-->
ಆದಿಯ ಚಿತ್ರ ಪತ್ರ - 36

ಆದಿಯ ಚಿತ್ರ ಪತ್ರ - 36

ಆದಿ ಸ್ವರೂಪ 
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು

                   ಆದಿಯ ಚಿತ್ರ ಪತ್ರ - 36
 
               ಆದಿಯ ಚಿತ್ರ ಪತ್ರ- 36

                ಅಮ್ಮನ ತಲೆ ಸರಿ ಇದೆ

      ನಮ್ಮ ಅಧ್ಯಯನ ಕೇಂದ್ರದಿಂದ *ಪ್ರತಾಪ* ಪೆನ್ನು ತರಲು ಹೊರಗೆ ಅಂಗಡಿಗೆ ಹೋದ. ಪಕ್ಕದ ಶಾಲೆಯ ಮಹಡಿ ಮೇಲಿಂದ ಒಬ್ಬ ಹುಡುಗ ದಾರಿಗೆ ಉಗಿದ. ಇದನ್ನು ಪ್ರತಾಪ ಪ್ರಶ್ನಿಸಿದ. *ಯಾಕೆ* *ದಾರಿಗೆ ಉಗಿದೆ?..* ನನ್ನ ಮೈ ಮೇಲೆ ಬಿದ್ದಿದ್ದರೆ...?. " *ನಿನಗೆ* *ತಲೆ ಸರಿ ಇಲ್ವಾ"* ಅಂತ ಹೇಳಿಬಿಟ್ಟ. ತಲೆ ಸರಿ ಇಲ್ಲದ್ದು ನಿನ್ನ ಅಮ್ಮನಿಗೆ. ನೀನ್ಯಾರು ನನ್ನಮ್ಮನಿಗೆ ಹೇಳ್ಳಿಕ್ಕೆ..ಇನ್ನೊಮ್ಮೆ ಹೇಳು ನೋಡುವ. ಏನೋ ಮಾಡ್ತೀಯಾ... ಸೂ... ಮಗನೆ... ಪ್ರತಾಪ ನ ಸಿಟ್ಟು ನೆತ್ತಿಗೇರಿತು. ಕಂಪೌಂಡ್ ಹಾರಿ ಹಾಸ್ಟೆಲಿಗೆ ನುಗ್ಗಿ.. ರಸ್ತೆಗೆ ಉಗಿದವನ ಹುಡುಕಿ.. ಅಮ್ಮನಿಗೆ ಬೈತೀಯಾ ಅಂತ ಎರಡು ಹೊಡೆದಿದ್ದಾನೆ. ಅಲ್ಲಿದ್ದ ನಾಲ್ಕು ಮಂದಿಯಿಂದ ೧೦ ಪೆಟ್ಟು ಚೆನ್ನಾಗಿ ತಿಂದಿದ್ದಾನೆ. ವಾರ್ಡನ್,ವಾಚ್ಮನ್ ಓಡಿಬಂದು ಎಲ್ಲರಿಗೂ ಹೊಡೆದು ಪ್ರತಾಪನನ್ನು ಎಳಕೊಂಡು ವೈಸ್ ಪ್ರಿನ್ಸಿಪಾಲ್ ರೂಮಿಗೆ ತಂದಿದ್ದಾರೆ." *ನಿನ್ನ* *ಪ್ರತಾಪ ಇಲ್ಲಿ ತೋರಿಸ್ತೀಯಾ* *ಮಗನೇ"* ಅಂತ ಮತ್ತೆ ಕೆನ್ನೆಗೆ ಕೆಲವು ಪೆಟ್ಟು ತಿಂದಿದ್ದಾನೆ. ಇವನು ಅಮ್ಮನಿಗೆ ಬೈಯ್ಯ ಬಾರದಿತ್ತು ಸಾರ್..ಅದಕ್ಕೆ ನನಗೆ ಸಿಟ್ಟು ಬಂತು. ಮೊದಲು ಬೈದದ್ದು ಅವನು-ಸಾರ್.. ಇವನು ಸಾರ್.. ಅಂತ ಚರ್ಚೆ ಮತ್ತೆ ಜೋರಾಯಿತು. ನಿನಗೆ ಇಷ್ಟು ಸಾಲದು ಅಂತ ಹೊರಗೆ ಎಳೆದುಕೊಂಡು ಬಂದು..

