-->
ಆದಿಯ ಚಿತ್ರ ಪತ್ರ - 40

ಆದಿಯ ಚಿತ್ರ ಪತ್ರ - 40

ಆದಿ ಸ್ವರೂಪ 
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು

                   ಆದಿಯ ಚಿತ್ರ ಪತ್ರ - 40

                ಆದಿಯ ಚಿತ್ರ ಪತ್ರ 40
 
                          ಜಾಗ್ರತೆ..
             ಇದೊಳ್ಳೆ ಜೋಕ್..ಪಾಪ-...
                               ಥೂ..

            ಒಬ್ಬ ಅಡುಗೆಯವನು 16 ವರ್ಷದಿಂದ ಅದೇ ಮನೆಯಲ್ಲಿದ್ದ. ಆ ಮನೆಗೊಬ್ಬ ಯಜಮಾನ. ಅವನಿಗೊಬ್ಬಳು ಹೆಂಡತಿ ಮತ್ತು ಗಂಡು-ಹೆಣ್ಣು ಇಬ್ಬರು ಮಕ್ಕಳು. ಯಜಮಾನ ಸ್ವಲ್ಪ ಕೋಪಿಷ್ಟ. ಅಡುಗೆಯವನಿಗೆ ದಿನಾ ಅದು ಸರಿ ಇಲ್ಲ. ಇದು ರುಚಿ ಇಲ್ಲ..ಅಂತ ಬಯ್ಯದ, ಕಿರಿಕಿರಿ ಮಾಡದ ದಿನವೇ ಇಲ್ಲ. ತಪ್ಪು ಹುಡುಕುವುದೇ ಕೆಲಸ. ಪಾಪ ಎಷ್ಟೇ ಬೈಗುಳ ತಿಂದರೂ ಅಡುಗೆಯವನು ಮಾತ್ರ ಏನು ಸಿಟ್ಟು ಮಾಡಿಕೊಳ್ಳುವುದಿಲ್ಲ .. ಅಲ್ಲಲ್ಲ ತೋರಿಸುವುದಿಲ್ಲ. ಯಜಮಾನ ಬೈದಾಗೆಲ್ಲ. ಆಯ್ತು ದನಿ.. ಹಾಗೆಯೇ ಮಾಡುತ್ತೇನೆ. ಅಂತ ಸಮಾಧಾನದಿಂದ ಉತ್ತರಿಸುತ್ತಾನೆ. ಹೆಂಡತಿ-ಮಕ್ಕಳ ಕಿರಿಕಿರಿ ಈ ಕತೆಯಲ್ಲಿ ಅಷ್ಟೊಂದಿಲ್ಲ.

