
ನಗುವಿನ ಒಡವೆ - ಕವನ
Wednesday, December 9, 2020
Edit
ಪ್ರೀತಿಕಾ 6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ
ಪುತ್ತೂರು ತಾಲೂಕು
ನಗುವಿನ ಒಡವೆ - ಕವನ
ತೊಟ್ಟಿಲಲ್ಲಿ ಅಳುತ್ತಿರುವ ಮಗು
ಅಮ್ಮ ಎತ್ತಿ ಮುತ್ತಿಟ್ಟಾಗ
ಚೆಲ್ಲುವುದು ನಗು.
ನಗಿಸುವುದು ಒಂದು ಕಲೆ
ಆ ಕಲೆಗೆ ಕಟ್ಟಾಲಾಗದು ಬೆಲೆ.
ಮುಖದಲ್ಲಿರಲು ನಗು
ಮನವಾಗುವುದು ಮಗು
ಮುಗುಳುನಗಲು ತೆರಬೇಕೆ ದಂಡ
ನಗುವಿನೊಡವೆ ಇದ್ದರೆ ಬದುಕು ಸುಂದರಕಾಂಡ
ಪ್ರೀತಿಕಾ
ಆರನೇ ತರಗತಿ
ಸ.ಹಿ.ಪ್ರಾ.ಶಾಲೆ. ಪುಣ್ಚಪ್ಪಾಡಿ