ಆದಿಯ ಚಿತ್ರ ಪತ್ರ - 49
Monday, January 25, 2021
Edit
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
ಆದಿಯ ಚಿತ್ರ ಪತ್ರ - 49
ಆದಿಯ ಚಿತ್ರ ಪತ್ರ - 49
ಗುರು: ಬ್ರಹ್ಮ ಗುರು : ವಿಷ್ಣು ಗುರುರ್ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ :
ಶಿಕ್ಷಕರನ್ನು ಜೈಲಿಗೆ ಹಾಕಿ
ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರನ್ನೆಲ್ಲ ಗೊರ್ ಗುರು ಒಟ್ಟು ಸೇರಿಸಿದರು. ಇಲ್ಲಿ ಸೇರಿರುವ ಪೋಷಕರೇ ಗಮನಿಸಿ ಇದು ಒಳ್ಳೆಯ ಸಮಯ. ನಿಮ್ಮ ಶಾಲೆಗೆ Rank ಬಂದ ವಿಚಾರದಲ್ಲಿ ನೀವೆಲ್ಲರೂ ಸೇರಿ ಸಂಭ್ರಮಿಸಿದ್ದೀರಿ. ಊರಿಗೆ ದೇಶಕ್ಕೆ ಇದು ಹೆಮ್ಮೆಯ ವಿಚಾರ. ಪೋಷಕರೇ..ಇಲ್ಲೊಂದು ಎಚ್ಚರಿಕೆಯ ಉತ್ತಮ ಅವಕಾಶ ನಿಮ್ಮೆಲ್ಲರ ಕೈಯಲ್ಲಿದೆ. Rank ಗೆ ಕಾರಣರಾದ, ಶಿಕ್ಷಕರನ್ನು, ಶಾಲಾ ಮುಖ್ಯಸ್ಥರನ್ನು ಎಲ್ಲಾರನ್ನೂ ಕಾನೂನು ಪ್ರಕಾರ ಜೈಲಿಗೆ ಹಾಕೋಣ. ಬನ್ನಿ ಬೇಗ ನಿರ್ಧಾರ ಮಾಡಿ. ದೇಶದ ಲಕ್ಷ ಲಕ್ಷ ಮಕ್ಕಳು ಶಿಕ್ಷಣ ವಂಚಿತರಾಗೋದರಿಂದ ಬಚಾವಾಗ್ತಾರೆ. ಪುಣ್ಯದ ಕೆಲಸ ಮಾಡೋಣ.
ಹಾಂ.. ಹೂಂ.. ಏನಿದು..?. ಏನು ಹೇಳುತ್ತಿದ್ದೀರಿ. ನೀವು ಒಬ್ಬರು ಶಿಕ್ಷಕರ ತರಬೇತಿ ಶಾಲೆಯ ಶಿಕ್ಷಕರು ಆಗಿದ್ದುಕೊಂಡು ಹೀಗೆ ಹೇಳೋದಾ..?.ನಿಮಗೆ ತಲೆಗಿಲೆ ಕೆಟ್ಟಿದೆಯಾ..?..ಚೆ..ಛೆ.:..ಛೆ..!...ಗಡಿಬಿಡಿಯಿಂದ ಏನೇನೊ ಕಾರಣ ಹೇಳಿ ತುರ್ತು ಸಭೆ ಸೇರಿಸಿದ ಗೊರ್ ಗುರು ಗಳ ಮುಂದೆ ಎಲ್ಲರೂ ಗುರ್ ಗುರ್ ಅಂದ್ರು. ಒಮ್ಮೆಲೇ ಹೆದರಿಬಿಟ್ಟ ಅವರೆಲ್ಲರ ಮುಂದೆ ಅಪರಾಧಿಯಾಗಿ ನಿಂತಿದ್ದ ಶಿಕ್ಷಣ ಚಿಂತಕ, ಹೋರಾಟಗಾರ ಗೊರ್ ಗುರು ಏನನ್ನೂ ಉತ್ತರಿಸಲಾಗದೆ ಮೌನದಿಂದ ನಿಂತಿದ್ರು. ಪೋಷಕರೇ...