-->
ನಮ್ಮ ನಡೆ - ಶಾಲೆಯ ಕಡೆ

ನಮ್ಮ ನಡೆ - ಶಾಲೆಯ ಕಡೆ

ಅಂಕಿತಾ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ,ಕೊಳ್ನಾಡು
ಬಂಟ್ವಾಳ ತಾಲೂಕು


              ನಮ್ಮ ನಡೆ - ಶಾಲೆಯ ಕಡೆ 

        ಗೆಳತಿಯರೊಡಗೂಡಿ ಶಾಲೆಗೆ ಹೋಗುವುದೆಂದರೆ ಅದೇನೋ ಖುಷಿ. ಶಾಲೆಯಲ್ಲಿ ಕಳೆದ ದಿನಗಳ ಬಗ್ಗೆ ಚರ್ಚಿಸುತ್ತಾ ನಮ್ಮ ಖುಷಿಯನ್ನು ಹಂಚಿಕೊಳ್ಳುತ್ತಾ ಶಾಲೆಯನ್ನು ತಲುಪುವುದೇ ಒಂದು ಸಂಭ್ರಮವಾಗಿತ್ತು. ಈ ಸಂಭ್ರಮಕ್ಕೆ 2020 ಮಾರ್ಚ್ ನಲ್ಲಿ ಭಾರತಕ್ಕೆ ಲಗ್ಗೆ ಇಟ್ಟ ಮಹಾಮಾರಿ ಕೊರೋನಾ ತಡೆಯೊಡ್ಡಿತು!!. ಈ ಮಹಾಮಾರಿಯಿಂದ ನಾವೆಲ್ಲರೂ ದೀರ್ಘಕಾಲ ಮನೆಯಲ್ಲೇ ಉಳಿಯುವಂತಾಯಿತು. ಈ ರಜೆಯಲ್ಲಿ ಕಳೆದ ದಿನಗಳು ನಾನು ಹತ್ತನೇ ತರಗತಿ ವಿದ್ಯಾರ್ಥಿನಿ ಎಂಬುದನ್ನೇ ಮರೆಯುವಂತೆ ಮಾಡಿತು!! ಆದರೂ ನಾನು ಪಠ್ಯ ವಿಷಯಗಳಲ್ಲಿ ಸಂಪೂರ್ಣವಾಗಿ ಮರೆತು ಹೋಗಬಾರದೆಂದು ನನ್ನ ಗೆಳತಿಯರ ಜೊತೆಗೆ ವಿಚಾರಿಸುತ್ತಿದ್ದೆ. ಆಗಲೇ ಕರ್ನಾಟಕ ಸರ್ಕಾರವು ಚಂದನವಾಹಿನಿಯಲ್ಲಿ ಪಾಠ ಪ್ರಾರಂಭಿಸಿ ಮಕ್ಕಳನ್ನು ತಲುಪುವ ಪ್ರಯತ್ನ ಮಾಡಿತು. ದೂರದರ್ಶನ ಮತ್ತು ಮೊಬೈಲ್ ಗಳ ಮೂಲಕ ನಡೆದ ಶಿಕ್ಷಣದ ಪ್ರಯತ್ನ ಒಳ್ಳೆಯದಾದರೂ ಅದನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟವಾಯಿತು. ಈ ಎಲ್ಲಾ ಘಟನೆಗಳಿಗೆ ಮೂಲ ಕಾರಣವೇ "ಕೊರೋನಾ". 

        ಕೊನೆಗೂ ಸರ್ಕಾರವು ಶಾಲಾ ಆರಂಭದ ಬಗ್ಗೆ ಎಲ್ಲಾ ತಯಾರಿಗಳನ್ನು ನಡೆಸಲು ಸಜ್ಜಾಯಿತು. ಇದರಿಂದ ನಾನು ಪಠ್ಯದ ಕಡೆ ಬಹಳಷ್ಟು ಗಮನಹರಿಸಿದೆ. ಕೊನೆಗೂ ಶಾಲೆ ಆರಂಭದ ಪುಣ್ಯ ದಿನ ಬಂದೇಬಿಟ್ಟಿತು. ವರ್ಷದ ಮೊದಲ ದಿನ ಶಾಲೆಗಳು ಪ್ರಾರಂಭವಾದವು. ಬೇರೆ ಮಕ್ಕಳಿಗೆ ಹೇಗೆ ಅನಿಸುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ನನಗಂತೂ ತುಂಬಾ ಖುಷಿಯಾಗುತ್ತದೆ. ಏಕೆಂದರೆ ಮೊಬೈಲ್ ಗಳ ಮೂಲಕ ಕಲಿಕೆಯ ವಿಚಾರವೇನೋ... ಚೆನ್ನಾಗಿದೆ. ಆದರೆ ಮನೆಯಲ್ಲಿ ಕೂತು ಸರಿಯಾಗಿ ಓದಲು ಬರೆಯಲು ಮನಸ್ಸಾಗುತ್ತಿರಲಿಲ್ಲ !!. ಮನೆಯಲ್ಲಿ ಆಟವಾಡೋಣ.... ಟಿವಿ ನೋಡೋಣ.....!! ಎಂಬಿತ್ಯಾದಿ ನೂರೆಂಟು‌ ಯೋಚನೆಗಳು ತಲೆಯಲ್ಲಿ ಸುಳಿದಾಡುತ್ತಿದ್ದವು.  

      ಸರ್ಕಾರವು ಶಾಲೆ ಆರಂಭಿಸಿದಾಗ ನಮ್ಮಲ್ಲಿ ನಾವು ದೃಢ ನಿರ್ಧಾರ ಮಾಡಿ ಸ್ವಚ್ಛತೆಯನ್ನು ಮತ್ತು ಆರೋಗ್ಯವನ್ನು ಕಾಪಾಡುತ್ತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಶಾಲೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಆಯಾ ವಿಷಯ ಶಿಕ್ಷಕರ ಬಳಿ ಕೇಳಿ ತಿಳಿಯಲು ಸಹಾಯವಾಯಿತು. ಇದರಿಂದ ನಮ್ಮಲ್ಲಿ ಓದುವ ಛಲ ಹುಟ್ಟಿತು. ಈಗ ನನ್ನ ಸಹಪಾಠಿಗಳೊಂದಿಗೆ ಮೊದಲಿನಂತೆ ಖುಷಿಯಾಗಿ ದಿನ ಕಳೆಯುತ್ತಿದ್ದೇನೆ.

ಅಂಕಿತಾ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು


Ads on article

Advertise in articles 1

advertising articles 2

Advertise under the article