ಹಸಿರು ಯೋಧರು - 19
Monday, June 14, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಶಾರದ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರ ಕೈರಂಗಳ. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ ಗಿಡ
ಒಂದನೆಯ ಶತಮಾನದಿಂದಲೂ ಒಂದು ಗಿಡ ಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ. ಇದು ನೀರು ಲಭ್ಯವಿಲ್ಲದ ಸಮಯದಲ್ಲಿ, ಎಲೆಯಲ್ಲಿರುವ ಕ್ಲೋರೊಫಿಲ್ ಮಡಿದು ಕೆಂಪು ಬಣ್ಣದ ಪದಾರ್ಥ ಹುಟ್ಟುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಜೀವನದ ನೆಮ್ಮದಿ ಮತ್ತು ಸಂತೋಷ ಹೆಚ್ಚಿಸಲು ಲೋಳೆಸರ (ಆಲೋವೆರ) ವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಲು ಸೂಚಿಸುತ್ತದೆ. ಅರೋಗ್ಯದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಹಲವಾರು ಸಸ್ಯ ಅದ್ಬುತವಾಗಿ ಆರೈಕೆ ನೀಡುತ್ತದೆ. ಲೋಳೆ ಸರ ಅನೇಕ ವಿಧದ ಔಷಧಿಯ ಗುಣಲಕ್ಷಣಗಳನ್ನು ಹೊಂದಿದೆ. ಚರ್ಮದ ಆರೈಕೆಗೆ ಬೇಕಾದ ಉತ್ತಮ ಪೋಷಕಾಂಶಗಳನ್ನೂ ಒದಗಿಸುತ್ತದೆ.
ಪರಿಜ್ಞಾನ ವಿದ್ಯಾಲಯ ಸೋಮೇಶ್ವರ, ಕೋಟೆಕಾರು
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೇವಿನ ಗಿಡ
ಬೇವಿನಮರದ ಅಂಗಗಳಾದ ಎಲೆ , ತೊಗಟೆ, ಹೂ, ಹಣ್ಣು, ಕಡ್ಡಿ, ಬೀಜ, ಎಣ್ಣೆ ಹಾಗು ಬೇರುಗಳು ಔಷಧೀಯ ಗುಣಗಳನ್ನು ಮೈದುಂಬಿಕೊಂಡಿರುತ್ತವೆ. ವೈದ್ಯಕೀಯ ಲೋಕಕ್ಕೆ ಬೇವು ಒಂದು ಅದ್ಭುತ ಮರ. ಬೇವಿನಮರದಲ್ಲಿ ಸುಮಾರು 135 ಕ್ಕೂ ಹೆಚ್ಚು ರೋಗನಿವಾರಕ ಗುಣಗಳಿವೆ ಎಂದು ಇತ್ತೀಚಿನ ಸಂಶೋಧನೆ ತಿಳಿಸುತ್ತದೆ. ಬೇವಿನ ಮರದ ಉತ್ಪನಗಳನ್ನು ಪಶುವೈದ್ಯ. ಚಿಕಿತ್ಸೆಯಲ್ಲೂ ಬಳಸಲಾಗುತ್ತದೆ. ಇಷ್ಟೊಂದು ವೈವಿದ್ಯತೆಯನ್ನು ಮೈಗೂಡಿಸಿಕೊಂಡಿರುವ ಬೇವಿನಮರ ನಮ್ಮ. ಅಂಗಳದಲ್ಲಿ ಇದ್ದರೆ ಎಷ್ಟು ಚಂದ. ಮಾತ್ರವಲ್ಲ ನಾವು ವೈದ್ಯರಿಂದ ಬಹು ದೂರದಲ್ಲಿ ಹಾಯಾಗಿರಬಹುದು.
'
ಪ್ರಗತಿ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್
ಕುಕ್ಕಾಜೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ ತುಳಸಿ :
ಅಯುರ್ವೇದ ಔಷಧಗಳಲ್ಲಿ ತುಳಸಿಯನ್ನು ಹೆಚ್ಚಾಗಿ ಕೆಮ್ಮು, ನೆಗಡಿ, ಕಫ, ದಮ್ಮು ಮುಂತಾದ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾರೆ. ಅಷ್ಟೇ ಅಲ್ಲದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತುಳಸಿಯನ್ನು ಮನೆಯ ಸುತ್ತಮುತ್ತಲು ನೆಟ್ಟು ಬೆಳಸುದರಿಂದ ನಮಗೆ ಪರಿಶುದ್ದ ಗಾಳಿಯು ಸಿಗುತ್ತದೆ ಮತ್ತು ನಮ್ಮ ಅರೋಗ್ಯವೂ ವೃ ವೃದ್ಧಿಸುದು. ತುಳಸಿಯನ್ನು ಚಿಕ್ಕ ಮಕ್ಕಳಿಗೆ ಭಾಲಾಗ್ರಹಾ ಪೀಡೆ ನಿವಾರಕವಾಗಿ ತುಳಸಿಯನ್ನು ಉಪಯೋಗಿಸುತ್ತಾರೆ.
