ಹೆಜ್ಜೆ - ಕವನ
Thursday, January 21, 2021
Edit
ಮುಝೈನ 10 ನೇ ತರಗತಿ
ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ
ಪುತ್ತೂರು ತಾಲೂಕು
ಹೆಜ್ಜೆ - ಕವನ
ಹೆಜ್ಜೆ ಹೆಜ್ಜೆ ಗೊಂದು ಬೆಲೆ !
ಹುಟ್ಟಿದ ಕೂಸಿನ ಮೊದಲ ಹೆಜ್ಜೆಗೆ ,
ಮುಗ್ಧತೆ ಕೋಮಲತೆಯ ಬೆಲೆ !
ಬೆಳೆದ ಬಾಲ್ಯದ ಹೆಜ್ಜೆಗೆ
ಆಡುವ ಜಗ ನೋಡುವ ಕಲೆ !
ಹೆಜ್ಜೆ ಹೆಜ್ಜೆಗೂ ಒಂದು ಬೆಲೆ......!
ಬೆಳೆದ ಪ್ರೌಢ ಹೆಜ್ಜೆಗೆ
ನಾನು ನನ್ನದೇ ; ನನಗಾಗಿಯೇ ಎಂಬ ಜ್ವಲೆ...
ಪ್ರೌಢ ಮುಗಿಯುವಲ್ಲಿ ನಾನೇ ನನಗೆ ನೆಲೆ !
ಹೆಜ್ಜೆ ಹೆಜ್ಜೆಗೂ ಒಂದು ಬೆಲೆ......!
ಹೆಜ್ಜೆ ಬೆಳೆಯುವಲ್ಲಿ ಎಡವದೆ
ಗೆದ್ದ ಖುಷಿ ಇದೆ !
ಹೆಜ್ಜೆ ಬೆಳೆದಂತೆ ಕೂಡಿದ
ಮತ್ತೊಂದು ಮಗದೊಂದು ಹೆಜ್ಜೆ...!
ನನ್ನ ಹೆಜ್ಜೆಗೆ ಪಯಣ ಮುಂದುವರಿಯುವಾಸೆ
ಬೆಳೆವ ಹೆಜ್ಜೆಗೆ ನನ್ನ ಹೆಜ್ಜೆ ಮೇಲೆ
ಕೂರಿಸಿ ಸಾಗಿಸುವಾಸೆ......!
ಹೆಜ್ಜೆ ಹೆಜ್ಜೆಗೂ ಒಂದು ಬೆಲೆ...!
ಇಟ್ಟ ಹೆಜ್ಜೆ ಸರಿ ಇದ್ದರೆ ಒಂದು ಬೆಲೆ
ಕೆಟ್ಟರೆ ಮಗದೊಂದು ಬೆಲೆ..!!?
ಸುಖ - ದಾಟ ದುಃಖ - ದಾಟ
ಇದೇ ಈ ಜಗದಾ ಹೆಜ್ಜೆಯಾಟ ...!
ಮುಝೈನ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ
ಪುತ್ತೂರು ತಾಲೂಕು