       ಒಂದು ದಿನ 16 ವರ್ಷದ ನಂತರ ಅಡುಗೆ ಭಟ್ಟನ ಒಂದು ಸತ್ಯ ಬಹಿರಂಗವಾಯ್ತು. ಯಜಮಾನನಿಗೆ ಒಂದು ಕ್ಷಣ ಜ್ಞಾನೋದಯ ಆಗಿ ಅಡುಗೆಯವನಿಗೆ ಒಂದು ಮಾತು ಹೇಳಿಬಿಟ್ಟ. ಎಲ್ಲರೂ ಕೇಳಿ..ಹೆಂಡತಿ-ಮಕ್ಕಳ ಮುಂದೆ. ಪ್ರೀತಿಯ ಧ್ವನಿಯಲ್ಲಿ..ಶಂಕರ.. . ಬಾ ಇಲ್ಲಿ. ಹತ್ತಿರ ಬಾ. ಏನ್ ದನಿ. ಅಲ್ಲಾ..ನನಗೆ ಒಂದು ವಿಷಯ ಗೊತ್ತಾಯ್ತು. ನಾನು ನಿನಗೆ ಇಷ್ಟು ವರ್ಷಗಳಲ್ಲಿ ಬೈಯ್ಯದ ದಿನ, ಹೊತ್ತು ಇಲ್ಲವೇ ಇಲ್ಲ ಅಲ್ವಾ .? ಹಾಂ.. ಹಾಂ..ಪರವಾಗಿಲ್ಲ. ದನಿ. ನೀವು ಒಳ್ಳೆಯವರು ದನಿ.... ಹಾಗಲ್ಲ ಶಂಕರ...ನಾನು ಇನ್ನು ಮುಂದೆ ನಿನಗೆ ಎಂದೂ ಒಂದು ಮಾತೂ ಬಯ್ಯಲ್ಲ. ಹಾಂ..!! ಹೌದಾ ಸರ್..!!! ಶಂಕರ ಬಾಯಿಬಿಟ್ಟು ಅವರನ್ನೇ ಕಲ್ಲಾಗಿ ನಿಂತು ನೋಡ್ತಾನೆ..!!.
    ನನ್ನಿಂದ ತಪ್ಪಾಗಿದೆ ಶಂಕರ್. ಸಮಯಕ್ಕೆ ಸರಿಯಾಗಿ ರುಚಿ ರುಚಿಯಾಗಿ ಅಡುಗೆ ಮಾಡಿ ಕೊಡುತ್ತಾ, ಎಂದೂ ಸ್ವಲ್ಪವೂ ಸಿಟ್ಟು ಮಾಡದ ನೀನು ನಮ್ಮ ಬೈಗಳನ್ನು ಎಷ್ಟು ತಿಂದಿರಬಹುದು. ಹಾಗಂತ ಯೋಚಿಸಿದಾಗ.. ಛೇ...! ಅಂತ ಅನಿಸಿತು. ಶಂಕರಾ.. ನನಗೆ ನಿನ್ನೆ ಒಬ್ಬ ಕಷ್ಟಮರಿಂದ ಸಿಕ್ಕಿದ ಒಂದೇ ಒಂದು ಸಲದ ಬೈಗುಳ..ಅದೆಷ್ಟು ಶಾಕ್ ಆಗಿದೆ ಅಂದ್ರೆ.. ಸಿಟ್ಟು ದುಃಖ ಎರಡೂ ಆಗಿ ನನಗೆ ನಿನ್ನೆ ರಾತ್ರಿ ನಿದ್ದೆಯೇ ಬರಲಿಲ್ಲ. ಏನಾಯ್ತಪ್ಪಾ ಅಂತ ಮಕ್ಕಳಿಬ್ಬರು ಒಟ್ಟಾಗಿ ಕೇಳಿದರು. ಮನಸ್ಸಿನಲ್ಲಿ.. ಅಬ್ಬಾ..! ಈಗಲಾದರೂ ನಿಮಗೆ ಗೊತ್ತಾಯ್ತಲ್ಲ. ಅಂತ ಅಂದುಕೊಂಡ ಹೆಂಡತಿಯಿಂದ ಒಂದು ಸಣ್ಣ ನಗು.

      ಶಂಕರ ಎಷ್ಟು ವರ್ಷದಿಂದ ನಿನಗೆ ಬೈದಿದ್ದೆ.. ನೀನು ತುಂಬಾ ಒಳ್ಳೆಯವನು. ನೀನು ಸ್ವಲ್ಪವೂ ಸಿಟ್ಟು ತೋರಿಸದೆ. ತಾಳ್ಮೆಯಿಂದಲೇ ನಮಗೆಲ್ಲರಿಗೂ ಕೇಳಿದ್ದೆಲ್ಲ ರೆಡಿ ಮಾಡಿ ಬಡಿಸಿದ್ದೆ ... ಶಂಕರಾ..ಇನ್ನು ನಾನು ಬಯ್ಯಲ್ಲಾ. ನೀನು ಹೇಗೆ ರೆಡಿ ಮಾಡಿ ಕೊಟ್ಟರೂ ತಿನ್ನುತ್ತೇನೆ .ನಿಜವಾ..ಸಾರ್. ನೀವು ಹೇಳುತ್ತಿರುವುದು ನಿಜವಾ.. ಸಾರ್.. ನಿನ್ನಾಣೆ ಬೈಯಲ್ಲ. ಸಂತೋಷ ತಡಕೊಳಕ್ಕೆ ಆಗ್ತಾ ಇಲ್ಲ ಸಾರ್.. ಸಾರ್.. ಸಾರ್.. ಹಾಗಿದ್ರೆ ನಿಮಗೆ..ನಿಮಗೆ..ಹೇಳು ಶಂಕರ ಏನು..ನಿಮಗೆ..ಬೇಗ ಹೇಳು..ನಾನು ಇನ್ನು ಮುಂದೆ ಪದಾರ್ಥಗಳಿಗೆ ಕಫ ಎಂದು ಹಾಕಲ್ಲ ಸಾರ್..
    ಸಂತೋಷ ಸಹಿಸಲಾರದೆ ಶಂಕರ ಮತ್ತೊಮ್ಮೆ ಹೇಳಿಕೊಂಡ.. ಸಿಟ್ಟಲ್ಲಿ ಪ್ರತಿದಿನ ಗಂಟಲಿಂದ ಕೆರೆದು ಕೆರೆದು ಪದಾರ್ಥಗಳಿಗೆ ಕಫ ಹಾಕ್ತಿದ್ದೆ ಸಾರ್. ಇನ್ನು ಹಾಕಲ್ಲ ಸಾರ್.. ಬಹಳ ದೊಡ್ಡ ಜೈಲಿನಿಂದ ಬಿಡುಗಡೆ ಆದವನ ಹಾಗೆ ಖುಷಿಪಡುತ್ತಿದ್ದಾನೆ..

