-->
ಜಗಲಿಯ ಸಾಧಕರ ಪರಿಚಯ ಸಂಚಿಕೆ-1

ಜಗಲಿಯ ಸಾಧಕರ ಪರಿಚಯ ಸಂಚಿಕೆ-1

ಜಗಲಿಯ ಸಾಧಕರ ಪರಿಚಯ
ಸಂಚಿಕೆ - 1



ನಮಸ್ಕಾರಗಳು,
        ಮಕ್ಕಳ ಜಗಲಿಯಿಂದ ನಾನು ಉತ್ತಮ ಅನುಭವವನ್ನು ಮತ್ತು ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಮಕ್ಕಳ ಜಗಲಿಯಿಂದ ನಾನು ನನ್ನೊಳಗಿದ್ದ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸಿದ್ದೇನೆ. ಅನೇಕ ಚಿತ್ರಗಳನ್ನು ಮಕ್ಕಳ ಜಗಲಿಯಲ್ಲಿ ವೀಕ್ಷಿಸಿದ್ದೇನೆ. ನನ್ನ ಚಿತ್ರಗಳನ್ನು ಕೂಡ ಮಕ್ಕಳ ಜಗಲಿಯಲ್ಲಿ ಪ್ರದರ್ಶಿಸಿದ್ದೇನೆ. ಅನೇಕ ಚಿತ್ರಗಳನ್ನು ಗಮನಿಸಿ ನಾನು ಕೂಡ ಆ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೇನೆ. ಚಿತ್ರಕಲೆ ಮಾತ್ರವಲ್ಲದೆ ಅನೇಕ ಪ್ರತಿಭೆ ಕೌಶಲ್ಯಗಳನ್ನು ಮಕ್ಕಳ ಜಗಲಿಯಲ್ಲಿ ವೀಕ್ಷಿಸಿದ್ದೇನೆ. ಮಕ್ಕಳ ಜಗಲಿಯು ಅನೇಕರ ಪ್ರತಿಭೆಗಳನ್ನು ಹೊರಹಾಕಲು ಅತ್ಯುತ್ತಮ ವೇದಿಕೆಯಾಗಿದೆ. ನನಗೆ ಬಿಡುವು ಸಿಕ್ಕಾಗ ಇನ್ನಷ್ಟು ಚಿತ್ರಗಳನ್ನು ಬಿಡಿಸಿ ಮಕ್ಕಳ ಜಗಲಿಗೆ ಕಳುಹಿಸುತ್ತೇನೆ. ನಾನು ಈ ಬಾರಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕಗಳನ್ನು ಗಳಿಸಿದ್ದೇನೆ. ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಪಡೆದಿದ್ದೇನೆ. ಸ್ವಲ್ಪ ಗೊಂದಲವಾಗಿ ವಿಜ್ಞಾನ ವಿಭಾಗದಲ್ಲಿ ಎರಡು ಅಂಕಗಳನ್ನು ಕಳೆದುಕೊಂಡದ್ದು ನನಗೆ ತುಂಬಾ ಬೇಸರವಿದೆ. ನಾನು ಶಿಕ್ಷಕರು ಮಾಡಿದ ಪಾಠಗಳನ್ನು ಆಯಾ ದಿನ ಓದುತ್ತಿದ್ದೆ. ಎಲ್ಲಾ ಶಿಕ್ಷಕರು ನನಗೆ ಉತ್ತಮವಾದ ಮಾರ್ಗದರ್ಶನವನ್ನು ನೀಡುತ್ತಿದ್ದರು. ನನ್ನ ಈ ಪ್ರಯತ್ನಕ್ಕೆ ನನ್ನ ತಂದೆ ತಾಯಿಯ ಸಹಕಾರವೂ ತುಂಬಾ ಇದೆ. ನನಗೆ ನನ್ನ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಮಕ್ಕಳ ಜಗಲಿಯ ಎಲ್ಲರಿಗೂ ನನ್ನ ಕೃತಜ್ಞತೆಗಳು.
 ......................... ಕಾರ್ತಿಕ್ ಎಸ್ ಪೂಜಾರಿ
ಸರಕಾರಿ ಪ್ರೌಢಶಾಲೆ ಚೇಳಾಯರು
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
*******************************************



ಎಲ್ಲರಿಗೂ ನಮಸ್ಕಾರ.... 
ನಾನು ಕೈರಂಗಳ ದ ಶಾರದಾ ಗಣಪತಿ ವಿದ್ಯಾ ಕೇಂದ್ರದ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಕಲಿಕೆಯೊಂದಿಗೆ ಚಿತ್ರ ಬಿಡಿಸುವ ಹವ್ಯಾಸ ಇತ್ತು. ನನ್ನ ಶಾಲೆಯ ಶಿಕ್ಷಕರು ಮಕ್ಕಳ ಜಗಲಿಯ ಬಗ್ಗೆ ತಿಳಿಸಿದರು. ಮಕ್ಕಳ ಜಗಲಿಯಲ್ಲಿ ನನ್ನ ಪ್ರತಿಭಾ ಪರಿಚಯ ಪ್ರಕಟವಾದ ಮೇಲೆ ನಾನು ರಚಿಸಿದ ಚಿತ್ರಗಳದ್ದು ಸುದ್ದಿಯಾಯಿತು. ಈ ಪತ್ರಿಕೆ ನನ್ನಂತಹ ನೂರಾರು ಮಕ್ಕಳಿಗೆ ಅನುಕೂಲವಾಗಿದೆ. ಇದು ರಾಜ್ಯಾದ್ಯಂತ ಬೆಳಗಲಿ ಎಂದು ನಾನು ಆಶಿಸುತ್ತೇನೆ.
.....................................ಕಿಶನ್ ಕುಲಾಲ್
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು  , ದಕ್ಷಿಣ ಕನ್ನಡ ಜಿಲ್ಲೆ
******************************************



ಎಲ್ಲರಿಗೂ ವಂದನೆಗಳು .............
           ಮಕ್ಕಳ ಜಗಲಿಯಲ್ಲಿ ನಾನು ಭಾಗವಹಿಸುತ್ತಿರುವುದು ತುಂಬಾ ಸಂತೋಷವನ್ನು ನೀಡುತ್ತಿದೆ, ಯಾಕೆಂದರೆ ಮೊದಲು ನಾನು ಕವಿತೆಗಳನ್ನು ಬರೆಯುತ್ತಿದ್ದಾಗ ಅದು ಹಾಗೆಯೇ ಯಾರು ಓದದೇ ಉಳಿದು ಬಿಡುತಿತ್ತು ಇದರಿಂದ ನನಗೂ ಬೇಸರವಾಗುತ್ತಿತ್ತು . ಆದರೆ ಈ ವೇದಿಕೆ ನನಗೆ ಹೆಚ್ಚು ಹೆಚ್ಚು ಕಥೆ, ಕವನ, ಚುಟುಕು ಬರೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ. ಬರಹಗಳನ್ನು ಪ್ರಕಟಿಸುವುದರಿಂದ ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಹಕರಿಯಾಗಿದೆ. ಹೊಸ ಕವಿತೆ, ಕಥೆ, ಚುಟುಕು ಬರೆಯುವುದಕ್ಕೆ ಸಹಾಯಗುತ್ತಿದೆ. ಇದಕ್ಕಾಗಿ ನಾನು ಮಕ್ಕಳ ಜಗಲಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ...... 
 ............................................. ಸುನೀತಾ
ಸರಕಾರಿ ಪ್ರೌಢಶಾಲೆ ನಾರಾವಿ
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************



