-->
ಆದಿಯ ಚಿತ್ರ ಪತ್ರ - 43

ಆದಿಯ ಚಿತ್ರ ಪತ್ರ - 43

    ಆದಿ ಸ್ವರೂಪ 
    ಸ್ವರೂಪ ಅಧ್ಯಯನ ಸಂಸ್ಥೆ 
    ಮಂಗಳೂರು

               ಆದಿಯ ಚಿತ್ರ ಪತ್ರ - 43 
          ಈ ಪತ್ರ ಬೆರಳಚ್ಚಿನಲ್ಲಿ ಮೂಡಿದಾಗ......


                    ಆದಿಯ ಚಿತ್ರ ಪತ್ರ- 43

                 ಮನೆ ಮನೆ ರಿಪೇರಿ ಆರಂಭ.....

            ಮಾತೆತ್ತಿದ್ರೆ ಜಗಳ , ಸುಡು ಸುಡು ಸುಡು ಸಿಟ್ಟು ಮೂಗಿನ ತುದಿಯಲ್ಲೇ ಇಟ್ಟುಕೊಂಡಿ ರುವುದು. ಮೂರು ಮಾತಿಗೆ 100 ಉತ್ತರ ಕೊಡುವುದು. ನೆಮ್ಮದಿಯಿಂದ ಒಂದು ದಿನವೂ ಮನೆ ಮಂದಿಯೊಂದಿಗೆ ಕಳೆದಿಲ್ಲ. ದಿನ ಆರಂಭವಾಗುವುದೇ ಬೈಗುಳಗಳಿಂದ. ( ಬೈಯುವುದು ಅನ್ನುವುದು - ದೊಡ್ಡ ಧ್ವನಿಗೂ ಹೇಳುತ್ತಾರೆ.) ಮದುವೆಗೆ ಮೊದಲು ಹೆಣ್ಣು ಗಂಡು ಪರಸ್ಪರ ತನಗೆ ಬೇಕಾದ ಹಾಗೇ ಇಲ್ಲ , ತೀರ್ಮಾನಿಸಿ ಮತ್ತೆ ರಿಪೇರಿ ಮಾಡುವ ಅಂದುಕೊಂಡವರು.. ಕೊನೆಯವರೆಗೂ ರಿಪೇರಿ ಮಾಡುತ್ತಲೇ ಇರುತ್ತಾರೆ. ಮೊದಲು ಮನೆಯಲ್ಲಿ ಕೊನೆಗೆ ರಸ್ತೆಗೆ ಮತ್ತೆ ಕೋರ್ಟಿಗೆ. ಈ ದೃಶ್ಯ ಮಕ್ಕಳು ನೋಡುತ್ತಾ ತಲೆ - ತಲಾಂತರದಿಂದ ಇದು ಹಸ್ತಾಂತರವಾಗುತ್ತಲೇ ಇರುತ್ತದೆ. ಇದರ ರಿಪೇರಿಗೇ ಗ್ಯಾರೇಜ್ ಎಲ್ಲಿದೆ.... ಬೇಕಲ್ಲವೇ..?.

            ಸಿಟ್ಟು ಬಂದಾಗ ಎಲ್ಲಿ, ಯಾರ ಮುಂದೆ ಕುಟುಂಬದ ಮಾನ ಮರ್ಯಾದೆ, ಮನೆಯವರ ಗೌರವ ತೆಗೆಯಬಾರದೆಂದು ಗೊತ್ತಿಲ್ಲದವರು, ಸಿಕ್ಕಾಪಟ್ಟೆ ಸಿಕ್ಕ ಸಿಕ್ಕಲ್ಲಿ ಮೂದಲಿಸುವುದು, ಕಿರಿ ಕಿರಿ ಮಾಡ್ತಾ ಇರುವುದು. ಬೆಳಗಾದ್ರೆ ಸಾಕು.. ರಾಮಾಯಣ ಶುರು. ಎಷ್ಟು ಹೇಳಿದ್ರೂ ಭಾಷೆ ಇಲ್ಲದವರು.......

             ಇವರು ಯಾರು ..,?.
ನೀವಾ ನೋಡಿ.. ಆಲ್ವಾ..! Sorry. ಅವರಾ..?.

          ನಿನ್ನ ಜನ್ಮಕ್ಕೆ ಬೆಂಕಿ ಹಾಕಲಿಕ್ಕೆ. ಈ ಜನ್ಮಕ್ಕೆ ಉದ್ಧಾರ ಆಗುವುದಿಲ್ಲ. ದಂಡ ಪಿಂಡಗಳು. ಹಾಳಾಗಿ ಹೋಗ್ಲಿಕ್ಕೆ. ಮಣ್ಣು ತಿಂದು ಹೋಗ್ಲಿಕ್ಕೆ..... ನಿಮ್ಮದೂ ಒಂದು ಜನ್ಮವಾ. ಶಾಪವೇ ಇವರ ಸುಖ...!

      ಇವರು ನೀವಾ..? ನಿಮ್ಮೊಳಗೆ ಇವರು ಇದ್ದಾರಾ ನೋಡಿ.!

        ಚಾಡಿ ಹೇಳುವುದು, ಮತ್ಸರ ಪಡುವುದು, ಹಂಗಿಸುವುದು.. ಅವ ನೋಡು ಹಾಗೇ ಇವಾ ಹೀಗೆ.. ಅವನನ್ನು, ಅವಳನ್ನು ನೋಡಿ ಕಲಿ. ನಿನ್ನದೊಂದು , ಇವಳದೊಂದು ಜನ್ಮವೇ..... ಎಷ್ಟು ಹೇಳಿದ್ರೂ ಭಾಷೆ ಇಲ್ಲ, ನನ್ನ ಕರ್ಮಕ್ಕೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದು..! ಆ ದೇವರು ಇಂತಹ ದರಿದ್ರದ ಅವನನ್ನು / ಅವಳನ್ನು ಯಾಕೆ ನನ್ನ ಹೊಟ್ಟೆಯಲ್ಲಿ ಯಾಕೆ ಹುಟ್ಟಿಸಿದ್ದಾನೋ... ಆಯ್ತಾ.... ! ಬೇಕಿತ್ತಾ...... ! ಆ ದೇವರಿಗೂ ಸಿಕ್ತು...?!

         ಇಂಥವರು ನಿಮ್ಮೊಳಗಿದ್ದಾರ..? ಜೊತೆಗಿರುವ ಮಕ್ಕಳಿಗೂ ಇದೇ ದರಿದ್ರ ನಾಲಗೆ ಬುದ್ಧಿಯನ್ನೇ ಕಲಿಸಿಕೊಟ್ಟ ಹಾಗಾಗುತ್ತದೆ. "ಹಲ್ಕಾಗಳು.. ಛೀ.. ಥೂ.. ಟಾಂಟ್ ಕೊಟ್ಟೇ ಮಾತನಾಡುವುದು. ಮಾತೆತ್ತಿದರೆ ಕೊಂಕು....! ಚರಪರ ಮಾತಾಡುತ್ತಾ.. ಕಿರಿಕಿರಿ ಮಾಡುತ್ತಾ ಇರುವುದು. ಮುಖ ಸಿಡುಕಿಕೊಂಡೇ ಇರುವುದು. ಒರಟು ಧ್ವನಿಯೇ ಇವರ ಆಸ್ತಿ....! ಎಷ್ಟು ಸಲ ಹೇಳಿದೆ ನಿನಗೆ ನಾಲಗೆ ಬಿಗಿ ಹಿಡಿದು ಮಾತನಾಡು...... ! ಮಕ್ಕಳ ತಲೆಯೊಳಗಿನ ಆಲ್ಬಮ್ ನಲ್ಲಿ ಈ ಸರ್ಟಿಫಿಕೇಟ್ .. ರಾಶಿ ರಾಶಿ.. ಬಿದ್ದಿದೆ... ! ಅಯೋಗ್ಯರು... !! ಅದು ಸರಿ ಇಲ್ಲ.. ಇದು ಸರಿ ಇಲ್ಲ... ಹಾಗೇ ಮಾಡ್ಬೇಡ ಹೀಗೆ ಮಾಡ್ಬೇಡ...!! ಇನ್ನೂ ಬುದ್ಧಿ ಬರಲಿಲ್ಲ. ಸಾವಿರ ಸಲ ಹೇಳಿದೆ ನಿನಗೆ, ತಾಳ್ಮೆಯಿಂದ ಇರು.... !!! ಸಿಟ್ಟು ಒಳ್ಳೆಯದಲ್ಲ ಅಂತ.. ನಿನಗೆ ಎಷ್ಟು ಸಲ ಹೇಳಿದೆ. ನಿನಗೆ ಹೇಳುವುದು ಒಂದೇ..ಕೋಣನ ಮುಂದೆ ಕಿನ್ನರಿ ಬಾರಿಸುವುದು ಒಂದೇ....!! ಕಾಲೇಜಿಗೆ ಹೋಗಿದ್ಯಲ್ಲಾ ಅಷ್ಟೆಲ್ಲಾ ಸರ್ಟಿಫಿಕೇಟ್ ಇರುವುದು ನಿನ್ನ ಕರ್ಮಕ್ಕಾ...?!!