ಎಸ್. ವಿ. ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ನರಿಕೊಂಬು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದೊಡ್ಡಪತ್ರೆ
ಸಂತ ಅಂತೋಣಿ ಇಂಗ್ಲಿಷ್ ಮೀಡಿಯಂ ಶಾಲೆ ಅಲ್ಲಿಪಾದೆ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಹಲಸಿನ ಹಣ್ಣು ಸಂಸ್ಕೃತದಲ್ಲಿ 'ಪನಸ' ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್, ಹೆಟಿರೋಪೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ಣು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಿಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್, ಕ್ಯಾಲಿಷಿಯಂ, ಪೊಟಾಶಿಯಮ್ ಅಂಶಗಳಿವೆ.
ಎಸ್ .ವಿ . ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದಾಸವಾಳದ ಗಿಡ
ಎಸ್ .ವಿ . ಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಶೇಣಿ ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ
ಕಾಸರಗೋಡು ಜಿಲ್ಲೆ
ಗಿಡದ ಹೆಸರು : ಕರಿಬೇವು
ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ
ಕಾಸರಗೋಡು ಜಿಲ್ಲೆ
ಗಿಡದ ಹೆಸರು : ಮೂಸಂಬಿ ಗಿಡ
ಇದು ಒಂದು ಪೌಷ್ಟಿಕ ಹಣ್ಣಿನ ಗಿಡ. ಮುಸುಂಬಿ ಹಣ್ಣು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.ಬೇಸಿಗೆ ಕಾಲದಲ್ಲಿ ಈ ಹಣ್ಣನ್ನು ತಿನ್ನುವದರಿಂದ ನಮ್ಮ ಆಯಾಸ ಕಡಿಮೆಯಾಗುತ್ತದೆ. ಇದರಿಂದ ರುಚಿಕರವಾದ ಶರಬತ್ತು ತಯಾರಿಸಬಹುದು.
ಮುಸುಂಬಿ ಹಣ್ಣಿನಲ್ಲಿರುವ ಇರುವಂತಹ ಪ್ರಬಲ ಫ್ಲಾವನಾಯ್ಡ್ ಗುಣದಿಂದಾಗಿ ಇದು ಕ್ಯಾನ್ಸರ್ ವಿರೋಧಿ, ಆಂಟಿ ಆಕ್ಸಿಡೆಂಟ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ದೇಹವನ್ನು ನಿರ್ವಿಷಗೊಳಿಸುವ ಗುಣ ಹೊಂದಿದೆ. ಇದು ಸೋಂಕು, ಅಲ್ಸರ್ ಮತ್ತು ಗಾಯ ಗುಣಪಡಿಸುವುದು, ರಕ್ತಸಂಚಾರ ಸುಧಾರಿಸುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುವುದು.ಮೂಸಂಬಿಯಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಂತಹ ಹಲವಾರು ರೀತಿಯ ವಿಟಮಿನ್‍ಗಳು ಹಾಗೂ ಖನಿಜಾಂಶಗಳು ಇವೆ.
ಶಾರದಾ ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ ಕೈರಂಗಳ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಪಪ್ಪಾಯ ಪಪ್ಪಾಯ ಹಣ್ಣು ಬಹಳ ರುಚಿಯಾಗಿದ್ದು ಬೆಣ್ಣೆಯಂತಿದೆ. ಇದರಲ್ಲಿ ಅಪಾರ ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್ 'ಸಿ' ಮತ್ತು 'ಎ' ಹೇರಳವಾಗಿದೆ. ಇದೊಂದು ಶಕ್ತಿದಾಯಕ ಆಹಾರ. ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾರಿನಂಶ ಹೆಚ್ಚಾಗಿರುವುದರಿಂದ ಮಲಬದ್ಧತೆಯನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮದುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಾಕ್ರಿಯೆಗೆ ಸಹಕಾರಿಯಾಗಿದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕೂದಲನ್ನು ಪೋಷಿಸುತ್ತದೆ. ಇದರ ಎಲೆಯ ರಸ ಡೆಂಗ್ಯೂ ಜ್ವರಕೆ ರಾಮಬಾಣವಾಗಿದೆ. ಹೀಗೆ ಪಪ್ಪಾಯ ಹಣ್ಣು ಸರ್ವಗುಣ ಸಂಪನ್ನವಾಗಿದೆ.
ದೀಪಿಕಾ ಹಿರಿಯ ಪ್ರಾಥಮಿಕ ಶಾಲೆ ಮೊಡಂಕಾಪು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಬಂಟ್ವಾಳ ತಾಲೂಕು. ದ. ಕ.ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಬುರೋಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝನಗರ್ ಕಲಾ ಬಾಗಿಲು
ಬಂಟ್ವಾಳ ತಾಲೂಕು. ದ. ಕ.ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