                       ನನ್ನ ಅನುಭವ :
     ಮಕ್ಕಳ ಜಗಲಿ.... ಇದು ಅನೇಕ ಸಾಹಿತ್ಯಾಸಕ್ತರಿಗೆ ಆಸರೆ ಒದಗಿಸಿ, ಅವರಲ್ಲಿರುವ ಕಲಾಪ್ರತಿಭೆಯನ್ನು ಅನಾವರಣಗೊಳಿಸುವುದರ ಮೂಲಕ, ಅವರ ಸಾಹಿತ್ಯದ ಬಗೆಗಿನ ಆಸಕ್ತಿಯು ಇಮ್ಮಡಿಗೊಳ್ಳಲು ಸಹಕಾರಿಯಾದ ನಮ್ಮೆಲ್ಲರ ಪ್ರೀತಿಯ ಜಗಲಿಯೂ ಹೌದು.. ಮಕ್ಕಳಲ್ಲಿ ಸೃಜನಶೀಲತೆ ಹಾಗು ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ಮಕ್ಕಳ ಜಗಲಿ ನಿರಂತರವಾಗಿ ಶ್ರಮಿಸುತ್ತಿದೆ. ಇದೇ ಜಗಲಿಯಲ್ಲಿ ನನ್ನ ವಿವಿಧ ಕವನಗಳು, ಕಥೆ, ಚಿತ್ರಗಳು ಪ್ರಕಟಗೊಂಡಿವೆ. ಈ ಜಗಲಿಯಲ್ಲಿ ಪ್ರಕಟವಾಗುವ ಪುಟಾಣಿ ಮಕ್ಕಳ ಸ್ವಕಲ್ಪನೆಯ ಅಂದದ ಚಿತ್ರಗಳು, ಕವನಗಳು, ತಮ್ಮದೇ ಶೈಲಿಯಲ್ಲಿ ರಚಿಸಿದ ಕಥೆಗಳು.. ಓದುಗರ ಮನಸ್ಸನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಅರವಿಂದ ಕುಡ್ಲ ಅವರ ಹಕ್ಕಿಗಳ ಪರಿಚಯ ನಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂತದ್ದು.. ಇದಲ್ಲದೆ ಅಕ್ಕನ ಪತ್ರ, ಬದಲಾಗೋಣವೇ ಪ್ಲೀಸ್, ಪದಗಳ ಆಟ - ಭಾವಚಿತ್ರ ಪಾತ್ರ ಮುಂತಾದವು ನಮ್ಮನ್ನು ಯೋಚನೆಯಾಳದಲ್ಲಿ ಮುಳುಗಿಸುತ್ತವೆ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ಜೀವನ ಮೌಲ್ಯಗಳನ್ನು ಈ ಮಕ್ಕಳ ಜಗಲಿ, ಮಕ್ಕಳಿಗೆ ತಿಳಿಸಿಕೊಡುವಲ್ಲಿ ಯಶಸ್ವಿಯಾಗುತ್ತಿದೆ.. ಎಂಬುದು ನನ್ನ ಅಭಿಪ್ರಾಯ. ಈ ಮಕ್ಕಳ ಜಗಲಿಯ ಆಶ್ರಯ ಪಡೆಯಲು ಸಹಕರಿಸಿದ ತಾರಾನಾಥ ಕೈರಂಗಳ ಸರ್ ತಮಗೆ ನನ್ನ ಮನದಾಳದ ಕೃತಜ್ಞತೆಗಳು.
...................................ಬಿಂದುಶ್ರೀ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
********************************************