     ನೋಡಿ ನೋಡಿ.. ಇವರು ನಿಮ್ಮ ಕುಟುಂಬದವರಾ..? !!

        ಮಕ್ಕಳ ಮುಂದೆ ಜಗಳ ಮಾಡಬಾರ್ದು ಅಂತ ಇವರು ಕಲಿತೇ ಇಲ್ಲ. ಇವರ ಮಾತೇ... ಹೀಗೆ. ಭಾಷೆ ಇಲ್ಲದವರು, ನೀವೇನು ಅನ್ನ ತಿನ್ನುವುದಾ.. ಅಲ್ಲಾ.. ಬೇರೆ ಏನಾದ್ರೂ..ತಿನ್ನೋದಾ...! ನೀವೂ ಒಬ್ಬ ಮನುಷ್ಯರಾ..ದುರಹಂಕಾರಿಗಳು. ಅಹಂಕಾರ ಇವರ ಕುಟುಂಬದ ಆಸ್ತಿ..! ಯಾವ ಯೋಗ್ಯತೆ ಇಲ್ಲದಿದ್ದರೂ ಅಹಂಕಾರಕ್ಕೆ ಏನೂ ಕೊರತೆ ಇಲ್ಲ. ಗರ್ವ, ದರ್ಪವೇ ತೋರಿಸುವುದು.... !      
       ಹಂಗಿಸುವುದು.. ಮತ್ಸರದಲ್ಲೆ ಹುಟ್ಟಿದವರು. ಛೀ.. ಅಸಹ್ಯ.. ಥೂ ನಿನ್ನ.. ನಿನ್ನದೂ ಒಂದು ಜೀವನವಾ..? ಸೋಮಾರಿ...! ಬೇಜವಾಬ್ದಾರಿಯವರು. ಮಾಡಿಟ್ಟದ್ದನ್ನು ತಿನ್ನಲಿಕ್ಕೆ ಮಾತ್ರ ಹುಟ್ಟಿದವರು..!

 ಇವರೆಲ್ಲರ ಗುರುತು ನಿಮಗೆ ಸಿಕ್ಕಿತಾ..
ಅಷ್ಟು ದೊಡ್ಡ ದೇಹ ಇದೆ.. ದುಡಿಯಲಿಕ್ಕೆ ನಿಮಗೇನು ಸಂಕಟವಾ...! ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು. ಸ್ವಂತಿಕೆ ಇಲ್ಲದವರು. ಅವರು ಮಾಡುವುದನ್ನೇ ಮಾಡುವವರು.. . ಇನ್ನೂ ಹೆಚ್ಚು ಹೇಳಬೇಕಾದರೆ ಬರಿ ಯೂಸ್ಲೆಸ್ ಗಳು......sorry...!

