
ಪಂಜರದ ಹಕ್ಕಿ, ಯುಗಾದಿ - ಕವನ
Saturday, May 8, 2021
Edit
ಸುಹಾನ್ ನಾಯಕ್ 8 ನೇ ತರಗತಿ
ಬಿ.ಎಮ್. ಅ.ಹಿ. ಪ್ರಾ.ಶಾಲೆ.ಮೂರೂರು, ಹೀರ್ಗಾನ
ಕಾರ್ಕಳ ಉಡುಪಿ ಜಿಲ್ಲೆ
ಕವನಗಳು
ಪಂಜರದ ಹಕ್ಕಿ
ಸ್ವತಂತ್ರವಾಗಿ ಆಕಾಶದಿ ಹಾರುತಲಿತ್ತು ಹಕ್ಕಿ
ಮಾನವ ಮಾಡಿದ ಅದನು ಪಂಜರದ ಹಕ್ಕಿ...
ಹಂಬಲಿಸುತಿದೆ ಸಂತೋಷ, ಸ್ವಾತಂತ್ರ್ಯಕೆ
ದೂಷಿಸುತ ಮಾನವನೀ ಅನ್ಯಾಯಕೆ....!!
ಬಂಧು-ಬಳಗವ ಹಕ್ಕಿ ಏಕೆ ಬಿಟ್ಟಿರಬೇಕು?
ಕದ ಮುರಿದು ಬಾನಾಡಿಯಾಗಿ ಹರ್ಷಿಸಬೇಕು....
ಸ್ವಾತಂತ್ರ್ಯವಿದ್ದವನ ಬಾಳೆಷ್ಟು ಸುಂದರ
ಸ್ವಾತಂತ್ರ್ಯವೇ ಸ್ವರ್ಗ ಎಂಬ ಮಾತೆಷ್ಟು ಮನೋಹರ....
****************************************
ಯುಗಾದಿ
ಬಂದಿತು ಹೊಸ ವರ್ಷದ ಆದಿ
ಬಂದೇ ಬಿಟ್ಟಿತು ಯುಗಾದಿ
ಬಂದಿತು ಬೇವು-ಬೆಲ್ಲ ತಿನ್ನುವ ಸಮಯ
ಸುಖ-ದುಃಖಗಳು ಸಮನಾಗಿರಲಿ ಎನ್ನುವ ಆಶಯ...!
ಮಾಮರದಿ ಮಾವುಗಳು ಚಿಗುರುವ ಸಮಯ
ವೇದಿಕೆಯು ಕೋಗಿಲೆಗೆ ವಸಂತದ ಸಮಯ
ತೊಳೆದು ಹೋಗಲಿ ಎಲ್ಲ ಮೈಮನದ ಕೊಳಕುಗಳು.....
ಚಿಗುರಲಿ ಮನದಲಿ ಹೊಸ ಯೋಚನೆಗಳು..!
ನಾಶವಾಗಲಿ ಎಲ್ಲ ರೋಗ-ರುಜಿನಗಳು
ಎಲ್ಲರಿಗೂ ಸಿದ್ಧಿಸಲಿ ಆರೋಗ್ಯ- ಐಶ್ವರ್ಯಗಳು..!
ಸುಹಾನ್ ನಾಯಕ್
7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ.
ಶಾಲೆ, ಮೂರೂರು,
ಹಿರ್ಗಾನ. ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