
ಅಮ್ಮ - ಕವನ
Saturday, July 3, 2021
Edit
ಭಾರತಿ 7 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಅಮ್ಮ - ಕವನ
ತೆಗೆದುಕೋ ಅಮ್ಮನ ತಂದಿರುವೆ
ಈ ಬಿಡಿ ಮಲ್ಲಿಗೆ
ನಿನ್ನ ಪಾದಗಳಿಡಿ ಇರುಸುವೆನು
ಈ ಹಿಡಿ ಮಲ್ಲಿಗೆ
ಮುಡಿದುಕೋ ಅಮ್ಮ ನ ದಂಡೆ ಕಟ್ಟಿ
ತಂದ ಈ ಮುಡಿ ಮಲ್ಲಿಗೆ
ನೀ ಬಾಯ್ಬಿಟ್ಟು ನುಡಿದರೆ
ಅದುವೇ ನುಡಿ ಮಲ್ಲಿಗೆ
ನೋಡು ಆಗಲೇ ಕಂಪು ಬೀರುತಿದೆ
ಬಾಳ ಹಾದಿಗೆ
ಇರಲಿ ಹೊಸ ಕನಸುಗಳು ನಿನ್ನಲ್ಲೂ
ನನ್ನಂತೆ ಅರಳುವ ಮೊಗ್ಗಿಗೆ
ತಡವರಿಸಿ ಬೀಳದೆ ಹಬ್ಬಿ ಬೆಳೆಯುವೆನು
ನಿನ್ನ ಮಮತೆಯ ಬಳ್ಳಿಗೆ
ಬಿರಿದ ಹೂವಾಗಿ ಕಂಪಾಗಿ ನಾ ಆಗುವೆ
ನಿನ್ನಂತೆ ಮಲ್ಲಿಗೆ....!
ಚಿತ್ರ ಮತ್ತು ಕವನ : ಭಾರತಿ 7 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