
ಸೂರ್ಯ ಮತ್ತು ಚಂದಿರ - ಕವನ
Wednesday, February 17, 2021
Edit
ಪ್ರಿಯಾ 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು
ಸೂರ್ಯ ಮತ್ತು ಚಂದಿರ -ಕವನ
ಮುಂಜಾನೆಯಲ್ಲಿ ಮುಗಿಲೇರಿ ಬಂದ ಸೂರ್ಯ..
ಭೂಮಿಗೆ ತಂದ ಹೊಚ್ಚಹೊಸ ಬೆಳಕ ಕಿರಣ..!!
ಸಂಜೆಯ ಹೊತ್ತಿಗೆ ಮರೆಯಾದ ಸೂರ್ಯ..
ಭೂಮಿಗೆ ತಂದ ತಂಪಾದ ಕತ್ತಲ..!!
ಆಗ ತಾನೆ ಬಾನಲ್ಲಿ ದುಂಡನೆಯ
ಮುದ್ದು ಚಂದಿರ..!!
ಭೂಮಿಗೆ ತಂದ ಸೊಗಸಾದ ಬೆಳದಿಂಗಳ..!!
ತಂಪಾದ ಕತ್ತಲಿನ ನಕ್ಷತ್ರಗಳ ರಾಶಿಯ ಮಧ್ಯೆ..
ರಾರಾಜಿಸುತ್ತಿರಲು..... ಮುದ್ದು ಚಂದಿರನು !!
ಕಣ್ತುಂಬಿಕೊಳ್ಳುತ್ತಿದೆ.... ಭೂ ರಾಶಿಯು
ತಮ್ಮ ಭಾಗ್ಯವನು.....!!
.......ಪ್ರಿಯಾ 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು