ಕಪಟ ಮಂತ್ರಿ - ಕಥೆ
Wednesday, July 28, 2021
Edit
ನಿರೀಕ್ಷಾ. ಜಿ. ಶೆಟ್ಟಿ 10th
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರ್
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಒಬ್ಬ ರಾಜ. ಅವನಿಗೆ ಒಬ್ಬಳು ತಂಗಿ ಇದ್ದಳು. ಅವಳನ್ನು ತುಂಬಾ ದೂರದ ರಾಜ್ಯದ ರಾಜನಿಗೆ ಮದುವೆ ಮಾಡಿಸಿ ಕೊಟ್ಟಿದ್ದರು. ಒಂದು ದಿನ ರಾಜ ಮಂತ್ರಿಯನ್ನು ಕರೆದು ನನ್ನ ತಂಗಿಯ ರಾಜ್ಯಕ್ಕೆ ಹೋಗೋಣ ಎಂದಾಗ " ಅವರು ತಮ್ಮ ರಾಜ್ಯವನ್ನು ಕಳೆದುಕೊಂಡಿದ್ದಾರೆ " ಎಂದು ಮಂತ್ರಿ ಹೇಳಿದ. ಆಗ ರಾಜ ಸಿಟ್ಟು ಬಂದು " ಇದನ್ನು ಯಾಕೆ ಹೇಳಲಿಲ್ಲ " ಎಂದರು. ನಾವು ಈಗಲೇ ಹೋಗೋಣ ನನ್ನ ತಂಗಿಗೋಸ್ಕರ ನಮ್ಮ ತೋಟದಿಂದ ಒಂದು ಬಾಳೆಗೊನೆಯನ್ನು ಚೀಲದಲ್ಲಿ ತುಂಬಿಕೊಂಡು ಬಾ ಎಂದರು. ರಾಜ ಮುಂದಿನಿಂದ ಹೋಗುವಾಗ ಮಂತ್ರಿ ಹಿಂದಿನಿಂದ ಬಾಳೆಹಣ್ಣು ಖಾಲಿ ಮಾಡುತ್ತಾ ಬಂದ. ಸ್ವಲ್ಪ ಸಮಯದ ನಂತರ ರಾಜ ಇದು ಯಾವ ದಾರಿಯಲ್ಲಿ ಹೋಗುತ್ತಿದ್ದೇವೆ ಎಂದಾಗ... ಇದು ಮೊದಲನೇ ದಾರಿ ಎಂದನು ಮಂತ್ರಿ... ಸ್ವಲ್ಪ ಸಮಯದ ನಂತರ ರಾಜ ಇನ್ನೊಮ್ಮೆ ಕೇಳಿದ.... ಇದು ಯಾವ ದಾರಿ...? ಆಗಮನ ಅರ್ಧದಾರಿ ಎಂದನು ಮಂತ್ರಿ. ಇನ್ನೊಮ್ಮೆ ಕೇಳಿದಾಗ.... ಮಂತ್ರಿ ಇದು ಪೂರ್ತಿ ದಾರಿ ಎಂದನು. ಕೊನೆಗೆ ತಂಗಿಯ ಮನೆ ತಲುಪಿದರು. ಬಾಳೆಹಣ್ಣಿನ ಚೀಲವನ್ನು ಮನೆಯೊಳಗೆ ಇಟ್ಟು ಬಂದ ಮಂತ್ರಿ.
ತಂಗಿಯ ಮಕ್ಕಳು ರಾಜನನ್ನು ಕಂಡು..... ಮಾವ ಬಂದರು.... ಮಾವ ಬಂದರು.... ಎಂದು ಕಿರುಚಿದರು. ತಂಗಿ... ಅಣ್ಣ ಬಾ ಒಳಗೆ ಎಂದಳು. ರಾಜ ಮಕ್ಕಳಿಗೆ... ಚೀಲದಲ್ಲಿ ಬಾಳೆಹಣ್ಣು ಇದೆ ಹೋಗಿ ತಿನ್ನಿ ಎಂದನು. ಬಾಳೆಹಣ್ಣಿನ ಚೀಲವನ್ನು ತೆರೆಯುವಾಗ ಅದರಲ್ಲಿ ಸಿಪ್ಪೆ ಮಾತ್ರ ಕಾಣಿಸಿತು. ಹೇಳಬೇಡಿ ಮಕ್ಕಳೇ... ಎಂದಳು. ನಂತರ ಅಡುಗೆ ಮನೆಗೆ ಹೋಗಿ ರುಚಿಕರವಾದ ಹಣ್ಣುಗಳನ್ನು ಮತ್ತು ಆಹಾರ ಭೋಜನವನ್ನು ಸಿದ್ದ ಮಾಡುತ್ತಿದ್ದಳು. ಅಡುಗೆ ಕೋಣೆಯಿಂದ ಬಂದ ಪರಿಮಳ ರಾಜನಿಗೆ ಖುಷಿಯಾಯಿತು. ಮಂತ್ರಿಯು ಕಿಟಕಿಯಿಂದ ಬಗ್ಗಿ..... ಇದನ್ನೆಲ್ಲ ಯಾರಿಗೆ ಮಾಡುತ್ತಿದ್ದೀರಿ....... ರಾಜರು ಇದನ್ನೆಲ್ಲ ತಿನ್ನುವುದಿಲ್ಲ.... ಅವರು ಗಂಜಿ ಮತ್ತು ಚಟ್ನಿಯನ್ನು ಮಾತ್ರ ತಿನ್ನುತ್ತಾರೆ, ಎಂದನು. ಮಂತ್ರಿ... ನೀವು ಮಾಡಿದ ಘಮ ಘಮ ಆಹಾರಗಳನ್ನೆಲ್ಲ ನನಗೆ ಕೊಡಿ... ಅವರು ಬರೀ ಗಂಜಿ ಮತ್ತು ಚಟ್ನಿಯನ್ನು ಮಾತ್ರ ತಿನ್ನುತ್ತಾರೆ ಎಂದನು. ಆಗ ರಾಜ ಮಂತ್ರಿಯ ಮಾತನ್ನು ಗುಟ್ಟಾಗಿ ಆಲಿಸುತ್ತಾನೆ. ಮಂತ್ರಿಯ ಕಪಟ ಬುದ್ಧಿ ತಿಳಿಯುತ್ತದೆ. ನಡೆದ ಬಾಳೆಹಣ್ಣಿನ ಸಿಪ್ಪೆಯ ವಿಚಾರವು ತಿಳಿಯುತ್ತದೆ. ಕೊನೆಗೆ ತಂಗಿಯಲ್ಲಿ ಮಂತ್ರಿಯ ಕಪಟತನದಿಂದ ತನಗಾದ ಮೋಸವನ್ನು ಹೇಳುತ್ತಾನೆ. ಮಂತ್ರಿಯನ್ನು ಓಡಿಸುತ್ತಾನೆ.
.................................ನಿರೀಕ್ಷಾ. ಜಿ. ಶೆಟ್ಟಿ 10th
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರ್ ಮಂಗಳೂರು ,
ದಕ್ಷಿಣ ಕನ್ನಡ ಜಿಲ್ಲೆ
ಚಿತ್ರ : ಅಶ್ವಿನ್ ಕೃಷ್ಣ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ
***********************************************