      ಅಯ್ಯೋ.... ಆ ಯಜಮಾನ ಮತ್ತು ಆ ಹೆಂಡತಿ-ಮಕ್ಕಳ ಪರಿಸ್ಥಿತಿ ನೀವೇ ಊಹಿಸಿ.. 
16 ವರ್ಷದಿಂದ..

      Sorry.. ಇದನ್ನು ಓದಿದ ನಿಮಗೆ ಈಗ ಯಾವುದೆಲ್ಲ ಘಟನೆ ಮನಸ್ಸಿಗೆ ಕಂಡಿತೊ..

   ಇದೊಂದು ಹೋಟೆಲ್ ಕಥೆ 

      ಅಪ್ಪ ನೀನು ಈಗ ಸಪ್ಲೈ ಯರಿಗೆ ತಿಂಡಿ ಕೇಳಿದ ರೀತಿ ಮತ್ತು ಧ್ವನಿಯಲ್ಲಿ ಸ್ವಲ್ಪ ಒರಟಿತ್ತಪ್ಪ. ಅಂತ ಒಮ್ಮೆ ಒಂದು ಒಳ್ಳೆಯ ಹೋಟೆಲಲ್ಲಿ.. ಈ ಕಫದ ಕತೆ ಕೇಳಿದ ಮೇಲೆ ತಕ್ಷಣ ನೆನಪಾಗಿ ಅಪ್ಪನಿಗೆ ಎಚ್ಚರಿಸಿ ಬಿಟ್ಟೆ. ಅಪ್ಪಾ ಅವರನ್ನು ಕರೆದು ಸಾರಿ ಕೇಳು ಅಂದೆ..ಸರಿ ಸರಿ ಗೊತ್ತಾಯ್ತು ಬಿಡು ಅಂದ್ರು..

    ಹಲೋ.. ಹಲೋ.. ಅಪ್ಪ ಅಣ್ಣಾ..ಅಂತ ಕರಿ.. ಸರಿ ಸರಿ..ಅಣ್ಣ ಅಣ್ಣ..ಅಣ್ಣ ಹತ್ತಿರ ಬಂದ್ರು.ಅಪ್ಪ ಬೇಗ ಹೇಳಪ್ಪ.. ಆಗ ನಿಮ್ಮಲ್ಲಿ ತಿಂಡಿ ತರಲಿಕ್ಕೆ ಹೇಳುವಾಗ ನನ್ನ ಸ್ವರ ಸ್ವಲ್ಪ ದಪ್ಪ,ಸ್ವಲ್ಪ ಅಧಿಕಾರ.. ಅಹಂಕಾರದಲ್ಲಿತ್ತು.. ಅದರಲ್ಲಿ ಪ್ರೀತಿ ಇರಲಿಲ್ಲ. Sorry.. ಅಯ್ಯೋ ಸಾರ್ ಅದಾ.. ಪರವಾಗಿಲ್ಲ ಸಾರ್... ಸಾರ್ ಅದಿರಲಿ. ಕೆಲವರು ಬಂದು ಕುಳಿತುಕೊಳ್ಳುವ ರೀತಿ, ಸಪ್ಲೇಯರನ್ನು ಕರೆಯುವ, ತಿಂಡಿ ಹೇಳುವ ರೀತಿ, ಅವರು, ಅವರ ಹೆಂಡತಿ ಮಕ್ಕಳ ಅಹಂಕಾರ..ಮೈಯೆಲ್ಲ ಉರರೀತದೆ. ಕೆಲವರು ಏನೇನೋ ಮಾಡಿಬಿಡುತ್ತಾರೆ ಸಾರ್. ಯಾರ ಬಗ್ಗೆ ಹೇಳಿದ್ದಣ್ಣ..ಕೆಲಸದವರು ಸಿಟ್ಟು ಬಂದರೆ ಏನೇನೋ ಮಾಡಿ ಸೇಡು ತೀರಿಸಿಕೊಳ್ಳುತ್ತಾರೆ ಸಾರ್... ನಾನು ಒಳ್ಳೆಯವನು ಸಾರ್ .
.ಹೌದಪ್ಪ.. ನಿನ್ನನ್ನು ಗೊತ್ತಿದ್ದಕ್ಕೆ ನಾವು ಇಲ್ಲಿಗೆ ಬಂದು ಕುಳಿತದ್ದು..

