-->
ಆದಿಯ ಚಿತ್ರ ಪತ್ರ - 52

ಆದಿಯ ಚಿತ್ರ ಪತ್ರ - 52

    ಆದಿ ಸ್ವರೂಪ 
    ಸ್ವರೂಪ ಅಧ್ಯಯನ ಸಂಸ್ಥೆ 
    ಮಂಗಳೂರು

                    ಆದಿಯ ಚಿತ್ರ ಪತ್ರ - 52
                    ಆದಿಯ ಚಿತ್ರ ಪತ್ರ-52.
                       -------------------
                         ಇದು ಅಕ್ಷತಾ
                          ಓದಿದ ಶಾಲೆ
                         ಯ ಸಾಕ್ಷಿ ಕತೆ.
                       -------------------

               ಯಾರಿಗೆ ಯಾರು ಕಾರಣ..?.
              "ನಿಮ್ಮ ಅಕ್ಷರ ಓದ್ಲಿಕ್ಕೆ ಆಗ್ತಿಲ್ಲ "

         ಪ್ರಮೀಳಾ.. ನಿನಗಂತೂ ಎಷ್ಟು ಸಲ ಹೇಳಿದೆ..?. ನಿನಗೆ.. ನಿನ್ನ ಅಕ್ಷರ ಚಂದ ಮಾಡು ಅಂತ ಸಾವಿರ ಪುಟ ಕಾಪಿ ಬರೆಸಿದರೂ.. ಒಂದು ಅಕ್ಷರ ಚಂದ ಆಗ್ತಿಲ್ಲ. ನೋಡು ಪ್ರಮೀಳಾ.. ನೀನು ಕೋಪಿ ಚಂದ ಬರೆದರೆ ನಿನ್ನ ತಂಗಿಯೂ ಚಂದ ಬರೀತಾಳೆ. ಅಕ್ಷರವೇ ಚಂದ ಮಾಡ್ಲಿಕ್ಕೆ ಆಗದವರು ನೀವು ಶಾಲೆಗೆ ಯಾಕಮ್ಮ ಬರೋದು. ಟೀಚರ್ ದಿನಾ ಹೇಳಿದ್ದನ್ನು ಕೇಳೀ ಕೇಳೀ ಸಾಕಾಗಿದ್ದ ಪ್ರಮೀಳಾಲ ಗೆಳತಿ ಅಕ್ಷತ ಎಚ್ಚರಗೊಂಡಳು.

         ಮೇಡಂ.. ಒಂದು ನಿಮಿಷ..... ಕ್ಷಮೆ ಇರಲಿ. ನಿಮ್ಮ ಅನುಮತಿಯಲ್ಲಿ ಈ ನನ್ನ ಎಲ್ಲಾ ಫ್ರೆಂಡ್ಸ್ ಗಳಿಗೆ ಒಂದು ಮಾತು ಹೇಳ್ತೇನೆ..?. ಏನದು..?. ಹಾಂ..!!. ಹೇಳು.
ಅಕ್ಷತಾ ..... ಮೇಡಂ ಹತ್ತಿರ ಬಂದು ನಿಂತಳು. 

        ನನ್ನ ಪ್ರೀತಿಯ ಗೆಳೆಯ ಗೆಳತಿಯರೇ.. ನಾವೀಗ ಎಂಟನೇ ತರಗತಿಯಲ್ಲಿದ್ದೇವೆ. ಕಳೆದ ಏಳು ವರ್ಷಗಳಿಂದ ನೀವು ಕಾಪಿ ಬರೆಯುವ ಕೂಲಿ ಕೆಲಸ ಮಾಡುತ್ತಿದ್ದೀರಿ. ನನ್ನ ಅಕ್ಷರ ಚಂದ ಇಲ್ಲಾಂತ ನನಗೆ ಗೊತ್ತಾದ ತಕ್ಷಣ ಸರಿಪಡಿಸಿ ಕೊಂಡಿದ್ದೇನೆ. ತಪ್ಪಾದ ಅಕ್ಷರ, ಸ್ಪೆಲ್ಲಿಂಗ್ ನಾನೇ ಹುಡುಕಿ ಹುಡುಕಿ ತಿದ್ದಿ ಚಂದ ಮಾಡಿಕೊಂಡಿದ್ದೇನೆ.

