ ಈಗ ನಾನು ಎಲ್ಲರಿಗೂ ಈ ಮಕ್ಕಳ ಜಗಲಿಯ ಮೂಲಕ ಥ್ಯಾಂಕ್ಸ್ ಹೇಳುತ್ತಿದ್ದೇನೆ.
ಹಾಗೂ... ನನಗೆ ಈ ವಿಷಯವನ್ನು ತಿಳಿಸಿಕೊಟ್ಟ ಅಕ್ಕನಿಗೆ ತುಂಬಾ THANKS ಹೇಳುತ್ತೇನೆ.
ಮತ್ತು ಈ ಪತ್ರವನ್ನು ನನಗೆ ತಲುಪಿಸುವ ತಾರಾನಾಥ್ ಕೈರಂಗಳ್ ಇವರಿಗೂ ಕೂಡ ತುಂಬಾ ಧನ್ಯವಾದಗಳು.
.........................................................ನಿಭಾ
8 ನೇ ತರಗತಿ
ಸ. ಹಿ. ಪ್ರಾ. ಶಾಲೆ ನೇರಳಕಟ್ಟೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************************************************************


ನಾನು ಅರ್ಥ ಪಿ .ಶೆಟ್ಟಿ
ನಮಸ್ತೆ ಅಕ್ಕ... ಹೇಗಿದ್ದೀರಾ... ಚೆನ್ನಾಗಿದ್ದೀರಾ.. ನಾನೂ ಕೂಡಾ ಚೆನ್ನಾಗಿದ್ದೇನೆ. ನೀವು ಬರೆದ ಪತ್ರವನ್ನು ಅಮ್ಮ ಓದಿ ಹೇಳಿದರು. ಕೇಳಿದ ನನಗೆ ನಾನೂ ಕೂಡ Thanks ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು ಎನಿಸಿತು. ಮಧ್ಯಾಹ್ನ ಅಮ್ಮ ನನಗೆ ಊಟ ಮಾಡಿಸಿದರು. ಅದಕ್ಕಾಗಿ ನಾನು Thanks ಹೇಳಿದೆ.. ಹಾಗೆಯೆ ಪಪ್ಪ ನನಗಾಗಿ surprise ಆಗಿ icecream ತಂದುಕೊಟ್ಟರು. ನಾನು ತುಂಬಾ ಖುಷಿಯಾಗಿ Thanks ಹೇಳಿದೆ. ಅಜ್ಜಿ ವಾಕಿಂಗ್ ಕರೆದುಕೊಂಡು ಹೋದರು. ಅದಕ್ಕೆ thanks ಹೇಳಿದೆ. ನಾನು thanks ಹೇಳಿದಾಗ ಅವರು ಖುಷಿ ಪಟ್ಟರು. ನಾನು ಇನ್ನು ಮುಂದೆ ನನಗೆ ಯಾರಿಂದ ಸಹಾಯ ಆಗುತ್ತದೆಯೊ ಅವರಿಗೆಲ್ಲ thanks ಹೇಳ್ತೇನೆ ಅಕ್ಕಾ... thanks ನ ಮಹತ್ವ ವಿವರಿಸಿ ಮನವರಿಕೆ ಮಾಡಿದ್ದಕ್ಕಾಗಿ ನಿಮಗೆ ದನ್ಯವಾದಗಳು... 
ಇಂತಿ ನಿಮ್ಮ ಪ್ರೀತಿಯ... 
 ...........................................ಅರ್ಥ ಪಿ. ಶೆಟ್ಟಿ 
1 ನೇ F , ಲಿಟಲ್ ರಾಕ್ ಇಂಡಿಯನ್ ಸ್ಕೂಲ್, 
ಬ್ರಹ್ಮಾವರ. ಉಡುಪಿ ಜಿಲ್ಲೆ
********************************************************************************************