      ನೀವು ಮೊನ್ನೆ ಓ ಅವನು..ಕಷಾಯ ತಂದಿಟ್ಟಾಗ..ಅದು ನಿಮ್ಮ ಮೈಮೇಲೆ ಚೆಲ್ಲಿದಾಗ, ನೀವು ಏನೂ ಬೈಯ್ಯದೆ..ಪರವಾಗಿಲ್ಲ.. ಯಾವತ್ತೂ ಕೆಲವೊಮ್ಮೆ ಹೀಗೆಲ್ಲ ಯಾರಿಂದಲೂ ಆಗುತ್ತದೆ..ನೀನು ಬೇಜಾರು ಮಾಡಬೇಡ ಅಂತ ಅವನಿಗೆ ಹೇಳಿದ್ದು ನಾನು ಕೇಳಿದ್ದೆ ಸಾರ್.. ಇಲ್ಲೆಲ್ಲ ಅದು ಸುದ್ದಿಯೂ ಆಗಿದೆ. ಆದರೆ ಸಾರ್..ಅವನು ಆ ಮೇಲೆ ಬೇಜಾರು ಮಾಡಿಕೊಂಡಿದ್ದ ಸಾರ್.. ಯಾಕೆ ಏನಾಯ್ತು.. ?. ಹಾಗೇನಿಲ್ಲ. ನೀವು ಯಾಕೆ ಬಯ್ಯಲಿಲ್ಲ. ಎಲ್ಲರ ಹಾಗೆ ಯಾಕೆ ಎದ್ದುಹೋಗಿ ದಣಿಗಳಿಗೆ ಹೇಳಿಲ್ಲ. ಯಾಕೆ ಅಂತ ನಿಮ್ಮ ಒಳ್ಳೆಯತನ ಯೋಚಿಸಿ ಕಣ್ಣೀರು ಹಾಕಿದ.. ಕೆಲವರು ದುಡ್ಡಿನ ದರ್ಪ ತೋರಿಸಲು ಬಂದಹಾಗೆ. ಅವರ ಮಕ್ಕಳಿಗೂ ಅದೇ ಬುದ್ಧಿ ಕಲಿಸಿ ಕೊಟ್ಟಿರ್ತಾರೆ. ನಿಮ್ಮಂತವರು ಒಬ್ಬರು ಬಂದಾಗ ಇಡೀ ದಿನದ ನಮ್ಮ ಕಷ್ಟ ನೋವು ಮಾಯ ಆಗ್ತದೆ ಸಾರ್ ...ಸರಿ ಸರಿ ನೀವು ಹೋಗಿ. ನಿಮ್ಮನ್ನು ಅಲ್ಲಿ ಕರೆಯುತ್ತಿದ್ದಾರೆ. ಖುಷಿಯಾಯಿತು..

         ಪ್ರೀತಿಯಿಂದ ಚಂದದ ಧ್ವನಿಯಲ್ಲಿ ಕೇಳಿದಾಗ.. ವರ್ತಿಸಿದಾಗ.. ಅವರು ಅವರ ಪ್ರೀತಿ ಸೇರಿಸಿ ಹಿಂದಕ್ಕೆ ಕೊಟ್ಟಾಗ..ಅದು ಕಫ - ಶಾಪ ಇಲ್ಲದ ಆಹಾರವಾಗಬಹುದು..

   ಅಹಂಕಾರ ದರ್ಪದ ಧ್ವನಿ ತೋರಿಸಿದವರಿಗೆ ಲಾಡ್ಜ್ ಗಳ ರೂಮ್ ಬಾಯಿಗಳು ಸಿಟ್ಟಿನಿಂದ ಏನೇನು ಮಾಡುತ್ತಿದ್ದರೆಂದು ಅಪ್ಪನ ಆತ್ಮೀಯರು.. ಹೇಳಿದ್ದನ್ನು ಕೇಳಿದ ನಿಮಗೆ ಅಬ್ಬಾ..!!. ಅದಿನ್ನೂ ಅಸಹ್ಯ. ಅದನ್ನು ಕೇಳಿದಾಗ, ನನ್ನಲ್ಲಿದ್ದ ಸ್ವಲ್ಪ ಅಹಂಕಾರವು ಇಳಿದುಹೋಗಿತ್ತು.

