
ಅಜ್ಜಿಯ ಕಥೆ - ಕವನ
Wednesday, March 17, 2021
Edit
ಆದ್ಯಂತ್ 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ.
ಅಜ್ಜಿಯ ಕಥೆ - ಕವನ
ಅಜ್ಜಿಯು ಹೇಳುವ ಕಥೆಯದು ಚಂದ
ಕೇಳಲು ನಮಗೆ ಪರಮಾನಂದ ||ಪ||
ಅಜ್ಜಿಯ ಕಥೆಯನು ಕೇಳುತ ನಾವು
ಊಟ ತಿಂಡಿಯನು ಮರೆಯುವೆವು
ಅಜ್ಜಿಯು ಕಥೆಯನು ಹೇಳಲು ಹೊರಟರೆ
ಸದ್ದನು ಮಾಡದೆ ಕೇಳುವೆವು
ಅಜ್ಜಿಯು ಹೇಳುವ ಕಥೆಗಳಲೆಲ್ಲಾ
ನೀತಿಯ ಪಾಠವು ಹೆಚ್ಚುಂಟು
ಪ್ರೀತಿಯ ಅಜ್ಜಿಯು ಕಥೆಗಳ ಜೊತೆಗೆ
ಕೊಡುವರು ನಮಗೆ ಪೆಪ್ಪರ್ ಮೆಂಟು ||ಪ||
ಅಜ್ಜಿಯ ಕಥೆಯನು ಹೇಳುವ ಹೊತ್ತಿಗೆ ಅಜ್ಜನು ನಮ್ ಜೊತೆ ಸೇರುವರು
ಅಜ್ಜಿಯ ಕಥೆಗೆ ಅಜ್ಜನು ಸೇರುತ
ಉದ್ದದ ಕಥೆಯನು ಹೇಳುವರು
ಎಲ್ಲರ ಮನೆಯಲೂ ಇರಲೇಬೇಕು
ಅಜ್ಜಿಯಂತಹ ದೊಡ್ಡವರು
ಅಜ್ಜ - ಅಜ್ಜಿಯ ಜೊತೆಯಲಿ ನಾವು
ನೀತಿಯಿಂದಲೇ ಬದುಕುವೆವು ||ಪ||
..............ಆದ್ಯಂತ್ 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ.