ಹೆಣ್ಣುಮಗಳು - ಕಥೆ
Friday, June 18, 2021
Edit
ಪಲ್ಲವಿ ಶೆಟ್ಟಿಗಾರ್ 8 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಗಂಡ ಮತ್ತು ಹೆಂಡತಿ ವಾಸವಾಗಿದ್ದರು. ಅವರಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇದ್ದರು. ಗಂಡು ಮಗು 3ನೇ ತರಗತಿಯಲ್ಲಿ ಓದುತ್ತಿದ್ದ ಆದರೆ ಹೆಣ್ಣು ಮಗಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಪಾಪ ಆ ಹೆಣ್ಣು ಮಗುವಿಗೆ ಓದಲು ತುಂಬಾ ಆಸೆ ಇತ್ತು. ಓದಿ ಏನಾದರೂ ದೊಡ್ಡ ಸಾಧನೆ ಮಾಡಬೇಕೆಂದು ಅವಳ ಕನಸಾಗಿತ್ತು. ಆ ಹೆಣ್ಣು ಮಗು ತನ್ನ ಅಣ್ಣನ ಪುಸ್ತಕ ಹಿಡಿದು ಓದುತಿತ್ತು. ಆದರೆ ಅವಳ ತಂದೆ ಕೈಯಲ್ಲಿದ್ದ ಪುಸ್ತಕವನ್ನು ಕಿತ್ತು ಮನೆಗೆಲಸ ಮಾಡು ಎಂದು ಹಿಂಸೆ ಮಾಡುತ್ತಿದ್ದರು. ನೀನು ಓದಿ ಯಾವ ಸಾಧನೆ ಮಾಡಲಿದೆ ಎಂದು ನಿಂದಿಸುತ್ತಾ ..... ಇವೆಲ್ಲಾ ಗಂಡು ಮಕ್ಕಳಿಗೆ ಮಾತ್ರ ಸಾಧ್ಯ ...... ಎಂದು ತಂದೆ ಹೇಳುತ್ತಾ ಇದ್ದರು.
ತಂದೆ ಮಗನಿಗೆ ಊಟವನ್ನು ಮಾಡಿಸುತ್ತಿದ್ದರು. ಆದರೆ ಹುಡುಗಿಗೆ ಮಾತ್ರ ತನ್ನ ತಂದೆಯ ಪ್ರೀತಿ ಸಿಗುತ್ತಿರಲಿಲ್ಲ . ಯಾವಾಗಲೂ ಪ್ರತಿ ವಿಷಯದಲ್ಲಿ ಅವಳಿಗೆ ದುಃಖ ನೀಡುತ್ತಾ ಇದ್ದನು. ಆ ಹೆಣ್ಣು ಮಗು "ತಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಅಣ್ಣನಿಗೆ ಮಾತ್ರ ಓದಿಸುತ್ತಿದ್ದಾರೆ ನನಗೆ ಯಾಕೆ ವಿಧ್ಯಾಭ್ಯಾಸ ಕೊಡುತ್ತಿಲ್ಲ. ನನಗೆ ತಂದೆ ಪ್ರೀತಿ ಸಹ ಸಿಗುತ್ತಿಲ್ಲ" ಎಂದು ಪ್ರತಿ ದಿನ ದುಃಖಿಸುತ್ತಿದ್ದಳು.
ಒಂದು ದಿನ ತನ್ನ ತಂದೆ ಅನಾರೋಗ್ಯದಿಂದ ಮಂಚದ ಮೇಲೆ ಮಲಗಿದ್ದರು. ತಂದೆ ಮಗನಲ್ಲಿ ಒಂದು ಲೋಟ ನೀರು ಕೇಳಿದರು . ಆದರೆ ಮಗ "ಬೇಕಾದರೆ ನೀವೇ ತೆಗೆದುಕೂಳ್ಳಿ" ಎಂದು ಹೇಳಿದ . ಆದರೆ ಆ ಹೆಣ್ಣು ಮಗಳು ಓಡಿ ಹೋಗಿ ಅಡುಗೆ ಕೋಣೆಯಿಂದ ನೀರು ಬೇಗನೆ ತಂದು ಕೊಟ್ಟಳು. ಇದನ್ನು ಕಂಡ ತಂದೆ ಬಹಳ ಬೇಸರ ಪಟ್ಟರು. ತನ್ನ ತಂದೆಗೆ ತಾನು ಮಾಡಿದ ಎಲ್ಲಾ ತಪ್ಪು ಅರಿವಾಯಿತು. ತನ್ನ ಹೆಣ್ಣು ಮಗಳನ್ನು ಓದಿಸಿದನು. ಅವಳನ್ನು ದೊಡ್ಡ ವ್ಯಕ್ತಿಯಾಗಿ ಮಾಡಿದನು ಹಾಗೂ ತನ್ನ ಪ್ರೀತಿ ಸಹ ನೀಡಿದನು .
ಹುಟ್ಟಿದ ಹೆಣ್ಣು ಮಗುವನ್ನು ಕಸದ ಬುಟ್ಟಿಯಲ್ಲಿ ಬಿಸಾಡುವುದು ಅಥವಾ ಆಸ್ಪತ್ರೆಯಲ್ಲಿ ಬಿಟ್ಟು ಬರುವುದನ್ನು ಕಾಣುತ್ತೇವೆ. ಹೆಣ್ಣು ನಮ್ಮ ತಾಯಿ ಎಂಬುದನ್ನು ಮರೆಯಬಾರದು.
........................................
ಪಲ್ಲವಿ ಶೆಟ್ಟಿಗಾರ್ 8 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