ಗಿಡವ ನೆಡೋಣ - ಕವನ
Wednesday, June 30, 2021
Edit
ವಿಖ್ಯಾತಿ ಬೆಜ್ಜಂಗಳ, 8 ನೇ ತರಗತಿ
ಸುದಾನ ವಸತಿಯುತ ಶಾಲೆ ಪುತ್ತೂರು.
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡವ ನೆಡೋಣ - ಕವನ
ಗಿಡವ ನೆಟ್ಟು ಮರವ ಬೆಳೆಸಿ
ಮಾಡಿದೆವು ಹಸಿರು ನಾಡನು...
ಬಂದವು ಹಕ್ಕಿಗಳು ಚೀಂವ್ ಗುಟ್ಟುತಾ
ಗೂಡು ಕಟ್ಟಿ ಮರಿಯ ಮಾಡಿ ಸಂತಸವ ಪಟ್ಟವು..
ಮರವ ಕಡಿದು ನಾಶ ಮಾಡಿ
ಕಟ್ಟಿದೆವು ಕಟ್ಟಡವ...
ನೋವು ತಡೆಯಲಾಗದೆ
ತೋರಿತು ಪ್ರಕೃತಿ ವಿಕೋಪವ...!!!
ರಭಸದಿಂದ ಬಂದ ಮಳೆಯು
ಭೂಕುಸಿತವನು ಮಾಡಿತು
ಕೊಚ್ಚಿ ಹೋಯಿತು ಕಟ್ಟಡವೆಲ್ಲ
ಮಣ್ಣಾಯಿತು ಮಾಡಿದ್ದೆಲ್ಲಾ...!!!
ನೆಡಬೇಕು ಗಿಡಗಳನು
ಬೆಳೆಯಬೇಕು ಕಾಡು....
ಉಳಿಯಬೇಕು ಭೂಮಿ
ಸಲಹಬೇಕು ಪ್ರಕೃತಿ...!!!
............ವಿಖ್ಯಾತಿ ಬೆಜ್ಜಂಗಳ, 8 ನೇ ತರಗತಿ
ಸುದಾನ ವಸತಿಯುತ ಶಾಲೆ ಪುತ್ತೂರು.
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