-->
ಅನುಜ್ ನ ಪುಟಾಣಿ ಕಥೆಗಳು

ಅನುಜ್ ನ ಪುಟಾಣಿ ಕಥೆಗಳು

ಮಕ್ಕಳ ಜಗಲಿಯಲ್ಲಿ
ಅನುಜ್ ನ 
ಪುಟಾಣಿ ಕಥೆಗಳು
                  ಪುಣ್ಯಕೋಟಿಯ ಸಣ್ಣ ಕಥೆ
    ಒಂದೂರಲ್ಲಿ ಒಂದು ಸಣ್ಣ ಕಾಡಿತ್ತು. ಆ ಕಾಡಲ್ಲಿ ಸಣ್ಣ ಅಂಬ ಇತ್ತು. ಅದೊಮ್ಮೆ ಕಾಡಲ್ಲಿ ಹೋಗಾಗ ಸಣ್ಣ ಹುಲಿ ಬಂತು.. ಅಂಬ ನನ್ನನು ತಿಂಬೇಡ, ಮನೆಲಿ ಬಾಬ ಅಂಬ ಕಾಯ್ತ ಉಂಟು. ಹೋಗಿ ಬರ್ತೆನೆ, ಆಮ್ ಕೊಟ್ಟು ಬರ್ತೆನೆ ಅಂತೇಳಿತು. ಅಷ್ಟೊತ್ತಿಗೆ ಹುಲಿ.. ಆಯ್ತು ಹೋಗಿ ಬಾ ಅಂತೇಳಿತು. ಅಂಬ ಮನೆಗೆ ಹೋಗಿ ಆಮ್ ಕೊಟ್ಟು ಬಂತು.. ಆಗ ಹುಲಿ ಮೇಲಿಂದ ಜಂಪ್ ಮಾಡಿ ಸತ್ತೋಯ್ತು.


              
                   ಅಟ್ಟೊತ್ತಿಗೆ ಆನೆ ಬಂತು
     ಒಮ್ಮೆ ಅಪ್ಪು ಕಾಡಿಗೆ ಹೋಗಿದ್ದ. ಅಷ್ಟೊತ್ತಿಗೆ ಅಲ್ಲಿ ಒಂದು ದೊಡ್ಡ ಕಾಡಿಂದ ದೊಡ್ಡ ಡೈನೋಸಾರ್ ಬಂತು. ಡೈನೋಸಾರ್ ಅಪ್ಪುನ ಹತ್ರ ಬರುವಾಗ ಮೂ ಅಂತ ಸೌಂಡ್ ಬಂತು. ಎಂತ ಸೌಂಡ್ ಅಂತ ಹಿಂದೆ ತಿರುಗಿ ನೋಡುವಾಗ ಅದು ಆನೆ, ಅಪ್ಪುದು ಆನೆ. ಡೈನೋಸರ್ ಹತ್ರ ಬರುವಾಗ ಆನೆ ಅದನ್ನು ಸೊಂಡಿಲಲ್ಲಿ ಎತ್ತಿ ನೀರಿಗೆ ಬೀಳಿಸಿತು. ನೀರಿಗೆ ಬಿದ್ದ ಡೈನೋಸರ್ ಸತ್ತು ಹೋಯಿತು. ಆನೆ ಸೊಂಡಿಲಲ್ಲಿ ನನ್ನನ್ನು ಎತ್ತಿ..ಮೇಲೆ ಕೂತುಕೊಳಿಸಿ, ಮನೆಯ ಅಂಗಳಕ್ಕೆ ಕಕ್ಕೊಂಡು ಹೋಯಿತು. ಆಮೇಲೆ ನಾನು ಇಳ್ದೆ...                  ಪುಣ್ಯಕೋಟಿ ನ್ಯೂ ವರ್ಷನ್
     ಒಮ್ಮೆ ಬೆಕ್ಕು ಕಾಡಲ್ಲಿ ಹೋಗ್ತಾ ಇತ್ತು.. ಆಗ ಅಲ್ಲಿಗೆ ನಾಯಿಬಂತು. ಬೆಕ್ಕನ್ನು ನೋಡಿ.. ನಾನೀಗಲೇ ನಿನ್ನನ್ನು ತಿಂತೆನೆ ಅಂತೇಳಿತು. ಆಗ ಬೆಕ್ಕು ನಾನು ಬೇಗ ಮನೆಗೆ ಹೋಗಿ ಬರ್ತೆನೆ.. ಮನೆಲಿ ಬಾಬ ಉಂಟು ಅಂತೇಳಿ ಹೋಯಿತು. ನಾಯಿ ಮೇಲಿಂದ ಬಿದ್ದು ಸತ್ತೋಯ್ತು..                 ನಾನು ನೀನು ಸೇಮ್ ಸೇಮ್
 ಜೀಬಾ ಒಮ್ಮೆ ಹೋಗ್ತಾ ಇತ್ತು. ಆಗ ಎದುರಿಂದ ಅಂಬ ಬಂತು. ಅದನ್ನು ಜೀಬಾ ನೋಡಿತು. ಜೀಬಾ ದೊಡ್ಡಕಣ್ಣು ಮಾಡಿ ಅಂಬವನ್ನು ಹೆದರಿಸಿತು. ಆಗ ಅಂಬ ಹೇಳಿತು.. ನಾನು ನೀನು ಸೇಮ್ ಸೇಮ್ ಅಂತ ಹೇಳಿ ಎರಡೂ ಪ್ರೆಂಡ್ ಆಯಿತು.                       ಪಿಶ್ ನೀರಿಗೆ ಬಿತ್ತು
          ಜೀಬಾ ನೀರಿನತ್ರ ಹೋಗಿ ನೀರು ಕುಡಿತಾ ಇತ್ತು.   ಆಗ ಒಂದು ಪಿಶ್ ಜೀಬಾ ದ ಬಾಯಿಗೆ ಹೋಯ್ತು.. ಬಾಯಲ್ಲಿ ಎಂತ ಉಂಟು..ಎಂತ ಉಂಟು ಅಂತ ಜೀಬಾ ಹೇಳುವಾಗ ಅಲ್ಲಿಗೆ ಆನೆ ಬಂತು. ಜೀಬಾ ಬಾಯಲ್ಲಿ ಎಂತ ಉಂಟು ಅಂತ ನೋಡಿತು. ನೋಡುವಾಗ ಎಂತಸ ಕಾಣ್ಲಿಲ್ಲ. ಮತ್ತೆ ಆನೆ ಕಾಡಿಗೆ ಹೋಗಿ ಸೊಪ್ಪು ತಂದಿತು. ಜೀಬಾದ ಬಾಯಿಗೆ ಸೊಪ್ಪು ಹಾಕಿದಾಗ ಪಿಶ್ ಹೊರಗೆ ಹಾರಿ ನೀರಿಗೆ ಬಿತ್ತು. ಮತ್ತೆ ಮಣ್ಣಿನಡಿಗೆ ಹೋಯಿತು.
---------------                          ಇರುವೆ ಚಟ್ನಿ
        ಒಂದು ಕಾಡಿತ್ತು.. ಅಲ್ಲಿ ಮೊಸಳೆ ಇತ್ತು... ಆ ಕಾಡಲ್ಲಿ ಜೀಬಾ ಇತ್ತಂತೆ.. ಅದರ ಕಾಲತ್ರ ಇರುವೆ ಇತ್ತಂತೆ.. ಜೀಬಾ ಮೆಟ್ಟಿ ಪಚಕ್ ಆಗಿ ಇರುವೆ ಚಟ್ನಿ ಆಯ್ತು. ಆಗ ಮೊಸಳೆ ಹೋಯ್ತು.. ಅಷ್ಟೆ.


