-->
ಆದಿಯ ಚಿತ್ರ ಪತ್ರ - 53

ಆದಿಯ ಚಿತ್ರ ಪತ್ರ - 53

    ಆದಿ ಸ್ವರೂಪ 
    ಸ್ವರೂಪ ಅಧ್ಯಯನ ಸಂಸ್ಥೆ 
    ಮಂಗಳೂರು


                ಆದಿಯ ಚಿತ್ರ ಪತ್ರ - 53

                 ಆದಿಯ ಚಿತ್ರ ಪತ್ರ - 53
                             ಕತೆ : 1
                    "ಟೀಚರ್ ಫೇಲಾ. "

         ಗೋವಿಂದಾ.. ಎಷ್ಟು ಸಲ ಹೇಳಿದ್ರೂ ನಿನಗೆ ಲೆಕ್ಕ ಅರ್ಥ ಆಗ್ತಾ ಇಲ್ಲಾ. ಸಾವಿರ ಸಲ ಹೇಳಿದೆ. ಇಲ್ಲಾ ಸಾರ್...ಒಟ್ಟು ನೀವು ಹತ್ತೇ ಸಲ ಹೇಳಿದ್ದು.
ಸರಿ ಸರಿ. ನಿನಗೆ ಹತ್ತು ಸಲ ಹೇಳಿದ್ರೂ ಅರ್ಥ ಆಗ್ತಿಲ್ಲ..!!. ಇನ್ನೇನು ಮಾಡ್ತೀಯೋ...? 
ಟೀಚರನ್ನು ಚೇಂಜ್ ಮಾಡ್ತೇನೆ ಸಾರ್.... ನನ್ನನ್ನಾ..!!.?. ಹೂಂ. ಸಾರ್...!.

               ಅಪ್ಪಾ.. ಯಾಕಪ್ಪಾ.?. ಗೋವಿಂದ ಟೀಚರನ್ನು ಚೇಂಜ್ ಮಾಡಿದ. ?. ಟೀಚರ್ ಫೇಲಾ...?.!!. ಹೌದು ಆದಿ. ಗೋವಿಂದನಿಗೆ ಶಿಕ್ಷಣ ಬರೀ ಗೋವಿಂದಾನು ಗೋವಿಂದ ಆಗಿದೆ. ಆದಿಯಿಂದಲೇ ಶಿಕ್ಷಕರು ಅರ್ಥ ಆಗುವ ಕಡೆಗೆ ಅವನನ್ನು ಕರಕೊಂಡು ಬರಲಿಲ್ಲ. ಅಪ್ಪಾ ಅವರು ಹೀಗೆ ಮಾಡೋದು ತಪ್ಪಲ್ವಾ..?. ಮಹಾ ಪಾಪ ಅಲ್ವಾ..?. ಹೌದು. ಆದಿಯಿಂದಲೇ ಅರ್ಥ ಮಾಡಿಸುವ ಸಾಮರ್ಥ್ಯದ, ಗುಣದ ಶಿಕ್ಷಕ ಕಾರಣನಾಗಬೇಕಿತ್ತು. ಇದು ಒಬ್ಬ ವಿದ್ಯಾರ್ಥಿಯ ಭವಿಷ್ಯದ ಬೆಳವಣಿಗೆಯ ಕೊಲೆ ಅಲ್ವಾ ಅಪ್ಪಾ. ಅಯ್ಯೋ ಲೆಕ್ಕ ಪಾಠ ಬಿಡು ಮಗಳೇ.. ಹತ್ತನೇ ತರಗತಿಯ ಈ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಒಂದು ಪದ - ಒಂದಕ್ಷರ ಓದಲು ಬರೆಯಲು ಬರ್ತಾ ಇಲ್ಲಾ ಆದಿ. ಛೆ..!!. ಪಾಪ. ನೀನು ಕಲಿಯಲ್ಲಾ.. ಹೇಳಿದ್ದು ಕೇಳಲ್ಲಾ ಅಂತ ಎಷ್ಟು ಮಂದಿ ಬರೀ ಬೈಯುವ ಹೊಡೆಯುವವರು ಇದ್ದಾರಲ್ವಾ ..... ಆರಂಭದ ತಪ್ಪಿಗೆ ಎಷ್ಟು ಮಂದಿಯಿಂದ ನಿರಂತರ ಶಿಕ್ಷೆ..?. ತೆಗೆದುಕೊಳ್ಳುವ / ಒಪ್ಪಿಕೊಳ್ಳುವ / ಕೇಳಿ ಕೇಳಿ ತಿಳಿದುಕೊಳ್ಳುವ ಗುಣ ಕೊಡಲು ಶಿಕ್ಷಕರಿಗೆ ಆ ಗುಣಕ್ಕಾಗಿ ತರಬೇತಿ ಬೇಕು.