ನಮಸ್ತೆ ಅಕ್ಕ , ನನ್ನ ಹೆಸರು ಹಿತಶ್ರೀ.....
ನಾನು ನಿಮ್ಮ ಪತ್ರವನ್ನು ಓದಿದೆ. ನಾನು ಮೊದಲಿಗೆ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ. ನಾನು ತಾಯಿಗೆ ವಂದನೆಯನ್ನು ಸಲ್ಲಿಸುತ್ತೇನೆ. ಏಕೆಂದರೆ ಪ್ರತಿಯೊಂದು ಚಿಕ್ಕ ಚಿಕ್ಕ ಕೆಲಸಗಳಿಗೂ ನನ್ನ ತಾಯಿ ಪ್ರೋತ್ಸಾಹಿಸುತ್ತಾರೆ. ನನಗೆ ಬಹಳ ಸಂತೋಷವಾಗುತ್ತದೆ.
ನಾನು ನನ್ನ ಗುರುಗಳಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದರೆ ನನಗೆ ಮತ್ತು ಗೆಳೆಯ ಗೆಳತಿಯರಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡುತ್ತಾರೆ. ಮಗ್ಗಿ ಕೋಪಿ ಲೆಕ್ಕ ಇನ್ನಿತರ ಚಟುವಟಿಕೆಗಳಿಗೆ ತುಂಬಾ ಪ್ರೋತ್ಸಾಹಿಸುತ್ತಾರೆ. ನನಗೆ ಮತ್ತು ಗೆಳೆಯರಿಗೆಲ್ಲರಿಗೂ ಪ್ರತಿಯೊಂದು ಚಟುವಟಿಕೆಯಲ್ಲಿ ಪ್ರಥಮ ಬಂದರೆ ಪೆನ್ನು ಪುಸ್ತಕವನ್ನು ನೀಡುತ್ತಾರೆ. ಎಲ್ಲರಿಗೂ ತುಂಬಾ ಕುತೂಹಲ ಹೆಚ್ಚುತ್ತದೆ. ನಮ್ಮ ಗುರುಗಳಿಗೆ ತುಂಬಾ ದೊಡ್ಡ ಕೃತಜ್ಞತೆಯನ್ನು ಹೇಳುತ್ತೇನೆ.
ನಾನು ನನ್ನ ತಾರಾನಾಥ್ ಕೈರಂಗಳ ಸರ್ ಇವರಿಗೆ ದೊಡ್ಡ ವಂದನೆಯನ್ನು ಹೇಳಲು ಬಯಸುತ್ತೇನೆ. ಏಕೆಂದರೆ ನಾವು ಕೊರೋನ ಮಹಾಮಾರಿಯಿಂದ ನಮ್ಮ ವಿದ್ಯಾಭ್ಯಾಸವು ಅಲ್ಲಿಗೆ ನಿಂತು ಹೋದವು. ಆನಂತರ ನಮಗೆಲ್ಲರಿಗೂ ಮಕ್ಕಳ ಜಗಲಿ ಶುರುವಾಯಿತು. ಇದರಲ್ಲಿ ಪ್ರತಿಯೊಬ್ಬ ಮಕ್ಕಳು ಭಾಗವಹಿಸುತ್ತಾರೆ. ಇದರಲ್ಲಿ ಚಿತ್ರ, ಕಥೆ,ಕವನ, ಎಲ್ಲವೂ ಇದೆ. ತುಂಬಾ ಸಂತೋಷವಾಗಿದೆ.
ಧನ್ಯವಾದಗಳು
...........................................ಹಿತಾಶ್ರೀ . ಪಿ
ಆರನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ ಪಕಳಕುಂಜ , ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************************************************************



