ಅಮ್ಮನ ಪ್ರೀತಿ - ಕವನ
Sunday, July 25, 2021
Edit
ಬಿಂದುಶ್ರೀ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಅಮ್ಮನ ಪ್ರೀತಿ -ಕವನ
************************************
ಬೆಚ್ಚನೆಯ ಅಪ್ಪುಗೆಯಲಿ
ಮಮತೆಯೆಂಬ ಹಾಸಿಗೆಯಲಿ
ಸಿಹಿ ಮುತ್ತಿನ ತಲೆದಿಂಬಿನಲಿ
ಹಾಯಾಗಿ ಮಲಗಿಸುವಳು ನನ್ನಮ್ಮಾ...॥
ಬಿದ್ದಾಗ ಓಡಿ ಬಂದು, ಎತ್ತಿ ಮುದ್ದಾಡಿ
ಹಸಿವಿನಿಂದ ಅತ್ತಾಗ ಎದೆಹಾಲ ನೀಡಿ
ಬೇಸರ ಕಳೆಯಲೆಂದು ನನ್ನ ಜೊತೆ ಆಡಿ
ನನ್ನ ಸುಖಕ್ಕಾಗಿ ತನ್ನ ಸುಖವ
ಧಾರೆಯೆರೆದವಳು ನನ್ನಮ್ಮಾ..॥
ಮಳೆಯಲ್ಲಿ ನನಗೆ ಸೆರಗಾಗುವಳು
ಬಿಸಿಲಲ್ಲಿ ತಂಪಿನ ನೆರಳಾಗುವಳು
ಕರುಣೆಯ ವಿಶಾಲ ಕಡಲವಳು
ಚಿನ್ನದಂತೆ ಪರಿಶುದ್ಧಳು ನನ್ನ ಅಮ್ಮಾ.....॥
......................................... ಬಿಂದುಶ್ರೀ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************