       ಫ್ರೆಂಡ್ಸ್.. ನಿಮ್ಮ ಅಕ್ಷರ ಚಂದ ಇಲ್ಲಾಂತ ಮೊದಲು ಗೊತ್ತಾದದ್ದು ಟೀಚರ್ ಗಳಿಗೆ ಮತ್ತು ನಿಮ್ಮ ಅಪ್ಪ ಅಮ್ಮನಿಗೆ ಮಾತ್ರ. ಸತ್ಯ ಹೇಳಿ.. ಅಕ್ಷರ ಚೆನ್ನಾಗಿಲ್ಲ ಸ್ಪೆಲ್ಲಿಂಗ್ ಸರಿ ಇಲ್ಲಾಂತ ಒಂದು ವೇಳೆ.. ನಿಜವಾಗ್ಲೂ ಅದು ನಿಮಗೇ ಗೊತ್ತಾಗಿ ಬಿಟ್ರೇ... ಮತ್ತೊಮ್ಮೆ ಹೇಳ್ತೀನಿ.. ಸತ್ಯವಾಗ್ಲೂ.. ಫ್ರೆಂಡ್ಸ್ ಅದು ನಿಮಗೇ ಗೊತ್ತಾದ್ರೆ.. ಥೂ... ಛೀ... ಥು...!?. ನಿಮಗೆ ದುಃಖ ಆಗಲ್ವಾ..?.. ಛೆ..!!. ಅಂತ ಅನಿಸಿ ನಾಚಿಕೆ ಆಗಲ್ವಾ.. ಒಮ್ಮೆ ನೀವೇ ಮನಸು ಮಾಡಿ. ನೀವೇ ಒಪ್ಪಿಕೊಂಡು, ನಿರ್ಧಾರ ಮಾಡಿ, ಪಾಠ ಪುಸ್ತಕದಲ್ಲಿ ಇದ್ದ ಹಾಗೆ ಕಾಪಿ ಮಾಡಿ ನೋಡಿ.. 

   'ಯಾಕಾಗಲ್ಲ '.. ಅಂತ ಹೇಳಿ ಬರೆದು ನೋಡಿ.. ನೋಡುವ.
 
   ಮೇಡಂ.. very sorry..

ನಿಮ್ಮ ಅನುಮತಿ ಮೇರೆಗೆ ನಿಮಗೆ ಒಂದು ಸಲಹೆ ಕೊಡಲಾ..? ಹಾಂ.. ಅದೇನು ಹೇಳ್ತಿ ಬೇಗ ಹೇಳು.

Thank you madam.

        ನೋಡಿ ಇಲ್ಲಿ . ನೀವು ಈ ಬೋರ್ಡ್ ನಲ್ಲಿ ಬರೆದ ಅಕ್ಷರ ಸರಿಯಾಗಿ ಓದ್ಲಿಕ್ಕೇ.. ಆಗ್ತಿಲ್ಲ. ನಿಮಗೆ ಒಂದು ವಾರ ಕೊಡ್ತೇವೆ.. ಮೇಡಂ. ನೀವು ಮೊದಲು ಅಕ್ಷರ ಚಂದ ಬರೆಯಲು ಕಲಿತು ಕೊಂಡು ಬನ್ನಿ..

     ಇದಕ್ಕೆ ಕ್ಷಮೆ ಇಲ್ಲ ಮೇಡಂ.

ಮಕ್ಕಳು ಕಲಿಯದೇ ಇದ್ದರೆ.. !!.? ಶಿಕ್ಷಕರು ಸರಿಯಾಗಿ ಪ್ರಶ್ನಿಸದಿರೋದೇ ಕಾರಣ .(ಪ್ರಶ್ನಿಸುವ ಹತ್ತು ದಾರಿಗಳಿವೆ. ) ಶಿಕ್ಷಕರು ಕಲಿಯದೇ ಇದ್ದರೆ..!!.?. ಮಕ್ಕಳು ಸರಿಯಾಗಿ ಪ್ರಶ್ನಿಸದಿರೋದೇ ಕಾರಣ..!!.

ಪ್ರಶ್ನಿಸುವುದನ್ನು ಪ್ರಶ್ನಿಸುವವರನ್ನು ಕೆರಳಿಸಿ ಅರಳಿಸುವ.. ಅಲ್ಲಲ್ಲಾ..!. ಕೆರಳಿಸಿ ಸಹಜವಾಗಿ ಅರಳಲು ಬಿಡುವ..

ಆರಂಭಕ್ಕೆ... ಆದಿ.

----------------------------------------
ಆದಿ ಸ್ವರೂಪ. ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು.
----------------------------------------

ಈ ಪತ್ರ..
ಅಪ್ಪನ ಆತ್ಮೀಯ ಮಿತ್ರ ಹಾಗೂ ಸಹಪಾಟಿ ಯಾಗಿದ್ದ ಶಿಕ್ಷಕರು (1991)
ಸುಳ್ಳ್ಯ ತಾಲೂಕು, ಅರಂತೋಡು ಗ್ರಾಮದ ನೆಹರು ಸ್ಮಾರಕ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸೀತಾರಾಮ್.. ರಂಗಭೂಮಿ,
ಸಾಹಿತ್ಯ ಆಸಕ್ತರು, ಶಿಕ್ಷಣ ಚಿಂತಕರು,.. ಇವರಿಗೆ ಅರ್ಪಣೆ.

Ads on article

Advertise in articles 1

advertising articles 2

Advertise under the article