          ನಿಮ್ಮದೇ ಬೇರೆ ಚಂದದ ನಿಮ್ಮ ನಾಲಗೆಗೆ ರುಚಿ ರುಚಿಯಾದ ಬೈಗುಳ ಇದ್ರೆ ನೀವೇ ಇದಕ್ಕೆ ಸೇರಿಸಿಕೊಳ್ಳಿ....

           ಇದು ಯಾವುದೂ ನನ್ನ ಅಪ್ಪನ ಸಂಗ್ರಹದಲ್ಲಿ ಇಲ್ಲದ್ದು. ನನಗೆ ನೀವು ಊರವರೆಲ್ಲರೂ, ನನ್ನ ಸುತ್ತಮುತ್ತಲಿನವರೆಲ್ಲರೂ ಸೇರಿ ಸಂಗ್ರಹಿಸಿ ಕೊಟ್ಟ ಮತ್ತು ನಾನು ಕಂಡ ಸ್ನೇಹಿತರಿಂದ ಕೇಳಿ ಪಡಕೊಂಡ ಸರ್ಟಿಫಿಕೇಟ್.. ನಿಮ್ಮ ನಿಮ್ಮ ಗುರುತು ಸಿಗಲು ಬರೆದಿದ್ದೇನೆ. ಇದರೊಳಗೆ ಕೆಲವರ ಪೂರ್ಣ ವಿಳಾಸ ಇದೆ. ಇಲ್ಲದಿದ್ದರೆ...sorry...!

      ಈ ಪತ್ರ ಓದಿದ ನೀವು ಎಲ್ಲರೂ ಒಳ್ಳೆಯವರು. ಮಕ್ಕಳು ದೇವರಿಗೆ ಸಮಾನ.. ಅಂತ ಹೇಳಿದವರು. ದೇವರಿಗೆ ಬೈಯುವ ಹೊಡೆಯುವ ಹಾಗಿಲ್ಲ ಆಲ್ವಾ..!! ನೋಡಿ ನೋಡಿ ಏನಂದ್ರಿ...?. ಯಾರೋ ಒಬ್ಬರು ಏನೋ ಹೇಳಿ ಆಯ್ತು. ನೀನಿನ್ನೂ ಸಣ್ಣ ಹುಡುಗಿ.. ನಿನ್ನ ಸರ್ಟಿಫಿಕೇಟ್ ನನಗೆ ಅಗತ್ಯ ಇಲ್ಲಾ ಅಂತ. Sorry... ನಾನು ಸಣ್ಣವಳು ಹೌದು.. ಆದರೆ ಯಾವುದು ಸರಿ, ಯಾವುದು ತಪ್ಪು.. ನಾಲಗೆ ಹೇಗೆ ಹಿಡಿತದಲ್ಲಿಟ್ಟುಕೊಳ್ಳಬೇಕು... ಇವೆಲ್ಲವನ್ನು ಅರ್ಥಮಾಡಿಕೊಳ್ಳುವ ಒಪ್ಪಿಕೊಳ್ಳುವ ಗುಣ ನನ್ನ ಅಪ್ಪ ನನಗೆ ಕೊಟ್ಟಿದ್ದಾರೆ...

           ಇರಲಿ.. ಸಹಿಸಿಕೊಳ್ಳಿ.. ಇದು ಅದಲ್ಲ.. ಜಾಗ್ರತೆ.. ಮಕ್ಕಳು ನಮ್ಮನ್ನೇ ನೋಡುತ್ತಿದ್ದಾರೆ.. ಅವರು ನಮ್ಮ ಜೊತೆಗೇ ಬರುತ್ತಿದ್ದಾರೆ.. ಅವರನ್ನು ಚಂದ ಕರಕೊಂಡು ಹೋಗಬೇಕು.. ಎಲ್ಲಿಗೆ ಹೇಗೆ ಅಂತ ಎಲ್ಲಾ ಪೋಷಕರೆಲ್ಲರಿಗೂ ಗೊತ್ತಿದೆ.. ಗೊತ್ತಿರಲೇ ಬೇಕಲ್ವಾ.. ಈ ಹಿಂದೆ ಎಂದಾದರೂ ಧ್ವನಿಯಲ್ಲಿ ತಪ್ಪಾಗಿದ್ದರೆ ನಾವು ಮಕ್ಕಳು ಎಚ್ಚರದಿಂದ ತಿದ್ದಿಕೊಂಡು.. ಜತೆಗೆ ಇರುವವರಿಗೆ ತಿದ್ದಿಕೊಳ್ಳುವ ದಾರಿ ತೋರಿಸುತ್ತೇವೆ... ನೀವು..?.

