ಆವೆ ಮಣ್ಣಿನೊಂದಿಗೆ ನನ್ನ ಕೆಲವು ಕ್ಷಣ...
Thursday, February 4, 2021
Edit
ವೈಷ್ಣವಿ ವೈ. ಕೆ. ಅಗ್ರಬೈಲು
3ನೇ ತರಗತಿ ಎಸ್.ವಿ.ಎಸ್ ಕಿರಿಯ
ಪ್ರಾಥಮಿಕ ಶಾಲೆ, ಬಂಟ್ವಾಳ
ಆವೆ ಮಣ್ಣಿನೊಂದಿಗೆ ನನ್ನ ಕೆಲವು ಕ್ಷಣ...
ಆವೆ ಮಣ್ಣಿನಲ್ಲಿ ಆಟ ಆಡಲು ತುಂಬಾ ಖುಷಿ. ಲಾಕ್ಡೌನ್ ಸಮಯದಲ್ಲಿ ಅಪ್ಪ ಸ್ವಲ್ಪ ಆವೆ ಮಣ್ಣು ತಂದಿದ್ದರು. ಅದರಲ್ಲಿ ಕೆಲವು ಆಕೃತಿಗಳನ್ನು ಮಾಡಿದೆ. ಆದರೆ ನನ್ನ ತಂಗಿ ಶ್ರಾವಣಿ ಎಲ್ಲವನ್ನು ತುಂಡು ಮಾಡಿದಳು.....!!
ಅಮ್ಮ ಹೊಸ ಕಾಲೇಜು ಸೇರಿದಾಗ ಮೊದಲ ಸಂಬಳದಲ್ಲಿ ಆಟ ಆಡುವ ಸಾಮಾನು ತೆಗೆಯಲು ಅಂಗಡಿಗೆ ಹೋದೆವು. ಅಲ್ಲಿ ತುಂಬಾ ಆಟದ ಸಾಮಾನು ಇರುವಾಗ ಯಾವುದು ತೆಗೆಯುವುದಯ ಎಂದು ಗೊತ್ತಾಗ್ಲಿಲ್ಲ. ಅಪ್ಪ ಹೇಳಿದರು ಮಡಿಕೆ ಮಾಡುವ ಮೆಷಿನ್ ಉಂಟು ಎಂದು ಹೇಳಿದರು. ಖುಷಿಯಾಯಿತು ಅಪ್ಪ ಹೇಳಿದಾಗ ನಾನು ಆಯಿತು ಹೇಳಿ ಮನೆಯಲ್ಲಿ ಆಟವಾಡಿ ಕೆಲವು ಮಣ್ಣಿನ ಆಕೃತಿ ಮಾಡಿದೆ.
ಒಂದು ದಿನ ಕುಲಾಲ ಭವನದಲ್ಲಿ ಯುವವೇದಿಕೆಯಿಂದ ಬೇರೆ ಬೇರೆ ಸ್ಪರ್ದೆಗಳು ಇತ್ತು. ಅದರಲ್ಲಿ ಕ್ಲೇ ಕೂಡಾ ಇತ್ತು. ಅದಕ್ಕೆ ಭಾಗವಹಿಸಲು ನನ್ನ ತಂದೆ ಹೇಳಿದರು. ನಾನು ಭಾಗವಹಿಸಿದೆ. ನಾನು ಮತ್ತು ನನ್ನ ಜೊತೆ ನಾಲ್ಕು ಮಕ್ಕಳು ಇದ್ದರು. ನಾವು ಕೃಷ್ಣ ಮಾಡಲು ಹೊರೆಟೆವು. ಅದರೆ ಕೃಷ್ಣ ಆಗಲಿಲ್ಲ. ಅಗ ಅದರ ಸಮಯ ಮುಗಿದು ಹೋಗಿತ್ತು. ಅದರಿಂದ ನನಗೆ ಏನೂ ಮಾಡಲಾಗಲಿಲ್ಲ.