        ಬಾಗಿಲ ಹೊರಗೆ ಪ್ರತಾಪನನ್ನು ಸಂಜೆವರೆಗೆ ಕುಳಿತುಕೊಳ್ಳಿ ಸಿದ್ದಾರೆ. ಯಾರ ವಿನಂತಿಗೂ ಬಿಟ್ಟುಕೊಡಲಿಲ್ಲ. ಇದು ಹಾಸ್ಟೆಲ್ಗೆ ನುಗ್ಗಿ ಹೊಡೆದ ಕೇಸ್. ಇದನ್ನು ಹೀಗೇ ಬಿಟ್ಟರೆ ಆಗುವುದಿಲ್ಲವೆಂದು ಪೋಲಿಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಪೋಲಿಸ್ ಬಂದಿದ್ದಾರೆ. ದೂರದ ಸುರತ್ಕಲ್ ನಿಂದ ಅಮ್ಮನನ್ನು ಕರೆಸಿದ್ದಾರೆ. ಅಮ್ಮ ಬಂದಾಗ ಮೊದಲೇ ಬಂದ ಪೊಲೀಸರಿಗೆ ವಿಚಾರಣೆಗೆ ಸ್ವಲ್ಪ ಗೊಂದಲವಾಯ್ತು. *ಪ್ರತಾಪನ* *ಅಮ್ಮ* *ಪೊಲೀಸ್.* 
ಅಮ್ಮ ಪೊಲೀಸ್ ಬಂದವರೇ ಸಿಟ್ಟಿನಿಂದ ಏನನ್ನು ವಿಚಾರಿಸದೆ ಎಲ್ಲರಮುಂದೆ ಮತ್ತೆ ಹೊಡೆದಿದ್ದಾರೆ.

      ನಾನೆಷ್ಟು ಸಲ *ಸಿಟ್ಟು* *ಒಳ್ಳೆಯದಲ್ಲ* ಅಂತ ಹೇಳಿ.. ನಿನಗೆ ಬುದ್ಧಿವಾದ ಹೇಳಿದ್ದೇನೆ..ಅಂತ ಹೇಳಿ ಅತ್ತಿದ್ದಾರೆ. ನನ್ನ ಮರ್ಯಾದೆ ತೆಗೆಯಲು ಹುಟ್ಟಿದ್ದು ನೀನು.. ಚೆನ್ನಾಗಿ ಬೈದು ಎಳೆದಾಡಿದ್ದಾರೆ. ವಿಚಾರಣೆಗೆ *ಬಂದ ಪೋಲಿಸರು* ಅಮ್ಮನಿಗೆ ಸಮಾಧಾನ ಮಾಡುವುದಕ್ಕೇನೇ ದೊಡ್ಡ ಕೆಲಸ ಆಗಿತ್ತು.ಎಲ್ಲರ ವಿಚಾರಣೆ ಕ್ರಮ ಎಂದಿನಂತೆ ಎಲ್ಲಾ ಕಡೆ ನಡೆವಂತೆ ನಡೆಯಿತು. ಇಲ್ಲಿಗೆ *ಮೊದಲ ಹಂತದ ಕಥೆ* *ಮುಗಿಯಿತು.* 

       ಪ್ರತಾಪ ನನ್ನು ಸ್ವರೂಪಕ್ಕೆ ಅಮ್ಮ ಕರಕೊಂಡು ಬಂದ್ರು. ನೀವು ಮಕ್ಕಳನ್ನು ಕ್ಲಾಸಿನಿಂದ ಹೊರಗೆ ಹೋಗಲು ಬಿಡಬಾರದಾಗಿತ್ತು ನೀವೇ ಬುದ್ಧಿ ಕಲಿಸಿ ಅಂತ ಹೇಳಿ ಅದು-ಇದು ಹೇಳಿ *ಪೊಲೀಸಮ್ಮ* ಹೋದ್ರು.