ನಾನು ಅನ್ವಿತ.....
ಅಕ್ಕನ ಪತ್ರವನ್ನು ಓದಿ ನನಗೆ ತುಂಬಾ ಇಷ್ಟವಾಯಿತು. ಅವರು ನಮಗೆಲ್ಲ ಆಟ ಪಾಠದ ಬಗ್ಗೆ ಹೇಳಿಕೊಟ್ಟರು. ನನಗೆ ಅಮ್ಮ ಪಾಠ , ಕೆಲಸ ಹೇಳಿಕೊಡುತ್ತಾರೆ. ನಾನು, ತಂಗಿ ಅಣ್ಣ ಒಟ್ಟಿಗೆ ಆಟವಾಡುತ್ತೇವೆ. ನನಗೆ ಅಣ್ಣ ಹೊಸ ಹೊಸ ಆಟವನ್ನೆಲ್ಲ ಹೇಳಿಕೊಡುತ್ತಾರೆ. ನನ್ನ ಅಪ್ಪ ನನಗೆ ಕ್ರಾಫ್ಟ್ ಇನ್ನಿತರ ಎಲ್ಲ ಕ್ರಾಫ್ಟ್ ಹೇಳಿಕೊಡುತ್ತಾರೆ. ನಾನು ಯಾರಿಗೆಲ್ಲ ಥ್ಯಾಂಕ್ಸ್ ಹೇಳುತ್ತೇನೆ ಎಂದರೆ ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಮಾವ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತೇನೆ. ಯಾರೆಲ್ಲ ನನಗೆ ಸಹಾಯ ಮಾಡಿದ್ದಾರೆ ಅವರಿಗೆಲ್ಲರಿಗೂ ಥ್ಯಾಂಕ್ಸ್ .......
 .................................................... ಅನ್ವಿತ 5 ನೇ ತರಗತಿ 
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು , ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
********************************************************************************************



ಜೈ ಶ್ರೀ ರಾಮ್.....
ಪ್ರೀತಿಯ ಅಕ್ಕನಿಗೆ ನಮಸ್ಕಾರಗಳು ,
ನಾನು ಕೂಡ Thakns ಹೇಳಬೇಕು. ಯಾರಿಗೆಲ್ಲ ಎಂದರೆ ಮಕ್ಕಳನ್ನು ನವಮಾಸ ಹೊತ್ತು ಹೆತ್ತು ಸಾಕಿ ಸಲಹಿದ ತಾಯಿಗೆ ಥ್ಯಾಂಕ್ಸ್ , ವಿದ್ಯೆಯನ್ನು ಕಲಿಸಿದ ಶ್ರೀಮಾನ್, ಮಾತಾಜಿ ಗಳಿಗೆ ಥ್ಯಾಂಕ್ಸ್, ಅನಾರೋಗ್ಯ ಇರುವಾಗ ಚಿಕಿತ್ಸೆ ಮಾಡುವ ವೈದ್ಯರಿಗೆ thanks, ಆಟವನ್ನು ಹೇಳಿಕೊಟ್ಟ ಗೆಳೆಯರಿಗೆ thanks, ಗೊತ್ತಿಲ್ಲದ ಲೆಕ್ಕವನ್ನು ಹೇಳಿಕೊಡುವಂಥ ಅಕ್ಕ ಅಣ್ಣಂದಿರಿಗೆ thanks, ನಮ್ಮನ್ನು ಮನೆಯಿಂದ ಶಾಲೆಗೆ- ಶಾಲೆಯಿಂದ ಮನೆಗೆ ಜಾಗ್ರತೆ ಯಿಂದ ತಲುಪಿಸುವ ಬಸ್, ರಿಕ್ಷಾ ಡ್ರೈವರ್ ಗಳಿಗೆ thanks, ತನಗಿಲ್ಲದಿದ್ದರೂ ಎಷ್ಟೇ ಕಷ್ಟ ಬಂದರೂ ನಾವು ಕೇಳಿದನ್ನೆಲ್ಲಾ ತಂದು ಕೊಡುವ ಪ್ರೀತಿಯ ಅಪ್ಪನಿಗೆ thanks, ಗಡಿಭಾಗದಲ್ಲಿ ಮಳೆ, ಚಳಿ,ಬಿಸಿಲೆನ್ನದೆ ಹಗಲು ರಾತ್ರಿ ನಮ್ಮ ದೇಶವನ್ನು ಕಾಯುವ ವೀರ ಯೋಧರಿಗೆ thanks, ಮಮತೆಯನ್ನು ತೋರಿಸುವ ಅಜ್ಜ- ಅಜ್ಜಿ ಯಂದಿರಿಗೆ thanks, ನಮ್ಮ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಉತ್ತೇಜಸುವ ಪ್ರೀತಿಯ ಗುರುಗಳಿಗೆ (ತಾರಾನಾಥ ಕೈರಂಗಳ )thanks.
             ಇಂತಿ ನಿಮ್ಮ 
.....................................................ತೃಪ್ತಿ ವಗ್ಗ
5 ನೇ ಭರತ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************************************************************



Ads on article

Advertise in articles 1

advertising articles 2

Advertise under the article