ಧೈರ್ಯದ - ಬಡತನ (ಕವನ)
Sunday, June 13, 2021
Edit
ಬಿಂದುಶ್ರೀ 10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಧೈರ್ಯದ - ಬಡತನ (ಕವನ)
ಬಾಡಿ ಸೊರಗಿದ ವದನ
ತೇಜಸ್ಸು ಕಳೆದುಕೊಂಡ ನಯನ
ಮುರುಕಲು ಗುಡಿಸಲೊಳು ಜೀವನ.... ।।
ಒಲೆಯಲ್ಲಿ ಉರಿಯುತ್ತಿರುವ ಬೆಂಕಿ ಹಾಗೆ
ಮನಸ್ಸಲ್ಲಿ ಕುದಿಯುತ್ತಿದೆ ಬಡತನದ ಬೇಗೆ
ಪರಿಸ್ಥಿತಿ ಕೈ ಮೀರುತ್ತಾ ಹೋಗುತ್ತಿದೆ
ದಿನಕಳೆದ ಹಾಗೆ ...।।
ತಪ್ಪಿಲ್ಲ ಗಂಡನ ಕುಡಿತದ ಚಟ
ರಾತ್ರಿ ಮನೆಗೆ ಬಂದು ಅವನದ್ದೇ ಆಟ
ತಡೆಯಲಾಗದು ಅವನ ವಿಪರೀತ ಕಾಟ....।।
ಎದುರಿಸಲಾಗದೇ ಈ ಎಲ್ಲಾ ಸಮಸ್ಯೆಗಳನ್ನು
ಕಳೆದುಕೊಂಡು ತನ್ನ ಧೈರ್ಯ ಶಕ್ತಿಯನ್ನು
ಹೋದಳಾಕೆ ನೇಣಿಗೆ ಶರಣು..........।।
..............ಬಿಂದುಶ್ರೀ 10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