ಚುಟುಕುಗಳು - ಆದ್ಯಂತ್ ಅಡೂರ್
Friday, January 1, 2021
Edit
ಆದ್ಯಂತ್ ಅಡೂರು 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದ.ಕ.
ಚುಟುಕುಗಳು
ಗಾಂಧೀಜಿ
ನಮ್ಮ ರಾಷ್ಟ್ರಪಿತ ಗಾಂಧೀಜಿ
ಮಕ್ಕಳ ಪ್ರೀತಿಯ ಬಾಪೂಜಿ
ಸ್ವಾತಂತ್ರ್ಯವ ಕೊಟ್ಟರು ನಮಗೆ
ಹಲವು ಹೋರಾಟಗಾರರ ಜೊತೆಗೆ ....
ಯೋಧರು
ನಮ್ಮ ಧೀರ ಯೋಧರು
ದೇಶವನ್ನು ಕಾಯ್ವರು
ಕೋವಿ ಹಿಡಿದು ನಿಲುವರು
ವೈರಿಯನ್ನು ಬಡಿಯುವರು !
ರಕ್ತ
ನಮ್ಮ ಮೈಯಲ್ಲಿರುವುದು ರಕ್ತ
ಆರೋಗ್ಯಕ್ಕೆ ಇದು ಉಪಯುಕ್ತ
ದೇಹದಲ್ಲಿ ನೀರಿನಂತೆ ಹರಿಯುತ್ತದೆ
ರಕ್ತದಾನದಿಂದ ರಕ್ತ ಶುದ್ಧಿಯಾಗುತ್ತದೆ......
ಗಗನ
ನೀಲಿ ಬಣ್ಣದ ಗಗನದಲಿ
ಹಕ್ಕಿಗಳು ಹಾರುವುವು ಹರುಷದಲಿ
ಸೂರ್ಯ, ಚಂದ್ರ, ತಾರೆಗಳು
ನೋಡಲು ಚಂದ
ಆಕಾಶವನ್ನು ನೋಡಿದಾಗ ಆಗುವುದು ಆನಂದ !
ಪಟಾಕಿ
ಪಟಾಕಿ ತುಂಬಾ ಅಪಾಯಕಾರಿ
ದೀಪಾವಳಿಗೆ ಮಾಡುವರು ತಯಾರಿ
ಮಕ್ಕಳಿಗಿದು ಗಮ್ಮತ್ತು
ನಿರ್ಲಕ್ಷ್ಯ ಮಾಡಿದರೆ ಆಪತ್ತು !
ಆದ್ಯಂತ್ ಅಡೂರು 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದ.ಕ.