-->
ಜಗಲಿಯ ಸಾಧಕರ ಪರಿಚಯ ಸಂಚಿಕೆ -2

ಜಗಲಿಯ ಸಾಧಕರ ಪರಿಚಯ ಸಂಚಿಕೆ -2

ಜಗಲಿಯ ಸಾಧಕರ ಪರಿಚಯ
ಸಂಚಿಕೆ -2ನಮಸ್ಕಾರ,
           ಮಕ್ಕಳ ಜಗಲಿ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ವೇದಿಕೆ. ಲಾಕ್ ಡೌನ್ ಅಲ್ಲಿ ಈ ವೇದಿಕೆ ನಮಗೆ ಸದುಪಯೋಗ ಪಡೆದುಕೊಳ್ಳಲು ಸಹಾಯವಾಗಿದೆ. ನಾನು ಕೂಡ ಕಥೆ, ಕವನಗಳನ್ನು ಬರೆದಿದ್ದೇನೆ. ಈ ವೇದಿಕೆಯಿಂದ ಹಲವು ಪ್ರತಿಭೆಗಳಿಗೆ ಅವಕಾಶವಾಗಿ ದೊರೆತಿದೆ. ಈ ವೇದಿಕೆ ನಾವು ಸೃಜನಶೀಲವಾಗಿ ಬೆಳೆಯಲು ತುಂಬಾ ಸಹಾಯವಾಗಿದೆ. ನನಗೆ ಕಥೆ, ಕವನ ಬರೆಯುವುದು ಅಷ್ಟು ಗೊತ್ತಿರಲಿಲ್ಲ, ಆದರೆ ಮಕ್ಕಳ ಜಗಲಿಯಲ್ಲಿ ಹಲವು ವಿದ್ಯಾರ್ಥಿಗಳು ಬರೆದಿರುವ ಕಥೆ ಕವನಗಳನ್ನು ನೋಡಿ ನಾನು ಇದೇ ತರ ಕಥೆ, ಕವನಗಳನ್ನು ಬರೆಯಬೇಕು ಅಂತ ನಾನು ಬರೆಯಲು ಶುರಮಾಡಿದೆ. ಈ ವೇದಿಕೆಯು ನನ್ನ ಶಿಕ್ಷಣಕ್ಕೂ ಸಹಾಯವಾಗಿದೆ. ನಾನು ಎಸ್ ಎಸ್ ಎಲ್ ಸಿ ಯಲ್ಲಿ 571 ಅಂಕ ಗಳಿಸಿದ್ದೇನೆ. ನನಗೆ ಶಿಕ್ಷಕರು , ನನ್ನ ತಂದೆ - ತಾಯಿ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಮಕ್ಕಳ ಜಗಲಿಯಲ್ಲಿ ನಾನು ಒಬ್ಬಳು ಸದಸ್ಯೆ ಅನ್ನುವುದು ಹೆಮ್ಮೆಯ ವಿಷಯ. ಮಕ್ಕಳ ಜಗಲಿಯಲ್ಲಿ ಆಶ್ರಯ ನೀಡಿದ ತಾರಾನಾಥ್ ಕೈರಂಗಳ ನಿಮಗೆ ನನ್ನ ಕೃತಜ್ಞತೆಗಳು.. ನನ್ನ ಅನುಭವ ಹಂಚಿಕೊಂಡು ನನಗೆ ತುಂಬಾ ಸಂತೋಷವಾಯಿತು.
.................................................ಪ್ರಿಯಾ  
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************       ನನ್ನ ಹೆಸರು ಸಂಜನಾ, ನಾನು ಸರಕಾರಿ ಪ್ರೌಢಶಾಲೆ ಚೇಳ್ಯಾರು ಇಲ್ಲಿ 3 ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದೆ. ಈ ಸಮಯದಲ್ಲಿ ನನಗೆ ಸಂಗೀತ, ಚಿತ್ರಕಲೆ ಹಾಗೂ ಇನ್ನಿತರ ಹವ್ಯಾಸಗಳನ್ನು ನನ್ನ ಶಿಕ್ಷಕರ ಹಾಗೂ ಪೋಷಕರ ಮಾರ್ಗದರ್ಶನದಲ್ಲಿ ರೂಢಿಸಿಕೊಂಡಿರುತ್ತೇನೆ. ಶಾಲೆಯಲ್ಲಿ ನಿಗಧಿ ಪಡಿಸಿದ ಪಠ್ಯಕ್ರಮಗಳನ್ನು ಓದುವುದರ ಜೊತೆಗೆ ಪಠ್ಯೇತರ ಸಮಯಗಳಲ್ಲಿ ಈ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತೇನೆ. ಈ ಹವ್ಯಾಸಗಳಿಗೆ ನನ್ನ ಪೋಷಕರು ಸಹಕಾರವನ್ನು ನೀಡುತ್ತಿದ್ದುದ್ದು ಅಲ್ಲದೆ ಅದಕ್ಕೆ ಬೇಕಾಗುವ ಪರಿಕರಗಳನ್ನು ಸಕಾಲದಲ್ಲಿ ಒದಗಿಸಿಕೊಡುತ್ತಿದ್ದುದರಿಂದ ಪಠ್ಯಕ್ರಮಗಳ ಜೊತೆಗೆ ಚಿತ್ರಕಲೆ ಹಾಗೂ ಇನ್ನಿತರ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಯಿತು.