ಮಕ್ಕಳ ಮೂಲ ಸಮಸ್ಯೆ ಗೆ ಯಾರೂ ಹೊಣೆಗಾರರಾಗದೇ.. ಉಳಿದ, ಸಾಮರ್ಥ್ಯದ ಬಹಿರಂಗ ಲೂಟಿಯ ಸತ್ಯ ನಿಮಗೆ ಅರ್ಥ ಆಗದೆ ಉಳಿದಿದೆ. ಪೋಷಕರೇ ನಿಮ್ಮ ತಪ್ಪು ಯಾವುದು ಅರ್ಥ ಮಾಡಿಕೊಳ್ಳಿ. ಇಲ್ಲಿ ಮಗುವಿನ ತಪ್ಪು ಹೇಳುವಂತಿಲ್ಲ. ಪೂರ್ವ ಜನ್ಮದ ದೋಷ, ಹೆರಿಡಿಟರಿ, ಜೀನ್ಸ್, ಗಾಡ್ ಗಿಫ್ಟ್ ಹೇಳಬೇಕಾದ್ದಿಲ್ಲ . ಮಗುವನ್ನು ಮೊದಲು ಕಂಡವರ ತಪ್ಪು. ಅವರನ್ನು ಮೊದಲು
ಕರಕೊಂಡು ಹೋದದ್ದು ಹೇಗೆ, ಎಲ್ಲಿಗೆ.,.?.
ಗುರುವೇ ದೈವ ಅಂತ ಕಂಡವರು ನೀವು. ತಪ್ಪಿಲ್ಲ. ಹೌದು. ಹಾಗೆ ಕಾಣಲೇ ಬೇಕು.
ಆ ದಿನ ಗೊರ್ ಗುರು ಹೇಳಿದ ಸತ್ಯ 70% ಪೋಷಕರಿಗೆ ಅರ್ಥ ಆಯ್ತು. ಹೌದು..!. ಹೌದು..!. ನೀವು ಹೇಳೋದು ಸರಿ ಸರಿ ಅಂದ್ರು.
ಈ ದಿನ ಇಲ್ಲಿ ಸರಿ ಅಂತ ಒಪ್ಪಿಕೊಂಡ ಪೋಷಕರು ಯಾರು ಗೊತ್ತಾ..?.
First Rank ಬಂದ ತರಗತಿಯಲ್ಲಿದ್ದ 67 ವಿದ್ಯಾರ್ಥಿಗಳಲ್ಲಿ 12 ಮಂದಿಗೆ ಇನ್ನೂ ಅಕ್ಷರ ಯಾವ ಭಾಷೆಯಲ್ಲೂ ಓದಲು ಬರೆಯಲು ಸರಿಯಾಗಿ ಬರೋದಿಲ್ಲ. First Rank ಗೆ ಆ ಶಿಕ್ಷಕರು ಕಾರಣ ಹೌದಾದರೆ, ಈ ಹನ್ನೆರಡು ಮಂದಿ ಅಕ್ಷರ ಬಾರದೆ ಶಿಕ್ಷಣ ವಂಚಿತರಾಗಲೂ ಯಾವ ಶಿಕ್ಷಕರು ಕಾರಣ. ಆ ವಿದ್ಯಾರ್ಥಿಗಳ ಪೋಷಕರು, ಇದು ಕ್ರಿಮಿನಲ್ ಕೇಸ್. ಇದಕ್ಕೆ ಕಾನೂನು ಇದೆ ಅಂತ ಒಂದು ಕ್ಷಣಕ್ಕೆ ಸತ್ಯ ತಿಳಿದುಕೊಂಡದ್ದಂತು... ಸತ್ಯ. ಆದರೆ ಪಾಪ ಶಿಕ್ಷಕರದ್ದು ಏನೂ ತಪ್ಪಿಲ್ಲ. ಅವರು ಸರಕಾರ ಶಾಲಾ ಮುಖ್ಯಸ್ತರು, ಹೇಳುವುದನ್ನಷ್ಟೇ, ಟೈಮ್ ಟೈಮ್ ಗೆ ದಾಖಲೆಗಾಗಿ ಮಾಡುವುದೇ ಕೆಲಸ ಅಷ್ಟೆ ಆಲ್ವಾ..!?. ಅಂತಾನೂ ಪೋಷಕರಲ್ಲೊಬ್ಬ ಪುಣ್ಯಾತ್ಮ ಕೊಂಕು ಮಾತಾಡಿಕೊಂಡ. ಮಕ್ಕಳ ಭವಿಷ್ಯ ಇವರ ಕೈಯಲ್ಲೇ ಇರುವ ಕಾರಣ ಇಂತಹ ಅಪರಾಧ ಮಾಡಿದವರಲ್ಲಿ ಒಂದು ಹತ್ತು ಮಂದಿಯನ್ನಾದ್ರೂ ಜೈಲಿಗೆ ಹಾಕಿದ್ದಿದ್ರೆ..?.
