-->
ಗಜವದನನೇ - ಕವನ

ಗಜವದನನೇ - ಕವನ

ರೂಪಶ್ರೀ ಕನ್ಯಾನ
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು


         ಗಜವದನನೇ - ಕವನ

ನಮಿಸುವೆನು ಗಣನಾಥ ನಿನಗೆ...
ನಾನು ಎನ್ನುವ ಅಹಂಕಾರ ದೂರಕೆ...
ನಿನ್ನ ಸ್ತುತಿ ಮಾಡಿದ ಮಾತ್ರಕೆ...
ನೀನೇ ಎನ್ನುತ ಶಿರಬಾಗುವೆ ನಿನ್ನ ಪಾದಕೆ...
ನುಸುಳದಿರಲಿ ಮನದೊಳಗೆ ಕ್ರೌರ್ಯ , ಅಹಮಿಕೆ...
ನೂರು ಪಾಪಗಳ ಮಾಡಿ ಬಿದ್ದಿರುವೆ ನರಕಕೆ...
ನೃಗ್ರೋಧದಂತ ಗಟ್ಟಿಮುಟ್ಟಾದ 
ಹೃದಯವ ನೀಡು ನನಗೆ...
ನೆನೆಯುವೆವು ಪ್ರತಿದಿನವೂ , ನೀಡುವೆವು ಗರಿಕೆ...
ನೇಸರನೂ ಕೂಡ ಕಾಯುವನು ನಿನ್ನ ಆಣತಿಗೆ...
ನೈವೇದ್ಯ ಫಲ ಪುಷ್ಪ ಅರ್ಪಿಸುವೆ ನಿನ್ನ ಚರಣಕೆ...
ನೊಂದವರ ಬಾಳಿಗೆ ಬೆಳಕು ನೀಡುವೆಯಾ ಶಿವಸುತನೇ...
ನೋವೆಲ್ಲಾ ಅಳಿಸಿ ಬಿಡು ಅಷ್ಟೇ ಸಾಕು ಈ ಜೀವಕೆ...
ನೌಕೆಯಲಿ ಪಯಣಿಗ ನಾನು 
ನೀನೇ ಅಂಬಿಗ ಸೇರಿಸೆನ್ನ ದಡಕೆ...
ನಂಬಿದವರ ಸಲಹುವ ನಿನಗೆ ನಮನ ಶ್ರೀ ವಿಘ್ನೇಶ್ವರನೇ...

✍️
ರೂಪಶ್ರೀ ಕನ್ಯಾನ
ಪ್ರಥಮ ಪಿಯುಸಿ 
ವಾಣಿಜ್ಯ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article