
ದೇಶಭಕ್ತಿ ಗೀತೆ
Saturday, August 14, 2021
Edit
ಮೋಕ್ಷಾ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ದೇಶಭಕ್ತಿ ಗೀತೆ
ನನ್ನಯ ದೇಶ ಭಾರತ
ಸ್ವತಂತ್ರ ದೇಶ ಭಾರತ
ನನ್ನಯ ದೇಶ ಭಾರತ
ಪುಣ್ಯ ದೇಶ ಭಾರತ
ಭಾರತದ ನೆತ್ತಿಯಲ್ಲಿ
ಚಳಿ,ಮಳೆ,ಬಿಸಿಲಿನಲ್ಲಿ
ಇರುವರು ಅಲ್ಲಿ ಯೋಧರು
ನಮ್ಮ ಯ ದೇಶದ ರಕ್ಷಕರು
ನನ್ನಯ ದೇಶ ಭಾರತ
ಸ್ವತಂತ್ರ ದೇಶ ಭಾರತ
ಹಿಂದು ಕ್ರೈಸ್ತ ಮುಸಲ್ಮಾನರು
ಎಲ್ಲರೂ ಇಲ್ಲಿ ಸಮಾನರು
ಭಾರತ ಮಾತೆಯ ಮಕ್ಕಳು ನಾವು
ಎಂದೆಂದಿಗೂ ಜೊತೆಯಾಗಿರುವೆವು
ನನ್ನಯ ದೇಶ ಭಾರತ
ಸ್ವತಂತ್ರ ದೇಶ ಭಾರತ
ವೀರರು ಮಡಿದ ಮಣ್ಣು ಇದು
ನಮ್ಮಯ ಹೆಮ್ಮೆಯ ದೇಶವಿದು
ಇಲ್ಲಿ ಭಾರತಾಂಬೆಯ ಮಕ್ಕಳೆಲ್ಲರೂ
ದೇಶದ ಕೀರುತಿ ಹೆಚ್ಚಿಸುವವರು
ನನ್ನಯ ದೇಶ ಭಾರತ
ಸ್ವತಂತ್ರ ದೇಶ ಭಾರತ
..........................................ಮೋಕ್ಷಾ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