         ನಿಮ್ಮೂರಲ್ಲಿ, ನಿಮ್ಮ ಕುಟುಂಬದಲ್ಲಿ ನಿಮ್ಮ ಮನೆ ಮನೆಗಳಲ್ಲಿ ಇಂತಹ ಧ್ವನಿಯವರು ಇದ್ದಾರಾದರೆ.. ಸ್ವರೂಪ ಮನೆ ಮನೆ ರಿಪೇರಿ ಆರಂಭಿಸಿದೆ.. ಅಲ್ಲಲ್ಲ.. ಮನೆ - ಮನ ರಿಪೇರಿ. ನಿಮ್ಮ ಮನೆಗೆ ಬರಬೇಕೆ..?.

            ಏನಂದ್ರೀ..?. ಹುಟ್ಟುಗುಣ ಸುಟ್ಟರೂ ಹೋಗಲ್ಲಾ ಅಂದ್ರಾ.. ಅಯ್ಯೋ.. ಸರಿಯಾಗಿ ಸುಟ್ಟರೆ ಹೋಗ್ತದೆ... "ಯಾಕಾಗಲ್ಲ ".
ಅಪ್ಪ ಅಮ್ಮಂದಿರೆ.. ಹಿರಿಯರೇ, ಗಣ್ಯರೇ, ಗುರುಗಳೇ.. ಮಕ್ಕಳೇ.. ಜಗತ್ತು ಬದಲಾಗುತ್ತಿದೆ.. ತಲೆಯೊಳಗೆ ದಾಖಲಾದ ರೆಡಿಮೇಡ್ ಪದ, ನೆಗೆಟಿವ್ಗಳು.. ನಿಮ್ಮ ಬ್ರೈನ್ ಟೇಪ್ರೆಕಾರ್ಡಿನಲ್ಲಿ ಅದು ಅಲ್ಲೇ ತಿರುಗುತ್ತಿದೆಯಾ..?. ಸೆಟ್ ಚೇಂಜ್ ಮಾಡುವ. ಹಳೆ ರೆಕಾರ್ಡ್ ಎಲ್ಲಾ ನಿಧಾನವಾಗಿ ಒಂದೊಂದೇ ಡಿಲೀಟ್ ಮಾಡುವ. ಒಂದೇ ಒಂದು ಟಿಪ್ಸ್ ತಗೊಳ್ಳುವ...ನಾಲಗೆಗೆ ಬುದ್ದಿ ಕಲಿಸುವ. FIRST thoughts ಬಂದ್ ಮಾಡಿ. Second thoughts ಗೆ ಬರುವ.

         ಎಷ್ಟು ವರ್ಷದಿಂದ ಮನೆ ಮನೆಗಳಲ್ಲಿ ಮಕ್ಕಳ ಮುಂದೇನೇ.. ಹೇಳಿದ್ದನ್ನೇ ಹೇಳಿದ್ದೇವೆ. ರೆಡಿ ಮೇಡ್ ಬೈಗಳನ್ನೇ ಹಂಚಿದ್ದೇವೆ. ಇನ್ನು ಮುಂದೆ ಫಸ್ಟ್ ಥಾಟ್ಸ್ ಬಂದ ತಕ್ಷಣ ಅದನ್ನು ಗಮನಿಸಿ...ಸೈಲೆಂಟಾಗಿಸಿ.. ತಪ್ಪಾದರೆ ಪರವಾಗಿಲ್ಲ ಅಂತ ಹೇಳಿಕೊಳ್ಳುವ. (ಕೆಲವೊಂದು ಅಪರಾಧ ಬಿಟ್ಟು ) ನಿನ್ನ ಮೇಲೆ ನನಗೆ ನಂಬಿಕೆ ಇದೆ.. ಈ ಮಾತು ಎಷ್ಟಕ್ಕೂ ಸಾಕು...!