ರಾಜ್ಯದಲ್ಲಿ 60% ವಿದ್ಯಾರ್ಥಿಗಳಿಗೆ, ಸರಿಯಾಗಿ ಓದಲು ಬರೆಯಲು ಮತ್ತು ಲೆಕ್ಕ ಪಾಠ ಅರ್ಥ ಆಗದ ಸಮಸ್ಯೆಯಾಗಿದೆ ಅನ್ನುವುದು ಸರಕಾರವೇ ಘೋಷಣೆ ಮಾಡಿದ ಅಂಕಿ ಅಂಶವಾಗಿದೆ. ಮಕ್ಕಳ ಬದುಕು ಕೇವಲ ಸರ್ಟಿಫಿಕೇಟ್ ಗಾಗಿಯಾಗಿದೆ. ಸಾಮರ್ಥ್ಯ ಬಹಿರಂಗವಾಗಿ ಲೂಟಿಗೊಳ ಗಾಗುತ್ತಿರುವುದನ್ನುಸರಿಪಡಿಸಲು ಮಕ್ಕಳೇ ಮಕ್ಕಳಿಗಾಗಿ ಹೋರಾಟ ಮಾಡಬೇಕಾದ ಕಾಲ ಬರಬೇಕಾದೀತು.
ಓದಲು ಬರೆಯಲು ಗೊತ್ತಿಲ್ಲದಿರೋದು, ಪಾಸು ಫೇಲ್ ಒಂದೆಡೆಯಾದರೆ.. ಮತ್ತೊಂದೆಡೆ first class, distinction, Rank.. Rank . ಇವೆಲ್ಲ ಕೇವಲ ಸರ್ಟಿಫಿಕೇಟ್ ವಿಚಾರ ಬಿಡಿ. ಬಿಡಿ ಅಂತ ಹೇಳುವಂತಾನೂ ಇಲ್ಲ. ಇಲ್ಲಿ ಕಾಣೋದು ಇದು ಮಾತ್ರ. ಇದು ಸರ್ಟಿಫಿಕೇಟ್ ಪ್ಯಾಕ್ಟರಿಯ ಡೂಪ್ಲಿಕೇಟ್ ಜೆರೋಕ್ಸ್ ಪ್ರೊಡಕ್ಷನ್. ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಗಲ್ಲಿ ಗಲ್ಲಿಗೆ ಸರ್ಟಿಫಿಕೇಟ್ ಬ್ಯುಸಿನೆಸ್ ಫ್ಯಾಕ್ಟರಿಗಳು ಹುಟ್ಟಿಕೊಳ್ತಾನೇ ಇದೆ. ಕರ್ನಾಟಕದಲ್ಲಿ ಬಡವರಿಗೆ ಕನ್ನಡ ಸರಕಾರಿ ಶಾಲೆ. ದುಡ್ಡಿರುವವರಿಗೆ ಇಂಗ್ಲಿಷ್ ಸರ್ಕಸ್ ಫ್ಯಾಕ್ಟರಿ ಶಾಲೆ. ಇರುವುದು ಕರ್ನಾಟಕದಲ್ಲಿ. ಮನೆಯಲ್ಲಿ ಮಾತನಾಡುವುದು ಕನ್ನಡ. ಆ ಕಡೆಗೆ ಕನ್ನಡ ಓದಲು ಬರೆಯಲು ಗೊತ್ತಿಲ್ಲ. ಪಾಪ ಈ ಕಡೆ ಇಲ್ಲಿ ಸರಿಯಾಗಿ ಇಂಗ್ಲೀಷು ಇಲ್ಲಾ. ಪರೀಕ್ಷೆಗಾಗಿ ಶಾಲೆ. ಮತ್ತೊಂದು ವರ್ಗದ ಪೋಷಕರಿಗೆ ಪ್ರತಿಷ್ಠೆಗಾಗಿ, CBSCE, ICSCE ಇಂಡಸ್ಟ್ರೀ. ಸಾಮಾನ್ಯ ಜ್ಞಾನ ಇಲ್ಲವೇ ಇಲ್ಲ. Zero talent zero developement.
ಶಿಕ್ಷಕರನ್ನು ಜೈಲಿಗೆ ಹಾಕಿ ಅನ್ನುವ ಬೇಡಿಕೆಯ ಸುದ್ದಿ ಇಲಾಖೆಗೆ ಮುಟ್ಟಿತು. ತಕ್ಷಣ ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಪೋಷಕರ ಶಿಕ್ಷಕರ ವಿಚಾರಣೆಗೆ ತುರ್ತು ಸಭೆ ಸೇರಿತು. 10 ನೇ ತರಗತಿಯ ಶಿಕ್ಷಕರನ್ನು ಕರೆದು ವಿಚಾರಿಸಲು ಆರಂಭಿಸಿದರು. ಹಾ...? ಏನಾಯಿತು ಹೇಳಿ..?.ಯಾಕೆ ಹೀಗಾಯ್ತು. ಇಲ್ಲಾ ಸಾರ್.. ಆ ಮಕ್ಕಳಿಗೆ ಸಾಕಷ್ಟು ಸಲ.. ಬೈದು, ಹೊಡೆದು, ಬುದ್ದಿ ಹೇಳಿ ಹೇಳಿ ಸಾಕಾಯ್ತು ಸಾರ್. ಸಾರ್.. ಅದಲ್ಲ ಸಾರ್.. ಅವರು ಒಂಬತ್ತನೇ ತರಗತಿಯಿಂದ ಬರುವಾಗಲೇ ಸರಿ ಇರಲಿಲ್ಲ ಸಾರ್. ನಮಗೆ ಹತ್ತನೇ ತರಗತಿ ಪೋರ್ಷನ್, ರಿವಿಷನ್ ಮುಗಿಸೋದರ ಮಧ್ಯೆ ಅವರನ್ನು ರಿಪೇರಿ ಮಾಡಿಕೊಂಡಿರಲು ಸಾಧ್ಯ ಇಲ್ಲಾ ಸಾರ್. ಅವರ ತಪ್ಪಿಗೆ ವಯಸ್ಸಾಗಿದೆ ಸಾರ್.