 ಎಲ್ಲರಿಗೂ ನಮಸ್ತೆ .........
      ಕೊರೋನ ಕಾಲದಲ್ಲಿ ಶಾಲಾ ತರಗತಿಗಳು ಇಲ್ಲದೆ ಇದ್ದ ಸಂದರ್ಭವನ್ನು ಉತ್ತಮ ರೀತಿಯಲ್ಲಿ ಸಮಯದ ಸದುಪಯೋಗ ಪಡೆದುಕೊಳ್ಳುವ ವೇದಿಕೆಯಾಗಿ ಮಕ್ಕಳ ಜಗಲಿ ಆರಂಭವಾಯಿತು. ಮಕ್ಕಳ ಜಗಲಿ ನನ್ನಂತೆ ಹಲವು ಮಕ್ಕಳ ಚಿಕ್ಕಪುಟ್ಟ ಲೇಖನ-ಚಿತ್ರ ಕಥೆ-ಕವನಗಳನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿತು. ಬರಬರುತ್ತಾ ಏನಾದರೂ ಮಾಡಬೇಕು ಜಗಲಿಗೆ ಕಳುಹಿಸಿಕೊಡಬೇಕು ಎಂಬ ಉತ್ಸಾಹ ಹೆಚ್ಚಿಸಿತು. ನಮಗೆ ಗೊತ್ತಿಲ್ಲದೆ ನಾವು ನಮ್ಮನ್ನು ಜಗಲಿಯಲ್ಲಿ ತೊಡಗಿಸಿಕೊಳ್ಳಲು ಆರಂಭ ಮಾಡಿದೆವು. ಇತ್ತೀಚೆಗೆ ಅಂತೂ ಮಕ್ಕಳ ಜಗಲಿ ವಿಸ್ತಾರವಾಗಿ ಬೆಳೆಯುತ್ತಿದೆ. ಅನೇಕ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ವಿಚಾರ ಕಾಣುತ್ತಿರುವುದು ತುಂಬಾನೇ ಖುಷಿ ನೀಡುತ್ತಿದೆ. ಮಕ್ಕಳ ಜೊತೆಗೆ ಹಿರಿಯರ ಲೇಖನ ಉತ್ತಮ ಮಾರ್ಗದರ್ಶನ , ಪ್ರಕೃತಿಯ ಬಗೆಗಿನ ಒಲವು ಇವೆಲ್ಲ ಮಕ್ಕಳ ಜಗಲಿಗೆ ಇನ್ನಷ್ಟು ಮೆರಗು ತಂದಿದೆ. ನಾನು ಒಬ್ಬಳು ಈ ಜಗಲಿಯ ಸದಸ್ಯೆ ಎಂಬುದರಲ್ಲಿ ನನಗೆ ತುಂಬಾನೇ ಹೆಮ್ಮೆ ಇದೆ. 
               ಧನ್ಯವಾದಗಳು 
............................................... ಶ್ರಾವ್ಯ
   ಸರಕಾರಿ ಪ್ರೌಢ ಶಾಲೆ , ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ       
******************************************        


                           ಮಕ್ಕಳ ಜಗಲಿಯು ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಕಲೆಯನ್ನು ಪ್ರದರ್ಶಿಸುವ ಅಧ್ಭುತವಾದ ವೇದಿಕೆಯಾಗಿದೆ. ಇದರಲ್ಲಿ ನನ್ನಂತಹ ವಿದ್ಯಾರ್ಥಿಗಳು ಬರೆದ ಕಥೆ, ಕವನ, ಚಿತ್ರಕಲೆ ಮುಂತಾದವುಗಳನ್ನು ಓದಲು ತುಂಬಾ ಖುಷಿಯಾಗುತ್ತದೆ. ನಾನೂ ಸಹ ಕವನ, ಕಥೆ ಹಾಗೂ ಲೇಖನವನ್ನು ಬರೆದಿದ್ದೇನೆ. ಮಕ್ಕಳ ಜಗಲಿಯು ನನ್ನಲ್ಲೂ ಕಥೆ, ಕವನ, ಲೇಖನವನ್ನು ಬರೆಯುವ ಸಾಮರ್ಥ್ಯವಿದೆಯೆಂದು ತಿಳಿಸಿಕೊಟ್ಟಿದೆ. ಮಕ್ಕಳ ಜಗಲಿಯ ಕಲೆಯನ್ನು ಪ್ರದರ್ಶಿಸಲು ಎಲ್ಲರಿಗೂ ಒಂದು ಒಳ್ಳೆಯ ವೇದಿಕೆಯಾಗಿದೆ.
.................................................ಯಶಶ್ವಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