      ನಮ್ಮ ಪಕ್ಕದ ಮನೆಯಲ್ಲಿ ನಿನ್ನೆ ನಡೆದ ಒಂದು ಘಟನೆ.. ಈ ಪತ್ರಕ್ಕೆ ಕಾರಣವಾಯ್ತು. ನಮ್ಮೆಲ್ಲರ ಮುಂದೇನೇ..ಆ ಮನೆಯಲ್ಲಿ 6 ನೇ ತರಗತಿಯ ಹುಡುಗ.. ತಂದೆ ತಾಯಿಗೆ ಹೀಗೆ ಹೇಳಿಬಿಟ್ಟ. ನಿಮಗೆ ಇಷ್ಟು ವಯಸ್ಸಾಗಿದೆ.. ಅಷ್ಟೆಲ್ಲಾ ಡಿಗ್ರಿ ಇದೆ.. ಮಕ್ಕಳಿಗೆ ಬೈಬಾರ್ದು, ಮಕ್ಕಳ ಮುಂದೆ ಇತರರಿಗೆ ಬಾಯಿಗೆ ಬಂದ ಹಾಗೇ ಮಾತನಾಡಬಾರದೆಂದು ಇನ್ನೂ ನಿಮಗೆ ಬುದ್ಧಿ ಬರ್ಲಿಲ್ವಾ....! ಈ ದೊಡ್ಡ ಧ್ವನಿ ಕೇಳಿದ ನಾವು ಎಲ್ಲರೂ ಒಂದು ಕ್ಷಣ ಸೈಲೆಂಟ್..! ಹುಡುಗ ಗ್ರೇಟ್..ಬುದ್ದಿವಂತ. ಸರಿಯಾಗಿಯೇ ಹೇಳಿದ ಅಂತ ನಾವು ಮನದಲ್ಲೇ ನಕ್ಕೆವು.... ಮಕ್ಕಳು ಸರಿ ಇದ್ದಾರೆ. ಮಕ್ಕಳಿಗೆ ಅರ್ಥ ಆಗ್ತದೆ...!

     ಅಪ್ಪ ಅಮ್ಮನ ಸ್ವ - ರೂಪ ಬದಲಾವಣೆ..
ನನ್ನ ಬ ದು ಕಿ ಗೆ.... ಆದಿ.

ಅಪ್ಪನ ಆತ್ಮೀಯರು ಶಿಕ್ಷಕ ತರಬೇತಿ ಸಂಸ್ಥೆಯ (DIET) ಶಿಷ್ಯರು ಕ್ರಿಯಾಶೀಲ, ಸೃಜನಶೀಲ ಶಿಕ್ಷಕರು, ಶಿಕ್ಷಣ ಚಿಂತಕರು, ಸಾಹಿತಿ, ಸಂಪನ್ಮೂಲ ವ್ಯಕ್ತಿ. ಸಂಘಟಕರು, ಜಾನಪದ, ಯಕ್ಷಗಾನ ಕಲಾವಿದರು...... ಶ್ರೀ ತಾರಾನಾಥ ಸವಣೂರು.

    ಇವರ ವಿಳಾಸದ ಅಂಚೆ ಡಬ್ಬಕ್ಕೆ ಮತ್ತು
   ಕೈರಂಗಳ ರ ಮಕ್ಕಳ ಜಗಲಿಯ ಸಾವಿರಾರು ಕಣ್ಣುಗಳಿಗೆ, ಬೈಗುಳಗಳಿಲ್ಲದ ಪ್ರೀತಿಯ ಸುಂದರ, ಶುಭ್ರ ಮನಸ್ಸುಗಳಿಗೆ ಈ ಪತ್ರ ಸಮರ್ಪಿಸುತ್ತಿದ್ದೇನೆ......

                               ........... ಆದಿ ಸ್ವರೂಪ

Ads on article

Advertise in articles 1

advertising articles 2

Advertise under the article