-->
ಗಿಡ , ಮರಗಳ ಒಡನಾಟ - ಲೇಖನ

ಗಿಡ , ಮರಗಳ ಒಡನಾಟ - ಲೇಖನ

ದಿನೇಶ್ ಹೊಳ್ಳ
ಖ್ಯಾತ ಕಲಾವಿದರು ಸಾಹಿತಿ ಮತ್ತು ಪರಿಸರ ತಜ್ಞರು
ಮಂಗಳೂರು


          ಗಿಡ, ಮರಗಳ ಒಡನಾಟ

     ಕಾಡು ಕೂಗುತಿದೆ...ನಾಡು ಬೀಗುತಿದೆ... ಅಳುವ ಅಡವಿಯ ವೇದನೆಗೆ ಕಿವಿಯಾಗುವವರಿಲ್ಲ...ಇದು ಇತ್ತೀಚೆಗೆ ಆಗುತ್ತಿರುವ ಪ್ರಾಕೃತಿಕ ದುರಂತಗಳಿಗೆ ಮೂಲ ಕಾರಣ. ಮನೆಯಲ್ಲಿ ತಾಯಿ ಅಳುತ್ತಿದ್ದರೆ ಆ ಮನೆ ಬಿಡಿ ಆ ಕುಟುಂಬವೇ ನೆಮ್ಮದಿಯಿಂದ ಇರುವುದಿಲ್ಲ. ಅದೇ ರೀತಿ ನಮ್ಮೆಲ್ಲರ ಬದುಕಿನ ಚೇತನಾ ಶಕ್ತಿಯೇ ಆಗಿರುವ ಪ್ರಕೃತಿ ತಾಯಿ ಅಳುತ್ತಿದ್ದರೆ ಈ ಇಳೆಯೆ ನೆಮ್ಮದಿಯಿಂದ ಇರಲು ಸಾದ್ಯವಿಲ್ಲ. 