   
ಎಲ್ಲರಿಗೂ ನಮಸ್ತೆ ......
      ಶಾಲೆಗಳಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಲ್ಲಿ ಭಾಗವಹಿಸುವುದೆಂದರೆ ನನಗೆ ತುಂಬಾ ಇಷ್ಟ. ಉದಾಹರಣೆಗಾಗಿ ಭಾಷಣ ಮಾಡುವುದು , ಕವನ ಬರೆಯುವುದು, ಕಥೆ ಬರೆಯುವುದು, ಮತ್ತು ಚಿತ್ರ ಮಾಡುವುದೆಂದರೆ ತುಂಬಾ ಇಷ್ಟ. ಮಹಾಮಾರಿ ಕೊರೋನದಿಂದ ಶಾಲೆಗಳು , ಶಾಲೆಗಳಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ನಿಂತು ಹೋದವು. ಆಗ ಪ್ರಾರಂಭವಾಗಿದ್ದೆ ಮಕ್ಕಳಜಗಲಿ. ಇದರಲ್ಲಿ ನನ್ನಂತೆ ಹಲವಾರು ಮಕ್ಕಳು ಭಾಗವಹಿಸುತ್ತಿದ್ದಾರೆ. ಮಕ್ಕಳಜಗಲಿ ಎಂಬ ಪರಿಕಲ್ಪನೆಯೂ ವಿಭಿನ್ನವಾಗಿದೆ. ನಾವು ಬರೆದಿರುವ ಕವನಗಳಾಗಿರಬಹುದು , ಕಥೆಗಳಾಗಿರಬವಹುದು ಹಾಗೂ ಚಿತ್ರಗಳಾಗಿರಬಹುದು ಇದರಲ್ಲಿ ಪ್ರಕಟಿಸಬಹುದು . ತರಗತಿಗಳಿಲ್ಲದ ಸಮಯದಲ್ಲಿ ಇದು ಒಂದು ರೀತಿಯ ಸಮಯ ಸದುಪಯೋಗ ಮಾಡುವ ಉತ್ತಮ ವೇದಿಕೆಯಾಗಿದೆ. ಮಕ್ಕಳ ಜಗಲಿಯಲ್ಲಿ ಪ್ರಕಟವಾಗಿರುವ ಕವನ, ಕಥೆ, ಪತ್ರಗಳು ಮತ್ತು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಜಗಲಿಯಲ್ಲಿ ಇದ್ದಾರೆ. ಅದರಲ್ಲಿ ನಾನು ಒಬ್ಬಳು ಈ ಜಗಲಿಯ ಸದಸ್ಯೆ ಎಂದು ಹೇಳಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ. 
               ಧನ್ಯವಾದಗಳು       
 ................................................ ಅಂಕಿತಾ            ಸರಕಾರಿ ಪ್ರೌಢ ಶಾಲೆ
ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
****************************************




ನಮಸ್ಕಾರಗಳು,
         ಮಕ್ಕಳ ಜಗಲಿಯಿಂದ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಮಕ್ಕಳ ಜಗಲಿಯಲ್ಲಿ ನಾನು ಹಲವು ಚಿತ್ರಕಾರರನ್ನು ಅಲ್ಲದೇ ಇತರ ಪ್ರತಿಭೆಗಳನ್ನು ನೋಡಿದ್ದೇನೆ. ನನಗೆ ನನ್ನ ಕಲೆಯನ್ನು ಹಾಗೂ ವಿದ್ಯಾಭ್ಯಾಸವನ್ನು ಅಭಿವೃದ್ಧಿಗೊಳಿಸಲು ಮಕ್ಕಳ ಜಗಲಿಯಿಂದ ತುಂಬಾ ಪ್ರೋತ್ಸಾಹ ಸಿಕ್ಕಿದೆ. ಮಕ್ಕಳ ಜಗಲಿಯಿಂದ ನಾನು ಹಲವು ಚಿತ್ರ ಹಾಗೂ ಇತರೆ ಕಲೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಇನ್ನೂ ಚಿತ್ರಗಳನ್ನು ರಚಿಸಿ ಮಕ್ಕಳ ಜಗಲಿಗೆ ಕಳುಹಿಸುತ್ತೇನೆ. ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾನು 535 ಅಂಕಗಳನ್ನು ಪಡೆದಿದ್ದೇನೆ. ಎಲ್ಲಾ ಶಿಕ್ಷಕರು ನನಗೆ ಉತ್ತಮವಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡಿದ್ದಾರೆ. ನನಗೆ ನನ್ನ ತಂದೆ ತಾಯಿಯೂ ತುಂಬಾ ಸಹಕಾರವನ್ನು ಮಾಡಿ ಪ್ರೋತ್ಸಾಹಿಸಿದ್ದಾರೆ. ನನಗೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಮಕ್ಕಳ ಜಗಲಿಯವರಿಗೆ ನನ್ನ ಅಭಿನಂದನೆಗಳು.
 .................................................. ಸೂರಜ್ 
ಸರಕಾರಿ ಪ್ರೌಢಶಾಲೆ ಚೇಳಾಯರು 
ಮಂಗಳೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
********************************************










Ads on article

Advertise in articles 1

advertising articles 2

Advertise under the article