ಸಾರ್.. ನಾವು ಒಳ್ಳೆಯವರು ಸಾರ್. ಬಹಳ ಕಡೆ ಒಂಬತ್ತನೇ ತರಗತಿಯಲ್ಲಿ ಅಂತಹ ಮಕ್ಕಳು ಇದ್ದಾರೆ, ಪೋಷಕರಿಗೆ ಹೇಳಿ, ಹೇಗಾದ್ರು ಮಾಡಿ ಶಾಲೆಯಿಂದ ಹೊರ ಹಾಕಿ, ಟ್ಯೂಷನ್ ಗೆ ಹಾಕಿಸಿ ಬಚಾವಾಗ್ತಾರೆ ಸಾರ್. ಮೊದಲೇ ಹೇಳಿದ್ರೆ ಫೀಸ್ ಶಾಲೆಗೆ ಸಿಗೋದು ತಪ್ಪುತ್ತದೆ. ಅದಕ್ಕೆ ಒಂಬತ್ತನೇ ತರಗತಿ ವರೆಗೆ ಹೇಗಾದ್ರು ಮಾಡಿ ಫೀಸಿಗಾಗಿ ಸುಮ್ಮನೆ ಪಾಸು ಮಾಡುತ್ತಾನೇ ಇರ್ತಾರೆ.ಇಲ್ಲದಿದ್ದರೆ ಅವರಿಗೆ ಸೆಂಟ್ ಪರ್ಸೆಂಟ್ ರಿಸಲ್ಟ್ ಬ್ಯಾನರ್ ಹಾಕೋದಿಕ್ಕೇ ಆಗೋದಿಲ್ಲ ಸಾರ್.
ಸಾರ್ ನಾವು ಒಳ್ಳೆಯವರು ಸಾರ್.ಇರಲಿ ಬಿಡಿ.ಅದೆಲ್ಲಾ ಇದ್ದದ್ದೇ. ಎಲ್ಲರಿಗೂ ಗೊತ್ತಿರುವಂತದ್ದೇ.ಬೇರೆಯವರ ವಿಚಾರ ಇಲ್ಲಿ ಯಾಕೆ. ಸರಿ..ಸರಿ.
ಹಾಂ.. ಹೇಳಿ. ಒಂಬತ್ತನೇ ತರಗತಿ ಶಿಕ್ಷಕರು, ಎಲ್ಲರೂ ಬಂದಿದ್ದೀರಾ.?. ಹಾ.. ನೀವು ಕಾರಣರಂತೆ.. ನೀವು ಯಾಕೆ ಸರಿಯಾಗಿ ಕಲಿಸಿಲ್ಲ. ಇಲ್ಲಾ ಚೆನ್ನಾಗಿ ಕಲಿಸಿದ್ದೇವೆ ಸಾರ್. ನಾವೂ ಸಾಕಷ್ಟು ಶಿಕ್ಷೆ ಕೊಟ್ಟು ಬುದ್ದಿವಾದ ಹೇಳಿ ಸಾಕಾಗಿದೆ ಸಾರ್. ಅವರು ಎಂಟನೇ ತರಗತಿಯಿಂದ ಬರುವಾಗಲೇ ಸರಿ ಇಲ್ಲಾ ಸಾರ್. Next ಎಂಟನೇ ತರಗತಿಯವರು ಹೇಳಿ... ಇಲ್ಲಾ ಸಾರ್ ಏಳನೇ ತರಗತಿಯಿಂದಲೇ ಸರಿ ಇಲ್ಲಾ ಸಾರ್. Next..6,5,4,3,2,1. ಅವರು uKG ಯಿಂದಲೇ ಸರಿ ಇಲ್ಲಾ ಸಾರ್. LKG-UKG ಯವರು ಇಲ್ಲಿ ಯಾರಾದ್ರೂ ಇದ್ದೀರಾ...?. ಹೌದು ಸಾರ್.
ಹಾ.. ಕಟ ಕಟೆಗೆ ಬನ್ನಿ.ಪಾಠ ಪುಸ್ತಕ ಮುಟ್ಟಿ ಸತ್ಯವನ್ನೇ ಹೇಳುತ್ತಿದ್ದೇವೆ. ಸತ್ಯವಲ್ಲದೆ ಬೇರೇನೂ ಹೇಳಲು ಗೊತ್ತಿಲ್ಲ.
ಸಾರ್.. ಅವರು ಮನೆಯಿಂದ ಬರುವಾಗಲೇ ಸರಿ ಇರ್ಲಿಲ್ಲ ಸಾರ್.