          ಅಪ್ಪಾ.. ಮೊನ್ನೆ ನಿಮ್ಮ ಫ್ರೆಂಡ್ ಮನೆಗೆ ಹೋದಾಗ ಅವರ ಹೆಂಡತಿ ತುಂಬಾ ಸಿಟ್ಟಲ್ಲಿ ಇದ್ದರಂತೆ.. ನೀವು ಅಲ್ಲಿ ಊಟ ಮಾಡಿದ್ರಾ...ಮಗಳೇ ಎಲ್ಲರೂ ಹಾಗಿಲ್ಲ... ಸುಮ್ಮನೆ ಕೇಳಿದೆ ಅಪ್ಪ.
      ಆ ಯಜಮಾನನ ಜೋಕ್.. ಹೋಟೆಲ್.. ಮನೆಮನೆ ಕಥೆ ಈ ಪತ್ರ ಓದಿದವರಿಗೆ ... ಅಂದರೆ ಓದಿದ ಮೇಲೆ. ಅವರಿಗೆ ಕಿರಿ ಕಿರಿ ಸಿಟ್ಟು ಬರಲ್ವಾ .. ಅಂತ ಅಪ್ಪನಿಗೆ ಕೇಳಿಕೊಂಡೆ..ಇಲ್ಲ. ಇಲ್ಲ.. ಕಷ್ಟಪಟ್ಟು ಅಡುಗೆಕೋಣೆಯಲ್ಲಿ ಕೆಲಸ ಮಾಡುವವರಿಗೆ.. ಇನ್ನೆಲ್ಲೋ.. ಹೇಗೇಗೋ ದುಡಿಯುವವರಿಗೆ.. ಈ ಕಥೆ ಓದಿ ದವರಿಂದ ಧ್ವನಿಯ ದರ್ಪ ಅಹಂಕಾರದಲ್ಲಿ ಖಂಡಿತ ಸ್ವಲ್ಪ ವ್ಯತ್ಯಾಸ ಆಗದಿರದು ಮಗಳೇ..
ಹಂಗಂತೀಯ ಅಪ್ಪ....ಹೌದು..

        ನೀವೆಲ್ಲ ಏನಂತೀರಾ ಗೊತ್ತಿಲ್ಲ..ಜಾಗ್ರತೆ. ಸಿಟ್ಟು ಮಾಡಿಕೊಳ್ಳಬೇಡಿ..ಹಾಗಂತ ಈ ಪತ್ರದಲ್ಲಿ ಮಾತ್ರ ಒಂದು ಸಲಹೆ ಕೊಟ್ಟಿದ್ದೇನೆ. ಪ್ಲೀಸ್. ನಾನಿನ್ನೂ ಸಣ್ಣವಳು ನನಗೆ ಆ ನಿಮ್ಮ ಸಿಟ್ಟಿನ ಮುಖವೇ ಬೇಡ. ಪ್ಲೀಸ್ .. ನಾನು ಎಲ್ಲವನ್ನೂ ನಿಮ್ಮಿಂದಲೇ ಕಲಿಯಬೇಕು..

ನನಗೆ ನಾನಿನ್ನೂ ಆದಿ.

            ಈ ಪತ್ರ..ಅಪ್ಪನ ಮಿತ್ರರಾದ. ಶಿಕ್ಷಣ ಚಿಂತಕರು, ನೂರಾರು ಕೇಂದ್ರಗಳಲ್ಲಿ ಮತ್ತು ನಮಗೆಲ್ಲ ಶಿಬಿರಗಳಿಗೆ ರಂಜನೆ ಗಣಿತ, ವಿಜ್ಞಾನ ಚಟುವಟಿಕೆ ಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸಿಗುತ್ತಿದ್ದ.. ಉತ್ತಮ ಸಂಘಟಕ., ಜಾದೂಗಾರ 
ಶ್ರೀ ಪೂರ್ಣಾತ್ಮಾರಾಮ್ ಇವರಿಗೆ ಪ್ರೀತಿಯಿಂದ ಅಂಚೆಗೆ ಹಾಕುತ್ತಿದ್ದೇನೆ.

               ಆದಿ ಸ್ವರೂಪ ಮಂಗಳೂರು

Ads on article

Advertise in articles 1

advertising articles 2

Advertise under the article