      ಅಪ್ಪಾ ಈ ಸಮಸ್ಯೆಗೆ ಪರಿಹಾರವಾಗಿ ನಿನಗೆ ಸಿಕ್ಕಿರುವ ಶೋಧನೆಯ ಫಲಿತಾಂಶ ಶಿಕ್ಷಕರಿಗೆ, ಶಿಕ್ಷಣ ತರಬೇತಿ ಸಂಸ್ಥೆಗೆ ಕೊಡಬಹುದಲ್ವೆ..?.
ಹೌದು ಆದಿ ನೀನು ಹೇಳೋದು ಸರಿ ಇದೆ.
ಸರಕಾರದಲ್ಲಿ ಯಾರು ಕೇಳೋರು..?. ಆತ ಯಾರು..?.

        ಪತ್ರದ ಕಾರಣಕ್ಕೆ ಅಪ್ಪನ ಜೊತೆಗೆ ಈ ರೀತಿಯ ಚರ್ಚೆ ನಡೆದಾಗಲೆಲ್ಲ ಅಯ್ಯೋ.. ಅನಿಸುವುದರೊಂದಿಗೆ.. ಇದು ಹಾ...! ಮೈ ಉರಿಯುವ ಸಂಗತಿ.. ಯಾರು ಹೊಣೆ.. ದೇಶದ ಎಷ್ಟು ಮಕ್ಕಳ ಭವಿಷ್ಯ ಯಾವ ಸಂಬಳದವರ ಕೈಯಲ್ಲಿ ಅಡಗಿದೆ. ಪ್ರತಿಭಟನೆಗೆ ಪ್ರಥಮ ವಿಷಯ ಅಥವಾ ಮೂಲ ಇಲ್ಲೇ ಇದೆ. ಸರಕಾರಿ ಕೆಲಸ ತೊರೆದು ಮಕ್ಕಳ ಅದ್ಭುತ ಸಾಮರ್ಥ್ಯದ ಪರಿಚಯ ರಾಜ್ಯದ 1600 ಕೇಂದ್ರದಲ್ಲಿ ಕಳೆದ ಹತ್ತು ವರ್ಷ " ಶಿಕ್ಷಣ ಜಾಗೃತಿ ಜಾಥಾದ " ಮೂಲಕ ಹೇಳಿಕೊಳ್ಳುತ್ತಿದ್ದ ಅಪ್ಪನ ಕಾಳಜಿ ನಿತ್ಯ ಕಂಡಿದ್ದ ನನಗೆ, ಈಗ ಆ ಹೋರಾಟ ಇನ್ನಷ್ಟು ಹೆಚ್ಚು ಅರ್ಥ ಆಗ್ತಿದೆ.

                       ಕತೆ : 2
          ತಪ್ಪು ಮಾಡಿದ್ದಕ್ಕೆ ಪೆಟ್ಟಾ.?.

ಅಂಗನವಾಡಿ ಮಕ್ಕಳಿಗೆ ಟೀಚರ್ ಯಾಕೆ ಹೊಡೀತಾರೆ.?.
ತಪ್ಪು ಮಾಡಿದ್ದಕ್ಕೆ..!. 
ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಯಾಕೆ ಹೊಡೀತಾರೆ.?.
ತಪ್ಪು ಮಾಡಿದ್ದಕ್ಕೆ..!
ಹೈಸ್ಕೂಲಲ್ಲಿ ಮಕ್ಕಳಿಗೆ ಶಿಕ್ಷಕರು ಯಾಕೆ ಹೊಡೀತಾರೆ...?.
ತಪ್ಪು ಮಾಡಿದ್ದಕ್ಕೆ..?.
ಕಾಲೇಜ್ ನಲ್ಲಿ ಶಿಕ್ಷಕರು ಮಕ್ಕಳಿಗೆ ಯಾಕೆ ಹೊಡೆಯಲ್ಲಾ..?.
ತಿರುಗಿಸಿ ಹಿಂದಕ್ಕೆ ಕೊಡ್ತಾರೆ ಅಂತ ಗೊತ್ತಿರುವುದಕ್ಕೆ..!!!.

ಅಪ್ಪಾ.. ನೀನು ಹೇಳೋದು ನಿಜವಾ..?.!!. ಹಾಗಾದ್ರೆ.. ಇದು ಪ್ರೈಮರಿ, ಹೈಸ್ಕೂಲ್ ಶಿಕ್ಷಕರಿಗೆ ಇದು ಗೊತ್ತಿಲ್ವಾ..?.
ಹೌದು ಗೊತ್ತಿದೆ..!
ಶ್....!!""". ಬಚಾವ್.. ಮಕ್ಕಳಿಗೆ ಗೊತ್ತಿಲ್ಲಾಂತ ಕಾಣ್ತದೆ..!?.

                        ಕತೆ : 3
         ತನಗೆ ತಾನೇ ಹೊಡೆದುಕೊಂಡ್ರೆ..?.!!.

            ಅಪ್ಪ ಹೈಸ್ಕೂಲ್ ಅಧ್ಯಪಕರಾಗಿದ್ದಾಗ.. ಒಂದೇ ಒಂದು ಬಾರಿ 8 ನೇ ತರಗತಿ ವಿದ್ಯಾರ್ಥಿನಿಗೆ ಬೆತ್ತದಿಂದ ಕೈಗೆ ಒಂದು ಪೆಟ್ಟು ಕೊಟ್ಟರಂತೆ. ಪಾಪ ಅವಳು ನೋವು ಸಹಿಸಿಕೊಂಡದ್ದು ನೋಡಿ ಅಯ್ಯೋ ಅಂತ ಅನಿಸಿತ್ತಂತೆ. ಅನಂತರ ತನ್ನ ಬಾಡಿಗೆ ರೂಮ್ ಗೆ ಬೆತ್ತ ತೆಗೆದುಕೊಂಡು ಬಂದು ತನ್ನ ಕೈಗೆ ತಾನೇ ಚೆನ್ನಾಗಿ,ಹೊಡೆದುಕೊಂಡರು. ಕೈಗೆ ಕೆಂಪು ಗೆರೆ ಬಿದ್ದು.. ಎರಡು ದಿನ ಬಹಳ ನೋವಿತ್ತಂತೆ..!.

         ಆ ದಿನವೇ ಸಂಜೆ ಹುಡುಗಿಯ ಮನೆ ಹುಡುಕಿಕೊಂಡು ಹೋದ್ರಂತೆ. ಆದರೆ.. ಆ ಮನೆಯಲ್ಲಿ ಎಲ್ಲರೂ ವಿಶೇಷ ತಿಂಡಿ ಮಾಡಿ ಕಾಯ್ತಾ ಇದ್ರಂತೆ. ಅಮ್ಮ ಗೋಪಾಡ್ಕರ್ ಸರ್ ಇವತ್ತು ಮನೆಗೆ ಬಂದೇ ಬರ್ತಾರಂತ ಆ ಹುಡುಗಿ ಅಮ್ಮನಿಗೆ ಮೊದಲೇ ಹೇಳಿದ್ಲು. ಆದರೆ ಪ್ರೀತಿಯ ಶಿಕ್ಷಕರು ಕೈಗೆ ಹೊಡೆದ ಸತ್ಯ ಅಮ್ಮನಿಗೆ ಹೇಳಲೇ ಇಲ್ಲಾ. ಅಪ್ಪನ ಗುಣ ಗೊತ್ತಿದ್ದ ಅವಳು ಅನಂತರದ ಎಲ್ಲಾ ವಿಚಾರ ಮೊದಲೇ ತಿಳಿದುಕೊಂಡಿದ್ಲು. ಸಾರ್ ಬನ್ನಿಲ್ಲಿ..!. ನಿಮ್ಮ ಎಡಕೈ ತೋರಿಸಿ..!. ಅದ್ಯಾಕೆ ದಪ್ಪ ಆಗಿ ಕೆಂಪಾಗಿ ಗೆರೆ ಕಾಣ್ತಿದೆ..?. ಅಮ್ಮಾ... ಆ ಗಾಯದ ಎಣ್ಣೆ ಕೊಡಮ್ಮಾ .!!?. ಎಣ್ಣೆ ಹಾಕಿ.. ಮೌನದಿಂದ ಪರಸ್ಪರ ಕೈ ತಿಕ್ಕಿದಾಗ.. ಶಿಕ್ಷೆಯ ನೆನೆದು ಕಣ್ಣ ಹನಿಯೂ ಎಣ್ಣೆಗೆ ಸೇರಿತ್ತಂತೆ.

          ಅಪ್ಪಾ ನಿನ್ನ ತಾಳ್ಮೆಯ ಅನೇಕ ಸತ್ಯ ಕತೆಗಳು ನನ್ನ ಕೈಗೆ ಸಿಕ್ಕಿದೆ. ಒಂದೊಂದಾಗಿ ಜಗಲಿಗೆ ಹಾಕಲು... ಆದಿ.

-------------------------ಆದಿ ಸ್ವರೂಪ. 
ಸ್ವರೂಪ ಅಧ್ಯಯನ ಕೇಂದ್ರ. ಮಂಗಳೂರು.
---------------------------------------

ಈ ಪತ್ರ..
ಅಪ್ಪನ ಸ್ವರೂಪ ದ DIET ವಿದ್ಯಾರ್ಥಿ ಮಿತ್ರ ಸಾಧಕ ಶಿಕ್ಷಕ..
ಕ್ರಿಯಾಶೀಲ ಶಿಕ್ಷಕ, ಶಿಕ್ಷಣ ಚಿಂತಕ, ಮಾತುಗಾರ,ಸಂಘಟಕ, ಕಲಾವಿದ, ಸಂಗೀತ ಸಾಧಕ, ನಗುವಿನ ಚಿಕಿತ್ಸೆಯ ಮಾಂತ್ರಿಕ.. ಅವರ ಪರಿಚಯ ನಾನ್ಯಾಕೆ ಹೇಳಲಿ.. ಅಯ್ಯೋ ನಿಮಗೆಲ್ಲರಿಗೂ ಗೊತ್ತಿರುವ ಶ್ರೀ ವಿಠಲ ನಾಯಕ್ ರಿಗೆ ಅರ್ಪಣೆ.

Ads on article

Advertise in articles 1

advertising articles 2

Advertise under the article