-->
ಯೋಗ ಬಲ್ಲವನಿಗೆ ರೋಗವಿಲ್ಲ

ಯೋಗ ಬಲ್ಲವನಿಗೆ ರೋಗವಿಲ್ಲ

        ಶ್ರೀಮತಿ ವಿಜಯರವಿ ಕೋಟೆ
        ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ


               ಯೋಗ ಬಲ್ಲವನಿಗೆ ರೋಗವಿಲ್ಲ

   ಹೌದು ಯೋಗ ತಿಳಿದವನಿಗೆ ರೋಗವಿಲ್ಲ ಎಂಬ ನುಡಿಯಂತೆ ಯೋಗ ಶಿಕ್ಷಣವು ದೈಹಿಕ-ಮಾನಸಿಕ ವಿಕಾಸಕ್ಕೆ ಸಾಧನವಾಗಿದೆ. ಯೋಗವು 2015 ಜೂನ್ 21ರಂದು ಮೊದಲ ಬಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಾದ್ಯಂತ ವರ್ಷಂಪ್ರತಿ ಆಚರಿಸಲಾಗುತ್ತದೆ. ಯೋಗಗಳಲ್ಲಿ ನಾನಾ ಪ್ರಕಾರಗಳಿವೆ. "ದೇಹವು ಮನಸ್ಸಿನ ದೇವಸ್ಥಾನ ವಾಗಿದ್ದರೆ, ಯೋಗವು ಸುಂದರವಾದ ದೇವಸ್ಥಾನ"ವನ್ನು ಸೃಷ್ಟಿಸುತ್ತದೆ.

   ಪ್ರಶಾಂತ ವಾತಾವರಣದಲ್ಲಿ ದಿನದ 24 ಗಂಟೆಯಲ್ಲಿ ಕೇವಲ 20 ನಿಮಿಷ ಯೋಗ ಮಾಡಿದರೆ ಇಡೀ ದಿನ ಉಲ್ಲಾಸಿತರಾಗಿ ಇರುತ್ತೇವೆ. ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿ, ರಕ್ತ ಪರಿಚಲನೆ ಹೆಚ್ಚಿಸುವುದು ಮತ್ತು ಸ್ನಾಯುಗಳಿಗೆ ಬಲ ನೀಡುವ ಮೂಲಕ ಉತ್ತಮ ಆರೋಗ್ಯ ಹೊಂದಲು ಸಹಾಯವಾಗುತ್ತದೆ.

   ಇತ್ತೀಚಿನ ಸುಮಾರು ಒಂದೂವರೆ ವರ್ಷಗಳ ಕಠಿಣ ಪರಿಸ್ಥಿತಿಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆಯು ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಹಲವಾರು ವೃತ್ತಿಯವರಿಗೂ ಆರೋಗ್ಯದಲ್ಲಿ ಬೊಜ್ಜು, ಜಡತ್ವ ಮುಂತಾದ ವ್ಯತ್ಯಾಸ ಉಂಟಾಗಿರಬಹುದು. ಈ ವ್ಯತ್ಯಾಸವನ್ನು ನೀಗಿಸುವಲ್ಲಿ ಯೋಗವು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ದೇಹ , ಮನಸ್ಸಿಗೆ ಬೇಕಾದ ವಿಶ್ರಾಂತಿ, ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
      ಆದುದರಿಂದ " ಜನರ ನಡೆ ಯೋಗಾಸನದ ಕಡೆ " ಸಾಗಬೇಕು. ಮಕ್ಕಳಿಂದ ಹಿಡಿದು ಹಿರಿಯರವರೆಗೂ " ಸ್ವಸ್ಥ ಆರೋಗ್ಯಕರ ಸಮಾಜ " ನಿರ್ಮಾಣವಾಗಬೇಕಾದರೆ ನಾವು " ಯೋಗಾಸನ "ಕ್ಕೆ ಮುಖ ಮಾಡಲೇಬೇಕಾಗಿದೆ.
      " ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ "

 ..........................ಶ್ರೀಮತಿ ವಿಜಯರವಿ ಕೋಟೆ
                              ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article