        ಮಕ್ಕಳ ಜಗಲಿಯಿಂದ ನಾನು ಎಲ್ಲಾ ಮಕ್ಕಳು ತಮ್ಮ ಪ್ರತಿಭೆಗಳನ್ನು ತೋರಿಸುತ್ತಿದ್ದುದನ್ನು ನೋಡಿ ಸ್ಪೂರ್ತಿಗೊಂಡು ಚಿತ್ರಕಲೆಗಳನ್ನು ಬಿಡಿಸುವುದು ಹಾಗೂ ಇನ್ನಿತರ ಅನುಭವವನ್ನು ಹೊಂದುವುದಕ್ಕೆ ಸಹಕಾರಿಯಾಗಿರುತ್ತದೆ. ಈ ರೀತಿಯ ಒಂದು ಮಾಧ್ಯಮದಿಂದಾಗಿ ನನ್ನಲ್ಲಿ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಮಕ್ಕಳಿಗೆ ಶಿಕ್ಷಕರ ಬೋಧನೆಯ ಜೊತೆಗೆ ಈ ರೀತಿಯ ಮಕ್ಕಳ ಜಗಲಿ ಎನ್ನುವ ಒಂದು ಮಾಧ್ಯಮದ ಮೂಲಕ ತಮ್ಮ ಅಭಿರುಚಿಯನ್ನು ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗಿರುತ್ತದೆ. ಹಲವಾರು ಚಿತ್ರಗಳನ್ನು ಮಕ್ಕಳ ಜಗಲಿಯಲ್ಲಿ ನೋಡಿದ್ದೇನೆ. ಹಾಗೂ ನನ್ನ ಒಂದರೆಡು ಚಿತ್ರಗಳನ್ನು ಪ್ರದರ್ಶಿಸಿದ್ದೇನೆ ಕೂಡ. ಮಕ್ಕಳ ಜಗಲಿ ಎನ್ನುವ ಮಾಧ್ಯಮವು ಅನೇಕರ ಪ್ರತಿಭೆಗಳನ್ನು ಹೊರಹಾಕಲು ಸಹಕಾರಿಯಾಗಿರುತ್ತದೆ.
          ನನ್ನ ಶಾಲೆಯ ಶಿಕ್ಷಕರ ಅತ್ಯುತ್ತಮ ಬೋಧನೆಯಿಂದ ಮತ್ತು ಮಾರ್ಗದರ್ಶನದಿಂದ ಹಾಗೂ ನನ್ನ ಪೋಷಕರ ಪ್ರೋತ್ಸಾಹದಿಂದ ನಾನು SSLC ಯಲ್ಲಿ 571 ಅಂಕಗಳಿಸುವುದಕ್ಕೆ ಸಾಧ್ಯವಾಗಿದೆ. ನನಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟ ಮಕ್ಕಳ ಜಗಲಿಯ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ. ಮಕ್ಕಳ ಜಗಲಿ ಎನ್ನುವ ಈ ಮಾಧ್ಯಮವು ಇನ್ನಷ್ಟು ಮಕ್ಕಳಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ. ಹಾಗೂ ನನ್ನ ಎಲ್ಲಾ ಶಿಕ್ಷಕ ವೃಂದಕ್ಕೂ ನನ್ನ ಸ್ನೇಹಿತರಿಗೂ ವಂದಿಸುತ್ತೇನೆ.
ಧನ್ಯವಾದಗಳು .............................................ಸಂಜನಾ 
ಸರಕಾರಿ ಪ್ರೌಢಶಾಲೆ ಚೇಳ್ಯಾರು , ಹಳೆಯಂಗಡಿ 
 ಮಂಗಳೂರು ತಾಲೂಕು, ದ.ಕ ಜಿಲ್ಲೆ
******************************************** ಎಲ್ಲರಿಗೂ ನಮಸ್ತೆ
           ಮಕ್ಕಳ ಜಗಲಿಯಂತಹ ಒಂದು ಅದ್ಭುತವಾದ ವೇದಿಕೆ ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ವರೆಗಿನ ಎಲ್ಲಾ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯವನ್ನು ಬಹಳ ಬದ್ಧತೆಯಿಂದ ಮಾಡುತ್ತ ಬರುತ್ತಿದೆ. ಮಕ್ಕಳ ಜಗಲಿ ನನ್ನ ಹಾಗೆ ಹಲವಾರು ಮಕ್ಕಳ ಸಣ್ಣ ಪುಟ್ಟ ಬರಹ, ಚಿತ್ರ, ಕಥೆ, ಕವನ ಮೊದಲಾದುವುಗಳನ್ನು ಪ್ರಕಟಿಸಲು ಆರಂಭ ಮಾಡಿ ಕೊರೊನಾ ಕಾಲದಲ್ಲಿ ಮನೆಯಲ್ಲೇ ಇರುವ ಸಂದರ್ಭ ಏರ್ಪಟ್ಟಾಗ ಆ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ವೇದಿಕೆಯಾಗಿ ಆರಂಭವಾಯಿತು. ಮಕ್ಕಳ ಜಗಲಿಯಲ್ಲಿ ಏನಾದರೂ ಬರೆಯಬೇಕು ಎಂಬ ಉತ್ಸಾಹ ಹೆಚ್ಚಾಯಿತು. ನಮಗೆ ಅರಿವಿಲ್ಲದ ಹಾಗೆ ನಾವು ಅದರಲ್ಲಿ ಭಾಗಿಯಾದೆವು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಜಗಲಿಯು ಬಹಳ ವಿಸ್ತಾರವಾಗಿ ಎತ್ತರಕ್ಕೆ ಬೆಳೆಯುತ್ತಿದೆ. ಹಲವಾರು ಮಕ್ಕಳು ಈ ಜಗಲಿಯಲ್ಲಿ ಪ್ರತಿನಿತ್ಯವೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ಹಿರಿಯ ವ್ಯಕ್ತಿಗಳ ಅನುಭವದ ಮಾತು ಹಾಗೂ ಮಕ್ಕಳ ಮನಸ್ಸನ್ನು ಅಧ್ಯಯನ ಮಾಡಿ ಅವರ ಮನಸ್ಸನ್ನು ಪರಿವರ್ತಿಸುವ ಮನಃಶಾಸ್ತ್ರಜ್ಞರು ಇವರೆಲ್ಲರ ಸಮ್ಮಿಲನದಿಂದ ಮಕ್ಕಳ ಜಗಲಿಗೆ ಇನ್ನಷ್ಟು ಮೆರುಗು ತಂದಿದೆ. ಇಂತಹ ಅದ್ಭುತವಾದ ಜಗಲಿಯಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. 
ಇದು ನಮ್ಮ ನಿಮ್ಮೆಲ್ಲರ ಜಗಲಿ. ಈ ಜಗಲಿಯು ರಾಜ್ಯಾದ್ಯಂತ ಪ್ರಸಿದ್ಧವಾಗಲಿ ಎಂದು ಆಶಿಸುತ್ತೇನೆ.
          ದನ್ಯವಾದಗಳು
................................................. ಶೀತಲ್ 
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
********************************************ಎಲ್ಲರಿಗೂ ವಂದನೆಗಳು.......
       ನನಗೆ ಮೊದಲು ನಮ್ಮ ಕನ್ನಡ ಸರ್ ಮಂಜುನಾಥ್ ಅವರು ಮಕ್ಕಳ ಜಗಲಿ ಬಗ್ಗೆ ಹೇಳಿದ್ರು. ಅವರು ತುಂಬಾ ಪ್ರೋತ್ಸಾಹ ಮಾಡಿದ್ರು.. ಅವರು ಚಿತ್ರಗಳನ್ನು ಕಳಿಸಲು ಹೇಳಿದ್ರು. ನಾನು ನನ್ನ ಚಿತ್ರ ಕಲೆಯನ್ನು ಪರಿಚಯಿಸಲು ಇದೊಂದು ಒಳ್ಳೆಯ ಅವಕಾಶ. ಇದರಿಂದ ನನಗೆ ಹೆಚ್ಚು ಹೆಚ್ಚು ಚಿತ್ರ ಬಿಡಿಸಲು ಆಸಕ್ತಿ ಹೆಚ್ಚಾಗಿದೆ. ಇದು ಹೀಗೆ ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತೇನೆ. ನನಗೆ ಇದರಿಂದ ತುಂಬಾ ಖುಷಿ ದೊರಕಿತು ಮತ್ತು ಆಸಕ್ತಿ ಹೆಚ್ಚಾಯಿತು. ನಾನು ಇದರಲ್ಲಿ ಭಾಗವಹಿಸುವುದಕ್ಕೆ ನನ್ನ ಮನೆಯವರು ಕೂಡ ಕಾರಣ. ಅವರ support ಕೂಡ ತುಂಬಾ ಇದೆ. 
ಧನ್ಯವಾದಗಳು....
.......................................................  ಸುಮಾ 
ಸರಕಾರಿ ಪ್ರೌಢಶಾಲೆ ಕಕ್ಕಿಂಜೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************Ads on article

Advertise in articles 1

advertising articles 2

Advertise under the article