          ಇದೀಗ ಅಪ್ಪನ *ವಿಚಾರಣೆಯ* *ಸಮಯ* ನಾನು ಕುತೂಹಲದಿಂದ ಅವರ ಹತ್ತಿರವೇ ಹೋಗಿ ಕುಳಿತೆ. *ಫ್ರೆಂಡ್ಸ್* ಇಲ್ಲಿ ಈಗ ಯಾರು ಏನನ್ನೂ ಮಾತನಾಡದೆ ಸುಮ್ಮನೆ..ಇರಬಹುದಾ..? ಯಸ್ ಸಾರ್. ಪ್ರತಾಪ್ ನೋವು ಇದೆಯಾ? "ಹೌದು" ...ಈ ಎಣ್ಣೆ ಹಚ್ಚಿಕೋ...ನಾವು ಸುಮ್ಮನೆ ಸ್ವಲ್ಪ ಮಾತನಾಡುವ. ಇಷ್ಟು ಹೊತ್ತು ನೀನು ಬರುವುದನ್ನೇ ನಾವು ಕಾಯುತ್ತಿದ್ದೆವು... *ಏನಾಯಿತು ಹೇಳು* ...? "ಅವನು ಅಮ್ಮನಿಗೆ ಬೈದ ಸಾರ್". ಏನು ಹೇಳಿದ ಹೇಳು ,"ಅಮ್ಮನಿಗೆ ತಲೆ ಸರಿ ಇಲ್ವಾ ಅಂತ ಕೇಳಿದ್ದ"ಆಮೇಲೆ ನಾನೂ ಕೇಳಿದೆ.. ಆಮೇಲೆ...ಅವನು ಸೂ...ಮಗನೇ ಅಂದ ನಿನ್ನ ಅಮ್ಮ ... ಅಂದೆ -ಇನ್ನೂ ಏನೇನೋ ಬೇಡದ್ದು -ಹೇಳಿದ ನನಗೆ ಸಿಟ್ಟು ಬಂತು...

 *ಅನಂತರದ್ದೆಲ್ಲ ನಾನು* *ತಿಳಿದುಕೊಂಡೆ ಬಿಡು.* 

          ಪ್ರತಾಪ ನೀನು ಒಳ್ಳೆ ಹುಡುಗ. ಎಷ್ಟು ಚೆನ್ನಾಗಿದೆ ನಿನ್ನ ದೇಹ ಕುಸ್ತಿಗೆ WWF ಗೆ ಹೋಗಬಹುದು. shot-put ಎಸೆಯಲು ಹೋದರೆ ಫಸ್ಟ್ ಬರಬಹುದು...."ಹೋಗಿದ್ದೆ ಸಾರ್ ಜಿಲ್ಲಾಮಟ್ಟದಲ್ಲಿ ಫಸ್ಟ್ ಬಂದಿದ್ದೆ"... ಪಿಯುಸಿ ಗೆ ಹೋದಾಗ ಚೆನ್ನಾಗಿ ಸಾಧನೆ ಮಾಡು.,,shake hand ಕೊಡಲು ಕೈ ಹತ್ತಿರ ತಂದವ ಹಿಂದಕ್ಕೆ ಎಳೆದುಕೊಂಡ..ನೋವಿದೆ ಸರ್ ಕೈಗೆ ಮೆಟ್ಟಿದ್ದಾರೆ...

