-->
ಅಕ್ಕನ ಪತ್ರ-4 ಕ್ಕೆ ಜಗಲಿಯ ಮಕ್ಕಳ ಉತ್ತರ. ಸಂಚಿಕೆ - 1

ಅಕ್ಕನ ಪತ್ರ-4 ಕ್ಕೆ ಜಗಲಿಯ ಮಕ್ಕಳ ಉತ್ತರ. ಸಂಚಿಕೆ - 1

ಅಕ್ಕನ ಪತ್ರ - 4ಕ್ಕೆ
ಜಗಲಿಯ ಮಕ್ಕಳ ಉತ್ತರ
ಸಂಚಿಕೆ - 1


ಮಕ್ಕಳ ಜಗಲಿ...ಅಕ್ಕನ ಪತ್ರ---4
        ಪ್ರೀತಿಯ ಅಕ್ಕನಿಗೆ ಲಹರಿ ಬರೆಯುವ ಪತ್ರ. ಅಕ್ಕ ಈ ಸಲ ನೀವು ಬರೆದ ಪತ್ರದಲ್ಲಿ ಒಳ್ಳೊಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ. ನೀವು ಪತ್ರದಲ್ಲಿ ತಿಳಿಸಿದ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಡೆದಂತಹ ಇಬ್ಬರು ಸಾಧಕರ ಘಟನೆ ಎಲ್ಲರಿಗೂ ಆದರ್ಶವಾಗುವಂತಹುದು.  ನನಗೆ ಈ ಘಟನೆ ನಿಜಕ್ಕೂ ಆಶ್ಚರ್ಯ ತಂದಿತು. ನೀವು ತಿಳಿಸಿದಂತೆ ನಾನೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿದ್ದೇನೆ. ಅದು ನನ್ನ ತಂದೆಯ ಪ್ರೋತ್ಸಾಹದಿಂದ.... ಇನ್ನೊಬ್ಬರನ್ನು ಗೌರವಿಸುವ, ಹಿರಿಯರ ಮಾತುಗಳನ್ನು ತಾಳ್ಮೆಯಿಂದ  ಆಲಿಸಿ ಅದರಂತೆ ನಡೆದುಕೊಳ್ಳುವ, ಉತ್ತಮ ನಡವಳಿಕೆ, ಸಮಾಜದ ಬಗ್ಗೆ ಕಳಕಳಿ, ಇತ್ಯಾದಿ ತುಂಬಾ ವಿಚಾರದ ಬಗ್ಗೆ ತಿಳಿಸಿ ನಮಗೆ ಉತ್ತಮ ನಾಗರಿಕರಾಗುವಂತೆ ಪ್ರೋತ್ಸಾಹಿಸಿದ್ದೀರಿ.... ಖಂಡಿತಾ ಅಕ್ಕ... ನಿಮ್ಮ ವಿಚಾರಗಳನ್ನು ಆದಷ್ಟು ನನ್ನ ಜೀವನದಲ್ಲಿ ಪಾಲಿಸಿಕೊಂಡು ಬರುವೆನು.... ಧನ್ಯವಾದಗಳು ಅಕ್ಕ.
..............................................ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************



ನಾನು ರೂಪಶ್ರೀ ಗೌಡ ಕನ್ಯಾನ. 
ಅಕ್ಕನ ಪತ್ರ - 4 ಬಹಳ ಸೊಗಸಾಗಿದೆ. ಮಾತ್ರವಲ್ಲದೇ ಅರ್ಥಪೂರ್ಣ ಬರಹ. ಒಲಿಂಪಿಕ್ ನ ಅಂಗಣದಲ್ಲಿ ನಡೆದೊಂದು  ಘಟನೆ ಮನದ ಕದ ತಟ್ಟಿತು. ಹೃದಯ ವೈಶಾಲ್ಯತೆಯ ದ್ಯೋತಕವದು. ಮುಂದೆಯೂ ಅಂತಹ ಸ್ಪೂರ್ತಿದಾಯಕ ಕಥೆಗಳ ನಿರೀಕ್ಷೆಯಲ್ಲಿ..
ನಿಮ್ಮ ತಂಗಿ..
.............................ರೂಪಶ್ರೀ ಗೌಡ ಕನ್ಯಾನ .
ದ್ವಿತೀಯ ಪಿಯುಸಿ .
ಕನ್ಯಾನ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ .
**************************************