ಹಾ. ಬೇಗ.. ಬೇಗ.. ಊಟಕ್ಕೆ ಹೊತ್ತಾಯ್ತು. ಪೋಷಕರೆ ಲ್ಲರೂ ಇಲ್ಲೇ ಇದ್ದೀರಾಲ್ಲಾ.. ಹೇಳಿ.
ಸಾರ್.. ಹಾಗಾದ್ರೆ ನಾವು ಶಾಲೆಗೆ ಕಳುಹಿದ್ದು ಯಾಕೆ ಸಾರ್...?. ನಿಮಗೆ ಟ್ಯೂಷನ್ ಗೆ ಕಳುಹಿಸಲು ಸಾಧ್ಯವಿಲ್ಲದವರು ಮಕ್ಕಳನ್ನು ನಮ್ಮ ಶಾಲೆಗೆ ಹಾಕಿದ್ದು ಯಾಕಂತ.. ನಮ್ಮನ್ನು ಒಂದನೇ ತರಗತಿ class teacher ಸ್ಟಾಫ್ ರೂಮ್ಗೆ ಕರೆದು ಬೈದದ್ದು ಯಾಕಂತ ಇನ್ನೂ ಗೊಂದಲದಲ್ಲೇ ಇದ್ದೇವೆ ಸಾರ್. ಅಲ್ಲಿ ಟ್ಯೂಷನ್ ಮಾಡೋದೋ ಅವರೇ ಸಾರ್. ಶಾಲೆ ಯ ದೂರಿಗೆ ಮಕ್ಕಳಿಗೆ ಮನೆಯಲ್ಲಿ ಪೆಟ್ಟು. ಮಕ್ಕಳಿಗೆ ಪಾಪ ಎರಡೂ ಕಡೆ ಪೆಟ್ಟು, ಬೈಗುಳ, ಅವಮಾನ.
ಪೋಷಕರು ಇನ್ನೇನಾದ್ರೂ ಹೇಳ್ತೀರಾ...?. ಬದುಕಿನಲ್ಲಿ ಮಕ್ಕಳ ಜತೆಗಿರಲು ಬಿಡುವೇ ಇಲ್ಲದ ಇಲ್ಲೂ ಮಾತನಾಡಲು ಪುರುಸೊತ್ತಿಲ್ಲದೆ ಸಭೆಯಿಂದಲೇ ಎದ್ದು ಹೋಗಿಯೇ ಬಿಟ್ರು.
ಯಾಕೆ ಹೋದದ್ದು ಅಂತ ಗೊತ್ತಿಲ್ಲದಿದ್ದರೂ ಮತ್ತೆ ಕೆಲವರು ಅವರ ಹಿಂದೆಯೇ ಹೋದ್ರು..
ಯಾರನ್ನೂ ಫೇಲ್ ಮಾಡಬಾರದೆಂದು ಸರಕಾರ ಹೇಳಿದ ಮೇಲೆ,7th ಪಬ್ಲಿಕ್ ಪರೀಕ್ಷೆ ನಿಂತಮೇಲೆ.. ಜವಾಬ್ದಾರಿಯಲ್ಲಿ ಶಿಕ್ಷಕರು ಅವರ ಸ್ವಂತ ಕೆಲಸದ ಲಾಭವೇ ಹೆಚ್ಚು ತೆಗೆದುಕೊಂಡರು ಸಾರ್. ಅಂತ ಪೋಷಕ ಮಹಾಶಯನೊಬ್ಬ ಬಾಯಿಬಿಟ್ಟ.
