-->
ಹೊಸವರ್ಷಕೆ ನನ್ನ ಕನಸು

ಹೊಸವರ್ಷಕೆ ನನ್ನ ಕನಸು

                         ಜೀವಿತ 8 ನೇ ತರಗತಿ
                  ಸರಕಾರಿ ಪ್ರೌಢಶಾಲೆ ಪಂಜಿಕಲ್ಲು
                          ಬಂಟ್ವಾಳ ತಾಲೂಕು

                   ಹೊಸ ವರ್ಷಕ್ಕೆ ನನ್ನ ಕನಸು 
    2020 ರ ವರ್ಷ ಕಳೆದು 2021 ಕ್ಕೆ ಕಾಲಿಡಲಿದ್ದೇವೆ. 2020 ರ ವರ್ಷದ ಎಲ್ಲಾ ಕನಸುಗಳು ಅರ್ಧಕ್ಕೆ ನಿಂತಿದೆ. ಆದರೆ ಅದನ್ನು 2021 ಹೊಸ ವರ್ಷದಲ್ಲಿ ಪೂರೈಸುವೆ. ಹೊಸ ವರ್ಷಕ್ಕೆ ನನ್ನ ಕನಸು ನಾನು ಮೊದಲಿಗೆ ನನ್ನ ತಂದೆ, ತಾಯಿ , ಅಕ್ಕ, ಎಲ್ಲಾ ಹಿರಿಯರು ಮತ್ತು ಕಿರಿಯರ ದೃಷ್ಟಿಯಲ್ಲಿ ಗೌರವಯುತ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ನಾನು ಅತ್ಯುತ್ತಮ ಅಂಕ ಗಳಿಸಿ ಮತ್ತು ಶಿಕ್ಷಕರ ಎಲ್ಲಾ ಮಾತುಗಳನ್ನು ಗೌರವಿಸಿ ಪಾಲಿಸುವ ಉತ್ತಮ ವಿದ್ಯಾರ್ಥಿಯಾಗಬೇಕು. ನಾನು ನನ್ನ ಶಿಕ್ಷಕರಿಗೆ , ನನ್ನ ತಂದೆ ತಾಯಿಗೆ, ಹಿರಿಯರಿಗೆ ಗೌರವಿಸಿ, ಎಲ್ಲರೊಂದಿಗೆ ಸ್ನೇಹಭಾವದಂತೆ ಇದ್ದು ಎಲ್ಲರ ಹಿತ ಕಾಪಾಡುವ ಭಾರತದ ಉತ್ತಮ ನಾಗರಿಕಳಾಗಬೇಕು. ನಾನು ನನ್ನ ಎಲ್ಲಾ ಗೆಳೆಯ ಗೆಳತಿಯರಿಗೆ ತಮ್ಮ ವಿದ್ಯಾಭ್ಯಾಸದಲ್ಲಿ ನನ್ನ ಕೈಲಾದಷ್ಟು ಸಹಕರಿಸುವೆ. ಯುವ ಜನತೆಯಾದ ನಾನು ಕೂಡ ಭಾರತವನ್ನು ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವೆ. ಅಲ್ಲಲ್ಲಿ ಗಿಡ ನೆಡುವೆ. ಗಿಡ ಮರವನ್ನು ಪ್ರೀತಿಯಿಂದ ಪೋಷಿಸುವೆ. ನೀರನ್ನು ಮಿತವಾಗಿ ಬಳಸಿ, ಎಲ್ಲಾದರು ನೀರಿನ ದುರ್ಬಳಕೆಯಾದರೆ ಜಾಗ್ರತೆ ವಹಿಸಿ ನಿಭಾಯಿಸುವೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವೆ. ದೇಶ ಮತ್ತು ರಾಜ್ಯಕ್ಕಾಗಿ ಶ್ರಮಿಸುವ ಉತ್ತಮ ಪ್ರಜೆಯಾಗುವೆ, ದೇಶದ ಹಿತ ನನ್ನ ಹಿತವೆಂದು ಶ್ರಮಿಸುವೆ. ಜಲಮಾಲಿನ್ಯ , ಭೂಮಾಲಿನ್ಯ , ವಾಯುಮಾಲಿನ್ಯ, ಶಬ್ಧಮಾಲಿನ್ಯದ ತಡೆಗಾಗಿ ಶ್ರಮಿಸುವೆ. ಉತ್ತಮ ಮಗಳಾಗಿ, ಉತ್ತಮ ವಿದ್ಯಾರ್ಥಿಯಾಗಿ,ಉತ್ತಮ ಪ್ರಜೆಯಾಗಿ ,ಉತ್ತಮ ಸ್ನೇಹಿತಳಾಗಿ ನನ್ನ ಜೀವನದ ಗುರಿಯೆಡೆಗೆ ಸಾಗುತ್ತೇನೆಂದು ನನ್ನ ಹೊಸ ವರ್ಷದ ಕನಸು.
                 
                   ಜೀವಿತ 8 ನೇ ತರಗತಿ
            ಸರಕಾರಿ ಪ್ರೌಢಶಾಲೆ ಪಂಜಿಕಲ್ಲು
                   ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article