  ವಿಶ್ವ ಪರಿಸರ ದಿನಾಚರಣೆಯಂದು ಮಾತ್ರ ಪರಿಸರದ ನೆನಪಾಗುವುದು ಆಮೇಲೆ ಪರಿಸರವನ್ನು ಮರೆತು ಬಿಡುವುದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಜೂನ್ 5 ಮಾತ್ರ ಪರಿಸರ ದಿನಾಚರಣೆ ಅಲ್ಲಾ, ವರ್ಷ ಪೂರ್ತಿ ಪರಿಸರ ದಿನಾಚರಣೆ ಆದರೆ ಮಾತ್ರ ಪ್ರಕೃತಿಗೆ ನಾವು ಕೊಡುವ ವಿಶೇಷ ಕೊಡುಗೆ ಆಗಬಲ್ಲದು. ಕೇವಲ ಗಿಡ ನೀಡುವ ಕಾಯ ಆಗಬಾರದು, ನೆಟ್ಟ ಗಿಡಗಳನ್ನು ಸಾಕಿ ಪೋಷಿಸುವ ಕಾರ್ಯಗಳಾಗಬೇಕು. ನಮ್ಮ ನಮ್ಮ ಮನೆ, ಶಾಲೆಯ ಸುತ್ತಮುತ್ತ ಒಂದಷ್ಟು ಗಿಡಗಳನ್ನು ನೆಟ್ಟು ಅವುಗಳ ಜೊತೆ ಪ್ರೀತಿ, ಸ್ನೇಹ, ಒಡನಾಟ ಇಟ್ಟುಕೊಂಡು ಮುಂದುವರಿದಲ್ಲಿ ಪರಿಸರ ದಿನಾಚರಣೆಗೆ ಒಂದು ಅರ್ಥ ಬಂದೀತು. ಗಿಡ ನೆಡುವುದು ಮಾತ್ರವಲ್ಲ, ಪ್ರತಿ ದಿನವೂ ನೆಟ್ಟ ಗಿಡ ಗಳೊಂದಿಗೆ ಮಾತನಾಡುವ ಪ್ರಕ್ರಿಯೆ ಬೆಳೆಯಬೇಕು. ನಾವು ನೆಟ್ಟ ಗಿಡಗಳು ಪ್ರಕೃತಿಯ ವಿವಿಧ ಆಯಾಮಗಳಲ್ಲಿ ಯಾವ ರೀತಿಯ ಕಾರ್ಯ ನಿರ್ವಹಿಸುತ್ತವೆ, ಯಾವ ರೀತಿ ಅಂತರ್ಜಲ ಹೆಚ್ಚಿಸುವಲ್ಲಿ ಎಂಬುದರ ಬಗ್ಗೆ, ಮತ್ತು ಸುತ್ತ ಮುತ್ತಲಿನ ಪ್ರಾಣಿ, ಪಕ್ಷಿಗಳಿಗೆ ಯಾವ ರೀತಿಯ ಉಪಯೋಗ ಆಗುತ್ತದೆ ಎಂಬುದರ ಬಗ್ಗೆ ಕೂಡಾ ಅರಿತುಕೊಳ್ಳಬೇಕು. ಒಂದು ಗಿಡ ಅಥವಾ ಮರ ಈ ಪರಿಸರದಲ್ಲಿ ನಮ್ಮ ಬದುಕಿಗೆ ಯಾವ ಉಪಯುಕ್ತತೆಯನ್ನು ಪಡೆದುಕೊಂಡಿರುತ್ತೇವೆ ಅದೇ ರೀತಿ ನಮ್ಮ ಸುತ್ತ ಮುತ್ತ ಇರುವ ಮರ, ಗಿಡಗಳ ಸಂಖ್ಯೆ ಕಡಿಮೆ ಆದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎಂಬ ಪ್ರಮುಖ ವಿಚಾರದ ಆಳವನ್ನು ಕಲಿತುಕೊಳ್ಳಬೇಕು. ಇಂದು ಪಶ್ಚಿಮ ಘಟ್ಟದಲ್ಲಿ ನೀರನ್ನು ಹೀರಿಕೊಳ್ಳುವ ಮರ, ಗಿಡಗಳ ಮತ್ತು ಹುಲ್ಲುಗಾವಲಿನ ಮೇಲೆ ಮಾನವ ದೌರ್ಜನ್ಯ ಹೆಚ್ಚಾಗುತ್ತಿರುವ ಕಾರಣ ಪ್ರಾಕೃತಿಕ ದುರಂತಗಳು ಹೆಚ್ಚಾಗುತ್ತಿವೆ. ಮರ, ಗಿಡಗಳು ಈ ಭೂಮಿಯ ಪ್ರತ್ಯಕ್ಷ ದೇವರು ಎಂಬ ಉದ್ದೇಶ ಮತ್ತು ಸಿದ್ಧಾಂತಗಳನ್ನು ಇಟ್ಟುಕೊಂಡು ಗಿಡ ನೆಟ್ಟಲ್ಲಿ ನಮ್ಮ ಪ್ರಕೃತಿ ಮಾತೇ ಮತ್ತೆ ನಗು ಬೀರಿ ನೆಮ್ಮದಿ ಕಾಣಬಹುದು. ನಿಸರ್ಗ ಮಾತೆಯ ಸಂಕಟವನ್ನು ಕಡಿದು ಸಂತಸದ ವಾತಾವರಣವನ್ನು ನಿರ್ಮಾಣ ಮಾಡೋಣ. ಸದಾ ಅನುದಿನವೂ ಪರಿಸರ ದಿನಾಚರಣೆ ಆಗುವಂತೆ ನಮ್ಮೆಲ್ಲರ ಕರ್ತವ್ಯ, ಕಾರ್ಯ ನಿರ್ವಹಿಸೋಣ.

..................ದಿನೇಶ್ ಹೊಳ್ಳ
ಖ್ಯಾತ ಕಲಾವಿದ ಸಾಹಿತಿ ಮತ್ತು ಪರಿಸರ ತಜ್ಞರು
ಮಂಗಳೂರು

Ads on article

Advertise in articles 1

advertising articles 2

Advertise under the article