ಅಕ್ಕನ ಪತ್ರ -4
ನಮಸ್ಕಾರ,
ಪತ್ರ ಓದಿದ ನಂತರ ಯೋಚಿಸಿ , ಪ್ರಶ್ನಿಸಿದೆ, ಉತ್ತರ ಸಿಕ್ಕಾಗ ಸಂತೋಷ,
ನಾನು ತಿಳಿದ ಹಾಗೆ, "ನನ್ನಲ್ಲಿರುವ ಚಾಕೊಲೇಟ್, ಬಿಸ್ಕತ್ತು ಹಂಚಿ ತಿನ್ನುವುದು, ಅಮ್ಮನ  Tution ಮಕ್ಕಳೊಂದಿಗೆ  ಕಲಿತು, ಕಲಿಸುವುದು"..........
ಅಲ್ಲವೇ .........?
ವಂದನೆಗಳು,
............................................ಪ್ರಣವ್ ದೇವ್
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್  ಹೈಯರ್ ಪ್ರೈಮರಿ ಶಾಲೆ
ಮಂಗಳೂರು - ದ.ಕ ಜಿಲ್ಲೆ
****************************************


ನನಗೆ  ಅಕ್ಕನ ಪತ್ರ - 4  ಓದಿ ತುಂಬಾ ಖುಷಿಯಾಯಿತು. ಹೌದು ನೀವು ಹೇಳಿದ ಹಾಗೆ ನಮ್ಮ ದೇಶದ ಕ್ರೀಡಾಳುಗಳ ಸಾಧನೆಗೆ ನಾವೂ ಬೆರಗಾಗಿದ್ದೇವೆ. ಆದರೆ ಕೆಲವರು ದಿನಪತ್ರಿಕೆ, ವಾರ್ತೆಗಳು ನೋಡುವುದು ಕಡಿಮೆ. ನಾನು ಟಿ. ವಿ ಯಲ್ಲಿ ಒಲಂಪಿಕ್ಸ್ ನ್ನು ನೋಡಿದೆ.  ನೀವೂ ಪತ್ರ ಬರೆದುದರಿಂದ ನನಗೆ ಕೆಲವು ವಿಷಯಗಳು ಅರ್ಥವಾಯಿತು. ಹಾಗೂ ನನಗೆ ತುಂಬಾ ಖುಷಿ ಆಯಿತು. ನೀವು ಹೇಳಿದ ಥರ  ಹಣಕ್ಕಿಂತ ಗುಣದಲ್ಲಿ ಶ್ರೀಮಂತರಾಗಬೇಕು. ನಾವು ಹಣಕ್ಕೆ ತುಂಬಾ ಆಸೆ ಪಡಬಾರದು. ನಮಗೆ ಒಳ್ಳೆಯ ಗುಣ ಇರಬೇಕು. ಒಳ್ಳೆಯ ಗುಣವಿದ್ದರೆ ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡಬಹುದು.  ಗುರುಗಳಿಗೆ ಹಿರಿಯರಿಗೆ  ಕೈ ಜೋಡಿಸಿ ಗೌರವ ಕೊಡುವುದು ಒಳ್ಳೆಯವರ ಲಕ್ಷಣ. ನಾನೂ  ಮುಂದಕ್ಕೂ ಗುರು ಹಿರಿಯರಿಗೆ ಗೌರವ ಕೊಡುತ್ತೇನೆ. ನೀವು ಈ  ಪತ್ರದಲ್ಲಿ ಬರೆದ ವಿಷಯಗಳು ಅರ್ಥವಾಗಿದೆ  ಹಾಗೂ ತುಂಬಾ ಚೆನ್ನಾಗಿದೆ ಅಕ್ಕ.
.............................................ಕೆ. ಬಿಂದು ಶ್ರೀ
ತರಗತಿ :10
ಶಾಲೆ : ಶ್ರೀ ರಾಮ ಪ್ರೌಡ ಶಾಲೆ, ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************