                          ಮೊಸಳೆಗೆ ಡಿಶುಂ
     ಆನೆ ನೀರು ಕುಡಿಕ್ಕೆ ಬರ್ತಾ ಇತ್ತು.. ಆಗ ಮೊಸಳೆ ಅದನ್ನು ನೋಡಿತು. ನಾನು ನಿನ್ನನು ತಿನ್ತೇನೆ ಅಂತೇಳಿತು. ಆನೆ ನೀರು ಕುಡಿವಾಗ ಮೊಸಳೆ ಜಂಪ್ ಮಾಡಿ ಬಂತು. ಅಷ್ಟೊತ್ತಿಗೆ ಮೂಗಲ್ಲಿ ಕೊಂಬು ಇರುವ ಮುಳ್ಳಂದಿ ಬಂದು ಮೊಸಳೆಗೆ ಡಿಶುಂ ಮಾಡಿತು. ಆಗ ಮೊಸಳೆ ನೀರಿಗೆ ಬಿತ್ತು. ಆನೆ ವಾಪಾಸ್ ಕಾಡಿಗೆ ಹೋಯ್ತು..


             
                     ಬಂದದ್ದು ಮಾತ್ರ...
            ಆನೆ ಮತ್ತೆ ಮುಳ್ಳಂದಿ ಇತ್ತಂತೆ. ಆಗ ಹಿಂದಿಂದ ಜೋರು ಸೌಂಡ್‌ ಆಯ್ತಂತೆ. ನೋಡುವಾಗ ಅಲ್ಲಿ ದೊಡ್ಡ ಹುಲಿ ಬಂದಿತ್ತಂತೆ. ಮತ್ತೆ ಜೀಬಾ ಬಂತು..‌ಅಷ್ಟೆ..ಅನುಜ್ 3 ವರ್ಷ 7 ತಿಂಗಳು
S/O ಮೌನೇಶ ವಿಶ್ವಕರ್ಮ ಮತ್ತು ಜಯಶ್ರೀ ಮೌನೇಶ್
ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ

ಚಿತ್ರಗಳು : ನಿನಾದ್  ಕೈರಂಗಳAds on article

Advertise in articles 1

advertising articles 2

Advertise under the article