            ಸಿಟ್ಟು ಇನ್ನೂ ಇದೆಯಾ ? "ಹೌದು". ಅವ ನಿನ್ನ ಅಮ್ಮನಿಗೆ ಏನು ಹೇಳಿದ...ಪ್ರತಾಪ್. ಹೇಳು? "ತಲೆ ಸರಿ ಇಲ್ವಾ ಅಂತ" ತಲೆ ಸರಿ ಇದೆ ಅಲ್ವಾ?. ಅಮ್ಮ ಚೆನ್ನಾಗಿದ್ದಾರೆ ಅಲ್ವಾ.? ಹೌದು.ನೀನು ಸಿಟ್ಟು ಮಾಡಿಕೊಳ್ಳದೆ ಇರುತ್ತಿದ್ದರೆ ಅಮ್ಮನಿಗೆ ಬೈದವನಿಗೆ ಬುದ್ಧಿ ಸರಿಯಿಲ್ಲ ಅಂತ ತಿಳಿದುಕೊಂಡು..ನನಗೆ ತಲೆ ಸರಿ ಇದೆ ಅಂತ ಹೇಳಿಕೊಂಡು ನೀನು ಮುಂದೆ ಹೋದರೆ ಸಾಕಿತ್ತು. ಅಲ್ವಾ ಪ್ರತಾಪ್....? ಸ್ವಲ್ಪ ಯೋಚಿಸು.. "ನನ್ನ ಅಮ್ಮನಿಗೇ ಬೈದದ್ದು ಸಾರ್.." ಹೌದಪ್ಪಾ..
          *ತಲೆ ಸರಿ ಇಲ್ವಾ* ಅಂತ ನಿನ್ನ ಪ್ರೀತಿಯ ಅಮ್ಮನಿಗೇ ಹೇಳಿದ್ದು.. ಹೌದು.. ಪ್ರೀತಿಯ ಅಮ್ಮನ ಗೌರವಕ್ಕೆ ಧಕ್ಕೆಯಾಗಬಾರದು.. ಅವರ ಮರ್ಯಾದೆ ಹಾಳಾಗಬಾರದೆಂದು,ತಾಯಿ ಮೇಲಿನ ಪ್ರೀತಿಯಿಂದ.. ನೀನು ಸಿಟ್ಟು ಮಾಡಿಕೊಂಡಿದ್ದು,.. ಎಲ್ಲವೂ ಹೌದು. ಈಗ ಅದೇ ಅಮ್ಮನಿಗೆ ಗೌರವ ಸಿಕ್ತಾ.. ? ಪ್ರತಾಪ್.."ಇಲ್ಲ"ಅವರ ಮಾನ ಮರ್ಯಾದೆ ಉಳಿಸಿದೆಯಾ...-ತೆಗೆದೆಯಾ..? - *ಮೌನ*..... ಅಮ್ಮನಿಗೆ ಗೌರವ ಕೊಡಲು,ಮರ್ಯಾದೆ ಉಳಿಸಲು ಹೋಗಿ,ಕಾಲೇಜಿನ ಸಾವಿರಾರು ಮಕ್ಕಳಿಗೆ ಮತ್ತು ಊರೆಲ್ಲಾ ಸುದ್ದಿಯಾಯಿತು.ಈಗ ಏನು ಅನಿಸುತ್ತಿದೆ ಪ್ರತಾಪ್.?"ಹೌದು ಸರ್ ನಾನು ಸಿಟ್ಟು ಮಾಡಿಕೊಂಡದ್ದು ತಪ್ಪಾಯ್ತು...ಆದರೆ ಅವನು ಉಗಿಯಬಾರದಿತ್ತು. ಹೌದು,. ನಾನು ವಾರ್ಡನ್ ಗೆ ಹೋಗಿ ಇದನ್ನು ಹೇಳಬಹುದಿತ್ತು. ಹೌದು ಸಾರ್ ಈಗ ಅರ್ಥ ಆಯ್ತು ಸರ್"...

