ಇಳೆಯ ಸೊಬಗು - ಕವನ
Wednesday, March 17, 2021
Edit
ಬಿಂದುಶ್ರೀ 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಇಳೆಯ ಸೊಬಗು - ಕವನ
ಸುತ್ತಲೂ ತಂಪಿನ ವಾತಾವರಣ
ಹಕ್ಕಿ- ಪಕ್ಕಿಗಳ ಚಿಲಿಪಿಲಿ ಗಾನ
ರಾರಾಜಿಸುತ್ತಿದೆ ಭೂತಾಯಿಯ ವದನ
ನನ್ನ ಮನಸಿದು ಇವೆಲ್ಲದರಲಿ ಸಮ್ಮಿಲನ.....!!
ಚಿಟ-ಪಟ ಉದುರುತ್ತಿರುವ ಮಂಜಿನ ಹನಿಯು
ಎಲೆಗಳ ಮೇಲೆ ಥಳಥಳಿಸುತ್ತಿದೆ ಈ ಇಬ್ಬನಿಯು.........!!!
ಭೂಮಿಯ ಅಲಂಕರಿಸಿದೆ ಹಸಿರೆಲೆ,
ಅರಳಿದ ಹೂವು
ಎಲ್ಲದರೊಳು ಬೆರೆತು,
ಮಾಯವಾಗಿದೆ ನನ್ನ ನೋವು....!!
ಮೈ ಪುಳಕಿಸುವ ಎಲರಿನ ತಂಪು
ಕಣ್ಮನ ತಣಿಸಿದೆ ಹೂಗಂಪು....!!
ಹೊದ್ದಿರುವಳು ಭೂತಾಯಿ
ಹಸುರಿನ ಜಮಖಾನೆ......!!
ಇದಾಗಿಹುದು ಇಡೀ ಜೀವಸಂಕುಲಕ್ಕೆ
ನೆಮ್ಮದಿಯ ಅರಮನೆ ....!!
............ಬಿಂದುಶ್ರೀ
10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು