-->
ಹಕ್ಕಿ ಕಥೆ - 3

ಹಕ್ಕಿ ಕಥೆ - 3

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


                            ಹಕ್ಕಿ ಕಥೆ - 3

                DOVE ಅಂದ ತಕ್ಷಣ ಹೆಚ್ಚಿನ ಜನ ನೆನಪಿಸಿಕೊಳ್ಳೋದು ಟಿವಿಯಲ್ಲಿ ಬರುವ ಸಾಬೂನಿನ ಜಾಹೀರಾತು. ಸಾಮಾನ್ಯವಾಗಿ ಮನೆಗಳಲ್ಲಿ ಸಾಕಲಾಗುವ ಬಳೀಬಣ್ಣದ ಪಾರಿವಾಳವನ್ನೇ ಹೆಚ್ಚಿನ ಜನ DOVE ಅಂತ ಕರೀತಾರೆ. 
          ಆದರೆ DOVE ಅನ್ನುವ ಪ್ರಬೇಧದ ಹಕ್ಕಿಗಳು ಪಾರಿವಾಳಕ್ಕಿಂತ ಚಿಕ್ಕವು. ದೇಹದ ಗಾತ್ರಕ್ಕೆ ಹೋಲಿಸಿದರೆ ಬಾಲ ಸ್ವಲ್ಪ ಉದ್ದ. ಗಣಪತಿಯ ಹಾಗೆ ಕಾಣುವ ದೊಡ್ಡ ಹೊಟ್ಟೆ, ಅದನ್ನು ಹೊರಲಿಕ್ಕೆ ತುಸು ಗಿಡ್ಡವೇ ಅನ್ನಬಹುದಾದ ಕಾಲುಗಳು, ಪುಟಾಣಿ ತಲೆ. ಹೊಟ್ಟೆಯನ್ನು ಎಳೆದುಕೊಂಡು ನಡೆಯುವ ವಿಶಿಷ್ಟ ನಡಿಗೆ. ನೆಲದಲ್ಲಿ ನಡೆದಾಡುತ್ತಾ ಕಾಳು ಹೆಕ್ಕಲು ಕಳ್ಳನಂತೆ ಬರುವ ರೀತಿ, ಹತ್ತಿರ ಹೋದರೆ ಸಾಕು ಹಿಡಿದೇಬಿಡುವರು ಎಂಬಂತೆ ದಡಬಡಾಯಿಸಿ ರೆಕ್ಕೆ ಬಡಿದು ಹಾರಿಬಿಡುವ ರೀತಿ ನೋಡಿಯೇ ಮಲೆನಾಡಿಗರು ಇದಕ್ಕೆ ಚೋರ ಹಕ್ಕಿ ಅಂತ ಹೆಸರು ಇಟ್ಟಿರಬೇಕು. ನಮ್ಮ ತುಳುನಾಡಿನಲ್ಲಿ ಈ ಹಕ್ಕಿಗೆ ‘ಪುದ’ ಅಂತ ಕರೀತಾರೆ. 
         ಶಾಲಾಮಕ್ಕಳ ಬಿಸಿಊಟಕ್ಕೂ ಈ ಹಕ್ಕಿಗೂ ಅವಿನಾಭಾವ ಸಂಬಂಧ. ಮಧ್ಯಾಹ್ನದ ಊಟಮುಗಿಸಿ ಮಕ್ಕಳು ಕೈ ತೊಳೆಯುವಲ್ಲಿ ಬಿದ್ದಿರಬಹುದಾದ ಅನ್ನದ ಅಗುಳನ್ನು ಹೆಕ್ಕಿತಿನ್ನಲು ಪ್ರತಿದಿನ ಬಂದೇ ಬರುತ್ತದೆ. ಆದರೆ ಮಕ್ಕಳೆಲ್ಲ ತರಗತಿಗೆ ಹೋದ ನಂತರ ಮಾತ್ರ. ಅಪಾಯವಿಲ್ಲ ಎಂದಾದರೆ ಮನೆಯ ಅಂಗಳದಲ್ಲಿ
ಓಡಾಡಿಕೊಂಡಿರುತ್ತದೆ. ಹೂ.. ಹೂ.. ಹೂ.. ಹುರ್ರ್ ಹುರ್ರ್ ಹುರ್ರ್ ಅಂತ ಕೂಗುವ ಈ ಕಪೋತ ನಿಮ್ಮ ಮನೆ ಅಂಗಳದಲ್ಲೂ ಇರಬಹುದು..
ಕನ್ನಡ ಹೆಸರು : ಚೋರೆ ಹಕ್ಕಿ, ಚುಕ್ಕೆ ಕಪೋತ
English name : Spotted Dove 
Scientific name : Stigmatopelia chinensis

....................................ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

*******************************************


Ads on article

Advertise in articles 1

advertising articles 2

Advertise under the article