ನನ್ನ ಪ್ರೀತಿಯ ಅಕ್ಕ,     
    ನಿಮಗೆ ನಾನು ಧನ್ವಿ ರೈ ಕೋಟೆ , ಪ್ರೀತಿಯಿಂದ ಮಾಡುವ ನಮಸ್ಕಾರಗಳು.
    ಹೌದು ನೀವು ಬಹಳ ಸುಂದರವಾಗಿ , ಸರಳವಾಗಿ ಪತ್ರದಲ್ಲಿ ವಿಷಯಗಳನ್ನು ವ್ಯಕ್ತಪಡಿಸಿದ್ದೀರಿ. ಬಹಳ ಖುಷಿಯಾಯಿತು ಓದಿ.  "ಇಂದಿನ ಮಕ್ಕಳೇ ಮುಂದಿನ ಜನಾಂಗ" ಎಂಬಂತೆ ಮಕ್ಕಳಾದ ನಾವು ಎಲ್ಲಾ ವಿಷಯಗಳಲ್ಲೂ , ಯಾವುದೇ ಪರಿಸ್ಥಿತಿಯಲ್ಲೂ ನಾವು ಯಾವ ರೀತಿಯಲ್ಲಿ ಇರಬೇಕು, ಯಾವ ರೀತಿ ನಮ್ಮ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿವರ್ತಿಸಬೇಕು ಎನ್ನುವುದನ್ನು ಉತ್ತಮವಾಗಿ ನಿರೂಪಿಸಿದ್ದೀರಿ. ಸಜ್ಜನರ ಸಂಘ, ಉತ್ತಮ ಮಾರ್ಗದರ್ಶನದ ಗುರುಗಳು, ಹಿರಿಯರ ತಿಳುವಳಿಕೆಯ ಮಾತು, ಒಳ್ಳೆಯ ನಡತೆ ಮತ್ತು ಸಂಸ್ಕಾರದಿಂದ ನಾವು ಸುಂದರ ಸಮಾಜವನ್ನು ನಿರ್ಮಿಸಿ, ಒಂದು ಉತ್ತಮ " ಸದೃಢ ಭಾರತ " ವನ್ನು ಪಡೆದು, ಶಾಂತಿ-ಪ್ರೀತಿ-ಸೌಹಾರ್ದದಿಂದ ಬಾಳೋಣವೇ.
ಧನ್ಯವಾದಗಳೊಂದಿಗೆ ,  ನಿಮ್ಮ ಪ್ರೀತಿಯ 
 ...........................................ಧನ್ವಿ ರೈ ಕೋಟೆ
6 ನೇ ತರಗತಿ
ವಿವೇಕ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಪುತ್ತೂರು , ಪುತ್ತೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
****************************************


ಹೌದು. ಅಕ್ಕ ಹೇಳಿದ ಮಾತುಗಳು ನೂರಕ್ಕೆ ನೂರು ಸತ್ಯವಾಗಿದೆ. ಸಾಧಕರ ಸರಳತೆಗಳನ್ನು ನಾವು ನೋಡಿ, ಕೇಳಿ ಕಲಿಯಬೇಕು. ಸಾಮಾನ್ಯವಾಗಿ ನಮ್ಮೆಲ್ಲರ ಒಳಗೆ ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ಒಬ್ಬ ಕೆಟ್ಟ ವ್ಯಕ್ತಿ ಇದ್ದೇ ಇರುತ್ತಾನೆ. ಆದರೆ ಆಯ್ಕೆ ಮಾಡುವಾಗ ಯಾವುದು ಒಳ್ಳೆಯದು ಯಾವುದು ಕೆಟ್ಟದು  ಎಂದು ತಿಳಿದುಕೊಳ್ಳಬೇಕು. ಸಣ್ಣ ಸಣ್ಣ ವಿಚಾರಗಳಿಗೂ ಜಗಳವಾಡಬಾರದು. ತಪ್ಪು ಮಾಡುವುದು ದೊಡ್ಡ ವಿಷಯವಲ್ಲ, ತಪ್ಪನ್ನು ತಿದ್ದಿಕೊಳ್ಳುವುದು ಸಣ್ಣ ವಿಷಯವೂ ಅಲ್ಲ.
ಇದು ನನ್ನ ಅನಿಸಿಕೆ
 .................................................... ನಿಭಾ
8ನೇ ತರಗತಿ
ಸ. ಹಿ. ಪ್ರಾ. ಶಾಲೆ. ನೇರಳಕಟ್ಟೆ ,
ಬಂಟ್ವಾಳ ತಾಲೂಕು  ,  ದಕ್ಷಿಣ ಕನ್ನಡ ಜಿಲ್ಲೆ
***************************************