ಗೊರ್ ಗುರುಗಳೇ ನೀವೇನು ಹೇಳ್ತಿರೀ..?. ಓದಲು ಬರೆಯಲು ಗೊತ್ತಿಲ್ಲದ್ದು.. ಪಾಸ್, ಫೇಲ್, distinction rank.. ಸಿಲ್ಲಿ ವಿಚಾರ . ಅದಕ್ಕೆಲ್ಲ ಅಷ್ಟೆಲ್ಲ ನಾಟಕ, ಸರ್ಕಸ್ ಬೇಕಾಗಿಲ್ಲ. ಇದು ಒಬ್ಬ ಕಲಿವ ಶಿಕ್ಷಕನ, ಮುಖ್ಯ ಗುರುವಿನ ಶಿಕ್ಷಣ, ಪ್ರೀತಿ, ಖಾಳಜಿ ವಿಚಾರ ಅಷ್ಟೆ. ನಾನು ಒಂದೇ ಕೇಳೋದು. ಪ್ರತಿಯೊಬ್ಬನೂ ಶ್ರೇಷ್ಠ ಸಾಧಕ ಯಾಕಾಗ್ತಿಲ್ಲ.. ಯಾಕಾಗಿಲ್ಲ...?. ಎಲ್ಲರೂ ಮೌನ.
ಕಲಿಯದ, ಬದಲಾಗದ, ಸಾಧಕರಲ್ಲದವರ ಜತೆಗೆ ( 2% ವಿಭಿನ್ನ ಚಿಂತನೆ, ಸಾಮರ್ಥ್ಯದ ಶಿಕ್ಷರೂ ಇದ್ದಾರೆ.. ಅಲ್ಲೂ ಇದು ಅದಲ್ಲಾ.). ಮಕ್ಕಳಿರೋದು ಈ ದೇಶದ ಅತೀ ದೊಡ್ಡ ದುರಂತ. ಒಬ್ಬ ಸಾಧಕ ಶಿಕ್ಷಕನ ಕೈಯಲ್ಲಿ ಮಾತ್ರ ಒಂದು ಸಾಧಕ ಮಗು ಕಾಣಲು ಸಾಧ್ಯ. ಅವ ಯಾರು..?. ಎಲ್ಲಿದ್ದಾನೆ..?. ತಪ್ಪುಗಳನ್ನು.. ಹುಡುಕುತ್ತಾ..ಕಾರಣಗಳನ್ನು ಹೇಳುತ್ತಾ.. ಆರೋಪಗಳನ್ನು ಹೋರಿಸುತ್ತ ಸಂಬಳಕ್ಕಾಗಿ ಬೀದಿಯಲ್ಲಿ ಹೋರಾಡಲು ಮುಂದಿನ ದಿನಾಂಕ ನಿರ್ಧರಿಸುತ್ತಿದ್ದಾನೆ.!!
ಶಿಕ್ಷಕ ಬದಲಾಗದೆ ಶಿಕ್ಷಣ ಬದಲಾಗಲ್ಲ. ಶಾಲೆಗೆ ಶಿಕ್ಷಕರ ಕೊರತೆ ಅಲ್ಲಾ. ಈಗಾಗಲೇ ಇರುವ ಶಿಕ್ಷಕರಿಗೆ ಇರುವ ಕೊರತೆ ಎಷ್ಟು ?.
ಪಾಠ - ಪೋರ್ಷನ್ ಮುಗಿಸೋ ಶಿಕ್ಷಕರಿಗೆ ಕೊರತೆ ಏನಿಲ್ಲ. ಶಿಕ್ಷಕರು ಎಲ್ಲರೂ ಒಳ್ಳೆಯವರು.
ಒಂದು ನಿಮಿಷ..ಮರೆತು ಬಿಟ್ಟೆ.sorry.
ಅಪ್ಪನ ಶಿಕ್ಷಣದ ಕೊರತೆಯ ರೋಷ , ನೋವನ್ನು ಹೇಳಿಕೊಳ್ಳುವುದರ ಮಧ್ಯೆ ಸಭೆ ಸೇರಿದವರನ್ನು ಊಟ ಕೊಟ್ಟು ಕಳುಹಿಸಲು ತಡ ಮಾಡಿಬಿಟ್ಟೆ.
ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮತ್ತು First Rank ಪಡೆದ ವಿದ್ಯಾರ್ಥಿಯ ಪೋಷಕರು ಸೇರಿ, ಅಧಿಕಾರಿಗಳಿಗೆ ಮತ್ತು ಊರವರಿಗೆ ಸಂತೋಷ ಪಡಿಸಲು ವೆಜ್ ಮತ್ತು ನೋನ್ ವೆಜ್ ಭರ್ಜರಿ ಊಟ ಕೊಟ್ಟರು. ಶಾಲೆ ಅಂದರೆ ಸರ್ಟಿಫಿಕೇಟ್. ಫೇಲ್ ಆದ ಮಕ್ಕಳ ಪೋಷಕರು.. ನಮ್ಮ ಮಕ್ಕಳಿಗೆ ಶಿಕ್ಷಕರು ಚೆನ್ನಾಗಿ ಕಲಿಸಿಲ್ಲಾ ಅಂದ್ರು.. ಪಾಸಾದ distnction ಮಾರ್ಕ್ಸ್ ಸಿಕ್ಕಿದ ಮಕ್ಕಳ ಪೋಷಕರು ಈ ಸಲ ನಮ್ಮ ಮಕ್ಕಳು ಚೆನ್ನಾಗಿ ಓದಿದ್ದಾರೆ ಅಂತ ಶಿಕ್ಷಕರ ಮುಂದೇನೇ ಹೇಳಿಕೊಂಡ್ರು. ಸೇರಿದ ಮಾರ್ಕ್ಸ್ ವಾದಿ ಪೋಷಕರೆಲ್ಲರೂ ಬರೀ ಮಾರ್ಕ್ಸ್ ನದೇ ಸುದ್ದಿ. ನಮ್ಮ ಮಕ್ಕಳು ಹುಷಾರಿದ್ದಾರೆ.. (ಪುಸ್ತಕದ ಬೈಹಾರ್ಟ್ ನಲ್ಲಿ )ಬ್ರಿಲ್ಲಿಯಂಟ್ ಅಂತೆಲ್ಲಾ ಹೇಳಿ ಕೊಂಡು ನಗು ನಗ್ತಾ ಎಲ್ಲರೂ ಅವರವರ ಮನೆ ಕಡೆಗೆ ದಾರಿ ಹಿಡಿದರು.
First Rank ನ ಹುಡುಗಿ ಫೋಟೋ ಎಲ್ಲಾ ಪತ್ರಿಕೆಯಲ್ಲೂ ಬಂತು. ಎಲ್ಲಾ ಮಕ್ಕಳು ಫೋಟೋ ನೋಡ್ತಾ ಸುದ್ದಿ ಓದುತ್ತಾ ಸಂತಸಪಡುತ್ತಿದ್ದರು. ಆ 12 ಮಕ್ಕಳು ಮಾತ್ರ ಪೇಪರಲ್ಲಿ ಇರೋ ಫೋಟೋ ಮಾತ್ರ ನೋಡುತ್ತಾ ಸುಮ್ಮನೆ ನಿಂತಿದ್ದರು. ಇದು ಯಾವ ಅಕ್ಷರ ಅಂತ ಕೇಳುವ ಧೈರ್ಯ ಅವರಿಗೆ ಯಾರೂ ಕೊಡಲೇ ಇಲ್ಲಾ...!.
ಗೊರ್ ಗುರುಗಳ ಜತೆ ನಿತ್ಯ ಇದೆಕ್ಕೆಲ್ಲಾ ಕಾರಣ ಹುಡುಕುತ್ತಿರುವ... ಆದಿ.
ಉತ್ಸಾಹಿ, ಕ್ರಿಯಾಶೀಲ, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಚಿಂತಕರು ಕಾರ್ಯಕ್ರಮ ನಿರೂಪಕರು, ಶಿಕ್ಷಕ ದಂಪತಿಗಳಾದ ಉಮೇಶ್ ಮತ್ತು ಮಂಜುಳಾ ರಿಗೆ ಈ ಪತ್ರ ಸಮರ್ಪಣೆ.
ಆದಿಸ್ವರೂಪ.
ಮಂಗಳೂರು.