ಕಾಮಧೇನು - ಕವನ
Tuesday, July 20, 2021
Edit
ಲಾವಣ್ಯ 10 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಪ್ರಕಾರ : ಅಕ್ಷರಗಳ ವಿಸ್ತರಣೆ ಕವನ
***************************************
ಶೀರ್ಷಿಕೆ : ಕಾಮಧೇನು
****************************
ಹೇ
ಮಾತೆ
ಗೋಮಾತೆ
ಪೂಜಿಪರು
ನಿನ್ನಯ ಮಾತೆ
ಭಕ್ತಿ ಗೌರವದಿಂ
ಬೇಡಿದ ವರವನ್ನು
ನೀಡ್ವ ತಾಯಿಯಂತೆ ನೀನು
ಗೋಮಯ ಗೋಮೂತ್ರ ವಿಲ್ಲದೆ
ಸಂಪನ್ನ ವಾಗದು ಪೂಜೆಗಳು
ಮುಕ್ಕೋಟಿ ದೇವತೆಗಳ ಶಕ್ತಿಯು
ನಿನ್ನೊಳಗೆ ಅಡಗಿಹುದು ಮಾತೆಯೇ
ತಬ್ಬಲಿ ಮಗುವಿಗೆ ತಾಯಿಯಂತೆ ನೀನು
ಭೇದಭಾವವಿಲ್ಲದ ಪವಿತ್ರ ಮನ ನಿಂದು
ಸದ್ಗತಿ ಕರುಣಿಸು ಸಕಲ ಜೀವರಾಶಿಗೂ
ಪ್ರೀತಿ ಮಮತೆಯ ಉಣಬಡಿಸು ಎಲ್ಲರೊಂದಿಗೂ
.............................................ಲಾವಣ್ಯ
9 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಕೊಳ್ನಾಡು ಕಾಡುಮಠ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************