ನಮಸ್ಕಾರ ಅಕ್ಕನಿಗೆ... 
ಅಕ್ಕನ ಪತ್ರ - 4 ರಿಂದ ಹಲವಾರು ಮಾಹಿತಿ ಸಿಕ್ಕಿತು.  ನನಗೆ ತುಂಬಾ ಖುಷಿಯಾಯಿತು. ನಮ್ಮ ಒಲಿಂಪಿಕ್ ವಿಷಯ ಕೂಡ ಅದರಲ್ಲಿ ಇತ್ತು. ಮಕ್ಕಳ ಜಗಲಿಯಿಂದ  ನಮಗೆ ಹಲವಾರು ವಿಷಯಗಳು  ಗೊತ್ತಾಯಿತು. ಅಕ್ಕನ ಪತ್ರವನ್ನು ರಚಿಸಿದ ತೇಜಸ್ವಿನಿ ಅಂಬೆಕಲ್ಲು ಅವರಿಗೆ ಧನ್ಯವಾದಗಳು..
........................................ನಿರೀಕ್ಷಾ ಶೆಟ್ಟಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಬಡಗ ಯೆಕ್ಕಾರು ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




ನಮಸ್ತೆ ಅಕ್ಕ....
ನಿಮಗೂ ಕೂಡ ಸ್ವಾತಂತ್ರ್ಯ ದಿನದ ಶುಭಾಶಯಗಳು.. ನಿಮ್ಮ ಪತ್ರವನ್ನು ನಾನು ಮತ್ತು ಮನೆಯವರು ಓದಿದೆವು ತುಂಬಾ ಖುಷಿಯಾಯಿತು. ನಾನು ಒಲಿಂಪಿಕ್ಸನ್ನು ನೋಡಿದೆ. ಆದರೆ ಅಷ್ಟೇನು ವಿಷಯ ಗೊತ್ತಿರಲಿಲ್ಲ ನೀವು ಪತ್ರ ಬರೆದುದುರದಿಂದ ನನಗೆ ಕೆಲವು ವಿಷಯಗಳು ಅರ್ಥವಾಯಿತು. ಆದರೆ ಕೆಲವರು ದಿನಪತ್ರಿಕೆ, ವಾರ್ತೆಗಳು ನೋಡುವುದು ಕಡಿಮೆ. ನಮಗೆ ಒಳ್ಳೆಯ ಗುಣ ಇರಬೇಕು. ಒಳ್ಳೆಯ ಗುಣವಿದ್ದರೆ ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡಬಹುದು. ನೀವು ಹೇಳಿದ ತರ ಹಣಕ್ಕಿಂತ ಗುಣದಲ್ಲಿ ಶ್ರೀಮಂತರಾಗಿರಬೇಕು. ಗುರುಗಳಿಗೆ ಹಿರಿಯರಿಗೆ ಕೈ ಜೋಡಿಸಿ ಗೌರವ ಕೊಡಬೇಕು. ನಾನು ಮುಂದಕ್ಕೂ ಗುರು ಹಿರಿಯರಿಗೆ ಗೌರವ ಕೊಡುತ್ತೇನೆ. ಧನ್ಯವಾದಗಳು ಅಕ್ಕ.... ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ...
ಜೈಬುನೀಸಾ
8 ನೆಯ ತರಗತಿ
ದ.ಕ.ಜಿ.ಪಂ.ಉ.ಹಿ .ಪ್ರಾ ಶಾಲೆ, ಗೋಳಿತ್ತಟ್ಟು ಪುತ್ತೂರು ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



