-->
ಪಕ್ಷಿಗಳು - ಲೇಖನ

ಪಕ್ಷಿಗಳು - ಲೇಖನ

ಅನನ್ಯ 10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


                             ಪಕ್ಷಿಗಳು
*******************************************
      ಪಕ್ಷಿಗಳು ಗಾತ್ರದಲ್ಲಿ ಎಷ್ಟೇ ಚಿಕ್ಕದಾಗಿರಲಿ, ಆದರೆ ಅವುಗಳ ಸ್ವಭಾವ(ಗುಣ) ದೊಡ್ಡದು. ಏಕೆಂದರೆ ಅವುಗಳಿಗೆ ಮನುಷ್ಯರ ತರ ಯಾವುದೇ ಭೇದ-ಭಾವ ಇಲ್ಲ, ಮೇಲು-ಕೀಳು ಅನ್ನೋದು ಗೊತ್ತೇ ಇಲ್ಲ. ಪಕ್ಷಿಗಳಿಗೆ ಈ ಜಗತ್ತಿನಲ್ಲಿ ಏನು ಆಗುತ್ತಿದೆ ಅನ್ನೋದು, ಈ ಸಮಾಜದಲ್ಲಿ ಯಾವೆಲ್ಲ ರೀತಿಯ ಘಟನೆಗಳು ನಡೆಯುತ್ತಿವೆ ಅನ್ನೋದು ಅವುಗಳಿಗೆ ತಿಳಿದೇ ಇಲ್ಲ, ಅವುಗಳಿಗೆ ಅದರ ಬಗ್ಗೆ ಯೋಚನೆಯೇ ಇಲ್ಲ. ಪಕ್ಷಿಗಳು ಅದರಷ್ಟಕ್ಕೆ ಇರುತ್ತದೆ. ಅಷ್ಟು ಮುಗ್ದತೆ ಪಕ್ಷಿಗಳಲ್ಲಿ ಇದೆ. 
      ಎಲ್ಲರೂ ಹೇಳ್ತಾರೆ ನಾನು ಫ್ರೀ ಬರ್ಡ್ ತರ ಇರಬೇಕು ಅಂತ.... ಆದರೆ ಜೀವನದಲ್ಲಿ ಕಷ್ಟಗಳು ಬಾರದೆ ಇರುತ್ತದೆಯೇ? ನಾವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪಕ್ಷಿಗಳು ಕೂಡ ಕಷ್ಟಗಳನ್ನು ಅನುಭವಿಸಿರಬಹುದು ಅಲ್ವಾ.. ಅವುಗಳಿಗೆ ಹಾರುವುದು, ತನಗೆ ಎಷ್ಟು ಬೇಕು ಅಷ್ಟು ಆಹಾರವನ್ನು ಸಂಗ್ರಹಿಸುವುದು, ತನ್ನ ಇಂಪಾದ ದ್ವನಿಯಿಂದ ಕೂಗುವುದು ಇವೆಲ್ಲ ಪಕ್ಷಿಗಳ ಗುಣಗಳು.. ಮನುಷ್ಯರು ಪಕ್ಷಿಗಳ ಹತ್ತಿರಕ್ಕೆ ಬಂದರೆ ಸಾಕು ಅವುಗಳು ಹೆದರಿ ಹಾರುತ್ತದೆ. ಎಷ್ಟೇ ಮಳೆ, ಗಾಳಿ ಬರಲಿ ಪಕ್ಷಿಗಳು ಅದಕ್ಕೆ ಅಂತಾನೆ ಸುರಕ್ಷಿತವಾದ ಸ್ಥಳ ಮಾಡಿಕೊಂಡು ಇರುತ್ತದೆ. ಅದಕ್ಕೆ ನಮ್ಮಂತೆ ಕೈ ಕಾಲುಗಳು ಇಲ್ಲ. ತನ್ನ ಪುಟ್ಟ ಕೊಕ್ಕಿನಿಂದ ಅದರ ಗೂಡಿಗೆ ಯಾವ ಸಾಮಗ್ರಿಗಳು ಬೇಕು ಅದನ್ನು ಸಂಗ್ರಹಿಸಿ ಒಂದು ಸುಂದರವಾದ ಗೂಡು ನಿರ್ಮಾಣ ಮಾಡುತ್ತದೆ. ನಾವು ನಿಜವಾಗಿಯೂ ಪಕ್ಷಿಗಳಿಂದ ಕಲಿಯುವುದು ತುಂಬಾನೇ ಇದೆ. ನಿಜವಾಗಿ ಹೇಳುವುದಾದರೆ ಪರಿಸರದಲ್ಲಿ ಹಕ್ಕಿಗಳ ಕಲರವ, ಹಕ್ಕಿಗಳ ಚಿಲಿಪಲಿ ಇದ್ದರೆ ಮಾತ್ರ ಆ ಪರಿಸಕ್ಕೊಂದು 
ಕಲೆ - ಬೆಲೆ..

...............................ಅನನ್ಯ 10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

*********************************************      

Ads on article

Advertise in articles 1

advertising articles 2

Advertise under the article