ಒಂದು ದಿನ ನನ್ನ ತಂದೆ ಕ್ಲೇ ತಂದು ಕೊಟ್ಟರು. ಅದರಿಂದ ಮೊದಲು ಎರಡು ಟೋಪಿ ಮಾಡಿದೆ. ಪಾತ್ರೆ ಮಾಡಿದೆ. ಊಜಿ, ಕೊಡ, ಲೋಟ, ಒಂದು ಮನುಷ್ಯ, ಸ್ವಲ್ಪ ದೊಡ್ಡದು ಪಾತ್ರೆ, ಒಂದು ಕಪ್, ಶಿವಲಿಂಗ, ದೊಡ್ಡ ಊಜಿ, ನಂತರ ಡೈನೋಸಾರ ಮಾಡಲು ಶುರು ಮಾಡಿದೆ. ಆದರೆ ಅದನ್ನು ನಿಲ್ಲಿಸಲಿಕ್ಕಾಗದೆ ಅದನ್ನು ಮೊಸಳೆಯಾಗಿ ಮಾಡಿದೆ. ನಂತರ ಅದಕ್ಕೆ ಬಣ್ಣ ಹಾಕಿದ್ದೇನೆ. ನನ್ನ ಜೊತೆ ತಂಗಿ ಶ್ರಾವಣಿ ಸಹ ಪ್ಲಾಸ್ಟಿಕ್ ಅಚ್ಚಿಯಲ್ಲಿ ಮರ, ಹಕ್ಕಿ, ಹೂ ಹೀಗೆ ಕೆಲವು ಮಾಡಿದಳು.
ಮಂಗಳೂರಿನಲ್ಲಿ ಕುಲಾಲ ಸಮ್ಮಿಲನ ಕಾರ್ಯಕ್ರಮ ಇತ್ತು. ಅಲ್ಲಿಗೆ ನಾನು, ತಂಗಿ, ತಂದೆ ಮತ್ತು ತಾಯಿ ಕಾರ್ಯಕ್ರಮಕ್ಕೆ ಹೋದೆವು. ಅಲ್ಲಿ ಆಟ ಆಡುವ ಅಂಗಡಿಗಳು ಇದ್ದವು. ನಾಲ್ಕು ಲೋಟಕ್ಕೆ ಒಂದು ಚೆಂಡು ಹಾಕುವುದು. ಒಂದು ಬಕೆಟ್ನಲ್ಲಿ ಪೂರ್ತಿ ನೀರು ತುಂಬಿಸಿ ಅದರ ಒಳಗೆ ಇರುವ ಲೋಟಕ್ಕೆ ನಾಣ್ಯ ಹಾಕುವಾಟ, ಕಲ್ಲಂಗಡಿ, ಅನನಾಸು ಹಣ್ಣುಗಳು, ಮಣ್ಣಿನಿಂದ ಮಾಡಿರುವ ವಸ್ತುಗಳ ಮಾರಾಟ, ಮಡಿಕೆ ಮಾಡುವ ಯಂತ್ರ ಇತ್ತು. ಅದರಲ್ಲಿ ನಾನು ಒಂದು ಲೋಟ ಮಾಡಿದೆ. ನಾನೇ ಸ್ವತಃ ಮಾಡುವಾಗ ತುಂಬಾ ಖುಷಿಯಾಯಿತು. ಮಾರಾಟದ ಅಂಗಡಿಯಲ್ಲಿ ಮಣ್ಣಿನಿಂದ ಮಾಡಿದ ಬಿಗಿಲು ನನಗೆ ಮತ್ತು ನನ್ನ ತಂಗಿಗೆ ಅಪ್ಪ ತೆಗೆದುಕೊಟ್ಟರು. ಮನೆಗೆ ಹೋಗುವಾಗ ಮಣ್ಣಿನಿಂದ ಮಾಡಿದ ಬಿಗಿಲನ್ನು ತಂಗಿ ಕೆಳಗೆ ಹಾಕಿದಳು. ನಂತರ ನಾನು ನನ್ನ ಬಿಗಿಲನ್ನು ಜೋಪಾನವಾಗಿ ಇಟ್ಟಿದ್ದೆ. ಆದರೆ ಮನೆಗೆ ತಲುಪಿದ ನಂತರ ನನ್ನ ಬಿಗಿಲನ್ನೂ ಕೆಳಗೆ ಹಾಕಿದಳು. ಅದು ಚೂರು ಚೂರು ಆಯಿತು. ನನಗೆ ತುಂಬಾ ಬೇಸರ ಆಯಿತು.
ವೈಷ್ಣವಿ ವೈ. ಕೆ. ಅಗ್ರಬೈಲು
3ನೇ ತರಗತಿ ಎಸ್.ವಿ.ಎಸ್ ಕಿರಿಯ
ಪ್ರಾಥಮಿಕ ಶಾಲೆ, ಬಂಟ್ವಾಳ