ಅಕ್ಕನ ಪತ್ರ - 4
ತುಂಬು ಹೃದಯದ ನಮನಗಳು ಅಕ್ಕ......
ಸ್ವಾತಂತ್ರೋತ್ಸವದ ಶುಭಾಶಯಗಳು...
ಮೊನ್ನೆ ಮೊನ್ನೆಯಷ್ಟೇ ನಮ್ಮ ದೇಶದ ಕ್ರೀಡಾಪಟುವಿನ ಸಾಧನೆ ನನ್ನ ಅರಿವಿಗೆ ಬರಲಿಲ್ಲ. ನಿಮ್ಮ ಪತ್ರ ಓದಿದ ಮೂಲಕ ಇನ್ನೂ ಇನ್ನು ತಿಳಿಯಬೇಕೆಂಬ ಬಯಕೆವಾಯಿತು. ನಾನು 6 ನೇತರಗತಿಯಲ್ಲಿ ಹಿಂದೆ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ . ಬೇರೆ ಬೇರೆ ಶಾಲೆಯಲ್ಲಿ ಆಟವಾಡಿದ ನೆನಪಾಯಿತು. ಅದರಲ್ಲಿ ನಾನು ಗೆದ್ದು ತಾಲೂಕು ಮಟ್ಟದವರಗೆ ಹೋಗಿದ್ದು, ನಿಮ್ಮ ಪತ್ರ ಓದಿದಾಗ ನೆನಪಾಯಿತು. ಹೌದು ನೀವು ಹೇಳಿದ ಹಾಗೆ ವಾರ್ತಾ ಪತ್ರಿಕೆ ಓದುವುದನ್ನು , ನೋಡುವುದನ್ನು ಕೂಡ ಮರೆತು ಬಿಟ್ಟಿದ್ದೆ. ಇದನ್ನು ಓದಿದ ನಂತರ ವಾರ್ತಾಪತ್ರಿಕೆ ಟಿವಿ - 9 ಎಲ್ಲವನ್ನೂ ನೋಡಬೇಕು ಎಂದು ಅನಿಸುತ್ತಿದೆ. ವಾರ್ತಾಪತ್ರಿಕೆ ಓದದೆ ನನಗೆ ಹೊರಗೆ ಏನು ಆಗುತ್ತಿದೆ ಅಂತ ಗೊತ್ತೇ ಇರಲಿಲ್ಲ. ಕೆಲವು ವರ್ಷಗಳಿಂದ ಕೋವಿಡ್ ಮಹಾಮಾರಿ ರೋಗದಿಂದ ಶಾಲೆಗಳು ಇಲ್ಲದೆ ಇದ್ದುದರಿಂದ ಹೊರಜಗತ್ತಿನಲ್ಲಿ ನಡೆಯುವ ಎಷ್ಟೋ ಸಾಧನೆಗಳ ಬಗ್ಗೆ ಅರಿವೇ ಇರಲಿಲ್ಲ. ಇವೆಲ್ಲದರ ಬಗ್ಗೆ ಸಲಹೆ ಕೊಟ್ಟಂತಹ ನಿಮಗೆ ತುಂಬು ಹೃದಯದ ಧನ್ಯವಾದಗಳು. ನಾನು ಈ ದೇಶದ ಪ್ರಜೆಯಾಗಿ ಕ್ರೀಡಾಪಟುವಾಗಬೇಕೆಂಬ ಆಶೆಯಲ್ಲಿ ಇದ್ದೇನೆ. ಬಾರ್ಶಿಮ್ ನ ಒಳ್ಳೆಯ ಗುಣ ನನಗೆ ತುಂಬಾ ಖುಷಿ ಕೊಟ್ಟಿತು. ಅಂತಹ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಧಾರ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾಗೋಣ. ಇಂತಹ ಅದ್ಭುತ ಕ್ರೀಡಾಪಟುವನ್ನು ಮಕ್ಕಳ ಜಗಲಿಯಲ್ಲಿ ಪರಿಚಯಿಸಿದ್ದಕ್ಕಾಗಿ ಅಕ್ಕನಿಗೆ ತುಂಬು ಹೃದಯದ ಧನ್ಯವಾದಗಳು. 
.......................................ಫಾತಿಮತ್ ಶಿಫಾನ
9ನೇ ತರಗತಿ
ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************




Ads on article

Advertise in articles 1

advertising articles 2

Advertise under the article