ನರಿಗಳು ಮತ್ತು ನಾಯಿ - ಚಿತ್ರ ಕಥೆ 4
Friday, January 8, 2021
Edit
ನಿನಾದ್ ಕೈರಂಗಳ್
3 ನೇ ತರಗತಿ
ಪ್ರಗತಿ ಆಂಗ್ಲ ಮಾಧ್ಯಮ ಶಾಲೆ
ಕುಕ್ಕಾಜೆ , ಬಂಟ್ವಾಳ ತಾಲೂಕು
ನರಿಗಳು ಮತ್ತು ನಾಯಿ - ಕಥೆ
ಒಂದು ಊರಿನಲ್ಲಿ ಒಂದು ನಾಯಿಮರಿ ಇತ್ತು. ಆ ನಾಯಿಮರಿ ಯಾವಾಗಲೂ ಆಹಾರಕ್ಕೆ ಬೇಟೆಯಾಡುತ್ತಾ ಇತ್ತು . ಒಂದು ದಿನ ಆ ನಾಯಿಮರಿ ದೊಡ್ಡದಾಯಿತು. ಅದಕ್ಕೆ ನಾಲ್ಕು ನಾಯಿಮರಿಗಳು ಬಂದವು. ಒಂದು ದಿನ ಆ ನಾಯಿ ಆಹಾರವನ್ನು ಹುಡುಕಿಕೊಂಡು ಹೋಗುವಾಗ ನರಿಗಳು ಸಿಕ್ಕಿದವು. ನರಿಗಳಿಗೂ ತುಂಬಾ ಹಸಿವಾಗಿತ್ತು. ನಾಯಿ ತಪ್ಪಿಸಿಕೊಂಡು ಓಡಿ ಹೋಯಿತು. ಹೋಗುವಾಗ ಮುಂದೆ ಒಂದು ದೊಡ್ಡ ಕೆರೆ ಇತ್ತು. ಅಲ್ಲಿ ತುಂಬಾ ಮೀನುಗಳು ಇದ್ದವು. ನಾಯಿ ಅಲ್ಲಿಂದ ಐದು ಮೀನುಗಳನ್ನು ತಗೊಂಡು ಮರಿಗಳ ಹತ್ತಿರ ಬಂತು. ಸಂತೋಷದಿಂದ ತಿಂದಿತು.
............. ನಿನಾದ್ ಕೈರಂಗಳ
3 ನೇ ತರಗತಿ