             ನೀನು *ಸಿಟ್ಟು* ಎಲ್ಲಿಂದ ತಂದೆ ಪ್ರತಾಪ್? ಮನೆಯಿಂದಲಾ..?" ಹೌದು"..ಸಿಟ್ಟು ಬಿಡಲು ಸಿದ್ಧ ನಿದ್ದೀಯ ಪ್ರತಾಪ್? " *ಯಸ್* " ಈ ಕ್ಷಣದಿಂದಲೇ ಬಿಡ್ತೀಯಾ? *ಪರವಾಗಿಲ್ಲ* ...ನಿಧಾನವಾಗಿ ಸಿಟ್ಟನ್ನು ಗಮನಿಸು. ಸಿಟ್ಟು ಬಂದಾಗ ಒಂದು ದೀರ್ಘ ಉಸಿರು ತೆಗೆದುಕೋ. ನಿಧಾನ ಉಸಿರು ಬಿಡುವಾಗ ಮುಂದಿನ ನಿರ್ಧಾರ ಮಾಡಿಕೋ. ನನ್ನನ್ನು ನಾನು ಗಮನಿಸುತ್ತಿದ್ದೇನೆ ಅಂತ ಮನಸ್ಸಿನ ಒಳಗಿನಿಂದ ಹೇಳಿಕೋ.
 ಸರಿಯಾ ಪ್ರತಾಪ್? ಈಗ ಹೇಗಿದ್ದೀ? "ನೋವು ಸ್ವಲ್ಪ ಕಡಿಮೆ ಇದೆ "
            *ಅಮ್ಮ ಹೇಗಿದ್ದಾರೆ?... * ನಗಾಡಿದ. ಈ ದೃಶ್ಯ ನೋಡುತ್ತಿದ್ದ ಅಲ್ಲಿದ್ದ ಎಲ್ಲರೂ ನಕ್ಕರು. ಕೊಡಿ ಚಪ್ಪಾಳೆ..ಮೊನ್ನೆ ಮೊನ್ನೆ ಇಲ್ಲೇ ನಿನ್ನ ಅಪ್ಪ.. ನಿನ್ನ ಅಪ್ಪ ಅಂತ ಹೊಡಕೊಂಡು, ಅಂಗಿ ಹರಕೊಂಡವರಿಗೂ ಇಂದು ಪಾಠ ಆಯ್ತು ಆಲ್ವಾ.. ಸನು ವಿನು.

         ಅಪ್ಪ... ವಿಚಾರಣೆ ಚಂದ ಆಗಿದೆ. ನಿನ್ನ ತಾಳ್ಮೆಗೆ ಮೆಚ್ಚಿದೆ.  ಆದರೆ ನಾನು ಇನ್ನೂ ಕೆಲವು ಪ್ರಶ್ನೆ ಕೇಳುವುದಿದೆ...
 ನಾನಿನ್ನೂ ಆದಿ..

 *ನಮಸ್ತೆ ಸಾರ್* 
 ಈ ಪತ್ರ ಮಕ್ಕಳ ಜಗಲಿಗೆ ಮತ್ತು ಕ್ರಿಯಾಶೀಲ ಶಿಕ್ಷಕ, ಶಿಕ್ಷಣ ಚಿಂತಕ, ಕಲಾವಿದ, ಸಾಹಿತಿ,
ಡಾ.ಶಿವರಾಮ ಕಾರಂತ ಬಾಲವನ - ಪುತ್ತೂರು ಇಲ್ಲಿನ ಅಧಿಕಾರಿ.
ಶ್ರೀ *ಸುಂದರ ಕೇನಾಜೆ* ರಿಗೆ.

ಆದಿ ಸ್ವರೂಪ
ಮಂಗಳೂರು

Ads on article

Advertise in articles 1

advertising articles 2

Advertise under the article